Home
ಟೆಕ್ ನೌಕರಿ

ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ ಆಗುತ್ತಿರುವುಕ್ಕೆ ಕಾರಣ ಏನು ಗೊತ್ತಾ?

By Bhaskar N J

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಶೀಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಸ್ಪೋಟಗೊಳ್ಳುತ್ತಿರುವ ವಿಷಯ ಈಗಾಗಲೇ ಎಲ್ಲೆಡೆ ಹರಿದಾಡುತ್ತಿದೆ. ಶಿಯೋಮಿ ರೆಡ್‌ಮಿ 4ಎ ಸೀರಿಸ್ ಮೊಬೈಲ್ ಸ್ಫೋಟಗೊಂಡು ಸುಟ್ಟು ಕರಕಲಾದ ಘಟನೆ ಶನಿವಾರ ಗದಗ ಜಿಲ್ಲೆಯ ರೋಣ ತಾಲೂಕಿನ ಯರೆಬೇಲೆರಿ ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿ ಟೇಬಲ್ ಮೇಲೆ ಸ್ಮಾರ್ಟ್‌ಫೋನ್ ಇಟ್ಟಿದ್ದಾಗ ಇದ್ದಕ್ಕಿದ್ದಂತೆ ಮೊಬೈಲ್ ಸ್ಫೋಟವಾಗಿದೆ. ಮೊಬೈಲ್ ಬ್ಯಾಟರಿ, ಅದರ ಒಳಭಾಗ, ಸ್ಪೀಕರ್ ಎಲ್ಲವೂ ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಜೀವಾಪಾಯ ಸಂಭವಿಸಿಲ್ಲ. ಆದರೆ, ಈ ಘಟನೆಯಿಂದ ಕುಟುಂಬದವರು ಬೆಚ್ಚಿ ಬಿದ್ದಿದ್ದರೆ, ಇತರೆ ಶಿಯೋಮಿ ಗ್ರಾಹಕರು ಗಾಬರಿಯಾಗಿದ್ದಾರೆ.

ಶಿಯೋಮಿ ಕಂಪೆನಿಯ ಫೋನ್‌ಗಳು ಬ್ಲಾಸ್ಟ್ ಆಗುತ್ತಿರುವುಕ್ಕೆ ಕಾರಣ ಏನು ಗೊತ್ತಾ?

ಇನ್ನು ಹಿಂದೆಯೂ ಕೂಡ ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಸ್ಪೋಟಗೊಳ್ಳುತ್ತಿರುವ ಈ ವಿಷಯ ಸಾಮಾನ್ಯವಾದುದಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ ಆಗುತ್ತಿರುವುದೇಕೆ? ಸ್ಮಾರ್ಟ್‌ಫೋನ್‌ಗ ಸ್ಪೋಟಕ್ಕೆ ನಿಖರ ಕಾರಣವೇನು? ಇದಕ್ಕೆ ಪರಿಹಾರಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಉಪಯೋಗ ವಿಧಾನ ಸರಿಯಲ್ಲ.

ಉಪಯೋಗ ವಿಧಾನ ಸರಿಯಲ್ಲ.

ದೇಶದೆಲ್ಲೆಡೆ ಸೇರಿದಂತೆ ಬೆಂಗಳೂರು, ಗದಗ ಮತ್ತು ತುಮಕೂರಿನಲ್ಲಿಯೂ ರೆಡ್‌ಮಿ ನೋಟ್ 4 ಸ್ಪೋಟವಾಗಿರುವ ವಿಷಯ ನಿಮಗೆ ಗೊತ್ತಿರಬಹುದು. ಇದಕ್ಕೆ ಸಂಭಂದಿಸಿದಂತೆ ಶಿಯೋಮಿ ಸ್ಪಷ್ಟನೆ ನೀಡಿದ್ದು, ರೆಡ್‌ಮಿ ಪೋನ್ ಉಪಯೋಸಿಸುವಾಗ ಅವರು ಉಪಯೋಗಿಸುವ ವಿಧಾನವೇ ಸರಿಯಿಲ್ಲ. ಹಾಗಾಗಿ, ಫೋನ್ ಬ್ಲಾಸ್ಟ್ ಆಗಿರಬಹುದು ಎಂದು ಶಿಯೋಮಿ ಹೇಳಿದೆ.!!

ಬೇರೆ ಚಾರ್ಜರ್ ಬಳಕೆ ಮಾಡಿರುತ್ತಾರೆ.

ಬೇರೆ ಚಾರ್ಜರ್ ಬಳಕೆ ಮಾಡಿರುತ್ತಾರೆ.

