2 ನಿಮಿಷದಲ್ಲಿ ನಿಮ್ಮ ಆಧಾರ್ ದುರ್ಬಳಕೆಯಾಗಿದೆಯೇ ಎಂಬುದನ್ನು ಚೆಕ್ ಮಾಡಿ!..ಹೇಗೆ?

  |

  ಕಳೆದ ಮೂರು ದಿನಗಳಿಂದಲೂ ದೇಶದಲ್ಲಿ ಕಿಚ್ಚು ಹಚ್ಚಿಸಿರುವ ಆಧಾರ್ ದುರ್ಬಳಕೆ ಸುದ್ದಿ ಜನರಿಗೆ ಸಾಕಷ್ಟು ಚಿಂತೆಯನ್ನು ತಂದೊಡ್ಡಿದೆ. ಆಧಾರ್ ವಿವರಗಳನ್ನು ಬಹಿರಂಗಪಡಿಸಿ ಹ್ಯಾಕರ್ಸ್ ಗಳಿಗೆ ಸವಾಲೆಸೆಯಲು ಹೋಗಿ ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ಪೇಚಿಗೆ ಸಿಲುಕಿದ ಘಟನೆ ದೇಶಾದ್ಯಂತ ಹೆಚ್ಚು ಚರ್ಚೆಯಾಗಿರುವುದು ಇದಕ್ಕೆ ಮೂಲ ಕಾರಣವಾಗಿದೆ.

  ಈ ಆತಂಕಕಾರಿ ಈ ಘಟನೆ ನಡೆದಾಗಿನಿಂದಲೂ ನಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗಿದೆಯೇ ಎಂಬ ಆತಂತ ಜನಸಾಮಾನ್ಯರಲ್ಲಿ ಕಾಡುವುದು ಸಹಜ. ಆದರೆ, ಚಿಂತಿಸಬೇಡಿ. ಏಕೆಂದರೆ, ಆಧಾರ್ ಮಾಹಿತಿ ದುರ್ಬಳಕೆಯಾಗಿದೆ ಎಂಬುದನ್ನು ತಿಳಿಯುವ ಸಲುವಾಗಿಯೇ ಭಾರತೀಯ ಆಧಾರ್ ಪ್ರಾಧಿಕಾರ (ಯುಐಡಿಎಐ) ಸಾರ್ವನಿಕರಿಗಾಗಿ ಅತ್ಯುತ್ತಮ ಸೌಲಭ್ಯವೊಂದನ್ನು ನೀಡಿದೆ.

   2 ನಿಮಿಷದಲ್ಲಿ ನಿಮ್ಮ ಆಧಾರ್ ದುರ್ಬಳಕೆಯಾಗಿದೆಯೇ ಎಂಬುದನ್ನು ಚೆಕ್ ಮಾಡಿ!..ಹೇಗೆ?

  ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೆ ಆಧಾರ್ ಅನ್ನು ಬಳಕೆ ಮಾಡಿರುವ ಅಂಕಿ-ಅಂಶಗಳನ್ನು ಸಂಪೂರ್ಣವಾಗಿ ಯುಐಡಿಎಐ ನೋಂದಣಿ ಮಾಡಿಕೊಳ್ಳುತ್ತದೆ. ಹಾಗಾದರೆ, ನಮ್ಮ ಆಧಾರ್ ನಂಬರ್ ದುರ್ಬಳಕೆಯಾಗಿದೆಯೇ? ಅಥವಾ ನಮ್ಮ ಆಧಾರ್ ನಂಬರ್ ಬಳಕೆಯಾಗಿರುವ ಹಿಸ್ಟರಿಯನ್ನು ನೋಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಆಧಾರ್ ವೆಬ್‌ಸೈಟ್ ಅನ್ನು ತೆರೆಯಿರಿ!

  ನಿಮ್ಮ ಆಧಾರ್ ನಂಬರ್ ದುರ್ಬಳಕೆಯಾಗಿದೆಯೇ ಎಂಬುದನ್ನು ತಿಳಿಯಲು ಆಧಾರ್ ಅಫಿಷಿಯಲ್ ವೆಬ್‌ಸೈಟ್ ಅನ್ನು ತೆರೆಯಿರಿ. (https://www.uidai.gov.in/)

  'ಆಧಾರ್ ಅಪ್‌ಡೇಟ್'

  ಆಧಾರ್ ಅಫಿಷಿಯಲ್ ವೆಬ್‌ಸೈಟ್ ಅನ್ನು ತೆರೆದ ನಂತರ ಹೊಮ್‌ ಪೆಜ್‌ನಲ್ಲಿ 'ಆಧಾರ್ ಅಪ್‌ಡೇಟ್' ಎಂಬ ವರ್ಗವಿರುವುದನ್ನು ಗುರುತಿಸಿ.

  ಆಧಾರ್ ದೃಢೀಕರಣ ಹಿಸ್ಟರಿ.

  'ಆಧಾರ್ ಅಪ್‌ಡೇಟ್' ವರ್ಗದಲ್ಲಿ ಐದು ಲಿಂಕ್‌ಗಳು ಇರುತ್ತದೆ. ಅದರಲ್ಲಿ 'ಆಧಾರ್ ಅಪ್‌ಡೇಟ್ ಹಿಸ್ಟರಿ' ಎಂಬ ಲಿಂಕ್ ಕ್ಲಿಕ್ ಮಾಡಿ

  ಆಧಾರ್ ನಂಬರ್ ನೀಡಿ.

  'ಆಧಾರ್ ಅಪ್‌ಡೇಟ್ ಹಿಸ್ಟರಿ' ಲಿಂಕ್ ಕ್ಲಿಕ್ ಮಾಡಿದರೆ, ಹೊಸ ಪೇಜ್ ತೆರೆಯುತ್ತದೆ. ಅಲ್ಲಿ ಆಧಾರ್ ನಂಬರ್ ಮತ್ತು ಸೆಕ್ಯುರಿಟಿ ಕೋಡ್ ಅನ್ನು ನೀಡಿರಿ.

  ಒಟಿಪಿ ನೀಡಿ ಮಾಹಿತಿ ತಿಳಿಯಿರಿ.

  ಆಧಾರ್ ನಂಬರ್ ಮತ್ತು ಸೆಕ್ಯುರಿಟಿ ಕೋಡ್ ಅನ್ನು ನೀಡಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿಯನ್ನು ಸದೇ ಪೇಜ್‌ನ ಬಲಭಾಗದಲ್ಲಿ ಹಾಕಿದರೆ ಆಧಾರ್ ಬಳಕೆಯಾಗಿರುವ ಎಲ್ಲಾ ಮಾಹಿತಿಗಳು ನಿಮ್ಮ ಕಣ್ಣಮುಂದಿರುತ್ತವೆ.

  ಆಧಾರ್ ಸುರಕ್ಷಿತವೇ?..ಈ ಶಾಕಿಂಗ್ ವಿದ್ಯಮಾನಗಳನ್ನು ನೀವು ತಿಳಿಯಲೇಬೇಕು!!

  ಆಧಾರ್ ಸುರಕ್ಷಿತವಾಗಿದೆ ಎಂಬುದನ್ನು ಮನದಟ್ಟು ಮಾಡುವ ಸಲುವಾಗಿ ಹ್ಯಾಕರ್ಸ್‌ಗಳಿಗೆ ಸವಾಲೆಸೆದಿದ್ದ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಕಳೆದ ಮೂರು ದಿನಗಳಲ್ಲಿ ಈ ಒಂದು ವಿಷಯ ಹಲವು ಆಯಾಮಗಳನ್ನು ಕಂಡರೂ ಆಧಾರ್ ಸುರಕ್ಷತೆ ಬಗ್ಗೆ ಅನುಮಾನ ಮೂಡಿದೆ.
  ಹೌದು, ಹ್ಯಾಕರ್ಸ್ಗಳಿಗೆ ಸವಾಲೆಸಿದ್ದ ಶರ್ಮಾ ಅವರು. ತಮ್ಮ ಪೂರ್ಣ ಆಧಾರ್ ನಂಬರ್ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ತಮಗೆ ಹಾನಿ ಎಸಗಲು ಕೇವಲ ಈ ನಂಬರ್‌ನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತೀರಿ ನೋಡೋಣ ಎಂದು ಸವಾಲೊಡ್ಡಿದ್ದರು. ಇದಕ್ಕೆ ಸವಾಲಾಗಿ ಆಧಾರ್ ಬಳಸಿಕೊಂಡು ಅವರ ಫೋನ್ ನಂಬರ್ ಪತ್ತೆ ಹಚ್ಚಿರುವುದಾಗಿ ಹ್ಯಾಕರ್ ಓರ್ವ ಹೇಳಿದ್ದಾರೆ.

