IND vs AUS: ನಾಳೆ ಅಂತಿಮ ಟೆಸ್ಟ್; ರೋಹಿತ್ ಶರ್ಮಾ ಔಟ್.. ಇಬ್ಬರು ಇನ್.. ಎಷ್ಟು ಗಂಟೆಗೆ ಪಂದ್ಯ ಆರಂಭ?
India vs Australia 5th Test: ಭಾರತಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ! ಗೆದ್ದರೆ ಅವಕಾಶ, ಸೋತರೆ ಗೇಟ್ ಪಾಸ್ ಗ್ಯಾರಂಟಿ. ಹೌದು, ಬಾರ್ಡರ್ ಗವಾಸ್ಕರ್ ಟ್ರೋಫಿಯ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯ (IND vs AUS 5th Test) ನಾಳೆಯಿಂದ (ಜನವರಿ 3) ಶುರುವಾಗಲಿದೆ. ಕ್ರಿಕೆಟ್ ಅಭಿಮಾನಿಗಳ ಚಿತ್ತ ನಾಳಿನ ಪಂದ್ಯದತ್ತ ನೆಟ್ಟಿದೆ. ಪ್ರಸ್ತುತ, ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಈ ಕಾರಣದಿಂದ ನಾಳೆಯ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಮಾಹಿತಿ ಪ್ರಕಾರ, ನಾಯಕ ರೋಹಿತ್ ಶರ್ಮಾ 5ನೇ ಟೆಸ್ಟ್ನಿಂದ ಹೊರಗುಳಿದಿದ್ದಾರೆ. ಇತ್ತ, ಜಸ್ಪ್ರಿತ್ ಬುಮ್ರಾ ತಂಡ ನಾಯಕತ್ವ ವಹಿಸಲಿದ್ದಾರೆ. ಬನ್ನಿ, 5ನೇ ಟೆಸ್ಟ್‌ನ ಉಚಿತ ವೀಕ್ಷಣೆ ಮತ್ತು ಪಂದ್ಯದ ಸಮಯದ ಬಗ್ಗೆ ತಿಳಿಯೋಣ.
ಆಸಿಸ್ ವಿರುದ್ಧದ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಇದೀಗ ಅಂತಿಮ ಹಂತಕ್ಕೆ ಬಂದಿದೆ. ಸರಣಿಯಲ್ಲಿ ಈಗಾಗಲೇ, ನಾಲ್ಕು ಪಂದ್ಯಗಳು ನಡೆದಿದ್ದು, ಆಸ್ಟ್ರೇಲಿಯಾ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ, ನಾಳೆಯಿಂದ ಸಿಡ್ನಿಯಲ್ಲಿ ಪ್ರಾರಂಭವಾಗಲಿರುವ ಪಂದ್ಯ ಸರಣಿಯನ್ನು ನಿರ್ಧರಿಸಲಿದೆ. ಭಾರತ ಈ ಪಂದ್ಯ ಗೆದ್ದರೆ ಸರಣಿಯಲ್ಲಿ ಸಮಬಲ ಮಾಡಿಕೊಳ್ಳಬಹುದು. ಈ ಮೂಲಕ ಹೊಸ ವರ್ಷವನ್ನು ಗೆಲುವಿನೊಂದಿಗೆ ಶುರು ಮಾಡಲು ಭಾರತ ಹವಣಿಸುತ್ತಿದೆ. ಈ ಪಂದ್ಯವನ್ನು ಭಾರತ ಗೆದ್ದರೆ ಸರಣಿ ಡ್ರಾ ಆಗಲಿದ್ದು, ಭಾರತದ ಬಳಿಯೇ ಟ್ರೋಫಿ ಉಳಿಯಲಿದೆ. ಯಾಕಂದ್ರೆ, ಕಳೆದ ಬಾರಿ ನಡೆದಿದ್ದ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಭಾರತ ಜಯಿಸಿತ್ತು.

ನಾಯಕ ರೋಹಿತ್ ಶರ್ಮಾ ಔಟ್!
ನಾಲ್ಕನೇ ಟೆಸ್ಟ್‌ನ ಸೋಲಿನ ಬಳಿಕ ಮುಖ್ಯ ಕೋಚ್ ಗೌತಮ್ ಗಂಭೀರ್ ಬೇಸರಗೊಂಡಿದ್ದಾರೆ. ಇದರ ನಡುವೆಯೇ, ನಾಯಕ ರೋಹಿತ್ ಶರ್ಮಾ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ರೋಹಿತ್ ಬದಲಿಗೆ ಜಸ್ಪ್ರಿತ್ ಬುಮ್ರಾಗೆ ತಂಡ ಮುನ್ನೆಡೆಸುವ ಜವಾಬ್ದಾರಿ ನೀಡಲಾಗಿದೆ. ಇತ್ತ, ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಹೀಗಾಗಿ, ಕನ್ನಡಿಗ ಕೆ.ಎಲ್ ರಾಹುಲ್ ಮತ್ತೆ ಗಿಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಜೊತೆಗೆ ವೇಗಿ ಆಕಾಶ್ ದೀಪ್ ಸಹ ಗಾಯದಿಂದಾಗಿ ಹೊರಗುಳಿದಿದ್ದಾರೆ. ನಾಳೆಯ ಟೆಸ್ಟ್ನಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು.
ಭಾರತ - ಆಸ್ಟ್ರೇಲಿಯಾ ಐದನೇ ಟೆಸ್ಟ್‌ನ ನೇರಪ್ರಸಾರ
* ಭಾರತ - ಆಸ್ಟ್ರೇಲಿಯಾ ನಡುವಿನ 5ನೇ ಟೆಸ್ಟ್ ಪಂದ್ಯ ಯಾವಾಗ ಆರಂಭ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಪಂದ್ಯ ನಾಳೆಯಿಂದ (ಜನವರಿ 3, ಶುಕ್ರವಾರ) ಆರಂಭವಾಗಲಿದೆ.
* ಭಾರತ - ಆಸ್ಟ್ರೇಲಿಯಾ ನಡುವಿನ 5ನೇ ಟೆಸ್ಟ್ ಪಂದ್ಯ ಎಲ್ಲಿ ನಡೆಯುತ್ತೆ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಪಂದ್ಯವು ಸಿಡ್ನಿಯ ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
* ಭಾರತ - ಆಸ್ಟ್ರೇಲಿಯಾ ನಡುವಿನ 5ನೇ ಪಂದ್ಯ ಯಾವಾಗ ಆರಂಭವಾಗುತ್ತದೆ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 5 ಗಂಟೆಗೆ ಶುರುವಾಗಲಿದೆ. ಇದಕ್ಕೂ ಮೊದಲು ಬೆಳಗ್ಗೆ 4.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
* ಭಾರತ - ಆಸ್ಟ್ರೇಲಿಯಾ ನಡುವಿನ 5ನೇ ಟೆಸ್ಟ್ ಪಂದ್ಯವನ್ನು ಯಾವ ಚಾನೆಲ್‌ನಲ್ಲಿ ವೀಕ್ಷಿಸಬಹುದು?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಪ್ರಸಾರವಾಗಲಿದೆ.
* ಭಾರತ - ಆಸ್ಟ್ರೇಲಿಯಾ ನಡುವಿನ 5ನೇ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ಲಭ್ಯವಿರುತ್ತೆ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಡಿಸ್ನಿ ಹಾಟ್‌ಸ್ಟಾರ್ ಆಪ್‌ನಲ್ಲಿ ವೀಕ್ಷಿಸಬಹುದು.
ಆಸ್ಟ್ರೇಲಿಯಾ ತಂಡ
- ಉಸ್ಮಾನ್ ಖವಾಜಾ
- ಸ್ಯಾಮ್ ಕೊನ್ಸ್ಟನ್ಸ್
- ಮಾರ್ನಸ್ ಲಬುಶೇನ್
- ಸ್ಟೀವ್ ಸ್ಮಿತ್
- ಟ್ರಾವಿಸ್ ಹೆಡ್
- ಬ್ಯೂ ವೆಬ್ಸ್ಟರ್
- ಅಲೆಕ್ಸ್ ಕ್ಯಾರಿ (ವಿ.ಕೀ.)
- ನಾಥನ್ ಲಿಯಾನ್
- ಪ್ಯಾಟ್ ಕಮ್ಮಿನ್ಸ್ (ನಾಯಕ)
- ಮಿಚೆಲ್ ಸ್ಟಾರ್ಕ್
- ಸ್ಕಾಟ್ ಬೋಲ್ಯಾಂಡ್
ಭಾರತ ತಂಡ (ಸಂಭಾವ್ಯ)
- ಕೆ.ಎಲ್ ರಾಹುಲ್
- ಯಶಸ್ವಿ ಜೈಸ್ವಾಲ್
- ಶುಭ್ಮನ್ ಗಿಲ್
- ವಿರಾಟ್ ಕೊಹ್ಲಿ
- ರಿಷಬ್ ಪಂತ್ (ವಿ.ಕೀ.)
- ರವೀಂದ್ರ ಜಡೇಜಾ
- ನಿತೀಶ್ ಕುಮಾರ್ ರೆಡ್ಡಿ
- ವಾಷಿಂಗ್ಟನ್ ಸುಂದರ್
- ಜಸ್ಪ್ರೀತ್ ಬುಮ್ರಾ
- ಪ್ರಸಿದ್ಧ್ ಕೃಷ್ಣ
- ಮೊಹಮ್ಮದ್ ಸಿರಾಜ್


Click it and Unblock the Notifications








