ಐಫೋನ್ 6 ಬ್ಯಾಟರಿ ಸುಧಾರಿಸಲು ಸರಳ ಸಲಹೆಗಳು

Written By:

ನಿಮ್ಮ ಐಫೋನ್ 6 ಬ್ಯಾಟರಿ ಚಲನರಹಿತವಾಗಿದೆಯೇ? ಇದು ಬೇಗನೇ ಚಾರ್ಜ್ ಕಳೆದುಕೊಳ್ಳುತ್ತಿದೆಯೇ? ಹಾಗಿದ್ದರೆ ನಿಮ್ಮ ಐಫೋನ್ 6 ಬ್ಯಾಟರಿ ಜೀವನವನ್ನು ಸುಧಾರಿಸಿ ದೀರ್ಘ ಕಾಲ ಬ್ಯಾಟರಿ ಬಳಕೆಯಾಗುವಂತೆ ಮಾಡಲು ಕೆಲವೊಂದು ಸರಳ ಸಲಹೆಗಳನ್ನು ನಾವು ನೀಡುತ್ತಿದ್ದೇವೆ.

(ಇದನ್ನೂ ಓದಿ: ಕರ್ನಾಟಕದ ಜನಪ್ರಿಯ ವ್ಯಕ್ತಿಗಳ ಟ್ವಿಟ್ಟರ್ ಖಾತೆ ಒಳನೋಟ)

ಹಾಗಿದ್ದರೆ ಆ ಸರಳ ಸಲಹೆಗಳೇನು ಎಂಬುದನ್ನು ತಿಳಿದುಕೊಳ್ಳಲು ನೀವು ಉತ್ಸುಕರಾಗಿದ್ದಲ್ಲಿ ಕೆಳಗೆ ನಾವು ನೀಡುವ ಕೆಲವೊಂದು ಟಿಪ್ಸ್‌ಗಳು ನಿಮಗೆ ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ. ಈ ಸರಳ ಸಲಹೆಗಳನ್ನು ನೀವು ಬಳಸಿಕೊಂಡಾಗ ನಿಮ್ಮ ಫೋನ್ ಬ್ಯಾಟರಿಯಲ್ಲಿ ಆಗುವ ಅದ್ಭುತಗಳನ್ನು ನಿಮಗೆ ಗಮನಿಸಬಹುದಾಗಿದೆ.

ಐಫೋನ್ 6 ಬ್ಯಾಟರಿ ಸುಧಾರಿಸಲು ಸರಳ ಸಲಹೆಗಳು

ಅಪ್ಲಿಕೇಶನ್ ಡ್ರೈನ್
ಅಪ್ಲಿಕೇಶನ್ ಮುಚ್ಚಿದರೂ ಕೂಡ ಕೆಲವೊಮ್ಮೆ ಅವುಗಳು ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ .ಇದರಿಂದ ಕೂಡ ಫೋನ್ ಬ್ಯಾಟರಿ ಡ್ರೈನ್ ಆಗುತ್ತದೆ. ಜನರಲ್> ಯೂಸೇಜ್>ಬ್ಯಾಟರಿ ಯೂಸೇಜ್ ಇಲ್ಲಿ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನಿಮಗೆ ಗಮನಿಸಬಹುದಾಗಿದೆ. 7 ದಿನಗಳಿಗಿಂತ ಹೆಚ್ಚು ಸಮಯ ಹಿನ್ನಲೆಯಲ್ಲಿ ಚಾಲನೆಯಾಗುತ್ತಿರುವ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ.

ಐಫೋನ್ 6 ಬ್ಯಾಟರಿ ಸುಧಾರಿಸಲು ಸರಳ ಸಲಹೆಗಳು

ಬ್ರೈಟ್‌ನೆಸ್ ಮತ್ತು ಆಟೊ ಲಾಕ್ ಸರಿಹೊಂದಿಸಿ
ಸೆಟ್ಟಿಂಗ್ಸ್> ಜನರಲ್> ಡಿಸ್‌ಪ್ಲೇ ಮತ್ತು ಬ್ರೈಟ್‌ನೆಸ್ ಇಲ್ಲಿ ನಿಮಗೆ ಫೋನ್ ಬ್ರೈಟ್‌ನೆಸ್ ಸರಿಹೊಂದಿಸಬಹುದಾಗಿದೆ. ನಿಮ್ಮ ಆಟೊ ಲಾಕ್ ಅನ್ನು 1ನಿಮಿಷಕ್ಕೆ ಇರಿಸಿ.

