ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್‌ ಆರಂಭ!..ಎಲ್ಲರೂ ತಿಳಿಯಲೇಬೇಕಾದ ವಿಷಯಗಳಿವು!!

ಭಾರತೀಯ ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್‌ ವ್ಯವಸ್ಥೆಯು (ಐಪಿಪಿಬಿ) ಏಪ್ರಿಲ್‌ 1 ರಿಂದ ದೇಶದಾದ್ಯಂತ ಕಾರ್ಯರಂಭ ಮಾಡಲಿದೆ ಎಂದು ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್‌ ಆಡಳಿತ ಮಂಡಳಿ ‘ಐಪಿಪಿಬಿ’ ತಿಳಿಸಿದೆ.!

|

ಭಾರತೀಯ ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್‌ ವ್ಯವಸ್ಥೆಯು (ಐಪಿಪಿಬಿ) ಏಪ್ರಿಲ್‌ 1 ರಿಂದ ದೇಶದಾದ್ಯಂತ ಕಾರ್ಯರಂಭ ಮಾಡಲಿದೆ ಎಂದು ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್‌ ಆಡಳಿತ ಮಂಡಳಿ 'ಐಪಿಪಿಬಿ' ತಿಳಿಸಿದೆ.! ಏರ್‌ಟೆಲ್ ಮತ್ತು ಪೇಟಿಎಂ ನಂತರ ಪೂರ್ಣ ಪ್ರಮಾಣದ ಕಾರ್ಯಾಚರಣೆಗಳನ್ನು ನಡೆಸಲು ಐಪಿಪಿಬಿ ಪಾವತಿ ಬ್ಯಾಂಕ್ ಬರುತ್ತಿದೆ.!!

ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್‌ ಆರಂಭ!..ಎಲ್ಲರೂ ತಿಳಿಯಲೇಬೇಕಾದ ವಿಷಯಗಳಿವು!!

ದೇಶದ ಎಲ್ಲಾ 1.55 ಲಕ್ಷ ಅಂಚೆ ಕಚೇರಿಗಳು, 650 ಪೇಮೆಂಟ್ಸ್ ಬ್ಯಾಂಕ್‌ ಶಾಖೆಗಳು ಪೇಮೆಂಟ್ಸ್ ಬ್ಯಾಂಕ್‌ ಸೇವೆಯನ್ನು ಒದಗಿಸಲಿವೆ ಎಂದು 'ಐಪಿಪಿಬಿ' ತಿಳಿಸಿದೆ. ಹಾಗಾಗಿ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನೆಬಾಗಲಿಗೆ ಡಿಜಿಟಲ್‌ ಪಾವತಿ ಸೇವೆ ಇನ್ನು ಲಭ್ಯವಾಗಲಿದೆ. ಹಾಗಾದರೆ, 'ಐಪಿಪಿಬಿ' ಪೇಮೆಂಟ್ಸ್ ಬ್ಯಾಂಕ್ ಬಳಕೆ ಹೇಗೆ? ಗ್ರಾಹಕರಿಗೆ ಏನೆಲ್ಲಾ ಲಾಭ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

 ಐಪಿಪಿಬಿ ಪೇಮೆಂಟ್ಸ್ ಬ್ಯಾಂಕ್!!

ಐಪಿಪಿಬಿ ಪೇಮೆಂಟ್ಸ್ ಬ್ಯಾಂಕ್!!

ಗ್ರಾಹಕರು ಡೆಪಾಸಿಟ್ ಮಾಡಿದ ಹಣಕ್ಕೆ ಬಡ್ಡಿಹಣವನ್ನು ನಿಡುವ ಪೇಮೆಂಟ್ ಬ್ಯಾಂಕ್ ಆನ್‌ಲೈನ್ ಸೇವೆಗಳನ್ನು ನಿಡುತ್ತದೆ. ಆರ್‌ಬಿಐ ಅನುಮೋದತ ಕೆಲವೇ ಸಂಸ್ಥೆಗಳಲ್ಲಿ ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್‌ ಕೂಡ ಒಂದಾಗಿದ್ದು, ಜನರಿಂದ ಹಣವನ್ನು ಸ್ವೀಕರಿಸಬಹುದಾದ ಮತ್ತು ಬಡ್ಡಿಯನ್ನು ನಿಡಬೇಕಾದ ವ್ಯವಹಾರ ಇದಾಗಿದೆ.!!

1 ಲಕ್ಷ ಡೆಪಾಸಿಟ್!!

1 ಲಕ್ಷ ಡೆಪಾಸಿಟ್!!

ಯಾವುದೇ ಪೇಮೆಂಟ್ ಬ್ಯಾಂಕ್‌ಗಳಲ್ಲಿ 1 ಲ್ಕಷ ರೂಪಾಯಿಗಳ ವರೆಗೂ ಗ್ರಾಹಕರು ಹಣವನ್ನು ಡೆಪಾಸಿಟ್ ಮಾಡಿಡಬಹುದಾಗಿದೆ. ಗ್ರಾಹಕರು ಡೆಪಾಸಿಟ್ ಮಾಡಿದ ಹಣವನ್ನು ಯಾವಾಗಲಾದರೂ ವಾಪಸ್ ತೆಗೆದುಕೊಳ್ಳುವ ಅವಕಾಶವಿರುತ್ತದೆ ಇದಕ್ಕಾಗಿ ಎಟಿಎಂ ನೀಡಲಾಗುತ್ತದೆ. ಆದರೆ, ಠೇವಣಿ ಹಣದ ಆಧಾರದ ಮೇಲೆ ಸಾಲ ಪಡೆಯಲು ಇಲ್ಲ ಸಾಧ್ಯವಾಗುವುದಿಲ್ಲ.!!

ಮನೆಮನೆಗೆ ಡಿಜಿಟಲ್ ಪಾವತಿ!!

ಮನೆಮನೆಗೆ ಡಿಜಿಟಲ್ ಪಾವತಿ!!

ದೇಶದ ಎಲ್ಲಾ 1.55 ಲಕ್ಷ ಅಂಚೆ ಕಚೇರಿಗಳು, 650 ಪೇಮೆಂಟ್ಸ್ ಬ್ಯಾಂಕ್‌ ಶಾಖೆಗಳು ತೆರೆಯುತ್ತವೆ. ಇಷ್ಟಲ್ಲದೆ, ಪೋಸ್ಟ್‌ಮನ್‌ ಮತ್ತು ಗ್ರಾಮೀಣ ಅಂಚೆ ಸೇವಕರಿಗೆ ಪೇಮೆಂಟ್ಸ್ ಸೇವೆ ಒದಗಿಸುವ ಸಾಧನ ನೀಡಲಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನೆಬಾಗಲಿಗೆ ಡಿಜಿಟಲ್‌ ಪಾವತಿ ಸೇವೆ ಲಭ್ಯವಾಗಲಿದೆ.

17 ಕೋಟಿ ಉಳಿತಾಯ ಖಾತೆಗಳಿಗೆ ಲಾಭ!!

17 ಕೋಟಿ ಉಳಿತಾಯ ಖಾತೆಗಳಿಗೆ ಲಾಭ!!

ಈಗಾಗಲೇ ಅಂಚೆ ಕಚೇರಿಯಲ್ಲಿ ಇರುವ 17 ಕೋಟಿ ಉಳಿತಾಯ ಖಾತೆಗಳಿಗೆ ಪೇಮೆಂಟ್ಸ್ ಬ್ಯಾಂಕ್‌ ವ್ಯವಸ್ಥೆಯ ಲಾಭ ಸಿಗಲಿದೆ. ಎನ್‌ಇಎಫ್‌ಟಿ, ಆರ್‌ಟಿಜಿಎಸ್‌, ಯುಪಿಐ ಮತ್ತು ಬಿಲ್‌ ಪಾವತಿ ಸೇವೆಗಳು ಈ ಎಲ್ಲಾ ಖಾತೆ ಬಳಕೆದಾರರಿಗೆ ಲಭ್ಯವಾಗಲಿದ್ದು, ಎಲ್ಲರೂ ಡಿಜಿಟಲ್ ಪ್ರಪಂಚಕ್ಕೆ ಕಾಲಿಡಲಿದ್ದಾರೆ.!!

How to find out where you can get your Aadhaar card done (KANNADA)
ನಿಮ್ಮ ಹಣಕ್ಕೆ ಬಡ್ಡಿ ಎಷ್ಟು?

ನಿಮ್ಮ ಹಣಕ್ಕೆ ಬಡ್ಡಿ ಎಷ್ಟು?

ಗ್ರಾಹಕರು ಉಳಿತಾಯ ಮಾಡುವ ಹಣಕ್ಕೆ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್‌ ಶೇ. 7.3 ರಷ್ಟು ಬಡ್ಡಿಯನ್ನು ನೀಡುತ್ತಿದ್ದರೆ, ಪೇಟಿಎಂ ಶೇ. 4ರಷ್ಟು ಬಡ್ಡಿ ನಿಗದಿಪಡಿಸಿದೆ. ಆದರೆ, ಸರ್ಕಾರಿ ಅಂಚೆ ಪೇಮೆಂಟ್ ಬ್ಯಾಂಕ್‌ ಶೇ. 5.5 ರಷ್ಟು ವಾರ್ಷಿಕ ಬಡ್ಡಿದರ ನಿಗದಿ ಪಡಿಸಿದೆ.!!

Best Mobiles in India

English summary
India Post Payments Bank (IPPB) Expansion Programme continues to make brisk progress and a nation-wide roll-out is scheduled beginning April 2018. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X