ಗೂಗಲ್ ಕ್ಯಾಲೆಂಡರ್‌ನಲ್ಲಿ ಆಗುತ್ತಿರುವ ವಂಚನೆ ಬಗ್ಗೆ ಬಳಕೆದಾರರೇ ಎಚ್ಚರ!
ಕೆಲವೊಂದು ಜನಪ್ರಿಯ ಸೇವೆಗಳನ್ನು ವಂಚಕರು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದಕ್ಕೆ ಹೊಸ 'ಗೂಗಲ್ ಕ್ಯಾಲೆಂಡರ್' ವಂಚನೆ ಉದಾಹರಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೊಸ ವಿಧದ ವಂಚನೆಯೊಂದು ಗೂಗಲ್ ಕ್ಯಾಲೆಂಡರ್ ಬಳಕೆದಾರರಿಗೆ ತಲೆನೋವಾಗಿದ್ದು, ನಿಮಗರಿವಿಲ್ಲದೆಯೇ ನೀವು ಕ್ಯಾಲೆಂಡರ್ ಆಹ್ವಾನವನ್ನು ಒಪ್ಪಿಕೊಂಡಿದ್ದರೆ, ನಿಮಗೆ ತೊಂದರೆ ತಪ್ಪಿದ್ದಲ್ಲ. ಏಕೆಂದರೆ, ನೀವು ಸಹ ವಂಚಕರ ಬಲೆಗೆ ಬಿದ್ದಿರಬಹುದಾದ ಸಾಧ್ಯತೆಗಳು ಹೆಚ್ಚಿವೆ.

ಹೌದು, ನೀವು ಗೂಗಲ್‌ನ ಕ್ಯಾಲೆಂಡರ್ ಅನ್ನು ಹೆಚ್ಚು ಬಳಸುತ್ತಿದ್ದರೆ ನಿಮಗೆ ಅಪರಿಚಿತರಿಂದ ಯಾವುದಾದರೂ ಒಂದು ಆಹ್ವಾನ ಬಂದಿರಬಹುದು. ಇಂತಹ ಆಹ್ವಾನವೇ ಇದೀಗ ವಂಚನೆಯ ಮೂಲವಾಗಿ ಪರಿಣಮಿಸಿದೆ. ನಿಮಗರಿವಿಲ್ಲದೆಯೇ ನೀವು ಕ್ಯಾಲೆಂಡರ್ ಆಹ್ವಾನವನ್ನು ಒಪ್ಪಿಕೊಂಡಿದ್ದರೆ, ನೀವು ವಂಚಕರ ಬಲೆಗೆ ಬಿದ್ದಿರಬಹುದು. ಈ ವಂಚನೆ ಕುರಿತು ಈಗಾಗಲೇ ನೂರಾರು ಜನರು ದೂರು ನೀಡಿದ್ದು, ಸ್ಪಾಮ್ ಮೆಸೇಜ್ ಮತ್ತು ಕ್ಯಾಲೆಂಡರ್ ಇನ್ವಿಟೇಶನ್ ಕುರಿತು ಎಚ್ಚರಿಕೆ ವಹಿಸಬೇಕಿದೆ.
ಗೂಗಲ್‌ನ ಕ್ಯಾಲೆಂಡರ್ಗೆ ಅಪರಿಚಿತರಿಂದ ಇನ್ವಿಟೇಶನ್ ಬಂದಾಗ ಅದನ್ನು ನೀವು ಒಪ್ಪಿಕೊಂಡರೆ, ನಿಮ್ಮ ಕ್ಯಾಲೆಂಡರ್‌ಗೆ ಮೀಟಿಂಗ್ ಆಹ್ವಾನ ಸೇರ್ಪಡೆಯಾಗುತ್ತದೆ. ನಂತರ ಅದರಲ್ಲಿನ ಈವೆಂಟ್ ವಿವರವನ್ನು ಕ್ಲಿಕ್ ಮಾಡಿದರೆ, ನಿಮ್ಮನ್ನು ಅಪಾಯಕಾರಿ ಲಿಂಕ್‌ಗಳಿಗೆ ಪ್ರವೇಶ ಕಲ್ಪಿಸುತ್ತದೆ. ಇದು ಮುಂದೆ ನಿಮ್ಮ ವೈಯಕ್ತಿಕ ವಿವರ ಕದಿಯಲು ಅವಕಾಶ ಕಲ್ಪಿಸಬಹುದು. ಜತೆಗೆ ಹ್ಯಾಕರ್‌ಗಳ ಪ್ರವೇಶಕ್ಕೂ ಅನುವು ಮಾಡಿಕೊಡಬಹುದು ಎಂದು ಹಲವು ವರದಿಗಳು ತಿಳಿಸಿವೆ.

ಗೂಗಲ್ ಕ್ಯಾಲೆಂಡರ್ ಬಳಕೆದಾರರಿಗೆ ಒಳ್ಳೆಯ ಸುದ್ದಿ ಎಂದರೆ ಸರಳವಾದ ಆಯ್ಕೆಯು ವಂಚನೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಗೂಗಲ್ ಕ್ಯಾಲೆಂಡರ್ ಪೇಜ್ ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ ಅದರಲ್ಲಿ ಈವೆಂಟ್ ಸೆಟ್ಟಿಂಗ್ಸ್ ಆಯ್ದುಕೊಳ್ಳಿ. ನಂತರ, ಅಟೋಮ್ಯಾಟಿಕಲಿ ಆಡ್ ಇನ್ವಿಟೇಶನ್ಸ್ ಆಯ್ಕೆ ಬದಲಾಗಿ, ನೊ, No, only show invitations to which I have responded ಆಯ್ಕೆ ಮಾಡಿದರೆ ನೀವು ಒಪ್ಪಿಕೊಂಡ ಕ್ಯಾಲೆಂಡರ್ ಆಹ್ವಾನಗಳು ಮಾತ್ರ ನಿಮಗೆ ಲಭ್ಯವಾಗಲಿವೆ.
ಜನರು ಪ್ರತಿದಿನ ಬಳಸುವ ವೈಶಿಷ್ಟ್ಯಗಳು ಮತ್ತು ಅಪ್ಲಿಕೇಶನ್‌ಗಳನ್ನು ಬಳಸಿಕೊಳ್ಳಲು ಹ್ಯಾಕರ್‌ಗಳು ಮತ್ತು ಸ್ಪ್ಯಾಮರ್‌ಗಳು ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ. ಅಪ್ಲಿಕೇಶನ್‌ಗಳು ಮತ್ತು ಸೇವೆಗಳ ವಿಷಯಕ್ಕೆ ಬಂದಾಗ, ಉಚಿತ ಯಾವಾಗಲೂ ಉಚಿತ ಎಂದರ್ಥವಲ್ಲ. ಹಾಗಾಗಿ,ಅಪರಿಚಿತ ಮತ್ತು ಸಂಶಯಾಸ್ಪದ ಗೂಗಲ್ ಕ್ಯಾಲೆಂಡರ್ ಆಹ್ವಾನವನ್ನು ಒಪ್ಪಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ. ಇಲ್ಲವಾದಲ್ಲಿ ವಂಚನೆಗೆ ಒಳಗಾಗುವವರು ಇರುವವರೆಗೂ ವಂಚಿಸುವವರು ಇದ್ದೇ ಇರುತ್ತಾರೆ.


Click it and Unblock the Notifications