  ಆದರೆ, ಹ್ಯಾಕರ್ ಟ್ವಿಟರ್ ನಲ್ಲಿ ಪ್ರಕಟಿಸಿರುವ ಮಾಹಿತಿ ಆಧಾರ್ ಡೇಟಾಬೇಸ್ ಅಥವಾ ಯುಐಡಿಎಐ ಸರ್ವರ್ ನಿಂದ ಪಡೆದದ್ದು ಅಲ್ಲ. ಹ್ಯಾಕರ್ ನೀಡಿರುವ ಟ್ರಾಯ್ ಮುಖ್ಯಸ್ಥರ ಮಾಹಿತಿ ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿದೆ ಎಂದು ಯುಐಡಿಎಐ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗಾಗಿ, ಈ ಮೂರು ದಿನಗಳಲ್ಲಿ ನಡೆದ ಶಾಕಿಂಗ್ ವಿದ್ಯಮಾನಗಳನ್ನು ಮುಂದೆ ತಿಳಿಯೋಣ.

  ಆರ್.ಎಸ್.ಶರ್ಮಾ ಸವಾಲೆಸೆದದ್ದು ಯಾಕೆ?

  ಆಧಾರ್ ಕಾರ್ಡ್‌ದಾರರ ಹಿತಾಸಕ್ತಿ ಕಾಪಾಡಲು ಆಧಾರ್ ಕಾಯ್ದೆಗೆ ತಿದ್ದುಪಡಿ ತರಲು ನ್ಯಾ.ಶ್ರೀಕೃಷ್ಣ ಸಮಿತಿ ಶಿಫಾರಸು ಮಾಡಿದ ಬೆನ್ನಲ್ಲೇ ಶರ್ಮಾ ಅವರು ಈ ಟ್ವೀಟ್ ಮಾಡಿದ್ದರು. ಆಧಾರ್ ಸುರಕ್ಷಿತವಾಗಿದೆ ಎಂಬುದನ್ನು ಮನದಟ್ಟು ಮಾಡುವ ಸಲುವಾಗಿ ಹ್ಯಾಕರ್ಸ್‌ಗಳಿಗೆ ಸವಾಲೆಸೆದು ಆಧಾರ್ ಸುರಕ್ಷತವಾಗಿದೆ ಎಂಬುದನ್ನು ಹೇಳುವ ಕೆಲಸಕ್ಕೆ ಮುಂದಾಗಿದ್ದರು.

  ಹ್ಯಾಕ್ ಆಯ್ತ ವೈಯಕ್ತಿಕ ಮಾಹಿತಿ?

  ಶರ್ಮಾ ಅವರ ಆಧಾರ್ ನಂಬರ್ ಬಳಸಿಕೊಂಡು ಅವರ ಫೋನ್ ನಂಬರ್ ಪತ್ತೆ ಹಚ್ಚಿರುವುದಾಗಿ ವ್ಯಕ್ತಿಯೋರ್ವ ಸವಾಲಿಗೆ ಮೊದಲು ಉತ್ತರಿಸಿದ್ದಾನೆ. ಶರ್ಮಾ ಅವರು ಬಳಕೆ ಮಾಡುತ್ತಿರುವ ಐಫೋನ್ ಹಾಗೂ ಅದರ ಫೋನ್ ನಂಬರ್ ಬಹಿರಂಗ ಪಡಿಸಿದ್ದಾನೆ. ಇದಲ್ಲದೆ, ವಾಟ್ಸ್ಆಪ್ ಪ್ರೊಫೈರ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

  ಇದಾದ ಬೆನ್ನಲ್ಲೆ ಮತ್ತೊಂದು ಹ್ಯಾಕ್!

  ಈ ಹ್ಯಾಕ್ ಆದ ನಂತರ ಶರ್ಮಾ ಅವರ ಮೊಬೈಲ್ ನಂಬರ್, ಪ್ಯಾನ್ ಕಾರ್ಡ್ ನಂಬರ್, ಹಾಗೂ ಪರ್ಯಾಯ ಫೋನ್ ನಂಬರ್, ಇಮೇಲ್ ಐಡಿ, ಬಳಕೆ ಮಾಡುತ್ತಿರುವ ಫೋನ್ ಕುರಿತ ಮಾಹಿತಿ ಹಾಗೂ ವಾಟ್ಸ್ ಪ್ರೊಫೈಲ್ ಫೋಟೋ ಸೇರಿ ಇನ್ನಿತರೆ ಹಲವಾರು ಸೂಕ್ಷ್ಮ ಮಾಹಿತಿಗಳನ್ನು ಫ್ರೆಂಚ್ ಭದ್ರತಾ ತಜ್ಞ ಎಲಿಯಟ್ ಆಂಡರ್ಸನ್ ಬಹಿರಂಗಪಡಿಸಿದ್ದಾರೆ.

  ಎಲಿಯೇಟ್ ಅವರು ಹೇಳಿದ್ದೇನು?

  ಈ ಮಾಹಿತಿಗಳನ್ನು ಬಹಿರಂಗ ಪಡಿಸಿದ ಎಲಿಯೇಟ್ ಅವರು, ಟ್ರಾಯ್‌ಗೆ ನೀಡಿದ ಮೊಬೈಲ್ ಸಂಖ್ಯೆಯೊಂದಿಗೆ ಇತರರ ಸಹಾಯದೊಂದಿಗೆ ಈ ಮಾಹಿತಿಗಳನ್ನು ಕಲೆಹಾಯಿತು. ಇಲ್ಲಿಗೆ ಇದನ್ನು ನಾನು ನಿಲ್ಲಿಸುತ್ತೇನೆ. ಆಧಾರ್ ನಂಬರ್‌ ಅನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬಾರದು ಏಕೆ ಎಂಬುದು ನಿಮಗೆ ಅರ್ಥವಾಗಿದೆ ಎಂದು ತಿಳಿಯುತ್ತೇನೆಂದು ಟ್ವೀಟ್ ಮಾಡಿದ್ದಾರೆ.

  ಸ್ಪಷ್ಟವಾಗಿ ತಳ್ಳಿಹಾಕಿದ ಆಧಾರ್ ಪ್ರಾಧಿಕಾರ

  ಆಧಾರ್ ಸಂಖ್ಯೆಯನ್ನು ಬಳಸಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌)ದ ಅಧ್ಯಕ್ಷ ಆರ್‌. ಎಸ್‌. ಶರ್ಮಾ ಅವರ ವೈಯಕ್ತಿಕ ಮಾಹಿತಿ ಸೋರಿಕೆ ಮಾಡಿದ ವಿಚಾರವನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಭಾನುವಾರ ಸ್ಪಷ್ಟವಾಗಿ ತಳ್ಳಿಹಾಕಿದೆ. ಆಧಾರ್ ಮಾಹಿತಿ ಹ್ಯಾಕ್ ಆಗಿಲ್ಲ ಎಂದು ಹೇಳಿ ಪ್ರಕಟಣೆ ನೀಡಿದೆ.

  ಆಧಾರ್ ಪ್ರಾಧಿಕಾರ ಹೇಳಿದ್ದೇನು?

  ಟ್ರಾಯ್ ಮುಖ್ಯಸ್ಥರು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದು, ಅವರ ವೈಯಕ್ತಿಕ ಮಾಹಿತಿ ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿದೆ. ಹ್ಯಾಕರ್ ಎಂದು ಹೇಳಿಕೊಳ್ಳುವ ವ್ಯಕ್ತಿ ಅದನ್ನೆ ಟ್ವಿಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಮೋಸಗಾರರು ಸಕ್ರಿಯೆವಾಗಿದ್ದು ಅದನ್ನು ನಂಬಬೇಡಿ ಎಂದು ಯುಐಡಿಎಐ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

  ಆಧಾರ್ ಸುರಕ್ಷತೆ ಬಗ್ಗೆ ಅನುಮಾನ

  ಆಧಾರ್ ನಂಬರ್ ಸಹಾಯದಿಂದ ವೈಯಕ್ತಿಕ ಮಾಹಿತಿ ಸೋರಿಕೆ ಮಾಡಿದ ವಿಚಾರವನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಭಾನುವಾರ ಸ್ಪಷ್ಟವಾಗಿ ತಳ್ಳಿಹಾಕಿದೆ. ಅದರೆ, ಲಿಯಟ್ ಆಂಡರ್ಸನ್ ಬಹಿರಂಗಪಡಿಸಿರುವ ಮಾಹಿತಿಗಳು ಆಧಾರ್ ಮೂಲಕವೇ ಸೋರಿಕೆಯಾಗಿದ್ದರೆ ಎಲ್ಲವನ್ನು ನಂಬಲೂ ಸಾಧ್ಯವಿಲ್ಲ ಎನ್ನುತ್ತಿದ್ದಾರೆ ತಜ್ಞರು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Is Someone Misusing Your Aadhaar Data? Here's How To Check Your Verification History Online. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more