ಜಿಮೇಲ್‌ನ ಈ ವಿಶೇಷತೆಗಳನ್ನು ತಿಳಿದಿದ್ದೀರಾ?

Posted By:

ಗೂಗಲ್‌ನ ಜಿಮೇಲ್‌ ನಿನ್ನೆ ತನ್ನ ಹತ್ತನೇಯ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಗೂಗಲ್‌ನ ಯಶಸ್ವಿ ಉತ್ಪನ್ನವಾದ ಜಿಮೇಲ್‌ನ್ನು ಇಂದು ವಿಶ್ವದ ಐವತ್ತು ಕೋಟಿಗೂ ಹೆಚ್ಚು ಜನ ಬಳಸುತ್ತಿದ್ದಾರೆ. ಗೂಗಲ್‌ನ ಜಿಮೇಲ್‌ ಎಷ್ಟೇ ಪ್ರಸಿದ್ದವಾದರೂ ಅದರ ಕೆಲವೊಂದು ವಿಶೇಷತೆಯನ್ನು ಬಳಕೆದಾರರು ಇನ್ನೂ ಬಳಸುತ್ತಿಲ್ಲ. ಹೀಗಾಗಿ ಬಳಕೆದಾರರಿಗೆ ಅಪರಿಚಿತವಾಗಿರುವ ಜಿಮೇಲ್‌ನ 

ಇದನ್ನೂ ಓದಿ: ಗೂಗಲ್‌ ಅಕೌಂಟ್‌ ಹೊಂದಿದ ಬಳಕೆದಾರರಿಗೆ ಉಪಯುಕ್ತವಾದ ಯುಆರ್‌ಎಲ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಟೋರೇಜ್‌:

ಸ್ಟೋರೇಜ್‌:

ಜಿಮೇಲ್‌ ವಿಶೇಷತೆಗಳು


ಗೂಗಲ್‌ ಬಳಕೆದಾರರಿಗೆ ಆರಂಭದಲ್ಲಿ ಜಿಮೇಲ್‌ನಲ್ಲಿ ಉಚಿತವಾಗಿ 1ಜಿಬಿ ಡೇಟಾವನ್ನು ಸಂಗ್ರಹ ಮಾಡಲು ಅವಕಾಶ ನೀಡಿತ್ತು.ಆದರೆ ಈಗ ಜಿಮೇಲ್‌‌,ಗೂಗಲ್‌ ಪ್ಲಸ್‌‌,ಗೂಗಲ್‌ ಡ್ರೈವ್‌ ಸೇರಿದಂತೆ 15 ಜಿಬಿವರೆಗೆ ಡೇಟಾವನ್ನು ಉಚಿತವಾಗಿ ಸಂಗ್ರಹ ಮಾಡಬಹುದಾಗಿದೆ.

ಜಿಮೇಲ್‌ ಲ್ಯಾಬ್‌:

ಜಿಮೇಲ್‌ ಲ್ಯಾಬ್‌:

ಜಿಮೇಲ್‌ ವಿಶೇಷತೆಗಳು


ಜಿಮೇಲ್‌ನ ಇನ್ನೊಂದು ವಿಶೇಷತೆ ಅದರಲ್ಲಿರುವ ಲ್ಯಾಬ್‌ ಟ್ಯಾಬ್‌. ಬಳಕೆದಾರರು ಸೆಟ್ಟಿಂಗ್ಸ್ ಹೋಗಿ ಲ್ಯಾಬ್‌ ಟ್ಯಾಬ್‌‌ನ್ನುಆರಿಸಿದ್ದಲ್ಲಿ ಜಿಮೇಲ್‌ ಹೊಸದಾಗಿ ಸೇರಿಸಿರುವ ವಿಶೇಷತೆಗಳನ್ನು ನೋಡಬಹುದು. ಅದರಲ್ಲಿ ಬೇಕಾದ ವಿಶೇಷತೆಗಳು 'Enable' ಮಾಡಿದ್ದರೆ ಆ ವಿಶೇಷತೆಗಳನ್ನು ಜಿಮೇಲ್‌ನಲ್ಲಿ ಕಾಣುತ್ತಿರುತ್ತದೆ.

