ಕಡಿಮೆ ಮೆಮೊರಿ ಮತ್ತು ರ್ಯಾಮ್‌ ಇರುವ ಫೋನನ್ನು ಖರೀದಿಸಲೇಬಾರದು ಏಕೆ?

|

ಇತ್ತೀಚಿನ ಯುವಪಡೆಗೆ ಉತ್ತಮ ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸುವುದು ಬಹಳ ಸಲೀಸು ಎನ್ನಬಹುದು. ಯಾವ ಸ್ಮಾರ್ಟ್‌ಫೋನ್ ಖರಿದಿಸಬೇಕು?, ಆ ಫೋನ್ ಯಾವ ಕಂಪೆನಿಯದ್ದಾಗಿರಬೇಕು?, ಆ ಸ್ಮಾರ್ಟ್‌ಫೋನಿನಲ್ಲಿ ಇರಬೇಕಾದ ಫೀಚರ್ಸ್ ಯಾವುವು ಮತ್ತು ಬೆಲೆಗೆ ತಕ್ಕಂತೆ ಆ ಫೋನ್ ಫೀಚರ್ಸ್‌ಗಳಿವೆಯಾ ಎಂಬುದೆಲ್ಲವನ್ನೂ ಅವರು ತಿಳಿದಿರುತ್ತಾರೆ. ಆದರೆ, ಹೆಚ್ಚು ಮೆಮೊರಿ ಮತ್ತು ರ್ಯಾಮ್‌ ಇರದ ಸ್ಮಾರ್ಟ್‌ಪೋನ್‌ಗಳನ್ನು ಖರೀದಿಸಿ ಗುಂಡಿಗೆ ಬೀಳುತ್ತಾರೆ.

ಹೌದು, ಕಡಿಮೆ ಮೆಮೊರಿ ಮತ್ತು ರ್ಯಾಮ್‌ ಇರುವ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಅವುಗಳನ್ನು ಖರಿದಿಸುವವರ ಸಂಖ್ಯೆಯೇ ಹೆಚ್ಚು. ಆದರೆ, ನೀವು ಕಡಿಮೆ ಮೆಮೊರಿ ಮತ್ತು ರ್ಯಾಮ್‌ ಇರುವ ಸ್ಮಾರ್ಟ್‌ಫೋನ್ ಖರೀದಿಸಿದರೆ ಅದಕ್ಕಿಂತ ಮತ್ತೊಂದು ತಪ್ಪಿಲ್ಲ ಎನ್ನಬಹುದು. ಮುಖ್ಯವಾಗಿ ಫೋನ್‌ ಹ್ಯಾಂಗ್‌ ಆಗುವುದರಿಂದ ಹಿಡಿದು, ನಿಮಗೆ ಹಲವು ಸಮಸ್ಯೆಗಳನ್ನು ತಂದೊಡ್ಡುವ ಇದೊಂದು ತಪ್ಪು ನಿಮ್ಮ ಮೊಬೈಲ್ ಖರೀದಿಯನ್ನೇ ಸಮಸ್ಯೆಯಾಗಿಸಿಬಿಡುತ್ತದೆ.

ಕಡಿಮೆ ಮೆಮೊರಿ ಮತ್ತು ರ್ಯಾಮ್‌ ಇರುವ ಫೋನನ್ನು ಖರೀದಿಸಲೇಬಾರದು ಏಕೆ?

