Home
ಟೆಕ್ ನೌಕರಿ

IND vs AUS: ನಾಳೆ ಮೂರನೇ ಟೆಸ್ಟ್‌​; ಯಾರಿಗೆ ಚಾನ್ಸ್, ಯಾರೆಲ್ಲಾ ಔಟ್? ಲೈವ್ ವೀಕ್ಷಿಸಲು ಹೀಗೆ ಮಾಡಿ!

IND vs AUS 3rd Test: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ ನಾಳೆ (ಡಿಸೆಂಬರ್ 14) ಆರಂಭವಾಗಿಲಿದೆ. ಮೊದಲ ಟೆಸ್ಟ್‌ ಗೆದ್ದಿದ್ದ ಭಾರತ ಎರಡನೇ ಟೆಸ್ಟ್‌ನಲ್ಲಿ ಮುಗ್ಗರಿಸಿದೆ. ಉಭಯ ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿವೆ. ಇದೀಗ, ಎರಡೂ ತಂಡಗಳು ಮೂರನೇ ಟೆಸ್ಟ್‌ಗೆ ಸಜ್ಜಾಗಿದೆ. ಈ ಟೆಸ್ಟ್‌ ಕ್ರಿಕೆಟ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಪಂದ್ಯ ಗೆದ್ದು ಸರಣಿಯಲ್ಲಿ ಮೇಲುಗೈ ಸಾಧಿಸಲು ರೋಹಿತ್‌ ಪಡೆ ರಣತಂತ್ರ ರೂಪಿಸಿದೆ. ಬನ್ನಿ, 3ನೇ ಟೆಸ್ಟ್‌ನ ಉಚಿತ ಲೈವ್ ವೀಕ್ಷಣೆ, ಪಂದ್ಯದ ಸಮಯ ಮತ್ತು ಭಾರತದ ಪ್ಲೇಯಿಂಗ್ 11 ಬಗ್ಗೆ ತಿಳಿಯೋಣ.

ಬ್ರಿಸ್ಬೇನ್ ಗಾಬಾ ಕ್ರೀಡಾಂಗಣದಲ್ಲಿ ನಾಳೆ (ಡಿ.14) ಮೂರನೇ ಟೆಸ್ಟ್‌ ನಡೆಯಲಿದೆ. ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದರೂ, ಅಡಿಲೇಡ್​ನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್​ನಲ್ಲಿ ಭಾರತ ಸೋಲು ಕಂಡಿದೆ. ಬ್ಯಾಟಿಂಗ್ ಬೌಲಿಂಗ್​ ಎರಡೂ ವಿಭಾಗದ ವೈಫಲ್ಯ ಭಾರತದ ಸೋಲಿಗೆ ಮುಳುವಾಯಿತು. ಇದೀಗ, ಪಿಂಕ್ ಬಾಲ್ ಟೆಸ್ಟ್ ಗೆಲ್ಲುವ ಮೂಲಕ ಆಸೀಸ್‌ಗೆ ತಿರುಗೇಟು ನೀಡಲು ಬ್ಲೂ ಬಾಯ್ಸ್‌ ಸಿದ್ಧರಾಗಿದ್ದಾರೆ. ಈ ಪಂದ್ಯದ ಫಲಿತಾಂಶ ಭಾರತದ ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್‌ ಫೈನಲ್‌ ಪ್ರವೇಶದ ಭವಿಷ್ಯ ನಿರ್ಧರಿಸಲಿದೆ.

IND vs AUS: ನಾಳೆ ಮೂರನೇ ಟೆಸ್ಟ್‌; ಯಾರು ಇನ್, ಯಾರು ಔಟ್? ಲೈವ್ ವೀಕ್ಷಣೆ ಹೇಗೆ?