Undo

Undo

ಜಿಮೇಲ್‌ ವಿಶೇಷತೆಗಳು


ಜಿಮೇಲ್‌ನಲ್ಲಿ ಕಳುಹಿಸಿದ ಮೆಸೇಜ್‌ನ್ನು ಕೂಡಲೇ Undo ಮಾಡಬಹುದು. ಬಳಕೆದಾರ ಕಳುಹಿಸಿದ ಮೆಸೇಜ್‌ ಮೂವತ್ತು ಸೆಕೆಂಡ್‌ ಒಳಗೆ Undo ಮಾಡಿದ್ರೆ ಮೇಸ್‌ಜ್‌‌ ಪುನಃ ಕಂಪೋಸ್‌ ವಿಂಡೋದಲ್ಲಿ ಕಾಣುತ್ತಿರುತ್ತದೆ.

Undo ವಿಶೇಷತೆಯನ್ನು ಹೀಗೆ ಸೇರಿಸಬಹುದು:
Settings ಹೋಗಿ Labs ಟ್ಯಾಬ್‌‌ ಆರಿಸಿಕೊಂಡು Undo Send ಆಯ್ಕೆಯನ್ನು Enable ಮಾಡಿ Save Changes ಮಾಡಿದ್ರೆ ನಿಮ್ಮ ಜಿಮೇಲ್‌ಗೆ ಈ ವಿಶೇಷತೆ ಸೇರಿರುತ್ತದೆ.

 ಆಫ್‌ಲೈನಲ್ಲಿ ಜಿಮೇಲ್‌ ಬಳಸಿ:

ಆಫ್‌ಲೈನಲ್ಲಿ ಜಿಮೇಲ್‌ ಬಳಸಿ:

ಜಿಮೇಲ್‌ ವಿಶೇಷತೆಗಳು

ಜಿಮೇಲ್‌ನ್ನು ಇಂಟರ್‌ನೆಟ್‌ ಇಲ್ಲದೆಯೂ ಬಳಸಬಹುದು. ಕ್ರೋಮ್‌ ಬ್ರೌಸರ್‌ನ ಮೂಲಕ Gmail Offline ಆಪ್‌ ಇನ್‌ಸ್ಟಾಲ್‌ ಮಾಡಿದ್ರೆ ಜಿಮೇಲ್‌‌ನ ಡೇಟಾವನ್ನು ನೋಡಬಹುದು. ಬಳಕೆದಾರರು ಆಫ್‌ಲೈನಲ್ಲೇಇಮೇಲ್‌ ಸಹ ಮಾಡಬಹುದು. ಸಿಸ್ಟಂಗೆ ಇಂಟರ್‌ನೆಟ್‌ ಕನೆಕ್ಟ್‌ ಆದಾಗ ಆಫ್‌ಲೈನ್‌ನಲ್ಲಿ ಕಳುಹಿಸಿದ ಮೇಲ್‌ ಮತ್ತೊಬ್ಬರಿಗೆ'Send' ಆಗುತ್ತದೆ.

 ಗೂಗಲ್‌ ಪ್ಲಸ್‌ ಮತ್ತು ಇಮೇಲ್‌:

ಗೂಗಲ್‌ ಪ್ಲಸ್‌ ಮತ್ತು ಇಮೇಲ್‌:

ಜಿಮೇಲ್‌ ವಿಶೇಷತೆಗಳು


ಗೂಗಲ್‌ ಪ್ಲಸ್‌‌ನಲ್ಲಿ ನಿಮ್ಮ ಸ್ನೇಹಿತರು ಯಾವುದೇ ಪೋಸ್ಟ್‌ ಮಾಡಿದ್ದರೂ,ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದರೂ ಅದು ನಿಮಗೆ ಸುಲಭವಾಗಿ ತಿಳಿಯುತ್ತದೆ. ಗೂಗಲ್‌ ಪ್ಲಸ್‌ಗೆ ಹೋ ಪ್ರತ್ಯೇಕವಾಗಿ ಪೇಜ್‌ನ್ನು ಓಪನ್‌ ಮಾಡಬೇಕಿಲ್ಲ.ಜೊತೆಗೆ ಅಪರಿಚಿತ ವ್ಯಕ್ತಿ ಮೇಲ್‌ ಮಾಡಿದ್ದರೂ ಅವರ ಚಿತ್ರ,ಗೂಗಲ್‌ ಪ್ಲಸ್‌ ಅಕೌಂಟ್‌ ಮಾಹಿತಿ ಸಹ ಜಿಮೇಲ್‌‌ನಲ್ಲಿ ಸುಲಭವಾಗಿ ನೋಡಬಹುದಾಗಿದೆ.

