IPL 2025: ನಾಳೆ KKR vs RCB ಕಾಳಗ; ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಶುರು, ನೇರ ಪ್ರಸಾರ ವೀಕ್ಷಣೆ ಹೇಗೆ?
ಐಪಿಎಲ್ ಹಂಗಾಮಕ್ಕೆ ಕ್ಷಣಗಣನೆ ಶುರು! ನಾಳೆಯಿಂದ (ಮಾರ್ಚ್ 22) ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2025) 18ನೇ ಸೀಸನ್ ಪ್ರಾರಂಭವಾಗಲಿದೆ. ಹೌದು, ಈ ಕ್ರಿಕೆಟ್ ಲೀಗ್ ವಿಶ್ವದ ಅತ್ಯಂತ ರೋಮಾಂಚಕಾರಿ ಟಿ-20 (T20) ಕ್ರಿಕೆಟ್ ಲೀಗ್ ಆಗಿದೆ. ವಿಶ್ವದ ಸ್ಟಾರ್ ಆಟಗಾರರು ಇಲ್ಲಿ ಸೇರುತ್ತಾರೆ. ಈ ಬಾರಿ ಲೀಗ್‌ನಲ್ಲಿ 10 ತಂಡಗಳು ಭಾಗವಹಿಸಲಿದ್ದು, ಒಟ್ಟು 74 ಪಂದ್ಯಗಳು ನಡೆಯಲಿವೆ. ಐಪಿಎಲ್ (TATA IPL 2025) ಪ್ರಾರಂಭವಾದ ಎರಡು ದಿನಗಳಲ್ಲಿ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದೊಡ್ಡ ಆಟಗಾರರು ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೌದು, ನಾಳೆ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗಲಿವೆ. ಎರಡನೇ ದಿನವಾದ ಮಾರ್ಚ್ 23 ರಂದು ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಡಲಿವೆ. ಎರಡನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಇರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೋಹಿತ್ ಶರ್ಮಾ ಇರುವ ಮುಂಬೈ ಇಂಡಿಯನ್ಸ್ ತಂಡಗಳು ಗೆಲುವಿಗಾಗಿ ಸೆಣಸಲಿವೆ. ಈ ಪಂದ್ಯದ ವೇಳಾಪಟ್ಟಿ, ಪಂದ್ಯದ ಸಮಯ ಮತ್ತು ನೇರ ಪ್ರಸಾರದ ಬಗ್ಗೆ ಈ ಲೇಖನದಲ್ಲಿ ತಿಳಿಸಿದ್ದೇವೆ.

ಐಪಿಎಲ್ 2025 ಪಂದ್ಯದ ಸಮಯ
ಮೊದಲೇ ಹೇಳಿದಂತೆ ಈ ಬಾರಿ ಐಪಿಎಲ್ 2025 ಆವೃತ್ತಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಇದರಲ್ಲಿ ಒಂದು ದಿನದಲ್ಲಿ ಎರಡು ಪಂದ್ಯಗಳು ಅಂದರೆ, ಹಲವು ಡಬಲ್ ಹೆಡರ್ ಮ್ಯಾಚ್ ಇರುತ್ತವೆ. ಶನಿವಾರ ಮತ್ತು ಭಾನುವಾರ ಮಾತ್ರ ಒಂದು ದಿನದಲ್ಲಿ ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ.
ಮೊದಲ ಪಂದ್ಯದ ಸಮಯ: ಮಧ್ಯಾಹ್ನ 3.30
ಎರಡನೇ ಪಂದ್ಯದ ಸಮಯ: ಸಂಜೆ 7.30
ಐಪಿಎಲ್ 2025 ಲೈವ್ ಸ್ಟ್ರೀಮಿಂಗ್ ವೀಕ್ಷಣೆ ಹೇಗೆ?
ಐಪಿಎಲ್ 2025 ಆವೃತ್ತಿಯ ಎಲ್ಲಾ ಪಂದ್ಯಗಳನ್ನು ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಟಿವಿಯಲ್ಲಿ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 2, ಸ್ಪೋರ್ಟ್ಸ್ 18 1
ಆನ್‌ಲೈನ್ ಸ್ಟ್ರೀಮಿಂಗ್: ಜಿಯೋ ಹಾಟ್‌ಸ್ಟಾರ್ ಆಪ್
ಮೊಬೈಲ್‌ನಲ್ಲಿ ಐಪಿಎಲ್ 2025 ವೀಕ್ಷಣೆ ಎಲ್ಲಿ ಮತ್ತು ಹೇಗೆ?
ಐಪಿಎಲ್ 2025 (IPL 2025) ಅನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ನೀವು ಮೊಬೈಲ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು, ಈ ಕೆಳಗೆ ತಿಳಿಸುವ ಟ್ರಿಕ್ ಬಳಸಿ.
* ಮೊದಲು ನಿಮ್ಮ ಫೋನಿನಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಜಿಯೋ ಹಾಟ್‌ಸ್ಟಾರ್ ಆಪ್ ಡೌನ್‌ಲೋಡ್ ಮಾಡಿ.
* ನಂತರ ಅಪ್ಲಿಕೇಶನ್ ಓಪನ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ.
* ಇದಾದ ಬಳಿಕ ಓಟಿಪಿ (OTP) ಮೂಲಕ ಲಾಗಿನ್ ಆಗಿ.
* ಬಳಿಕ ಮುಖಪುಟ ಪರದೆಯಲ್ಲಿ IPL 2025 ಬ್ಯಾನರ್ ಮೇಲೆ ಕ್ಲಿಕ್ ಮಾಡಿ ('ಕ್ರೀಡೆ' ಟ್ಯಾಬ್‌ಗೆ ಹೋಗಿ ಲೈವ್ ಮ್ಯಾಚ್ ಮೇಲೆ ಟ್ಯಾಪ್ ಮಾಡಿ).
* ಇದಾದ ನಂತರ ನೀವು ಮೊಬೈಲ್‌ನಲ್ಲಿ IPL 2025 ಆವೃತ್ತಿಯ ಎಲ್ಲಾ ಪಂದ್ಯಗಳನ್ನು ವೀಕ್ಷಿಸಬಹುದು.
ಐಪಿಎಲ್ 2025 ಯಾವಾಗ ಆರಂಭ?
ಐಪಿಎಲ್ 2025 ಮಾರ್ಚ್ 22 (ನಾಳೆ) ಪ್ರಾರಂಭವಾಗಲಿದೆ. ಅಂತಿಮ ಪಂದ್ಯವು ಮೇ 25 ರಂದು ನಡೆಯಲಿದೆ.
ಐಪಿಎಲ್ 2025ರ ಮೊದಲ ಪಂದ್ಯ ಯಾವ ತಂಡಗಳ ನಡುವೆ ನಡೆಯಲಿದೆ?
ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ನಾಳೆ (ಮಾರ್ಚ್ 22) ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಐಪಿಎಲ್ 2025 ಆವೃತ್ತಿಯ ಅಂತಿಮ ಪಂದ್ಯ ಎಲ್ಲಿ ನಡೆಯಲಿದೆ?
ಐಪಿಎಲ್ 2025 ಆವೃತ್ತಿಯ ಅಂತಿಮ ಮ್ಯಾಚ್ ಮೇ 25 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.


Click it and Unblock the Notifications








