IND vs AUS: ನಾಳೆ 4ನೇ ಟೆಸ್ಟ್; ಅಶ್ವಿನ್ ಸ್ಥಾನಕ್ಕೆ 'ಕನ್ನಡಿಗ' ಆಯ್ಕೆ.. ಇಲ್ಲಿದೆ ಪ್ಲೇಯಿಂಗ್ ಇಲೆವೆನ್!
IND vs AUS 4th Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ (IND vs AUS 4th Test) ಪಂದ್ಯ ನಾಳೆಯಿಂದ (ಡಿಸೆಂಬರ್ 26) ಪ್ರಾರಂಭವಾಗಲಿದೆ. ಮೆಲ್ಬೋರ್ನ್ನಲ್ಲಿ ನಡೆಯುವ ಈ ಟೆಸ್ಟ್ ಪಂದ್ಯವು ಉಭಯ ತಂಡಗಳಿಗೆ ನಿರ್ಣಾಯಕವಾಗಿದೆ. ಈ ಪಂದ್ಯದ ಫಲಿತಾಂಶವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶವನ್ನು ನಿರ್ಧರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಲಿದೆ. ಐದನೇ ಟೆಸ್ಟ್ ಪಂದ್ಯದಲ್ಲಿ ಸೋತರೂ ಸರಣಿ ಡ್ರಾ ಮಾಡಿಕೊಳ್ಳುವ ಅವಕಾಶ ಇರಲಿದೆ. ಬನ್ನಿ, 4ನೇ ಟೆಸ್ಟ್‌ನ ನೇರಪ್ರಸಾರ ವೀಕ್ಷಣೆ ಮತ್ತು ಪಂದ್ಯದ ಸಮಯದ ಬಗ್ಗೆ ತಿಳಿಯೋಣ.
ಹೌದು, ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಮೆಲ್ಬೋರ್ನ್ನ ಎಂಸಿಜಿ ಸ್ಟೇಡಿಯಂನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯಲಿದೆ. ಎರಡು ತಂಡಗಳಿಂದ ತೀವ್ರ ಪೈಪೋಟಿ ನಿರೀಕ್ಷಿಸಬಹುದು. ಮೊದಲ ಪಂದ್ಯದಲ್ಲಿ ಭಾರತ 295 ರನ್ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಇನ್ನು ಎರಡನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ತಂಡವು 10 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು. ಮೂರನೇ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡಿದ್ದು, ಇದೀಗ ಉಭಯ ತಂಡಗಳು 4ನೇ ಪಂದ್ಯಕ್ಕೆ ಸಜ್ಜಾಗಿವೆ. ಈ ಪಂದ್ಯದಲ್ಲಿ ಯಾರಿಗೆ ಚಾನ್ಸ್, ಯಾರೆಲ್ಲಾ ಔಟ್? ತಿಳಿಯಲು ಮುಂದೆ ಓದಿ.

ಅಶ್ವಿನ್ ಸ್ಥಾನಕ್ಕೆ ಕನ್ನಡಿಗ ಆಯ್ಕೆ
ಇನ್ನು ರವಿಚಂದ್ರನ್ ಅಶ್ವಿನ್ ಸ್ಥಾನಕ್ಕೆ ಕನ್ನಡಿಗ ಸ್ಥಾನ ಪಡೆದಿದ್ದಾನೆ. ಹೌದು, ದಕ್ಷಿಣ ಕನ್ನಡ ಮೂಲದ ಮುಂಬೈ ಆಲ್‌ರೌಂಡರ್ ತನುಷ್ ಕೋಟ್ಯಾನ್ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ. ಇವರು ಅನ್ ಕ್ಯಾಪ್ಡ್ ಆಟಗಾರ ಆಗಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ ಗೂ ಮುನ್ನವೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಮೂಲದ ಈ ಮುಂಬೈ ಆಲ್‌ರೌಂಡರ್ 33 ಪ್ರಥಮ ದರ್ಜೆ ಪಂದ್ಯಗಳಲ್ಲಿ 101 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್‌ನಲ್ಲಿ 1,521 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಸೇರಿವೆ.
ಭಾರತ-ಆಸ್ಟ್ರೇಲಿಯಾ 4ನೇ ಟೆಸ್ಟ್ ಪಂದ್ಯದ ನೇರಪ್ರಸಾರ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯವು ಮೆಲ್ಬೋರ್ನ್ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ ಪ್ರಾರಂಭವಾಗಲಿದೆ. ಆಸ್ಟ್ರೇಲಿಯಾ ಕಾಲಮಾನದ ಪ್ರಕಾರ ಈ ಪಂದ್ಯದ ಟಾಸ್ ಪ್ರಕ್ರಿಯೆ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಅಂದರೆ ಭಾರತೀಯ ಕಾಲಮಾನದಂತೆ 4.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಭಾರತದಲ್ಲಿ ಪಂದ್ಯವನ್ನು ಬೆಳಗ್ಗೆ 5 ಗಂಟೆಯಿಂದ ಲೈವ್ ವೀಕ್ಷಿಸಬಹುದು.