ಉದಾಹರಣೆಗೆ, ಪ್ರಸ್ತುತ 16 ಜಿಬಿ ಆಂತರಿಕ ಸಂಗ್ರಹ, 2 ಜಿಬಿ ರ್ಯಾಮ್‌ ಇರುವ ಫೋನ್‌ಗಳನ್ನು ಖರೀದಿಸುವುದು ಒಂದು ಬೇಸಿಕ್ ಮೊಬೈಲ್‌ ಖರೀದಿಗೆ ಸಮ ಎನ್ನಬಹುದು. ಹಾಗಾಗಿ, ಈ ಲೇಖನದಲ್ಲಿ ಕಡಿಮೆ ಮೆಮೊರಿ ಮತ್ತು ರ್ಯಾಮ್‌ ಇರುವ ಫೋನನ್ನು ಖರೀದಿಸಬಾರದು ಏಕೆ?, ಯಾವ ಸಾಮರ್ಥ್ಯದ ಸ್ಮಾರ್ಟ್‌ಫೋನನ್ನು ಖರೀದಿಸಿದರೆ ಏನು ಲಾಭ ಎಂಬುದನ್ನು ತಿಳಿದುಕೊಳ್ಳೋಣ. ಈ ಬಗ್ಗೆ ಕೆಳಗಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಫೋನ್‌ ಹ್ಯಾಂಗ್‌ ಆಗಲು ಮೊದಲ ಕಾರಣ!

ಫೋನ್‌ ಹ್ಯಾಂಗ್‌ ಆಗಲು ಮೊದಲ ಕಾರಣ!

ಇನ್ನು ಹಲವರು ತಮ್ಮ ಫೋನ್‌ ಹ್ಯಾಂಗ್‌ ಆಗುತ್ತಿರುತ್ತದೆ ಎಂದು ಹೇಳುವುದು ಸಾಮಾನ್ಯ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ಆದರೆ, ಮೊದಲನೆಯದಾಗಿ, ಕಡಿಮೆ ಆಂತರಿಕ ಸಂಗ್ರಹ, ಮತ್ತು ಕಡಿಮೆ ರ್ಯಾಮ್‌ ಮತ್ತು ಕಡಿಮೆ ಸಾಮರ್ಥ್ಯದ ಫೋನ್‌ಗಳು. ಕಡಿಮೆ ಆಂತರಿಕ ಸಂಗ್ರಹ, ಕಡಿಮೆ ರ್ಯಾಮ್‌ ಹೊಂದಿರುವ ಆಂಡ್ರಾಯ್ಡ್ ಮೊಬೈಲ್‌ಗಳಲ್ಲಂತೂ ಈ ಸಮಸ್ಯೆ ಹೆಚ್ಚಿರುತ್ತದೆ.

ಫೋನ್‌ ಹ್ಯಾಂಗ್‌ ಆಗುವುದು ಏಕೆ?

ಫೋನ್‌ ಹ್ಯಾಂಗ್‌ ಆಗುವುದು ಏಕೆ?

ನೀವು 16 ಜಿಬಿ, 2 ಜಿಬಿ ರ್ಯಾಮ್‌ ಇರುವ ಫೋನ್‌ ಖರೀದಿಸಿದರೆ ಸುಮಾರು 8 ಜಿಬಿ ಫೋನ್‌ ಜೊತೆ ಇರುವ ಆಪ್‌ಗಳಿಗೇ ಹೋಗುತ್ತದೆ. ಇನ್ನು 8 ಜಿಬಿಯಲ್ಲಿ ಉಳಿದ ಹೊಸ ಆಪ್‌ಗಳಿ ಫೋಟೋ, ಹಾಡು, ವಿಡಿಯೋಗಳನ್ನು ತುಂಬಿಕೊಂಡರೆ, ಅದೆಲ್ಲಿ ಸರಾಗವಾಗಿ ಕೆಲಸ ಮಾಡಲು ಸಾಧ್ಯ? ಅಂತಹ ಫೋನ್‌ಗಳು ವಾಟ್ಸಪ್ ಫೇಸ್‌ಬುಕ್‌ ಬಳಸಲು, ಕಾಲ್‌ ಮಾಡಲಷ್ಟೇ ಸೂಕ್ತ.

ಕನಿಷ್ಟ 3 ಜಿಬಿ ರ್ಯಾಮ್‌ ಇರಲಿ!

ಕನಿಷ್ಟ 3 ಜಿಬಿ ರ್ಯಾಮ್‌ ಇರಲಿ!

