RCB vs GT: ಆರ್‌ಸಿಬಿಗೆ ಹ್ಯಾಟ್ರಿಕ್ ಗೆಲುವಿನ ಕನಸು.. ಸಿರಾಜ್ ಮೇಲೆ ಎಲ್ಲರ ಕಣ್ಣು; ಪಂದ್ಯ ಯಾವಾಗ, ಎಲ್ಲಿ ಲೈವ್ ವೀಕ್ಷಿಸಬೇಕು?
RCB vs GT Live Streaming: ಐಪಿಎಲ್‌ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗಲಿವೆ. ರಜತ್ ಪಟಿದಾರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊಸ ಉತ್ತಮ ಆರಂಭ ಪಡೆದಿದೆ. ಆರಂಭಿಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅವರ ತವರು ನೆಲದಲ್ಲೇ ಸೋಲಿಸಿತ್ತು. ಬಳಿಕ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯಗಳಿಸುವ ಮೂಲಕ 17 ವರ್ಷಗಳ ನಂತರ ಮೊದಲ ಬಾರಿಗೆ ಗೆಲುವು ಸಾಧಿಸಿತು. ಇದೀಗ, ಆರ್‌ಸಿಬಿ ತವರು ಅಂಗಳಕ್ಕೆ ಮರಳಿದ್ದು, ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಮೊದಲ ಐಪಿಎಲ್ 2025 ಪಂದ್ಯವನ್ನು ಆಡುತ್ತಿದೆ.
ಮತ್ತೊಂದೆಡೆ, ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಮೊದಲ ಎರಡೂ ಪಂದ್ಯಗಳನ್ನು ಅಹಮದಾಬಾದ್‌ನಲ್ಲಿ ತವರಿನಲ್ಲಿ ಆಡಿತ್ತು. ಪಂಜಾಬ್ ಕಿಂಗ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಸೋತರೂ, ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ಜಯಗಳಿಸುವ ಮೂಲಕ ಮತ್ತೆ ಲಯಕ್ಕೆ ಮರಳಿದೆ. ಈ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ಗುಜರಾತ್ ಟೈಟಾನ್ಸ್ ತನ್ನ ನಡೆದ ಮೊದಲ ಪಂದ್ಯ ಆಡುತ್ತಿದೆ. ವಿಶೇಷವೆಂದರೆ, ಮೊಹಮ್ಮದ್ ಸಿರಾಜ್ RCB ತಂಡದ ವಿರುದ್ಧ ಮೊದಲ ಪಂದ್ಯ ಆಡುತ್ತಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಅವರು GT ತಂಡದ ಪಾಲಾಗಿದ್ದಾರೆ. ಸಿರಾಜ್ 87 ಪಂದ್ಯಗಳಲ್ಲಿ ಆರ್‌ಸಿಬಿಯನ್ನು ಪ್ರತಿನಿಧಿಸಿದ್ದಾರೆ.

ಐಪಿಎಲ್‌ನಲ್ಲಿ ಎರಡೂ ತಂಡಗಳು ಕೇವಲ ಐದು ಬಾರಿ ಮಾತ್ರ ಮುಖಾಮುಖಿಯಾಗಿವೆ. ಕಳೆದ ಆವೃತ್ತಿಯಲ್ಲಿ ಸತತ ಎರಡು ಗೆಲುವುಗಳ ಬಳಿಕ ಆರ್‌ಸಿಬಿ 3-2 ಮುನ್ನಡೆಯಲ್ಲಿದೆ.
ಐಪಿಎಲ್‌ನಲ್ಲಿ RCB vs GT ಮುಖಾಮುಖಿ
ಒಟ್ಟು ಪಂದ್ಯಗಳು: 5
ಆರ್‌ಸಿಬಿ ಗೆಲುವು: 3
ಜಿಟಿ ಗೆಲುವು: 2
RCB vs GT ಲೈವ್ ಸ್ಟ್ರೀಮಿಂಗ್ ಮತ್ತು ನೇರ ಪ್ರಸಾರದ ವಿವರಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ ಪಂದ್ಯ ಯಾವಾಗ ನಡೆಯಲಿದೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ಇಂದು (ಏಪ್ರಿಲ್ 2, ಬುಧವಾರ) ಸಂಜೆ 7.30ಕ್ಕೆ ನಡೆಯಲಿದೆ. ಟಾಸ್ ಭಾರತೀಯ ಕಾಲಮಾನ ಸಂಜೆ 7.00 ಗಂಟೆಗೆ ಜರುಗಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ ಪಂದ್ಯ ಎಲ್ಲಿ ನಡೆಯಲಿದೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ IPL 2025 ಪಂದ್ಯವನ್ನು ಹೇಗೆ ವೀಕ್ಷಿಸುವುದು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮೂಲಕ ನೇರ ಪ್ರಸಾರಕ್ಕೆ ಲಭ್ಯವಿರುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ ಪಂದ್ಯದ ಲೈವ್ ಸ್ಟ್ರೀಮಿಂಗ್ ವೀಕ್ಷಿಸುವುದು ಹೇಗೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವನ್ನು ಜಿಯೋಹಾಟ್‌ಸ್ಟಾರ್ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ.
ಐಪಿಎಲ್ 2025 (IPL 2025) ಅನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ನೀವು ಮೊಬೈಲ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು, ಈ ಕೆಳಗೆ ತಿಳಿಸುವ ಟ್ರಿಕ್ ಬಳಸಿ.
* ಮೊದಲು ನಿಮ್ಮ ಫೋನಿನಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಜಿಯೋ ಹಾಟ್‌ಸ್ಟಾರ್ ಆಪ್ ಡೌನ್‌ಲೋಡ್ ಮಾಡಿ.
* ಬಳಿಕ ಅಪ್ಲಿಕೇಶನ್ ಓಪನ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ.
ಇದಾದ ಬಳಿಕ ಓಟಿಪಿ (OTP) ಮೂಲಕ ಲಾಗಿನ್ ಆಗಿ.
* ನಂತರ ಮುಖಪುಟ ಪರದೆಯಲ್ಲಿ IPL 2025 ಬ್ಯಾನರ್ ಮೇಲೆ ಕ್ಲಿಕ್ ಮಾಡಿ ('ಕ್ರೀಡೆ' ಟ್ಯಾಬ್‌ಗೆ ಹೋಗಿ ಲೈವ್ ಮ್ಯಾಚ್ ಮೇಲೆ ಟ್ಯಾಪ್ ಮಾಡಿ.
* ಇದಾದ ಬಳಿಕ ನೀವು ಮೊಬೈಲ್‌ನಲ್ಲಿ IPL 2025 ಆವೃತ್ತಿಯ ಎಲ್ಲಾ ಪಂದ್ಯಗಳನ್ನು ವೀಕ್ಷಿಸಬಹುದು.
ಉಭಯ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರಸಿಖ್ ದಾರ್ ಸಲಾಂ, ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ದೇವದತ್ ಪಡಿಕ್ಕಲ್, ಸ್ವೇರ್ ಸಿಂಗ್, ಮನ್ಮರಿಯೋಜಿನ್, ಅಭಿನಂದನ್ ಸಿಂಗ್, ಮನ್ಮಾರ್‌ಪ್ ಸಿಂಗ್ ಭುವನೇಶ್ವರ್ ಕುಮಾರ್, ಲುಂಗಿ ಎನ್ಗಿಡಿ, ನುವಾನ್ ತುಷಾರ, ಜೇಕಬ್ ಬೆಥೆಲ್, ಮೋಹಿತ್ ರಥಿ, ಸ್ವಸ್ತಿಕ್ ಚಿಕಾರಾ.
ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿ.ಕೀ), ಸಾಯಿ ಸುದರ್ಶನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರವಿಶ್ರೀನಿವಾಸನ್ ಸಾಯಿ ಕಿಶೋರ್, ಅರ್ಷದ್ ಖಾನ್, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಶೆರ್ಫಾನೆ ರುದರ್‌ಫೋರ್ಡ್, ಗ್ಲೆನ್ ಸನ್ ಷರ್ಮಾ, ಗ್ಲೆನ್ ಸನ್ ಷರ್ಮಾ, ಇಶ್‌ಟನ್ ಷರ್ಮಾ, ಜಯಂತ್ ಯಾದವ್, ಮಹಿಪಾಲ್ ಲೊಮ್ರೋರ್, ಕರೀಂ ಜನತ್, ಕುಲ್ವಂತ್ ಖೆಜ್ರೋಲಿಯಾ, ಜೆರಾಲ್ಡ್ ಕೋಟ್ಜಿ, ಮಾನವ್ ಸುತಾರ್, ಕುಮಾರ್ ಕುಶಾಗ್ರಾ, ಗುರ್ನೂರ್ ಬ್ರಾರ್, ನಿಶಾಂತ್ ಸಿಂಧು.
ಐಪಿಎಲ್ 2025 ಇತರೆ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್
ರುತುರಾಜ್ ಗಾಯಕ್ವಾಡ್ (ನಾಯಕ), ಎಂ.ಎಸ್. ಧೋನಿ, ಡೆವೊನ್ ಕಾನ್ವೇ, ರಾಹುಲ್ ತ್ರಿಪಾಠಿ, ಶೇಖ್ ರಶೀದ್, ವಂಶ್ ಬೇಡಿ, ಆಂಡ್ರೆ ಸಿದ್ಧಾರ್ಥ್, ರಚಿನ್ ರವೀಂದ್ರ, ರವಿಚಂದ್ರನ್ ಅಶ್ವಿನ್, ವಿಜಯ್ ಶಂಕರ್, ಸ್ಯಾಮ್ ಕರನ್, ಅಂಶುಲ್ ಕಾಂಬೋಜ್, ದೀಪಕ್ ಹೂಡಾ, ಜೇಮೀ ಓವರ್ಟನ್, ಕಮಲೇಶ್ ನಾಗರ್ಕೋಟಿ, ರಾಮಕೃಷ್ಣ ಘೋಷ್, ರವೀಂದ್ರ ಜಡೇಜಾ, ಶಿವಂ ದುಬೆ, ಖಲೀಲ್ ಅಹ್ಮದ್, ನೂರ್ ಅಹ್ಮದ್, ಮುಖೇಶ್ ಚೌಧರಿ, ಗುರ್ಜಪನೀತ್ ಸಿಂಗ್, ನಾಥನ್ ಎಲ್ಲಿಸ್, ಶ್ರೇಯಸ್ ಗೋಪಾಲ್, ಮಥಿಶಾ ಪತಿರಾನ.
ಡೆಲ್ಲಿ ಕ್ಯಾಪಿಟಲ್ಸ್
ಕೆ.ಎಲ್ ರಾಹುಲ್, ಹ್ಯಾರಿ ಬ್ರೂಕ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕರುಣ್ ನಾಯರ್, ಫಾಫ್ ಡು ಪ್ಲೆಸಿಸ್, ಡೊನೊವನ್ ಫೆರೇರಾ, ಅಭಿಷೇಕ್ ಪೊರೆಲ್, ಟ್ರಿಸ್ಟಾನ್ ಸ್ಟಬ್ಸ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ಅಜಯ್ ಮಂಡಲ್, ಮನ್ವಂತ್ ಕುಮಾರ್ ಎಲ್, ತ್ರಿಪುರಾನ ವಿಜಯ್, ಮಾಧವ್ ತಿವಾರಿ, ಅಕ್ಷರ್ ಪಟೇಲ್ (ನಾಯಕ), ಮಿಚೆಲ್ ಸ್ಟಾರ್ಕ್, ಟಿ ನಟರಾಜನ್, ಮೋಹಿತ್ ಶರ್ಮಾ, ಮುಖೇಶ್ ಕುಮಾರ್, ದುಷ್ಮಂತ ಚಮೀರ, ಕುಲದೀಪ್ ಯಾದವ್.
ಕೋಲ್ಕತ್ತಾ ನೈಟ್ ರೈಡರ್ಸ್
ಅಜಿಂಕ್ಯ ರಹಾನೆ, ರಿಂಕು ಸಿಂಗ್, ಕ್ವಿಂಟನ್ ಡಿ ಕಾಕ್, ರಹಮಾನಲ್ಲಾ ಗುರ್ಬಾಜ್, ಅಂಗ್ಕ್ರಿಶ್ ರಘುವಂಶಿ, ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ಲವನಿತ್ ಸಿಸೋಡಿಯಾ, ವೆಂಕಟೇಶ್ ಅಯ್ಯರ್, ಅನುಕುಲ್ ರಾಯ್, ಮೊಯಿನ್ ಅಲಿ, ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ಅನ್ರಿಚ್ ನಾರ್ಟ್ಜೆ, ವೈಭವ್ ಅರೋರಾ, ಮಾಯಾಂಕ್ ಮಾರ್ಕಂಡೆ, ಸ್ಪೆನ್ಸರ್ ಜಾನ್ಸನ್, ಉಮ್ರಾನ್ ಮಲಿಕ್, ಹರ್ಷಿತ್ ರಾಣಾ, ಸುನಿಲ್ ನರೈನ್, ವರುಣ್ ಚಕ್ರವರ್ತಿ.
ಲಕ್ನೋ ಸೂಪರ್ ಜೈಂಟ್ಸ್
ರಿಷಭ್ ಪಂತ್ (ನಾಯಕ), ಡೇವಿಡ್ ಮಿಲ್ಲರ್, ಐಡೆನ್ ಮಾರ್ಕ್ರಮ್, ಆರ್ಯನ್ ಜುಯಾಲ್, ಹಿಮ್ಮತ್ ಸಿಂಗ್, ಮ್ಯಾಥ್ಯೂ ಬ್ರೀಟ್ಜ್ಕೆ, ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಯುವರಾಜ್ ಚೌಧರಿ, ರಾಜವರ್ಧನ್ ಹಂಗರ್ಗೇಕರ್, ಅರ್ಶಿನ್ ಕುಲಕರ್ಣಿ, ಆಯುಷ್ ಬದೋನಿ, ಆವೇಶ್ ಖಾನ್, ಆಕಾಶ್ ದೀಪ್, ಎಂ ಸಿದ್ಧಾರ್ಥ್, ದಿಗ್ವೇಶ್ ಸಿಂಗ್, ಆಕಾಶ್ ಸಿಂಗ್, ಶಮರ್ ಜೋಸೆಫ್, ಪ್ರಿನ್ಸ್ ಯಾದವ್, ಮಾಯಾಂಕ್ ಯಾದವ್, ಮೋಹಿತ್ ಖಾನ್, ರವಿ ಬಿಷ್ಣೋಯ್.
ಮುಂಬೈ ಇಂಡಿಯನ್ಸ್
ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಾಬಿನ್ ಮಿಂಜ್, ರಯಾನ್ ರಿಕಲ್ಟನ್, ಶ್ರೀಜಿತ್ ಕೃಷ್ಣನ್, ಬೆವನ್-ಜಾನ್ ಜೇಕಬ್ಸ್, ಎನ್. ತಿಲಕ್ ವರ್ಮಾ, ನಮನ್ ಧೀರ್, ವಿಲ್ ಜ್ಯಾಕ್ಸ್, ಮಿಚೆಲ್ ಸ್ಯಾಂಟ್ನರ್, ರಾಜ್ ಅಂಗದ್ ಬಾವಾ, ವಿಘ್ನೇಶ್ ಪುತ್ತೂರ್, ಟ್ರೆಂಟ್ ಬೌಲ್ಟ್, ಕರ್ಣ್ ಶರ್ಮಾ, ದೀಪಕ್ ಚಾಹರ್, ಅಶ್ವನಿ ಕುಮಾರ್, ರೀಸ್ ಟೋಪ್ಲಿ, ವೆಂಕಟ್ ಸತ್ಯನಾರಾಯಣ ಪೆನ್ಮೆಟ್ಸಾ, ಅರ್ಜುನ್ ತೆಂಡೂಲ್ಕರ್, ಲಿಜಾದ್ ವಿಲಿಯಮ್ಸ್, ಮುಜೀಬ್ ಉರ್ ರೆಹಮಾನ್, ಜಸ್ಪ್ರೀತ್ ಬುಮ್ರಾ.
ಪಂಜಾಬ್ ಕಿಂಗ್ಸ್
ಶ್ರೇಯಸ್ ಅಯ್ಯರ್ (ನಾಯಕ), ನಿಹಾಲ್ ವಧೇರಾ, ವಿಷ್ಣು ವಿನೋದ್, ಜೋಶ್ ಇಂಗ್ಲಿಸ್, ಹರ್ನೂರ್ ಪನ್ನು, ಪೈಲಾ ಅವಿನಾಶ್, ಪ್ರಭ್ಸಿಮ್ರಾನ್ ಸಿಂಗ್, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್‌ಪ್ರೀತ್ ಬ್ರಾರ್, ಮಾರ್ಕೊ ಜಾನ್ಸೆನ್, ಅಜ್ಮತುಲ್ಲಾ ಒಮರ್‌ಜೈ, ಪ್ರಿಯಾಂಶ್ ಆರ್ಯ, ಆರನ್ ಹಾರ್ಡಿ, ಮುಶೀರ್ ಖಾನ್, ಸೂರ್ಯಾಂಶ್ ಶೆಡ್ಜ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ವೈಶಾಕ್ ವಿಜಯ್ ಕುಮಾರ್, ಯಶ್ ಠಾಕೂರ್, ಲಾಕಿ ಫರ್ಗುಸನ್, ಕುಲ್‌ದೀಪ್ ಸೇನ್, ಕ್ಸೇವಿಯರ್ ಬಾರ್ಟ್ಲೆಟ್, ಪ್ರವೀಣ್ ದುಬೆ.
ರಾಜಸ್ಥಾನ ರಾಯಲ್ಸ್
ಸಂಜು ಸ್ಯಾಮ್ಸನ್ (ನಾಯಕ), ಶುಭಂ ದುಬೆ, ವೈಭವ್ ಸೂರ್ಯವಂಶಿ, ಕುನಾಲ್ ರಾಥೋಡ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್, ನಿತೀಶ್ ರಾಣಾ, ಯುಧ್ವೀರ್ ಸಿಂಗ್, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ವನಿಂದು ಹಸರಂಗ, ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ ಸಿಂಗ್, ತುಷಾರ್ ದೇಶಪಾಂಡೆ, ಫಜಲ್ಹಕ್ ಫಾರೂಕಿ, ಕ್ವೆನಾ ಎಂಫಕಾ, ಅಶೋಕ್ ಶರ್ಮಾ, ಸಂದೀಪ್ ಶರ್ಮಾ.
ಸನ್‌ರೈಸರ್ಸ್ ಹೈದರಾಬಾದ್
ಪ್ಯಾಟ್ ಕಮ್ಮಿನ್ಸ್ (ನಾಯಕ), ಇಶಾನ್ ಕಿಶನ್, ಅಥರ್ವ ಟೇಡ್, ಅಭಿನವ್ ಮನೋಹರ್, ಅನಿಕೇತ್ ವರ್ಮಾ, ಸಚಿನ್ ಬೇಬಿ, ಹೆನ್ರಿಚ್ ಕ್ಲಾಸೆನ್, ಟ್ರಾವಿಸ್ ಹೆಡ್, ಹರ್ಷಲ್ ಪಟೇಲ್, ಕಾಮಿಂಡು ಮೆಂಡಿಸ್, ವಿಯಾನ್ ಮುಲ್ಡರ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಶಮಿ, ರಾಹುಲ್ ಚಾಹರ್, ಆಡಮ್ ಜಂಪಾ, ಸಿಮರ್‌ಜಿತ್ ಸಿಂಗ್, ಜೀಶಾನ್ ಅನ್ಸಾರಿ, ಜಯದೇವ್ ಉನಾದ್ಕಟ್, ಇಶಾನ್ ಮಾಲಿಂಗ.


Click it and Unblock the Notifications








