IND vs AUS 2nd Test: ಗಿಲ್-ರೋಹಿತ್ ಕಂಬ್ಯಾಕ್.. 'ಕನ್ನಡಿಗ' ಔಟ್..! ಲೈವ್ ವೀಕ್ಷಣೆ ಹೇಗೆ? ತಂಡ ಹೀಗಿರಲಿದೆ
Border Gavaskar Trophy: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಗೆದ್ದಿರುವ ಭಾರತ ಎರಡನೇ ಟೆಸ್ಟ್‌ಗೆ (IND vs AUS 2nd Test) ಸಿದ್ಧವಾಗಿದೆ. ಮೊದಲ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಎರಡನೇ ಟೆಸ್ಟ್ ಆಡಲಿದ್ದಾರೆ. ಇಬ್ಬರು ಆಟಗಾರರು ತಂಡದಿಂದ ಹೊರ ಬೀಳಲಿದ್ದಾರೆ. ಹೌದು, ಐದು ಟೆಸ್ಟ್ ಪಂದ್ಯಗಳಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ (Border Gavaskar Trophy) ಭಾರತ ಅದ್ಭುತ ಆರಂಭ ಪಡೆದಿದೆ. ಇದೀಗ, ಮತ್ತೊಂದು ಮಹತ್ವದ ಪಂದ್ಯಕ್ಕೆ ಸಜ್ಜಾಗಿದೆ. ನಾಳೆಯಿಂದ ಅಡಿಲೇಡ್‌ನಲ್ಲಿ (Adelaide) ಡೇ ಅಂಡ್ ನೈಟ್ ಪಂದ್ಯ ನಡೆಯಲಿದೆ.
ಹೌದು, ನಾಳೆ (ಡಿಸೆಂಬರ್ 6) ಅಡಿಲೇಡ್‌ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಆಸಿಸ್ ವಿರುದ್ಧ ಸೆಣಸಲು ಭಾರತ ಸಜ್ಜಾಗಿದೆ. ಅಭ್ಯಾಸ ಪಂದ್ಯದಲ್ಲಿ ಗೆಲುವು ಸಾಧಿಸಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಮೊದಲ ಟೆಸ್ಟ್‌ನಂತೆ ಈ ಪಿಂಕ್ ಬಾಲ್ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ಭಾರತ ಹವಣಿಸುತ್ತಿದೆ. ಈ ಮೂಲಕ ಹ್ಯಾಟ್ರಿಕ್ ಸರಣಿಯನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಬನ್ನಿ, 2ನೇ ಟೆಸ್ಟ್‌ನ ನೇರಪ್ರಸಾರ ವೀಕ್ಷಣೆ, ಪಂದ್ಯದ ಸಮಯ ಮತ್ತು ಭಾರತದ ಪ್ಲೇಯಿಂಗ್ 11 ಬಗ್ಗೆ ತಿಳಿಯೋಣ.

ರೋಹಿತ್- ಗಿಲ್ ಕಂಬ್ಯಾಕ್.. ಕನ್ನಡಿಗ ಔಟ್?
ವೈಯಕ್ತಿಕ ಕಾರಣಗಳಿಂದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದ ನಾಯಕ ರೋಹಿತ್ ಶರ್ಮಾ ಕಂಬ್ಯಾಕ್ ಮಾಡಿದ್ದಾರೆ. ಇನ್ನೂ ಗಾಯದ ಸಮಸ್ಯೆಯಿಂದ ಬೆಂಚ್ ಕಾದಿದ್ದ ಶುಭಮನ್ ಗಿಲ್ ಎರಡನೇ ಟೆಸ್ಟ್‌ಗೆ ತಂಡ ಸೇರಿಕೊಳ್ಳಲಿದ್ದಾರೆ. ಹೀಗಾಗಿ, ತಂಡದಲ್ಲಿ ಕೆಲವು ಬದಲಾವಣೆ ಅನಿವಾರ್ಯವಾಗಿದೆ.
ರೋಹಿತ್ ಹಾಗೂ ಗಿಲ್ ಆಗಮನದಿಂದ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಧ್ರುವ್ ಜುರೆಲ್ ಬೆಂಚ್ ಕಾಯಬೇಕಿದೆ. ಆದರೆ, ರೋಹಿತ್ ಓಪನರ್ ಆಗಿ ಆಡ್ತಾರಾ? ಅಥವಾ ರಾಹುಲ್ ಮತ್ತು ಜೈಸ್ವಾಲ್ ಮತ್ತೆ ಆರಂಭಿಕರಾಗಿ ಕಣಕ್ಕಿಳಿಯುತ್ತಾರಾ? ಎನ್ನುವುದು ಕೂತೂಹಲ ಮೂಡಿಸಿದೆ. ರಾಹುಲ್ ಓಪನರ್ ಆಗಿ ಕಣಕ್ಕಿಳಿದರೆ, ರೋಹಿತ್ 5ನೇ ಕ್ರಮಾಂಕದಲ್ಲಿ ಆಡಬೇಕಿದೆ. ಅಥವಾ ರೋಹಿತ್ ಓಪನರ್ ಆಗಿ ಕಣಕ್ಕಿಳಿದರೆ ರಾಹುಲ್ 3ನೇ ಕ್ರಮಾಂಕದಲ್ಲಿ ಆಡಬೇಕಿದೆ. ವಾಷಿಂಗ್ಟನ್ ಸುಂದರ್ ಬದಲಿಗೆ ರವೀಂದ್ರ ಜಡೇಜಾ ಕಣಕ್ಕಿಳಿಯಬಹುದು.
ಭಾರತ - ಆಸ್ಟ್ರೇಲಿಯಾ 2ನೇ ಟೆಸ್ಟ್ ಪಂದ್ಯದ ನೇರಪ್ರಸಾರದ ವಿವರಗಳು
ಭಾರತ - ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯ ನಾಳೆ (ಡಿಸೆಂಬರ್ 6) ಶುಕ್ರವಾರ ಆರಂಭವಾಗಲಿದೆ.
ಭಾರತ - ಆಸ್ಟ್ರೇಲಿಯಾ 2ನೇ ಟೆಸ್ಟ್ ಎಲ್ಲಿ ನಡೆಯಲಿದೆ?
ಭಾರತ - ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯ ಅಡಿಲೇಡ್ ಓವಲ್‌ನಲ್ಲಿ ಹಗಲು-ರಾತ್ರಿ ನಡೆಯಲಿದೆ.
ಭಾರತ - ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಆರಂಭ ಯಾವಾಗ?
ಭಾರತ - ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಬೆಳಗ್ಗೆ 9.30ಕ್ಕೆ (ಸ್ಥಳೀಯ ಸಮಯ ಮಧ್ಯಾಹ್ನ 2.30) ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಬೆಳಗ್ಗೆ 9 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯುತ್ತದೆ.
ಭಾರತ - ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್‌ನ ಸೆಷನ್ ಸಮಯ
- ಮೊದಲ ಸೆಷನ್: ಮಧ್ಯಾಹ್ನ 2.30 ರಿಂದ 4.30
- ಚಹಾ ವಿರಾಮ: 4.30 ರಿಂದ 5.10
- ಎರಡನೇ ಸೆಷನ್: ಸಂಜೆ 5.10 ರಿಂದ 7.10
- ಊಟದ ವಿರಾಮ: 7.10 ರಿಂದ 7.30
- ಮೂರನೇ ಸೆಷನ್: ರಾತ್ರಿ 7.30 ರಿಂದ 9.30
ಭಾರತ - ಆಸ್ಟ್ರೇಲಿಯಾ 2ನೇ ಟೆಸ್ಟ್ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?
ಭಾರತ - ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಭಾರತದಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.
ಭಾರತ ತಂಡ (ಸಂಭಾವ್ಯ)
ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ / ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ
ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್, ನೇಥನ್ ಲಿಯಾನ್, ಮಿಚೆಲ್ ಮಾರ್ಷ್, ನೇಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ವೆಬ್‌ಸ್ಟರ್, ಸೀನ್ ಅಬಾಟ್, ಬ್ರೆಂಡನ್ ಡಿಗಾಟ್.
ಬಾರ್ಡರ್ ಗವಾಸ್ಕರ್ ಸರಣಿಯ ವೇಳಾಪಟ್ಟಿ
* ಮೊದಲ ಟೆಸ್ಟ್ - ನವೆಂಬರ್ 22 ರಿಂದ 26: ಪರ್ತ್ (ಭಾರತಕ್ಕೆ 296 ರನ್ಗಳ ಗೆಲುವು)
* 2ನೇ ಟೆಸ್ಟ್ (ಹಗಲು/ರಾತ್ರಿ) - ಡಿಸೆಂಬರ್ 6 ರಿಂದ 10: ಅಡಿಲೇಡ್ (ಬೆಳಗ್ಗೆ 9.30)
* 3ನೇ ಟೆಸ್ಟ್ - ಡಿಸೆಂಬರ್ 14 ರಿಂದ 18: ಬ್ರಿಸ್ಬೇನ್ (ಬೆಳಗ್ಗೆ 5.50)
* 4ನೇ ಟೆಸ್ಟ್ - ಡಿಸೆಂಬರ್ 26 ರಿಂದ 31: ಮೆಲ್ಬೋರ್ನ್ (ಬೆಳಗ್ಗೆ 5)
* 5ನೇ ಟೆಸ್ಟ್ - ಜನವರಿ 3 ರಿಂದ 8: ಸಿಡ್ನಿ (ಬೆಳಗ್ಗೆ 5)


Click it and Unblock the Notifications