ಬ್ರಿಸ್ಬೇನ್ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯವು ಬೆಳಗ್ಗೆ 9.30ಕ್ಕೆ (ಭಾರತೀಯ ಕಾಲಮಾನ 5.30ಕ್ಕೆ) ಪ್ರಾರಂಭವಾಗಿತ್ತು. ಆದರೆ, ನಾಳೆ ನಡೆಯುವ ಮೆಲ್ಬೋರ್ನ್ ಟೆಸ್ಟ್ ಪಂದ್ಯ ಬೆಳಗ್ಗೆ 10.30ಕ್ಕೆ (ಭಾರತೀಯ ಕಾಲಮಾನ 5 ಗಂಟೆ) ಶುರುವಾಲಿದೆ. ಅದರಂತೆ ಮೊದಲ ಸೆಷನ್ ಬೆಳಗ್ಗೆ 5 am IST ಗಂಟೆಯಿಂದ 7 am IST ಗಂಟೆಯವರೆಗೆ ನಡೆಯಲಿದೆ.
ದ್ವಿತೀಯ ಸೆಷನ್ ಬಗ್ಗೆ ಹೇಳುವುದಾದರೆ, ಭಾರತೀಯ ಕಾಲಮಾನ ಬೆಳಗ್ಗೆ 7.40 ರಿಂದ 9.40 ರವರೆಗೆ ಎರಡನೇ ಸೆಷನ್ ನಡೆಯಲಿದೆ. ಇದಾದ ನಂತರ ಚಹಾ ವಿರಾಮ (ಟೀ ಬ್ರೇಕ್) ಇರಲಿದೆ. ಬಳಿಕ ಬೆಳಗ್ಗೆ 10 ರಿಂದ 12 ರವರೆಗೆ 3ನೇ ಸೆಷನ್ ನಡೆಯಲಿದೆ. ಅಂದರೆ ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆಗೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಲಿದೆ.
ಭಾರತ-ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಸಮಯ
ಟಾಸ್ ಪ್ರಕ್ರಿಯೆ: ಬೆಳಗ್ಗೆ 4.30
ಮೊದಲ ಸೆಷನ್: ಬೆಳಗ್ಗೆ 5 ರಿಂದ 7 ಗಂಟೆ ವರೆಗೆ.
ಎರಡನೇ ಸೆಷನ್: ಬೆಳಗ್ಗೆ 7.40 ರಿಂದ 9.40 ಗಂಟೆ ವರೆಗೆ
ಮೂರನೇ ಸೆಷನ್: ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆ ವರೆಗೆ
4ನೇ ಟೆಸ್ಟ್‌ನ ನೇರಪ್ರಸಾರ ಯಾವ ಚಾನೆಲ್ನಲ್ಲಿ ವೀಕ್ಷಿಸಬಹುದು?
ಭಾರತ-ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ಲೈವ್ ವೀಕ್ಷಿಸಬಹುದು. ಹಾಗೆಯೇ, ಡಿಸ್ನಿ+ ಹಾಟ್ ಸ್ಟಾರ್‌ನಲ್ಲಿ ಹಾಗೂ ವೆಬ್ಸೈಟ್ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ.
ಭಾರತ ತಂಡದ ಪ್ಲೇಯಿಂಗ್ 11
- ಯಶಸ್ವಿ ಜೈಸ್ವಾಲ್
- ರೋಹಿತ್ ಶರ್ಮಾ (ನಾಯಕ)
- ಕೆ.ಎಲ್ ರಾಹುಲ್
- ವಿರಾಟ್ ಕೊಹ್ಲಿ
- ರಿಷಬ್ ಪಂತ್ (ವಿಕೆಟ್ ಕೀಪರ್)
- ನಿತೇಶ್ ಕುಮಾರ್ ರೆಡ್ಡಿ
- ಆಕಾಶದೀಪ
- ರವೀಂದ್ರ ಜಡೇಜಾ
- ಮೊಹಮ್ಮದ್ ಸಿರಾಜ್
- ಜಸ್ಪ್ರೀತ್ ಬುಮ್ರಾ
- ವಾಷಿಂಗ್ಟನ್ ಸುಂದರ್
ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ 11
- ಉಸ್ಮಾನ್ ಖ್ವಾಜಾ
- ಸ್ಯಾಮ್ ಕೊನ್ಸ್ಟಾಸ್
- ಮಾರ್ನಸ್ ಲಾಬುಶೇನ್
- ಸ್ಟೀವ್ ಸ್ಮಿತ್
- ಟ್ರಾವಿಸ್ ಹೆಡ್
- ಮಿಚೆಲ್ ಮಾರ್ಷ್
- ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್)
- ಪ್ಯಾಟ್ ಕಮಿನ್ಸ್ (ನಾಯಕ)
- ಮಿಚೆಲ್ ಸ್ಟಾರ್ಕ್
- ಸ್ಕಾಟ್ ಬೋಲ್ಯಾಂಡ್
- ನಾಥನ್ ಲಿಯಾನ್


Click it and Unblock the Notifications








