Home
ಟೆಕ್ ನೌಕರಿ

Ind vs Pak ICC T20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯವನ್ನು ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?

ಇಂದು ಕ್ರಿಕೆಟ್‌ ಪ್ರಿಯರ ಪಾಲಿಗೆ ಸೂಪರ್‌ ಸಂಡೆ. ಅದರಲ್ಲೂ ಭಾರತೀಯ ಕ್ರಿಕೆಟ್‌ ಪ್ರೇಮಿಗಳ ಪಾಲಿಗೆ ಹಬ್ಬದೂಟ ಸವಿಯುವ ದಿನ. ಏಕೆಂದರೆ ಐಸಿಸಿ T20 ವಿಶ್ವಕಪ್‌ನಲ್ಲಿ ಭಾರತ ಮತ್ತು ಬದ್ದವೈರಿ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಇಂಡಿಯಾ- ಪಾಕಿಸ್ತಾನ ಕ್ರಿಕೆಟ್‌ ಮ್ಯಾಚ್‌ ಅಂದರೆ ಹೇಳಬೇಕೆ. ಇಡೀ ವಿಶ್ವ ಕ್ರಿಕೆಟ್‌ನಲ್ಲಿಯೇ ಸಖತ್‌ ಹೈಪ್‌ ಕ್ರಿಯೆಟ್‌ ಆಗಿಬಿಡುತ್ತೆ. ಸದ್ಯ ಇಂದಿನ ಪಂದ್ಯದ ಮೇಲೂ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಇನ್ನು ಈ ಪಂದ್ಯ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾಗಲಿದೆ. ಆನ್‌ಲೈನ್‌ನಲ್ಲಿ ಕೂಡ ವೀಕ್ಷಿಬಹುದಾಗಿದೆ.

T20 ವಿಶ್ವಕಪ್‌

ಹೌದು, ಕ್ರಿಕೆಟ್‌ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ಇಂಡಿಯಾ ಪಾಕಿಸ್ತಾನ T20 ವಿಶ್ವಕಪ್‌ ಪಂದ್ಯ ಇಂದು ನಡೆಯಲಿದೆ. ಇಂಡಿಯಾ-ಪಾಕಿಸ್ತಾನ್‌ ಮ್ಯಾಚ್‌ ಅನ್ನು ಕ್ರಿಕೆಟ್‌ ಪ್ರೇಮಿಗಳು ಎಂದಿಗೂ ಮಿಸ್‌ ಮಾಡಿಕೊಳ್ಳಲು ಬಯಸೋದಿಲ್ಲ. ಇನ್ನು ಈ ಬಾರಿಯ T20 ವಿಶ್ವಕಪ್‌ ಪಂದ್ಯದ ನೇರ ಪ್ರಸಾರದ ಹಕ್ಕುಗಳನ್ನ ಭಾರತದಲ್ಲಿ ಸ್ಟಾರ್‌ ನೆಟ್‌ವರ್ಕ್‌ ಪಡೆದುಕೊಂಡಿದೆ. ಆದರಿಂದ ನೀವು ಸ್ಟಾರ್‌ನೆಟ್‌ವರ್ಕ್‌ನಲ್ಲಿ ಪಂದ್ಯ ವೀಕ್ಷಿಸಬಹುದು. ಒಂದು ವೇಳೆ ನೀವು ಆನ್‌ಲೈನ್‌ನಲ್ಲಿ ಪಂದ್ಯ ವೀಕ್ಷಿಬೇಕಿದ್ದರೆ ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ICC T20 ವಿಶ್ವಕಪ್ 2021

ICC T20 ವಿಶ್ವಕಪ್ 2021ನಲ್ಲಿ ಭಾರತದ ತನ್ನ ಅಭಿಯಾನವನ್ನು ಬದ್ದ ವೈರಿ ಪಾಕಿಸ್ತಾನದ ವಿರುದ್ದ ಆರಂಬಿಸಲಿದೆ. ಇಂದು ಸಂಜೆ 7:30ಕ್ಕೆ ಪ್ರಾರಂಭವಾಗುವ ಪಂದ್ಯದ ಮೇಲೆ ಕ್ರಿಕೆಟ್‌ ಪಂಡಿತರ ದೃಷ್ಟಿ ನೆಟ್ಟಿದೆ. ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ, ಎರಡೂ ತಂಡಗಳು ಗ್ರೂಪ್‌ 2 ನಲ್ಲಿ ಸ್ಥಾನ ಪಡೆದಿರೋದು ವಿಶೇಷ. ಇನ್ನು ವಿಶ್ವಕಪ್‌ ಪಂದ್ಯಾವಳಿಗಳಲ್ಲಿ ಪಾಕಿಸ್ತಾನದ ವಿರುದ್ದ ಭಾರತ ಒಮ್ಮೆಯು ಕೂಡ ಶರಣಾಗಿಲ್ಲ. ಈ ಬಾರಿಯೂ ಕೂಡ ಪಾಕ್‌ ವಿರುದ್ದ ತನ್ನ ಅಜೇಯ ದಾಖಲೆ ಮುಂದುವರೆಸುವ ನಿರೀಕ್ಷೆಯಲ್ಲಿ ಭಾರತ ತಂಡವಿದೆ.

ವಿಶ್ವಕಪ್‌

ಭಾರತ ಪಾಕಿಸ್ತಾನದ ವಿರುದ್ದ ಐಸಿಸಿ ವಿಶ್ವಕಪ್‌ ಟಿ 20 ಮತ್ತು 50-ಓವರ್‌ಗಳ ವಿಶ್ವಕಪ್‌ ಸೇರಿದಂತೆ ಒಟ್ಟು 12 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದೆ. ಆದರೆ ಈ ಆದರೆ ಪಾಕಿಸ್ತಾನ ಈ ಆಭರಿಯಾದರೂ ಭಾರತದ ವಿರುದ್ದ ಗೆಲ್ಲಬೇಕೆಂಬ ಒತ್ತಡದಲ್ಲಿದೆ. ಇನ್ನು ICC T20 ವಿಶ್ವಕಪ್ 2021 ನೇರ ಪ್ರಸಾರದ ಹಕ್ಕುಗಳನ್ನು ಭಾರತದಲ್ಲಿ ಸ್ಟಾರ್ ನೆಟ್‌ವರ್ಕ್ ಪಡೆದುಕೊಂಡಿದೆ. ಎಲ್ಲಾ ಟಿ 20 ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಮತ್ತು ಸ್ಟಾರ್ ಸ್ಪೋರ್ಟ್ಸ್ ಎಚ್‌ಡಿ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದಕ್ಕಾಗಿ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಸ್ಟಾರ್ ನೆಟ್‌ವರ್ಕ್ ಪಡೆದುಕೊಂಡಿದೆ. ಅಷ್ಟೇ ಅಲ್ಲ ಆನ್‌ಲೈನ್‌ನಲ್ಲಿ ಲೈವ್‌ ಮ್ಯಾಚ್‌ ಸ್ಟ್ರೀಮಿಂಗ್‌ ಮಾಡಬೇಕಿದ್ದರೆ ಡಿಸ್ನಿ+ ಹಾಟ್‌ಸ್ಟಾರ್ OTT ಪ್ಲಾಟ್‌ಫಾರ್ಮ್‌ನಲ್ಲಿ ನೋಡುವುದಕ್ಕೆ ಅವಕಾಸ ನೀಡಲಾಗಿದೆ.

ಇಂಡಿಯಾ ಪಾಕಿಸ್ತಾನ ಕ್ರಿಕೆಟ್‌ ಪಂದ್ಯವನ್ನು ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?

ಇಂಡಿಯಾ ಪಾಕಿಸ್ತಾನ ಕ್ರಿಕೆಟ್‌ ಪಂದ್ಯವನ್ನು ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?

ಭಾರತ vs ಪಾಕಿಸ್ತಾನ ಪಂದ್ಯವನ್ನು ಡಿಸ್ನಿ+ ಹಾಟ್‌ಸ್ಟಾರ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಬಹುದಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ಹೆಚ್ಚಿನ ಸಂಚಲನ ಸೃಷ್ಟಿಸಿರುವುದರಿಂದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಹೆಚ್ಚಿನ ಜನರು ಪದ್ಯ ವೀಕ್ಷಣೆಗೆ ಮುಗಿಬೀಳುವ ನಿರೀಕ್ಷೆ ಇದೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ಗೆ ಸೈನ್ ಇನ್ ಮಾಡದೆಯೇ ನೀವು 15 ನಿಮಿಷಗಳ ಕಾಲ ಉಚಿತವಾಗಿ ಪಂದ್ಯವನ್ನು ವೀಕ್ಷಿಸಬಹುದು. ಆದರೆ ಪೂರ್ತಿ ಪಂದ್ಯವನ್ನು ವೀಕ್ಷಣೆ ಮಾಡಬೇಕಿದ್ದರೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಯನ್ನು ಹೊಂದಿರಬೇಕು.

ಡಿಸ್ನಿ+ ಹಾಟ್‌ಸ್ಟಾರ್‌

ಇನ್ನು ಡಿಸ್ನಿ+ ಹಾಟ್‌ಸ್ಟಾರ್‌ ಸೂಪರ್‌ ವಾರ್ಷಿಕ ಚಂದಾದಾರಿಕೆಯು 899ರೂ.ಗಳಲ್ಲಿ ಲಭ್ಯವಿದೆ. ಹಾಗೆಯೇ ಪ್ರೀಮಿಯಂ ಚಂದಾದಾರಿಕೆಯು 1,499 ರೂಗಳಲ್ಲಿ ಲಭ್ಯವಿದೆ. ಇದಲ್ಲದೆ 499 ರೂ.ಬೆಲೆಯ ಮೊಬೈಲ್ ಪ್ಲಾನ್ ಕೂಡ ಲಭ್ಯವಾಗಲಿದೆ. ವೆಬ್, Android, iOS ಮತ್ತು Amazon Fire TV ಸ್ಟಿಕ್ ಅನ್ನು ಬಳಸಿಕೊಂಡು ಕೂಡ ಈ ಸೇವೆಯನ್ನು ಪ್ರವೇಶಿಸಬಹುದು. ಇದಲ್ಲದೆ ನೀವು ಏರ್‌ಟೆಲ್, ವಿ ಅಥವಾ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಚಂದಾದಾರರಾಗಿದ್ದರೆ, ಆಯ್ದ ಪ್ಲಾನ್‌ಗಳೊಂದಿಗೆ ಬಂಡಲ್ ಮಾಡಿದ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಗೆ ಉಚಿತವಾಗಿ ಪಂದ್ಯಗಳನ್ನು ವೀಕ್ಷಿಸಲು ನಿಮಗೆ ಅವಕಾಶವಿದೆ. ಒಟ್ಟಿನಲ್ಲಿ ಕ್ರಿಕೆಟ್‌ ಪ್ರಿಯರ ಪಾಲಿಗೆ ಇದು ಸೂಪರ್‌ ಸಂಡೆ.

Best Mobiles in India

English summary
Here's how you can watch the livestream free on your mobile phone, PC, TV and more using Disney+ Hotstar.to know more visit to kannada.gizbot.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+