Home
ಟೆಕ್ ನೌಕರಿ

IND vs ENG 4th T20: 3 ಆಟಗಾರರು ಔಟ್.. ಧೋನಿ ಶಿಷ್ಯ ಕಂಬ್ಯಾಕ್.. 4ನೇ ಪಂದ್ಯ ಯಾವಾಗ? ಹೀಗಿದೆ ತಂಡ

ಇಂಗ್ಲೆಂಡ್ ವಿರುದ್ಧ ಭಾರತ ಹೀನಾಯ ಸೋಲು ಅನುಭವಿಸಿದೆ. ಮೊಲೆರಡು ಪಂದ್ಯ ಗೆದ್ದು ಮೂರನೇ ಪಂದ್ಯವನ್ನು ಕೈಚೆಲ್ಲಿದೆ. ಇದೀಗ, ನಾಲ್ಕನೇ ಮ್ಯಾಚ್ (IND vs ENG 4th T20) ಭಾರೀ ಕುತೂಹಲ ಮೂಡಿಸಿದೆ. ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ-20 ಸರಣಿಯು ರಣರೋಚಕಘಟ್ಟದತ್ತ ಸಾಗುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್​ಗಳ ಅಮೋಗ ಜಯ ಗಳಿಸಿತು. ಎರಡನೇ ಪಂದ್ಯದಲ್ಲೂ ಇಂಗ್ಲೆಂಡ್ ಎರಡು ವಿಕೆಟ್​ಗಳ ಸೋಲನು ಅಭವಿಸಿತ್ತು. ಬಳಿಕ ಮೂರನೇ ಪಂದ್ಯದಲ್ಲಿ ಭಾರತ 26 ರನ್​ಗಳ ಸೋಲು ಕಂಡಿದೆ.

ಹೌದು, ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಬೊಂಬಾಟ್ ಆಗಿತ್ತು. ಎರಡನೇ ಟಿ-20 ಪಂದ್ಯದಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳು ಮುಗ್ಗರಿಸಿದಾಗ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ತಿಲಕ್ ವರ್ಮಾ ತಂಡವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದರು. ಮೂರನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ ಸರಣಿ ಗೆಲ್ಲುವ ಉತ್ತಮ ಅವಕಾಶವಿತ್ತು. ಆದರೆ, ಈ ಕನಸು ನನಸಾಗಲಿಲ್ಲ. ಇನ್ನು ನಾಲ್ಕನೇ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿದೆ. ಈ ಪಂದ್ಯ ಯಾವಾಗ? ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ತಿಳಿಯಲು ಮುಂದೆ ಓದಿ.

IND vs ENG 4th T20: 4ನೇ ಟಿ20 ಪಂದ್ಯ ಯಾವಾಗ? ಉಚಿತ ವೀಕ್ಷಣೆ ಎಲ್ಲಿ?

ಈ ಮೂರು ಆಟಗಾರರು ತಂಡದಿಂದ ಔಟ್!

ನಾಲ್ಕನೇ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ 11 ನಲ್ಲಿ ದೊಡ್ಡ ಬದಲಾವಣೆ ಕಾಣಬಹುದಾಗಿದೆ. ಅರ್ಷದೀಪ್ ಸಿಂಗ್ ನಾಲ್ಕನೇ ಟಿ-20 ಪಂದ್ಯದಲ್ಲಿ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಸ್ಪಿನ್ನರ್ ರವಿ ಬಿಷ್ಣೋಯ್ ತಂಡದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಮೊಹಮ್ಮದ್ ಶಮಿಗೆ ಅರ್ಷದೀಪ್ ಸಿಂಗ್ ಸಪೋರ್ಟ್‌ ಸಿಗಲಿದೆ. ಇನ್ನು ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಬಹುದು. ಇವರ ಸ್ಥಾನದಲ್ಲಿ ಧೋನಿ ಶಿಷ್ಯ ಶಿವಂ ದುಬೆ ಕಣಕ್ಕಿಳಿಯಲಿದ್ದಾರೆ. ಜೊತೆಗೆ ಗ್ರೇಟ್ ಫಿನಿಷರ್‌ ರಿಂಕು ಸಿಂಗ್ ಸಹ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಧ್ರುವ್ ಜುರೆಲ್ ತಂಡದಿಂದ ಹೊರಗುಳಿಯುವುದು ಅನಿವಾರ್ಯ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ-20 ಪಂದ್ಯ ಯಾವಾಗ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ-20 ಪಂದ್ಯವು ಜನವರಿ 31 ರಂದು (ನಾಳೆ) ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ-20 ಪಂದ್ಯ ಎಲ್ಲಿ ನಡೆಯುತ್ತದೆ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ-20 ಮ್ಯಾಚ್ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಗೆದ್ದರೆ ಸರಣಿ ಭಾರತ ತಂಡದ ಪಾಲಾಗಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ-20 ಪಂದ್ಯ ಯಾವಾಗ ಪ್ರಾರಂಭ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ-20 ಪಂದ್ಯವು ರಾತ್ರಿ 7 ಗಂಟೆಗೆ ಶುರುವಾಗಲಿದೆ. ಇದಕ್ಕೂ ಮುನ್ನ ರಾತ್ರಿ 6.30 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ-20 ಮ್ಯಾಚ್ ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ-20 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಇದಲ್ಲದೆ, ಡಿಸ್ನಿ ಹಾಟ್​ಸ್ಟಾರ್ ಅಪ್ಲಿಕೇಶನ್ (ಆಪ್) ಹಾಗೂ ವೆಬ್​ಸೈಟ್​​ಗಳಲ್ಲಿ ಈ ಪಂದ್ಯವು ಲೈವ್ ಸ್ಟ್ರೀಮಿಂಗ್ ಆಗಲಿದೆ.

ಭಾರತ ಟಿ-20 ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್ (ಉಪ ನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೇಲ್ (ವಿಕೆಟ್ ಕೀಪರ್), ರಮಣ್​ದೀಪ್ ಸಿಂಗ್, ಶಿವಂ ದುಬೆ.

ಇಂಗ್ಲೆಂಡ್ ಟಿ-20 ತಂಡ

ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್ (ಉಪ ನಾಯಕ), ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜಾಮಿ ಸ್ಮಿತ್, ಲಿಯಾಮ್ ಲಿವಿಂಗ್​ಸ್ಟೋನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.

ಒಟ್ಟಾರೆ, ನಾಳೆ ನಡೆಯುವ ನಾಲ್ಕನೇ ಪಂದ್ಯವು ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಯಾಕಂದ್ರೆ, ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಭಾರತ ಕೊನೆಯ ಪಂದ್ಯಕ್ಕೂ ಮುನ್ನ ಸರಣಿ ವಶಪಡಿಸಿಕೊಳ್ಳಬಹುದು. ಇದಕ್ಕೆ ನಾಲ್ಕನೇ ಪಂದ್ಯದಲ್ಲಿ ಗೆಲ್ಲಬೇಕಿದೆ. ಇತ್ತ ಆಂಗ್ಲರು ಸರಣಿಯಲ್ಲಿ ಜೀವಂತವಾಗಿರಬೇಕಾದರೆ, ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಈ ಕಾರಣದಿಂದ ನಾಲ್ಕನೇ ಟಿ-20 ಪಂದ್ಯದಲ್ಲಿ ರೋಚಕ ಹಣಾಹಣಿಯನ್ನು ಎದುರು ನೋಡಬಹುದು.

Best Mobiles in India

English summary
IND vs ENG 4th T20 Live Streaming: When and where to watch India vs England Live on TV and online
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+