16 ಜಿಬಿ, 2 ಜಿಬಿ ರ್ಯಾಮ್‌ ಇರುವ ಫೋನ್‌ ಈಗ ಹಳೆಯದಾಗಿವೆ. ಆದ್ದರಿಂದ ಸಾಧಾರಣ ಬಳಕೆದಾರರಾದರೆ ಕನಿಷ್ಟ 32 ಜಿಬಿ ಆಂತರಿಕ ಸಂಗ್ರಹ, ಕನಿಷ್ಟ 3 ಜಿಬಿ ರ್ಯಾಮ್‌ ಸಾಮರ್ಥ್ಯದ ಫೋನ್‌ ಕೊಳ್ಳಿ. 4 ಜಿಬಿ ರ್ಯಾಮ್‌ ಮತ್ತು 64 ಜಿಬಿ ರ್ಯಾಮ್‌ ಮಧ್ಯಮ ಬಳಕೆದಾರರಿಗೆ ಬೇಕಾದಷ್ಟಾಗುತ್ತದೆ. ಉತ್ತಮ ಪ್ರೊಸೆಸರ್ ಇದ್ದರೆ 4 ಜಿಬಿ ರ್ಯಾಮ್‌ ಫೋನ್ ಸಾಕೋ ಸಾಕು.

6 ಜಿಬಿ ರ್ಯಾಮ್‌

6 ಜಿಬಿ ರ್ಯಾಮ್‌

ಈಗೆಲ್ಲಾ 6 ಜಿಬಿ ರ್ಯಾಮ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. 6 ಜಿಬಿ ರ್ಯಾಮ್‌ ಇರುವ ಫೋನ್‌ಗಳು ಗೇಮಿಂಗ್‌ ಮತ್ತು ಆನಿಮೇಶನ್ ಸಪೋರ್ಟ್ ಮಾಡಲು ಸೂಕ್ತವಾಗುತ್ತವೆ. ಸಾಧಾರಣ, ಮಧ್ಯಮ ಬಳಕೆದಾರರಿಗೆ 6 ಜಿಬಿ ರ್ಯಾಮ್‌ ಅವಶ್ಯವಿಲ್ಲ. ಆದರೂ, ನೀವು ಗೇಮಿಂಗ್ ಪ್ರಿಯರಾಗಿದ್ದರೆ ಈ ಫೋನ್‌ಗಳನ್ನು ಖರೀದಿಸುವುದು ಉತ್ತಮ.

ಅಗತ್ಯಕ್ಕೆ ತಕ್ಕಷ್ಟು ಆಪ್‌ಗಳಿರಲಿ!

ಅಗತ್ಯಕ್ಕೆ ತಕ್ಕಷ್ಟು ಆಪ್‌ಗಳಿರಲಿ!

2 ಜಿಬಿ ರ್ಯಾಮ್‌ ಇರುವು ಫೋನ್‌ಗಳಿಂದ 6 ಜಿಬಿ ರ್ಯಾಮ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳಾದರೂ ಅಗತ್ಯಕ್ಕೆ ತಕ್ಕಂತೆ ಆಪ್‌ಗಳನ್ನು ಡೌನ್‌ಲೋಡ್ ಮಾಡಿ. 4 ಜಿಬಿ ಅಥವಾ 6 ಜಿಬಿ ರ್ಯಾಮ್‌ ಹೊಂದಿರುವ ಮೊಬೈಲ್‌ ಇದ್ದವರೂ ಕೊನೆಯ ಪಕ್ಷ 5 ಜಿಬಿ ಆಂತರಿಕ ಸಂಗ್ರಹ ಉಳಿಯುವಂತೆ ತಮ್ಮ ಮೊಬೈಲನ್ನು ಮ್ಯಾನೇಜ್‌ ಮಾಡಿದರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

Best Mobiles in India

English summary
Since most of the rest of the flagship smartphone pack is around the 4GB RAM mark right now, the jump to 8GB seems dramatic. ro know more visit to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X