ನಿಮ್ಮ ಸ್ಮಾರ್ಟ್‌ಫೋನ್ ಒದ್ದೆಯಾದರೆ ತತಕ್ಷಣ ಏನು ಮಾಡಬೇಕು ಗೊತ್ತಾ?
ಈ ವರ್ಷದ ಹೋಳಿ ಹಬ್ಬವು ಬಣ್ಣಗಳು ಮತ್ತು ಉಲ್ಲಾಸದ ಸಮಯವಾಗಿದೆ, ಆದರೆ ಈ ಸಂದರ್ಭದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ನೀರಿನಲ್ಲಿ ಅಥವಾ ಬಣ್ಣಗಳಲ್ಲಿ ಒದ್ದೆಯಾದರೆ ಆ ತಕ್ಷಣ ನೀವು ಏನು ಮಾಡುತ್ತೀರಿ? ಈ ಸಮಯವು ಅತ್ಯಂತ ಮುಖ್ಯವಾದ ಸಮಯ ಎಂಬುದನ್ನು ಗಮನದಲ್ಲಿಡಿ. ಏಕೆಂದರೆ, ಸ್ಮಾರ್ಟ್‌ಫೋನ್‌ಗಳು ನೀರಿನಲ್ಲಿ ಒದ್ದಿದಾಗ, ನಿರ್ದಿಷ್ಟ ಅವಧಿಯವರೆಗೆ ಮಾತ್ರ ಅವುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಶಾರ್ಟ್ ಸರ್ಕ್ಯೂಟ್‌ನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಬಳಸಲು ಸಾಧ್ಯವಾಗದಂತೆ ಆಗಬಹುದು. ಕೆಲವರು ತಮ್ಮ ಫೋನ್ ಹೊಸದು ಮತ್ತು ಅದು "ಜಲನಿರೋಧಕ" ಎಂದು ಪರಿಗಣಿಸುತ್ತಾರೆ. ಆದರೆ, ಇವುಗಳು ಸಹ ನಿರ್ದಿಷ್ಟ ಸಮಯಕ್ಕೆ ಮಾತ್ರ ನೀರಿನಿಂದ ರಕ್ಷಿತವಾಗಿರುತ್ತವೆ ಎಂಬುದನ್ನು ಅವರು ತಿಳಿದಿಲ್ಲ. ಆದ್ದರಿಂದ, ಇಂದಿನ ಲೇಖನದಲ್ಲಿ, ನಿಮ್ಮ ಸ್ಮಾರ್ಟ್‌ಫೋನ್ ನೀರಿನಲ್ಲಿ ಒದ್ದಿದಾಗ ತಕ್ಷಣ ಏನು ಮಾಡಬೇಕು ಮತ್ತು ನಿಮ್ಮ ಫೋನ್‌ನಿಂದ ನೀರನ್ನು ಹೊರತೆಗೆದು ಹಾಕಲು ನೀವು ತಿಳಿದುಕೊಳ್ಳಬೇಕಾದ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ.

ಸ್ಮಾರ್ಟ್‌ಫೋನ್ ಒದ್ದೆಯಾದರೆ ಏನು ಮಾಡಬೇಕು?
1. ತಕ್ಷಣ ಆಫ್ ಮಾಡಿ: ಫೋನ್ ಅನ್ನು ತಕ್ಷಣವೇ ಆಫ್ ಮಾಡಿ. ಇದರಿಂದ ಶಾರ್ಟ್ ಸರ್ಕ್ಯೂಟ್ ಆಗುವುದನ್ನು ತಪ್ಪಿಸಬಹುದು.
2. ಭಾಗಗಳನ್ನು ಬೇರ್ಪಡಿಸಿ: ಸಾಧ್ಯವಿದ್ದರೆ ಫೋನ್‌ನ ಹಿಂಬದಿಯ ಕವರ್, ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್ ಅನ್ನು ತೆಗೆದುಹಾಕಿ.
3. ಒರೆಸಿ: ಸ್ವಚ್ಛವಾದ, ಒಣ ಬಟ್ಟೆಯಿಂದ ಫೋನ್ ಅನ್ನು ನಿಧಾನವಾಗಿ ಒರೆಸಿ.
4. ತೇವಾಂಶವನ್ನು ತೆಗೆಯಿರಿ: 24-48 ಗಂಟೆಗಳ ಕಾಲ ಫೋನ್ ಅನ್ನು ಒಣ ಅಕ್ಕಿ ಅಥವಾ ಸಿಲಿಕಾ ಜೆಲ್ ಪ್ಯಾಕ್‌ಗಳೊಂದಿಗೆ ಗಾಳಿಯಾಡದ ಪಾತ್ರೆಯಲ್ಲಿ ಇರಿಸಿ.
5. ಸಂಪೂರ್ಣವಾಗಿ ಒಣಗಲು ಬಿಡಿ: ಕನಿಷ್ಠ 24 ಗಂಟೆಗಳ ಕಾಲ ಫೋನ್ ಒಣಗಲು ಬಿಡಿ.
6. ಪರೀಕ್ಷಿಸಿ: ಫೋನ್ ಸಂಪೂರ್ಣವಾಗಿ ಒಣಗಿದ ನಂತರವೇ ಅದನ್ನು ಆನ್ ಮಾಡಲು ಪ್ರಯತ್ನಿಸಿ.
ಈ ಮೇಲೆ ಹೇಳಿದ ಕ್ರಮಗಳನ್ನು ತೆಗೆದುಕೊಳ್ಳುವಾಗಿ ಈ ರೀತಿಯ ತಪ್ಪುಗಳನ್ನು ಮಾಡಲೇಬೇಡಿ.
ಹೇರ್ ಡ್ರೈಯರ್ ಬಳಸಬೇಡಿ, ಏಕೆಂದರೆ ಬಿಸಿ ಗಾಳಿ ಫೋನ್‌ನ ಸರ್ಕ್ಯೂಟ್‌ಗಳಿಗೆ ಹಾನಿ ಮಾಡಬಹುದು.
ಫೋನ್ ಅನ್ನು ಅಲುಗಾಡಿಸಬೇಡಿ ಅಥವಾ ತಿರುಗಿಸಬೇಡಿ, ಇದರಿಂದ ನೀರು ಆಳವಾಗಿ ಹೋಗಬಹುದು.
ಒಣಗಿದ ನಂತರವೂ ಫೋನ್ ಕಾರ್ಯನಿರ್ವಹಿಸದಿದ್ದರೆ, ತಕ್ಷಣ ಅಧಿಕೃತ ಕಸ್ಟಮರ್ ಕೇರ್‌ಗೆ ತೋರಿಸಿ.
ಹೋಳಿ ಹಬ್ಬದ ಸಮಯದಲ್ಲಿ ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿಡಲು ಈ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ.
ಜಲನಿರೋಧಕ ಪೌಚ್ ಅಥವಾ ಫೋನ್ ಕವರ್ ಬಳಸಿ.
ಫೋನ್ ಅನ್ನು ಜೇಬಿನಲ್ಲಿ ಇಡುವ ಬದಲು ಸುರಕ್ಷಿತ ಸ್ಥಳದಲ್ಲಿ ಇರಿಸಿ.
ನೀರಿನಲ್ಲಿ ಅಥವಾ ಬಣ್ಣದಲ್ಲಿ ಫೋನ್ ಬಿದ್ದಾಗ ತಕ್ಷಣ ಈ ಮೇಲೆ ಹೇಳಿದ ಕ್ರಮಗಳನ್ನು ಕೂಡಲೇ ತಿಳಿದುಕೊಳ್ಳಿ.
ಈ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ, ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹಾನಿಯಿಂದ ರಕ್ಷಿಸಬಹುದು ಮತ್ತು ಹೋಳಿ ಹಬ್ಬವನ್ನು ಆನಂದಿಸಬಹುದು.
ಈ ವರ್ಷದ ಹೋಳಿ ಹಬ್ಬವು ಬಣ್ಣಗಳು ಮತ್ತು ಉಲ್ಲಾಸದ ಸಮಯವಾಗಿದೆ. ಹೋಳಿ ಹಬ್ಬದ ಉಲ್ಲಾಸವನ್ನು ಅನುಭವಿಸುತ್ತಿರುವಾಗ, ನಿಮ್ಮ ಸ್ಮಾರ್ಟ್‌ಫೋನ್ ನೀರಿನಲ್ಲಿ ಅಥವಾ ಬಣ್ಣಗಳಲ್ಲಿ ಒದ್ದೆಯಾದರೆ ತಕ್ಷಣವೆ ಗಾಬರಿಯಾಗಿ ಆತುರಪಡಬೇಡಿ. ಈ ಹಬ್ಬದ ಸಂದರ್ಭದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ನೀರಿನಲ್ಲಿ ಬಿದ್ದರೆ ಮೊದಲಿಗೆ ಈ ಕ್ರಮಗಳನ್ನು ಅನುಸರಿಸಿ. ಹೋಳಿ ಹಬ್ಬದ ಸಂಭ್ರಮದಲ್ಲಿ ನೀರು ಅಥವಾ ಬಣ್ಣಗಳು ನಿಮ್ಮ ಸ್ಮಾರ್ಟ್‌ಫೋನ್‌ಗೆ ಹಾನಿ ಮಾಡಬಾರದು ಎಂಬುದರ ಕುರಿತಂತೆ ಯಾವಾಗಲೂ ಜಾಗರೂಕರಾಗಿರಿ.


Click it and Unblock the Notifications