ಶಿಯೋಮಿ ರೆಡ್‌ಮಿ ನೋಟ್‌4 ಸ್ಮಾರ್ಟ್‌ಫೋನ್‌ಗೆ ಯಾವುದೋ ಕಡಿಮೆ ಗುಣಮಟ್ಟ ಚಾರ್ಜರ್ ಬಳಕೆ ಮಾಡಿರಬಹುದಾದ ತೊಂದರೆಯಿಂದ ಇಂತಹ ಕೆಟ್ಟ ಘಟನೆಗಳು ಜರುಗಿರಬಹುದು.ಕೆಟ್ಟ ಚಾರ್ಜರ್ ಅಥವಾ ಲೋಕಲ್ ಜಾರ್ಜರ್ ಬಳಕೆ ಸ್ಮಾರ್ಟ್‌ಫೋನ್‌ಗಳಿಗೆ ಎಂದಿಗೂ ಅಪಾಯವೇ ಎಂದು ಶಿಯೋಮಿ ಕಂಪೆನಿ ತಿಳಿಸಿದೆ.

ಬ್ಯಾಕ್ ಕವರ್ ಸಹ ಕಾರಣ!

ಬ್ಯಾಕ್ ಕವರ್ ಸಹ ಕಾರಣ!

ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳನ್ನು ರಕ್ಷಣಾ ಕವಚದಿಂದ ಮುಚ್ಚಿದರೆ ಅವುಗಳು ಸ್ಪೋಟವಾಗುವ ಸಂಭವ ಹೆಚ್ಚಿದೆ ಎನ್ನಲಾಗಿದೆ. ಯಾವುದೇ ಸ್ಮಾರ್ಟ್‌ಫೋನ್ ಅನ್ನು ರಕ್ಷಿಸಲು ಬಳಸುವ ಬ್ಯಾಕ್ ಕವರ್ ಕೂಡ ಮೊಬೈಲ್ ಸ್ಪೋಟವಾಗಲು ಕಾರಣವಾಗಿದೆ. ಹಾಗಾಗಿಯೇ, ಶಿಯೋಮಿ ಈಗ ತನ್ನದೇ ಬ್ಯಾಕ್ ಕವರ್ ಅನ್ನು ನೀಡುತ್ತಿದೆ.

ವಿದ್ಯುತ್ ಪ್ರವಾಹಕ್ಕೆ ಮಿತಿ ಇದೆ.!

ವಿದ್ಯುತ್ ಪ್ರವಾಹಕ್ಕೆ ಮಿತಿ ಇದೆ.!

ಸ್ಮಾರ್ಟ್‌ಫೋನ್‌ ಹಾರ್ಡ್‌ವೇರ್‌ಗೆ ತಕ್ಕದಾದ ತಂತ್ರಜ್ಞಾನವುಳ್ಳ ಚಾರ್ಜರ್ ಗುಣಮಟ್ಟದ್ದಾಗಿದ್ದರೆ ಕಳಪೆ ಗುಣಮಟ್ಟದ ಚಾರ್ಜರ್ ಬಳಸಿದ್ರೆ ಹೆಚ್ಚು ವಿದ್ಯುತ್ ಪ್ರವಹಿಸಿವ ವೇಗದಲ್ಲಿ ಆಗಬಹುದಾದ ಬದಲಾವಣೆಯಿಂದ ಸ್ಮಾರ್ಟ್‌ಗಫೋನ್ ಸ್ಪೋಟಗೊಳ್ಳುತ್ತದೆ ಎಂದು ಹೇಳಿದೆ. ಹಾಗಾಗಿ, ಕಳಪೆ ಚಾರ್ಜರ್ ಬಳಸಬೇಡಿ.

How to Send Message to Multiple Contacts on WhatsApp - GIZBOT KANNADA
ಚಾಲೆಂಜ್ ಹಾಕಿದೆ ಶಿಯೋಮಿ.!

ಚಾಲೆಂಜ್ ಹಾಕಿದೆ ಶಿಯೋಮಿ.!

ಯಾವುದೇ ಶಿಯೋಮಿ ಸ್ಮಾರ್ಟ್‌ಫೋನ್ ಒಂದು ವೇಳೆ ಅದಾಗದೇ ಸ್ಫೋಟಗೊಂಡಿರುವುದನ್ನು ಸಾಬೀತು ಪಡಿಸಿದರೆ ಅದರ ಬದಲಿಗೆ ಹೊಸ ಫೋನ್ ನೀಡುವುದಾಗಿ ಈಗಾಗಲೇ ಶಿಯೋಮಿ ಕಂಪನಿ ತಿಳಿಸಿದೆ. ಆದರೆ, ಸ್ಪೋಟದಿಂದ ಬಳಕೆದಾರರಿಗೆ ಆಗುವ ತೊಂದರೆ ಬಗ್ಗೆ ಶಿಯೋಮಿ ಕಂಪೆನಿ ಏನನ್ನು ತಿಳಿಸಿಲ್ಲ.

Best Mobiles in India

English summary
Is it true that the xiaomi mobiles blast? to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+