IPL Auction 2025: ಐಪಿಎಲ್ ಮೆಗಾ ಹರಾಜಿನ ಸಮಯ, ಲೈವ್ ವೀಕ್ಷಣೆ ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ
ಕಾಯುವಿಕೆ ಮುಗಿಯಿತು! ಐಪಿಎಲ್ 2025ರ (IPL 2025) ಮೆಗಾ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು (ನವೆಂಬರ್ 24) ಮತ್ತು ನಾಳೆ (ನವೆಂಬರ್ 25) ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು (IPL Mega Auction) ನಡೆಯಲಿದೆ. ಮೆಗಾ ಹರಾಜಿನಲ್ಲಿ ಒಟ್ಟು 577 ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ. ಈ ಮೆಗಾ ಹರಾಜು ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್ನಲ್ಲಿ ನೇರಪ್ರಸಾರ ವೀಕ್ಷಿಸಬಹುದು? ಯಾವ ತಂಡದ ಬಳಿ ಎಷ್ಟು ಕೋಟಿ ಇದೆ? ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಹೌದು, ಬಹುನಿರೀಕ್ಷಿತ ಐಪಿಎಲ್ ಹರಾಜು ಪ್ರಕ್ರಿಯೆ ಇಂದು ನಡೆಯಲಿದೆ. ವಿಶೇಷವೆಂದರೆ, ಸತತ ಎರಡನೇ ವರ್ಷವೂ ಹರಾಜು ಪ್ರಕ್ರಿಯೆ ವಿದೇಶದಲ್ಲಿ ನಡೆಯುತ್ತಿದೆ. ಈ ಮೆಗಾ ಹರಾಜಿನಲ್ಲಿ ಒಟ್ಟು 1,574 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ, ಬಿಸಿಸಿಐ 577 ಆಟಗಾರರ ಶಾರ್ಟ್ಲಿಸ್ಟ್ ಸಿದ್ಧಪಡಿಸಿದೆ. ಈ ಪೈಕಿ 204 ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಸಜ್ಜಾಗಿವೆ. ಹರಾಜಿನಲ್ಲಿ 70 ವಿದೇಶಿ ಆಟಗಾರರು ಇದ್ದಾರೆ. ಕ್ರಿಕೆಟ್ ಪ್ರೇಮಿಗಳ ಚಿತ್ತ ಆರ್‌ಸಿಬಿ ಫ್ರಾಂಚೈಸಿ ಮೇಲೆ ನೆಟ್ಟಿದೆ.

ಮೆಗಾ ಹರಾಜು ಎಲ್ಲಿ? ಎಷ್ಟು ಗಂಟೆಗೆ ಪ್ರಾರಂಭ?
ಐಪಿಎಲ್ 2025ರ (IPL 2025) ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಇಂದು (ನ.24) ಮಧ್ಯಾಹ್ನ 3.30 ಗಂಟೆಗೆ ಪ್ರಾರಂಭವಾಗಲಿದೆ. ರಾತ್ರಿ 10.30 ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ.
ಮೆಗಾ ಹರಾಜನ್ನು ಎಲ್ಲಿ ಲೈವ್ ವೀಕ್ಷಿಸಬಹುದು?
ಐಪಿಎಲ್ ಸೀಸನ್ 18ರ ಮೆಗಾ ಹರಾಜು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್‌ನಲ್ಲಿ ಪ್ರಸಾರವಾಗಲಿದೆ. ನೀವು, ಡಿಜಿಟಲ್ ವೀಕ್ಷಿಸಲು ಬಯಸಿದರೆ, ಜಿಯೋ ಸಿನೆಮಾ ಅಪ್ಲಿಕೇಶನ್ ಅಥವಾ ಜಿಯೋ ಸಿನೆಮಾ (JioCinema) ವೆಬ್‌ಸೈಟ್, ಐಪಿಎಲ್ ವೆಬ್‌ಸೈಟ್ ಮೂಲಕ ಉಚಿತವಾಗಿ ನೇರಪ್ರಸಾರ ವೀಕ್ಷಿಸಬಹುದು.
ಹರಾಜು ಪಟ್ಟಿಯಲ್ಲಿರುವ ಆಟಗಾರರು ಎಷ್ಟು?
ಈ ಬಾರಿಯ ಮೆಗಾ ಹರಾಜಿನಲ್ಲಿ ಒಟ್ಟು 1,574 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈ ಆಟಗಾರರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಅಂತಿಮ ಪಟ್ಟಿಯಲ್ಲಿ ಲಿಸ್ಟ್ನಲ್ಲಿ 577 ಆಟಗಾರರು ಅವಕಾಶ ಪಡೆದಿದ್ದಾರೆ. ಇದರಲ್ಲಿ 367 ಭಾರತೀಯ ಆಟಗಾರರು ಮತ್ತು 210 ವಿದೇಶಿ ಆಟಗಾರರಿದ್ದಾರೆ. 10 ಫ್ರಾಂಚೈಸಿಗಳು 46 ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿವೆ. ಇನ್ನುಳಿದ 204 ಆಟಗಾರರಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಆರ್‌ಸಿಬಿ ಬಳಿ ಎಷ್ಟು ಹಣವಿದೆ?
ರಾಜಸ್ಥಾನ್ ರಾಯಲ್ಸ್: 41 ಕೋಟಿ ರೂ.
ಸನ್ರೈಸರ್ಸ್ ಹೈದರಾಬಾದ್: 45 ಕೋಟಿ ರೂ.
ಮುಂಬೈ ಇಂಡಿಯನ್ಸ್: 45 ಕೋಟಿ ರೂ.
ಕೋಲ್ಕತ್ತಾ ನೈಟ್ ರೈಡರ್ಸ್: 51 ಕೋಟಿ ರೂ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: 53 ಕೋಟಿ ರೂ.
ಮೂಲ ಬೆಲೆ ಪ್ರಕಾರ ಆಟಗಾರರ ಸಂಖ್ಯೆ
ಚೆನ್ನೈ ಸೂಪರ್ ಕಿಂಗ್ಸ್: 55 ಕೋಟಿ ರೂ.
ಗುಜರಾತ್ ಟೈಟಾನ್ಸ್: 69 ಕೋಟಿ ರೂ.
ಲಕ್ನೋ ಸೂಪರ್ ಜೈಂಟ್ಸ್: 69 ಕೋಟಿ ರೂ.
ಡೆಲ್ಲಿ ಕ್ಯಾಪಿಟಲ್ಸ್: 73 ಕೋಟಿ ರೂ.
ಪಂಜಾಬ್ ಕಿಂಗ್ಸ್: 110.5 ಕೋಟಿ ರೂ.
ಮೊದಲ ಸುತ್ತಿನಲ್ಲಿ ಯಾವೆಲ್ಲಾ ಆಟಗಾರರು ಇದ್ದಾರೆ?
ಹರಾಜಿನಲ್ಲಿ ಆರು ಆಟಗಾರರನ್ನು ಹೊಂದಿರುವ ಎರಡು ಪಟ್ಟಿ ಸಿದ್ಧವಾಗಿವೆ. ಮೊದಲ ಪಟ್ಟಿಯಲ್ಲಿ (ಸುತ್ತಿನಲ್ಲಿ) ರಿಷಭ್ ಪಂತ್, ಕಗಿಸೊ ರಬಾಡ, ಅರ್ಷದೀಪ್ ಸಿಂಗ್, ಶ್ರೇಯಸ್ ಅಯ್ಯರ್, ಜೋಸ್ ಬಟ್ಲರ್ ಹಾಗೂ ಮಿಚೆಲ್ ಸ್ಟಾರ್ಕ್ ಸ್ಥಾನ ಪಡೆದಿದ್ದಾರೆ. ಎರಡನೇ ಪಟ್ಟಿಯಲ್ಲಿ ಕೆ.ಎಲ್ ರಾಹುಲ್, ಯುಜ್ವೇಂದ್ರ ಚಹಲ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಿಲ್ಲರ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದಾರೆ.
ಆಟಗಾರರ ಮೂಲ ಬೆಲೆ ಮತ್ತು ಸಂಖ್ಯೆ
2 ಕೋಟಿ ರೂ. ಮೂಲಬೆಲೆ: 82 ಆಟಗಾರರು
1.50 ಕೋಟಿ ರೂ. ಮೂಲಬೆಲೆ: 27 ಆಟಗಾರರು
1.25 ಕೋಟಿ ರೂ. ಮೂಲಬೆಲೆ: 18 ಆಟಗಾರರು
1 ಕೋಟಿ ರೂ. ಮೂಲಬೆಲೆ : 23 ಆಟಗಾರರು
75 ಲಕ್ಷ ರೂ. ಮೂಲಬೆಲೆ: 92 ಆಟಗಾರರು
50 ಲಕ್ಷ ರೂ. ಮೂಲಬೆಲೆ: 8 ಆಟಗಾರರು
40 ಲಕ್ಷ ರೂ. ಮೂಲಬೆಲೆ: 5 ಆಟಗಾರರು
30 ಲಕ್ಷ ರೂ. ಮೂಲಬೆಲೆ: 320 ಆಟಗಾರರು


Click it and Unblock the Notifications