ಜಿಮೇಲ್‌‌ನಲ್ಲಿ ಕನ್ನಡ:

ಜಿಮೇಲ್‌‌ನಲ್ಲಿ ಕನ್ನಡ:

ಜಿಮೇಲ್‌ ವಿಶೇಷತೆಗಳು


ಜಿಮೇಲ್‌‌ ಸಂಪೂರ್ಣ‌ವಾಗಿ ಕನ್ನಡ ಭಾಷೆಗೆ ಬದಲಾಯಿಸಬಹುದು. ಸೆಟ್ಟಿಂಗ್ಸ್‌ ಹೋಗಿ ಭಾಷೆ ವಿಭಾಗದಲ್ಲಿ ಕನ್ನಡವನ್ನು ಆರಿಸಿದ್ದಲ್ಲಿ ಜಿಮೇಲ್‌ ಸಂಪೂರ್ಣ‌ವಾಗಿ ಕನ್ನಡಕ್ಕೆ ಬದಲಾಗುತ್ತದೆ.

 ಜಿಮೇಲ್‌‌ನಲ್ಲಿ ಕನ್ನಡ ಟೈಪ್‌ ಮಾಡಿ:

ಜಿಮೇಲ್‌‌ನಲ್ಲಿ ಕನ್ನಡ ಟೈಪ್‌ ಮಾಡಿ:

ಜಿಮೇಲ್‌ ವಿಶೇಷತೆಗಳು

ಸೆಟ್ಟಿಂಗ್ಸ್‌ ಹತ್ತಿರನೇ ಇರುವ ಇನ್‌ಪುಟ್‌ ಪರಿಕರದಲ್ಲಿ ಕನ್ನಡವನ್ನು ಆರಿಸಿಕೊಂಡು ಕನ್ನಡದಲ್ಲಿ ಟೈಪ್‌ ಮಾಡಬಹುದು.

ಮೇಲ್‌ ವಿಂಗಡನೆ:

ಮೇಲ್‌ ವಿಂಗಡನೆ:

ಜಿಮೇಲ್‌ ವಿಶೇಷತೆಗಳು


ಜಿಮೇಲ್‌ನ ಇನ್ನೊಂದು ವಿಶೇಷತೆ ಸೋಶಿಯಲ್‌ ನೆಟ್‌‌ವರ್ಕ್‌ನಿಂದ ಬಂದ ಮೇಲ್‌ಗಳು ಒಂದು ವಿಭಾಗದಲ್ಲಿ ಪ್ರತ್ಯೇಕಗೊಂಡರೆ,ಪ್ರೊಮೋಶನ್‌ ಜಾಹೀರಾತು ಮೇಲ್‌ಗಳು ಇನ್ನೊಂದು ವಿಭಾಗಕ್ಕೆ ಹೋಗುತ್ತದೆ.ನಮ್ಮ ಸ್ನೇಹಿತರ ಮೇಲ್‌ಗಳನ್ನು ಪ್ರೈಮರಿ ವಿಭಾಗದಲ್ಲಿ ನೋಡಬಹುದು.ಈ ಈ ವಿಶೇಷತೆಯಿಂದಾಗಿ ಬಳಕೆದಾರರರು ಮೇಲ್‌ನ್ನು ಸುಲಭವಾಗಿ ವೀಕ್ಷಿಸಬಹುದಾಗಿದೆ.

 ಸರ್ಚ್‌:

ಸರ್ಚ್‌:

ಜಿಮೇಲ್‌ ವಿಶೇಷತೆಗಳು


ಗೂಗಲ್‌ ಜಿಮೇಲ್‌‌ನ ಇನ್ನೊಂದು ವಿಶೇಷತೆ ಅದರಲ್ಲೇ ಸ್ನೇಹಿತರ ಹೆಸರನ್ನು ಟೈಪ್‌ ಮಾಡಿ ಅವರ ಮೇಲ್‌ ಹುಡಕಬಹುದು,ಜೊತೆಗೆ ಬೇಕಾದ ವಿಷಯವನ್ನು ಅಲ್ಲೇ ಟೈಪ್‌ ಮಾಡಿ ಗೂಗಲ್‌ ಸರ್ಚ್‌‌ನಲ್ಲೂ ಹುಡಕಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot