Home
ಟೆಕ್ ನೌಕರಿ

RCB vs RR: ಆರ್‌ಸಿಬಿ vs ರಾಯಲ್ಸ್ ಫೈಟ್‌; ಸ್ಫೋಟಕ ಹಿಟ್ಟರ್​ ಎಂಟ್ರಿ.. ಹಸಿರು ಜೆರ್ಸಿಯಲ್ಲಿ RCB ಗೆಲ್ಲುತ್ತಾ?

Royal Challengers Bengaluru vs Rajasthan Royals: ಐಪಿಎಲ್‌ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿವೆ. ಇದು ಐಪಿಎಲ್‌ನ 18ನೇ ಆವೃತ್ತಿಯ 28ನೇ ಪಂದ್ಯವಾಗಿದೆ. ಎರಡೂ ತಂಡಗಳು ಐಪಿಎಲ್ ಇತಿಹಾಸದಲ್ಲಿ 32 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇಂದಿನ ಈ ಪಂದ್ಯವು 33ನೇ ಮುಖಾಮುಖಿಯಾಗಿದೆ. ಎರಡೂ ತಂಡಗಳು ಗೆಲುವಿಗಾಗಿ ಹವಣಿಸುತ್ತಿದ್ದು, ತಮ್ಮ ಪ್ರಾಬಲ್ಯವನ್ನು ಸಾಬೀತುಪಡಿಸಿವ ಗುರಿಯನ್ನು ಹೊಂದಿವೆ. ಈ ಪಂದ್ಯ ಯಾವಾಗ? ಎಲ್ಲಿ? ಮತ್ತು ಉಚಿತವಾಗಿ ನೇರಪ್ರಸಾರ ವೀಕ್ಷಿಸುವುದು ಹೇಗೆ? ಎನ್ನುವುದನ್ನು ತಿಳಿಯೋಣ ಬನ್ನಿ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡ ಇಂದು ತನ್ನ 6ನೇ ಪಂದ್ಯ ಆಡಲು ಸಜ್ಜಾಗಿದೆ. ಈ ಪಂದ್ಯವೂ ಜೈಪೂರ್​ನ ಸವಾಯಿ ಮಾನ್ಸಿಂಗ್​ ಮೈದಾನದಲ್ಲಿ ನಡೆಯಲಿದ್ದು, ರಾಜಸ್ಥಾನ ರಾಯಲ್ಸ್​ ತಂಡವನ್ನು ಎದುರಿಸಲಿದೆ. ಈಗಾಗಲೇ ಐದು ಪಂದ್ಯಗಳನ್ನು ಆಡಿರುವ ಆರ್‌ಸಿಬಿ 3ರಲ್ಲಿ ಗೆದ್ದು ಎರಡರಲ್ಲಿ ಸೋಲು ಕಂಡಿದೆ. ಡೆಲ್ಲಿ ವಿರುದ್ಧ ತವರು ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಸೋಲನ್ನು ಕಂಡಿರುವ ಆರ್​ಸಿಬಿ, ಇಂದು ರಾಜಸ್ಥಾನವನ್ನು ಸೋಲಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಲು ತಯಾರಾಗಿದೆ. ಹೀಗಾಗಿ, ಇಂದು ಬಲಿಷ್ಠ ತಂಡದೊಂದಿಗೆ ರಾಜಸ್ಥಾನವನ್ನು ಎದುರಿಸಲಿದೆ.

RCB vs RR: ಹಸಿರು ಜೆರ್ಸಿಯಲ್ಲಿ RCB ಗೆಲ್ಲುತ್ತಾ? ಪ್ಲೇಯಿಂಗ್ 11 ಹೀಗಿದೆ

ಇಂದು ಆರ್​ಸಿಬಿ ತಂಡವು ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಸತತ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಸ್ಟಾರ್​ ಆಟಗಾರನನ್ನು ಈ ಮ್ಯಾಚ್‌ನಿಂದ ಹೊರಗಿಡುವ ಸಾಧ್ಯತೆ ಹೆಚ್ಚಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್ ಲಿವಿಂಗ್​ಸ್ಟೋನ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡುವ ಸಾಧ್ಯತೆಯಿದೆ.

ಐಪಿಎಲ್‌ನಲ್ಲಿ RCB vs RR ಮುಖಾಮುಖಿ

ಒಟ್ಟು ಪಂದ್ಯಗಳು : 32
RCB ಗೆಲುವು : 15
RR ಗೆಲುವು : 14
ಯಾವುದೇ ಫಲಿತಾಂಶವಿಲ್ಲ : 3

RCB vs RR ಪ್ಲೇಯಿಂಗ್ 11

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11 (ಸಂಭಾವ್ಯ): ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್.

ಇಂಪ್ಯಾಕ್ಟ್ ಪ್ಲೇಯರ್ : ಸುಯಶ್ ಶರ್ಮಾ.

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11 (ಸಂಭಾವ್ಯ) : ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿ.ಕೀ), ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ಫಜಲ್ಹಕ್ ಫಾರೂಕಿ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಕುಮಾರ್ ಕಾರ್ತಿಕೇಯ, ತುಷಾರ್ ದೇಶಪಾಂಡೆ

ಇಂಪ್ಯಾಕ್ಟ್ ಪ್ಲೇಯರ್ : ಸಂದೀಪ್ ಶರ್ಮಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ಟಾಸ್ ಪ್ರಕ್ರಿಯೆ, ನೇರ ಪ್ರಸಾರದ ವಿವರಗಳು.

ಐಪಿಎಲ್‌ 2025ರ (IPL 2025) ಇಂದಿನ ಪಂದ್ಯದಲ್ಲಿ ಯಾವ ತಂಡಗಳು ಮುಖಾಮುಖಿಯಾಗಲಿವೆ?

ಐಪಿಎಲ್ 2025ರ 28ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ ನಡೆಯುವ ಸ್ಥಳ ಯಾವುದು?

ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಐಪಿಎಲ್ 2025 ಪಂದ್ಯವನ್ನು ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್ ಟಾಸ್ ಯಾವಾಗ ನಡೆಯಲಿದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ ಇಂದು (ಏಪ್ರಿಲ್ 10, ಗುರುವಾರ) ಮಧ್ಯಾಹ್ನ 3.30 ಗಂಟೆಗೆ ನಡೆಯಲಿದೆ. ಟಾಸ್ ಭಾರತೀಯ ಕಾಲಮಾನ ಮಧ್ಯಾಹ್ನ 3.00 ಗಂಟೆಗೆ ಜರುಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್ ನಡುವಿನ ಇಂದಿನ ಪಂದ್ಯವನ್ನು ಯಾವ ಟಿವಿ ಚಾನೆಲ್‌ನಲ್ಲಿ ವೀಕ್ಷಿಸಬೇಕು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ (ಸ್ಟಾರ್ ಸ್ಪೋರ್ಟ್ಸ್ 1 HD/SD) ಮೂಲಕ ನೇರ ಪ್ರಸಾರವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್ ಪಂದ್ಯದ ಲೈವ್ ಸ್ಟ್ರೀಮಿಂಗ್ ವೀಕ್ಷಿಸುವುದು ಹೇಗೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯವನ್ನು ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ.

Best Mobiles in India

English summary
RR vs RCB Live Streaming: When And Where To Watch Rajasthan Royals vs Royal Challengers Bengaluru Match Live On Mobile
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+