Home
ಟೆಕ್ ನೌಕರಿ

ನಿಮ್ಮ ಮೊಬೈಲ್ ಅತಿಯಾಗಿ ಬಿಸಿಯಾಗುತ್ತಿದೆಯೇ?..ಕಾರಣಗಳು ಮತ್ತು ಪರಿಹಾರಗಳು ಇಲ್ಲಿವೆ!

ಇಂದಿನ ಬಹುತೇಕ ಮೊಬೈಲ್/ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮೊಬೈಲ್ ಅತಿಯಾಗಿ ಬಿಸಿಯಾಗುವ (mobile overheating) ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮೊಬೈಲ್ ಬಿಸಿಯಾಗುವುದು ಸಾಮಾನ್ಯ ವಿದ್ಯಮಾನವಾದರೂ, ಅತಿಯಾದ ತಾಪಮಾನವು ಮೊಬೈಲ್ ಕಾರ್ಯಕ್ಷಮತೆಗೆ ಹಾನಿಯುಂಟುಮಾಡಬಹುದು ಮತ್ತು ಮೊಬೈಲ್ ಬ್ಲಾಸ್ಟ್ ಆಗಬಹುದಾದಂತಹ ಸುರಕ್ಷತೆಯ ಅಪಾಯವನ್ನು ತಂದೊಡ್ಡಬಹುದು. ಏಕೆಂದರೆ, ಮೊಬೈಲ್ ಅತಿ ಹೆಚ್ಚು ಬಿಸಿಯಾಗಿ ಹಲವಾರು ಸ್ಪೋಟಗಳು ಆಗಿರುವ ಉದಾಹರಣೆಗಳಿವೆ. ಹಾಗಾದರೆ, ಮೊಬೈಲ್ ಬಿಸಿಯಾಗಲು ಕಾರಣಗಳೇನು? ಮತ್ತು ಈ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

ಮೊಬೈಲ್ ಬಿಸಿಯಾಗಲು ಪ್ರಮುಖ ಕಾರಣಗಳು: CPU ಓವರ್‌ಲೋಡ್, ಚಾರ್ಜಿಂಗ್ ಸಮಸ್ಯೆಗಳು, ಬ್ಯಾಟರಿ ಸಮಸ್ಯೆಗಳು, ಸಾಫ್ಟ್‌ವೇರ್ ಸಮಸ್ಯೆಗಳು, ಹವಾಮಾನ ಪರಿಸ್ಥಿತಿಗಳು ಮತ್ತು ವೈರಸ್ ಮತ್ತು ಮಾಲ್‌ವೇರ್. ಇವುಗಳಲ್ಲಿ ಹೆಚ್ಚಿನ ಗ್ರಾಫಿಕ್ಸ್ ಹೊಂದಿರುವ ಗೇಮ್‌ಗಳನ್ನು ಆಡುವುದು, ವಿಡಿಯೋ ರೆಕಾರ್ಡಿಂಗ್ ಮಾಡುವುದು ಅಥವಾ ಏಕಕಾಲದಲ್ಲಿ ಹಲವಾರು ಅಪ್ಲಿಕೇಶನ್‌ಗಳನ್ನು ಬಳಸುವುದು CPU ಮೇಲೆ ಒತ್ತಡವನ್ನು ಹೇರುತ್ತದೆ. ಕೆಲವು ಅಪ್ಲಿಕೇಶನ್‌ಗಳು ಹಿನ್ನೆಲೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಹೆಚ್ಚಿನ ಶಕ್ತಿಯನ್ನು ಬಳಸುವುದರಿಂದಲೂ ಮೊಬೈಲ್ ಬಿಸಿಯಾಗಬಹುದು. ಸಾಮಾನ್ಯವಾಗಿ ಇವು ನಿಮ್ಮ ಮೊಬೈಲ್ ಹೆಚ್ಚು ಬಿಸಿಯಾಗಲು ಮುಖ್ಯ ಕಾರಣಗಳಾಗಿರುತ್ತದೆ. ಈ ಕಾರಣಗಳ ಜೊತೆಗೆ,

ನಿಮ್ಮ ಮೊಬೈಲ್ ಅತಿಯಾಗಿ ಬಿಸಿಯಾಗುತ್ತಿದೆಯೇ?..ಕಾರಣಗಳು ಮತ್ತು ಪರಿಹಾರಗಳು ಇವು!

