IND vs NZ: ನಾಳೆ ಫೈನಲ್ ಪಂದ್ಯ; ಭಾರತ ಕಪ್ ಗೆಲ್ಲುತ್ತಾ? ಪಂದ್ಯ ಯಾವಾಗ, ಎಲ್ಲಿ ವೀಕ್ಷಿಸಬೇಕು?
ICC Champions Trophy 2025: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಭಾನುವಾರ (ಮಾರ್ಚ್ 9) ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು (India vs New Zealand) ಮುಖಾಮುಖಿಯಾಗಲಿವೆ. ಪ್ರಸ್ತುತ, ಭಾರತ ತಂಡ ಉತ್ತಮ ಫಾರ್ಮ್‌ನಲ್ಲಿದೆ. ಆದರೆ, ಕೆಲವು ಅಂಕಿ ಅಂಶಗಳು ನ್ಯೂಜಿಲೆಂಡ್ ಪರ ಇದೆ. 2000ರಲ್ಲಿ ನಡೆದಿದ್ದ CT ಫೈನಲ್ ಮತ್ತು 2021 WTC ಫೈನಲ್ ಪಂದ್ಯದಲ್ಲಿ ಕಿವೀಸ್ ಗೆದ್ದು ಬೀಗಿತ್ತು. ಈ ಸೋಲಿನ ಸೇಡು ಭಾರತ ನಾಳೆ ತೀರಿಸಿಕೊಳ್ಳಲಿದೆಯೇ? ಅಥವಾ ನ್ಯೂಜಿಲೆಂಡ್ ಮತ್ತೆ ಟ್ರೋಫಿ ಗೆಲ್ಲುತ್ತದೆಯೇ? ಎಂದು ಕಾದುನೋಡಬೇಕಿದೆ.
ಹೌದು, ನಾಳೆ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಭಾರತ ತಂಡವು ಅಜೇಯವಾಗಿ ಫೈನಲ್ ತಲುಪಿದ್ದು, ಫೈನಲ್ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದೆ. ಭಾರತ ತಂಡವು ಫೈನಲ್‌ಗೆ ತಲುಪುವ ಹಾದಿಯಲ್ಲಿ ಕಿವೀಸ್ ತಂಡವನ್ನು ಸೋಲಿಸಿದ್ದು, ಗೆಲುವಿನ ಭರವಸೆ ಮತ್ತಷ್ಟು ಹೆಚ್ಚಿಸಿದೆ. ಕ್ರಿಕೆಟ್ ಅಭಿಮಾನಿಗಳು ಟಿವಿ ಮತ್ತು ಆನ್‌ಲೈನ್‌ನಲ್ಲಿ ಈ ಪಂದ್ಯ ನೇರಪ್ರಸಾರ ಹೇಗೆ ಮತ್ತು ಎಲ್ಲಿ ವೀಕ್ಷಿಸಬಹುದು ಎನ್ನುವುದನ್ನು ತಿಳಿಯೋಣ ಬನ್ನಿ.

ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶ
ಐಸಿಸಿ ಟೂರ್ನಿಗಳ ಎರಡು ಫೈನಲ್‌ಗಳಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸೋತಿದೆ. ನ್ಯೂಜಿಲೆಂಡ್ ತಂಡವು ಚಾಂಪಿಯನ್ಸ್ ಟ್ರೋಫಿ-2000 ಮತ್ತು ವಿಶ್ವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್-2021ರ ಫೈನಲ್‌ಗಳಲ್ಲಿ ಭಾರತವನ್ನು ಸೋಲಿಸಿದೆ. ಇನ್ನೂ ಇಲ್ಲಿಯವರೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ 119 ಏಕದಿನ ಪಂದ್ಯಗಳು ನಡೆದಿದ್ದು, ಇದರಲ್ಲಿ ನ್ಯೂಜಿಲೆಂಡ್ 61 ಪಂದ್ಯಗಳನ್ನು ಗೆದ್ದಿದೆ. ಇತ್ತ ಭಾರತ 50 ಪಂದ್ಯಗಳನ್ನು ಗೆದ್ದಿದೆ. ಇದೀಗ ಭಾರತಕ್ಕೆ ಈ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶವಿದೆ.
ಭಾರತ vs ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ ಯಾವಾಗ ಪ್ರಾರಂಭ?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ ಮಾರ್ಚ್ 9 ರಂದು ಭಾನುವಾರ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ.