ಗಾಬಾ ಸ್ಟೇಡಿಯಂ ತುಂಬಾ ಅಪಾಯಕಾರಿ

ಅಡಿಲೇಡ್, ಪರ್ತ್ ಸ್ಟೇಡಿಯಂಗಿಂತ ಗಾಬಾ ಹೆಚ್ಚು ಅಪಾಯಕಾರಿಯಾಗಿದೆ. ಬ್ರಿಸ್ಬೇನ್‌ನ ವಿಕೆಟ್ ಹಸಿರು ಹುಲ್ಲಿನಿಂದ ತುಂಬಿದೆ. ಇದು ಬ್ಯಾಟರ್​ಗಳಿಗೆ ಸವಾಲಾಗಿದೆ. ವೇಗಿಗಳಿಗೆ, ಸ್ವಿಂಗ್​ ಮತ್ತು ಬೌನ್ಸ್ ಪೇಸರ್​ಗಳಿಗೆ ಹೆಚ್ಚು ವರವಾಗಲಿದೆ. ಪ್ರಸ್ತುತ, ಸರಣಿ ಭಾರತ 1-1ರಲ್ಲಿ ಸಮಬಲ ಸಾಧಿಸಿದೆ. ಗಾಬಾದಲ್ಲಿ ನಡೆಯುವ ಈ ಪಂದ್ಯ ಗೆಲ್ಲಲು ಉಭಯ ತಂಡಗಳು ರಣತಂತ್ರ ರೂಪಿಸಿವೆ. ಕಳೆದ ಬಾರಿ ಗಾಬಾದಲ್ಲಿ ಭಾರತ ಐತಿಹಾಸಿಗ ಗೆಲುವು ಸಾಧಿಸಿ, ಸರಣಿ ಗೆದ್ದುಕೊಂಡಿತು. ಈ ಗೆಲುವನ್ನು ಮತ್ತೊಮ್ಮೆ ಮರುಕಳಿಸಲು ರೋಹಿತ್ ಪಡೆ ಕಾಯುತ್ತಿದೆ.

ಭಾರತ - ಆಸ್ಟ್ರೇಲಿಯಾ 3ನೇ ಟೆಸ್ಟ್‌ ಪಂದ್ಯದ ನೇರಪ್ರಸಾರ

ಭಾರತ - ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್‌ ಪಂದ್ಯ ನಾಳೆ (ಡಿಸೆಂಬರ್ 14) ಶನಿವಾರ ಆರಂಭವಾಗಲಿದೆ.

ಭಾರತ - ಆಸ್ಟ್ರೇಲಿಯಾ 3ನೇ ಟೆಸ್ಟ್‌ ಎಲ್ಲಿ ನಡೆಯಲಿದೆ?

ಭಾರತ - ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್‌ ಪಂದ್ಯ ಬ್ರಿಸ್ಬೇನ್ ಗಾಬಾ ನಡೆಯಲಿದೆ.

ಭಾರತ - ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್‌ ಆರಂಭ ಯಾವಾಗ?

ಭಾರತ - ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್‌ ಬೆಳಗ್ಗೆ 10.20 (ಬೆಳಗ್ಗೆ 5:50am IST) ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಬೆಳಗ್ಗೆ 9.50 (5:20am IST) ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯುತ್ತದೆ.

ಭಾರತ - ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್‌ನ ಸೆಷನ್ ಸಮಯ

- ಮೊದಲ ಸೆಷನ್: 10.20 ರಿಂದ 12.20
- ಊಟದ ವಿರಾಮ: 12.20 ರಿಂದ 1
- ಎರಡನೇ ಸೆಷನ್: 1 ರಿಂದ 3
- ಚಹಾ ವಿರಾಮ: 3 ರಿಂದ 3.20
- ಮೂರನೇ ಸೆಷನ್: 3.20 ರಿಂದ 5.20

ಭಾರತ - ಆಸ್ಟ್ರೇಲಿಯಾ 3ನೇ ಟೆಸ್ಟ್‌ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?

ಭಾರತ - ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್‌ ಪಂದ್ಯವನ್ನು ಸ್ಟಾರ್‌ ಸ್ಪೋರ್ಟ್‌ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಭಾರತದಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಭಾರತ ತಂಡ

ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ಆಸ್ಟ್ರೇಲಿಯಾ ತಂಡ

ನಾಥನ್ ಮೆಕ್‌ಸ್ವೀನಿ, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್.

Best Mobiles in India

English summary
IND vs AUS 3rd Test: How to watch India vs Australia match Live Streaming: playing 11, live timing and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+