ಸರಿಯಾದ ಚಾರ್ಜರ್ ಅಥವಾ ಚಾರ್ಜಿಂಗ್ ಪೋರ್ಟ್ ಇಲ್ಲದಿದ್ದರೆ, ಮೊಬೈಲ್ ಚಾರ್ಜ್ ಮಾಡುವಾಗ ಅತಿಯಾಗಿ ಬಿಸಿಯಾಗಬಹುದು. ಚಾರ್ಜ್ ಮಾಡುವಾಗ ಮೊಬೈಲ್ ಅನ್ನು ಬಳಸುವುದು ಸಹ ತಾಪಮಾನವನ್ನು ಹೆಚ್ಚಿಸುತ್ತದೆ. ಬ್ಯಾಟರಿಯ ಜೀವಿತಾವಧಿ ಮುಗಿಯುತ್ತಿದ್ದರೆ ಅಥವಾ ಬ್ಯಾಟರಿ ಹಾನಿಗೊಳಗಾಗಿದ್ದರೆ, ಮೊಬೈಲ್ ಬಿಸಿಯಾಗುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಸಾಫ್ಟ್‌ವೇರ್ ಅಪ್‌ಡೇಟ್‌ಗಳಲ್ಲಿನ ದೋಷಗಳಿಂದಲೂ ಮೊಬೈಲ್ ಬಿಸಿಯಾಗಬಹುದು. ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಅಥವಾ ಬಿಸಿ ವಾತಾವರಣದಲ್ಲಿ ಮೊಬೈಲ್ ಅನ್ನು ಬಳಸಿದಾಗ ತಾಪಮಾನ ಹೆಚ್ಚಾಗುತ್ತದೆ. ಮೊಬೈಲ್‌ನಲ್ಲಿ ವೈರಸ್ ಅಥವಾ ಮಾಲ್‌ವೇರ್ ಇದ್ದರೆ, ಅದು ಸಾಧನದ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸಿ ತಾಪಮಾನವನ್ನು ಹೆಚ್ಚಿಸಬಹುದು.

ಇದಕ್ಕೆ ಪರಿಹಾರಗಳು, ಅಪ್ಲಿಕೇಶನ್‌ಗಳ ನಿರ್ವಹಣೆ, ಚಾರ್ಜಿಂಗ್ ಕ್ರಮಗಳು, ಸಾಫ್ಟ್‌ವೇರ್ ಅಪ್‌ಡೇಟ್‌ಗಳು, ಹವಾಮಾನ ಪರಿಸ್ಥಿತಿಗಳು, ವೈರಸ್ ತಪಾಸಣೆ ಮತ್ತು ತಾಪಮಾನ ಮೇಲ್ವಿಚಾರಣೆ. ಯಾವಾಗಲೂ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಅನಗತ್ಯ ಅಪ್ಲಿಕೇಶನ್‌ಗಳನ್ನು ಮುಚ್ಚಿ. ಹೆಚ್ಚಿನ CPU ಬಳಕೆಯನ್ನು ಹೊಂದಿರುವ ಅಪ್ಲಿಕೇಶನ್‌ಗಳ ಬಳಕೆಯನ್ನು ಮಿತಿಗೊಳಿಸಿ. ಮೊಬೈಲ್ ತಯಾರಕರು ಶಿಫಾರಸು ಮಾಡಿದ ಚಾರ್ಜರ್ ಮತ್ತು ಕೇಬಲ್ ಅನ್ನು ಬಳಸಿ. ಕಳಪೆ ಚಾರ್ಜ್ ಅನ್ನು ಬಳಸಲೇಬೇಡಿ. ಚಾರ್ಜ್ ಮಾಡುವಾಗ ಮೊಬೈಲ್ ಅನ್ನು ಬಳಸುವುದನ್ನು ತಪ್ಪಿಸಿ. ಮೊಬೈಲ್ ಸಾಫ್ಟ್‌ವೇರ್ ಅನ್ನು ನಿಯಮಿತವಾಗಿ ಅಪ್‌ಡೇಟ್ ಮಾಡಿ. ನೇರ ಸೂರ್ಯನ ಬೆಳಕಿಗೆ ಮೊಬೈಲ್ ಅನ್ನು ಒಡ್ಡಬೇಡಿ. ಬಿಸಿ ವಾತಾವರಣದಲ್ಲಿ ಮೊಬೈಲ್ ಅನ್ನು ಬಳಸುವುದನ್ನು ತಪ್ಪಿಸಿ.

ಹಾಗೆಯೇ, ವಿಶ್ವಾಸಾರ್ಹ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಬಳಸಿ ನಿಯಮಿತವಾಗಿ ಮೊಬೈಲ್ ಅನ್ನು ಸ್ಕ್ಯಾನ್ ಮಾಡಿ. ಮೊಬೈಲ್ ತಾಪಮಮಾನವನ್ನು ಅಳೆಯುವ ಜನಪ್ರಿಯ AIDA 64, CPU-Z ನಂತಹ ಆಪ್‌ಗಳನ್ನು ಬಳಸಿ ಮೊಬೈಲ್‌ನ ತಾಪಮಾನವನ್ನು ಪರಿಶೀಲಿಸಿ. ನಿಮ್ಮ ಮೊಬೈಲ್ 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಹೊಂದಿರುವುದು ಅಪಾಯಕಾರಿ. ಹಾಗಾಗಿ, ನಿಮ್ಮ ಮೊಬೈಲ್ ಅತಿಯಾಗಿ ಬಿಸಿಯಾಗುತ್ತಿದ್ದರೆ, ತಕ್ಷಣವೇ ಅದನ್ನು ಸ್ವಿಚ್ ಆಫ್ ಮಾಡಿ ಮತ್ತು ತಜ್ಞರ ಸಹಾಯ ಪಡೆಯಿರಿ.

Best Mobiles in India

English summary
A "mobile overheating issue" occurs when your smartphone becomes excessively warm during use, typically due to resource-intensive activities such as gaming, video streaming, or running multiple applications at the same time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+