ಭಾರತ vs ನ್ಯೂಜಿಲೆಂಡ್ ವಿರುದ್ಧ ಫೈನಲ್ ಪಂದ್ಯ ಎಲ್ಲಿ ನಡೆಯಲಿದೆ?
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಭಾರತ vs ನ್ಯೂಜಿಲೆಂಡ್ ನಡುವಿನ ಪಂದ್ಯದ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?
ನೀವು ಸ್ಟಾರ್ ಸ್ಪೋರ್ಟ್ಸ್ HD 1 ಮತ್ತು ಸ್ಟಾರ್ ಸ್ಪೋರ್ಟ್ಸ್ HD 2 ನಲ್ಲಿ ಭಾರತ vs ನ್ಯೂಜಿಲೆಂಡ್ ಫೈನಲ್ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು. ಈ ಪಂದ್ಯವು ಟಿವಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ (ಕಾಮೆಂಟರಿ) ಲಭ್ಯವಿರುತ್ತದೆ.
ಮೊಬೈಲ್ ಅಪ್ಲಿಕೇಶನ್‌ನಲ್ಲಿ ಭಾರತ vs ನ್ಯೂಜಿಲೆಂಡ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?
ಭಾರತ vs ನ್ಯೂಜಿಲೆಂಡ್ ಪಂದ್ಯದ ನೇರ ಪ್ರಸಾರವು ಜಿಯೋ ಹಾಟ್‌ಸ್ಟಾರ್‌ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಲಭ್ಯವಿರುತ್ತದೆ. ಒಟಿಟಿ ಪ್ಲಾಟ್‌ಫಾರ್ಮ್ ಇಂಗ್ಲಿಷ್, ಹಿಂದಿ, ಭೋಜ್‌ಪುರಿ, ತೆಲುಗು, ತಮಿಳು, ಬಂಗಾಳಿ, ಕನ್ನಡ ಮತ್ತು ಹರ್ಯಾನ್ವಿ ಸೇರಿದಂತೆ ಬಹು-ಭಾಷೆಗಳಲ್ಲಿ ಕಾಮೆಂಟರಿ ಲಭ್ಯವಿದೆ.
ಟಿವಿಯಲ್ಲಿ ಭಾರತ vs ನ್ಯೂಜಿಲೆಂಡ್ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬೇಕು?
ಟಿವಿಯಲ್ಲಿ ನಿಮಗೆ ಎರಡು ಆಯ್ಕೆಗಳಿವೆ. ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಅಥವಾ ಮೇಲೆ ಹೇಳಿದಂತೆ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳು. ಆದಾಗ್ಯೂ, ಜಿಯೋ ಹಾಟ್‌ಸ್ಟಾರ್ ಬಳಕೆದಾರರಿಗೆ ಎಲ್ಲಾ ಕ್ರಿಯೆಗಳನ್ನು ವೀಕ್ಷಿಸಲು ಸಕ್ರಿಯ ಚಂದಾದಾರಿಕೆ ಅಗತ್ಯವಿದೆ. ಇದು ಜಿಯೋಸಿನಿಮಾ ಅಥವಾ ಡಿಸ್ನಿ+ ಹೋಸ್ಟಾರ್‌ಗೆ ಅಸ್ತಿತ್ವದಲ್ಲಿರುವ ಚಂದಾದಾರಿಕೆಗಳನ್ನು ಒಳಗೊಂಡಿದೆ.
ಭಾರತ vs ನ್ಯೂಜಿಲೆಂಡ್ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್, ಹರ್ಷಿತ್ ಜಾಪರ್ ರಾಣಾ, ರಿಷಭ್ ಪಂತ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.
ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ವಿಲ್ ಯಂಗ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ನಾಥನ್ ಸ್ಮಿತ್, ಮ್ಯಾಟ್ ಹೆನ್ರಿ, ವಿಲಿಯಂ ಒ'ರೂರ್ಕೆ, ರಾಚಿನ್ ರವೀಂದ್ರ, ಮಾರ್ಕ್ ಚಾಪ್‌ಮನ್, ಕೈಲ್ ಜೇಮಿಸನ್, ಜಾಕೋಬ್ ಡಫಿ.


Click it and Unblock the Notifications