ಐಫೋನ್ 6 ಬ್ಯಾಟರಿ ಸುಧಾರಿಸಲು ಸರಳ ಸಲಹೆಗಳು

ವೈಫೈ ಮತ್ತು 3ಜಿ ನಿಷ್ಕ್ರಿಯಗೊಳಿಸಿ
ನೀವು ಬಳಸದೇ ಇರುವಾಗ ವೈಫೈ ಮತ್ತು 3ಜಿಯನ್ನು ನಿಷ್ಕ್ರಿಯಗೊಳಿಸುವುದು ಉತ್ತಮ ಉಪಾಯವಾಗಿದೆ. ವೈಫಯಗಿಂತಲೂ 3ಜಿ ಸಂಪರ್ಕ ಹೆಚ್ಚಿನ ಇಂಟರ್ನೆಟ್ ಕಬಳಿಸುತ್ತದೆ. ಅಂತೆಯೇ ನಿಮ್ಮ ವೈಫೈ ಸಂಪರ್ಕ ನಿಧಾನವಾಗಿದೆ ಎಂದಾದಲ್ಲಿ ಅದನ್ನು ಸುಧಾರಿಸುವತ್ತ ಗಮನ ಹರಿಸಿ ಇಲ್ಲದಿದ್ದಲ್ಲಿ ಇದು ನಿಮ್ಮ ಬ್ಯಾಟರಿಯನ್ನು ಹೆಚ್ಚು ಕಬಳಿಸಬಹುದು.

ಐಫೋನ್ 6 ಬ್ಯಾಟರಿ ಸುಧಾರಿಸಲು ಸರಳ ಸಲಹೆಗಳು

ಏರ್ ಡ್ರಾಪ್ ಆಫ್ ಮಾಡಿ
ಐಫೋನ್‌ನಲ್ಲಿ ಏರ್ ಡ್ರಾಪ್ ಅನ್ನು ಬಳಸಿಕೊಂಡು ನಾವು ಫೈಲ್‌ಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಹತ್ತಿರದಲ್ಲಿರುವ ಐಫೋನ್‌ಗೆ ವರ್ಗಾಯಿಸಬಹುದು ಇದು ಬ್ಲ್ಯೂಟೂತ್‌ನಂತೆ ಕಾರ್ಯನಿರ್ವಹಿಸುತ್ತದೆ. ಆದರೆ ಇದು ಬ್ಯಾಟರಿ ಕಿಲ್ಲರ್ ಎಂಬುದು ನಿಮಗೆ ಗೊತ್ತೇ? ಆದ್ದರಿಂದ ಇದರ ಬಳಕೆಯನ್ನು ನಿಮ್ಮ ಐಫೋನ್‌ನಲ್ಲಿ ಆದಷ್ಟು ಕಡಿಮೆಮಾಡಿ.

ಐಫೋನ್ 6 ಬ್ಯಾಟರಿ ಸುಧಾರಿಸಲು ಸರಳ ಸಲಹೆಗಳು

ಏರ್‌ಪ್ಲೇನ್ ಮೋಡ್
ಜಿಎಸ್‌ಎಮ್, 3ಜಿ ಮತ್ತು 4ಜಿ ಸಂಪರ್ಕವನ್ನು ನಾವು ಸಾಮಾನ್ಯವಾಗಿ ಬಳಸುತ್ತೇವೆ. ನೀವು ಕಡಿಮೆ ಸಿಗ್ನಲ್ ಇರುವ ಪ್ರದೇಶದಲ್ಲಿ ಇದ್ದೀರಿ ಎಂದಾದಲ್ಲಿ ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸುವುದು ಫೋನ್‌ನ ಬ್ಯಾಟರಿಯನ್ನು ಉಳಿಸುತ್ತದೆ.

English summary
Is your iPhone 6 battery life is poor ? Is it draining too quickly ? Well we have some tips for your to improve your iPhone 6 battery life and make it last longer.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot