ಹೆಚ್ಚಾಗುತ್ತಿದೆ ಸ್ಪಾಮ್‌ ಮೇಲ್‌ಗಳು: ಇಮೇಲ್‌ ವ್ಯವಹಾರದಲ್ಲಿ ಎಚ್ಚರವಾಗಿರಿ

Posted By:

ಇಮೇಲ್‌ ಬಳಸುವವರಿಗೆ ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅಮೆರಿಕ, ಚೀನಾದ ನಂತರ, ಪ್ರಪಂಚದಾದ್ಯಂತ ಸ್ಪಾಮ್‌ ವಿತರಿಸುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಪಡೆದಿದೆ ಎನ್ನುವ ವರದಿ ಪ್ರಕಟವಾಗಿದೆ.
ಸಂಸ್ಥೆ ಕಳೆದ ವರ್ಷದ ಡಿಸೆಂಬರ್‌ನಿಂದ ಈ ವರ್ಷದ ಫೆಬ್ರವರಿವರಗೆ ನಡೆಸಿದ ಮೂರು ತಿಂಗಳ ಅಧ್ಯಯನದಿಂದ ಈ ವರದಿ ನೀಡಿದೆ. ಇವರ ಅಧ್ಯಯನದ ಪ್ರಕಾರ ಅಮೆರಿಕದಲ್ಲಿ ಅತೀ ಹೆಚ್ಚು ಸ್ಪಾಮ್‌ ಮೇಲ್‌ಗಳು ಬಳಕೆದಾರರಿಗೆ ಬರುತ್ತಿದ್ದು, ವಿಶ್ವದ ಶೇ.18.3 ಸ್ಪಾಮ್‌ ಮೇಲ್‌ಗಳು ಅಮೆರಿಕದ ಜನತೆಗೆ ತಲುಪುತ್ತದೆ ಎಂದು ವರದಿಯಲ್ಲಿತಿಳಿಸಿದೆ.

ಹೆಚ್ಚಾಗುತ್ತಿದೆ ಸ್ಪಾಮ್‌ ಮೇಲ್‌ಗಳು: ಇಮೇಲ್‌ ವ್ಯವಹಾರದಲ್ಲಿ ಎಚ್ಚರವಾಗಿರಿ

ಏಷ್ಯಾ ಖಂಡದಲ್ಲಿ ಹೆಚ್ಚು ಸ್ಪಾಮ್‌ ವಿತರಿಸುವ ದೇಶಗಳ ಪಟ್ಟಿ ಪ್ರಥಮ ಸ್ಥಾನಿಯಾದ ಚೀನಾದಲ್ಲಿ ಶೇ. 8.2 ರಷ್ಟು ಸ್ಪ್ಯಾಮ್‌ ವಿತರಣೆಯಾಗುತ್ತಿದೆ ಎಂದು ಹೇಳಿದೆ. ಅಲ್ಲದೇ ಭಾರತದಲ್ಲಿ ಶೇ.4.2ರಷ್ಡು ಸ್ಪಾಮ್‌ ಮೇಲ್‌ಗಳು ವಿತರಣೆಯಾಗುತ್ತಿವೆ ಎಂದು ವರದಿ ತಿಳಿಸಿದೆ.

ಏನಿದು ಸ್ಪಾಮ್‌ ಮೇಲ್‌:
ಗ್ರಾಹಕರು ಬಯಸದ ಮಾಹಿತಿಗಳನ್ನು ಬಲವಂತವಾಗಿ ಇನ್‌ಬಾಕ್ಸ್‌ ತರುವಂತಹ ಮೇಲ್‌ಗಳನ್ನು ಸ್ಪಾಮ್‌ ಮೇಲ್‌ ಅಥವಾ ರದ್ದಿ ಸಂದೇಶ ಎಂದು ಕರೆಯುತ್ತೇವೆ. ಬಹುತೇಕ ಸ್ಪಾಮ್‌ಗಳಲ್ಲಿ ಹಲವು ಕಂಪನಿಗಳ ಆಹ್ವಾನ ಅಥವಾ ಆಫರ್ಸ್‌ಗಳಿರುತ್ತವೆ. ಇಂತಹ ಸ್ಪಾಮ್‌ ಮೇಲ್‌ಗಳಲ್ಲಿ ಕೆಲವೊಮ್ಮೆ ವೈರಸ್‌ಗಳು ಕೂಡಾ ಇರುತ್ತವೆ.ಇವುಗಳನ್ನು ಓಪನ್‌ ಮಾಡುತ್ತಿದ್ದಂತೆಯೇ ನಿಮ್ಮ ಕಂಪ್ಯೂಟರ್‌ನ ಹಾರ್ಡ್‌ಡಿಸ್ಕ್‌ ಕರಪ್ಟ್‌ ಆಗಿ ಬಿಡುತ್ತದೆ. ಹೀಗಾಗಿ ಇಂಥ ಮೇಲ್‌ಗಳನ್ನು ಓಪನ್‌ ಮಾಡುವಾಗ ಎಚ್ಚರವಾಗಿರುವುದು ಒಳಿತು.

ಲಿಂಕ್‌ : ಸ್ಪಾಮ್‌ ಮೇಲ್‌ಗಳಿಂದ ಮುಕ್ತಿ ಪಡೆಯುವುದು ಹೇಗೆ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot