Just In
- 16 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 17 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 18 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 20 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Movies
Breaking: ಕನ್ನಡ ಚಲನಚಿತ್ರರಂಗದ ಹಿರಿಯ ನಟ ಮನ್ದೀಪ್ ರಾಯ್ ನಿಧನ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೆಪ್ಟೆಂಬರ್ 5 ರಂದು ಜಿಯೋ ಫೈಬರ್ ಬಿಡುಗಡೆ: ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ?
ರಿಲಯನ್ಸ್ ಜಿಯೋ ಫೈಬರ್ ಪ್ಲಾನ್ ಗಳು ರುಪಾಯಿ 700 ರಿಂದ ರುಪಾಯಿ 1000 ರುಪಾಯಿಯಲ್ಲಿ ಲಭ್ಯವಾಗಲಿದ್ದು ಸೆಪ್ಟೆಂಬರ್ 5 ರಂದು ಬಿಡುಗಡೆಗೊಳ್ಳಲಿದೆ. ಈ ಸೇವೆಗೆ ನೀವೂ ಕೂಡ ರಿಜಿಸ್ಟರ್ ಮಾಡಿಕೊಳ್ಳುವುದಾದರೆ ಹೇಗೆ ಎಂಬುದನ್ನು ನಾವಿಲ್ಲ ತಿಳಿಸುತ್ತಿದ್ದೇವೆ.

ರಿಲಯನ್ಸ್ ಜಿಯೋ ಇತ್ತೀಚೆಗಷ್ಟೇ ತನ್ನ ಜಿಯೋ ಫೈಬರ್ ಸೇವೆಯನ್ನು ಸೆಪ್ಟೆಂಬರ್ 5 ರಂದು ಬಿಡುಗಡೆಗೊಳಿಸುವುದಾಗಿ ಪ್ರಕಟಿಸಿದೆ.ಇದೀಗ ಕಂಪೆನಿಯು ಗ್ರಾಹಕರು ಹೇಗೆ ತಮ್ಮ ಸೇವೆಗೆ ರಿಜಿಸ್ಟರ್ ಮಾಡಿಕೊಳ್ಳಬೇಕು ಎಂಬ ವಿವರವನ್ನು ನೀಡಿದೆ. ಬಳಕೆದಾರರಿಗಾಗಿ ಕಂಪೆನಿಯು ನೀಡುತ್ತಿರುವ ಆಫರ್ ಗಳ ಬಗ್ಗೆ ಇನ್ನಷ್ಟೇ ವಿವರ ಬಿಡುಗಡೆಗೊಳ್ಳಬೇಕಿದೆ.
ಜಿಯೋ ಸಂಸ್ಥೆ ತನ್ನ ಎಜಿಎಂ ನಲ್ಲಿ ಪ್ಲಾನಿನ ಬೆಲೆಯು 700 ರುಪಾಯಿಯಿಂದ 1000 ರುಪಾಯಿಯ ಮಾಸಿಕ ವೆಚ್ಚದಲ್ಲಿ ಲಭ್ಯವಾಗುತ್ತದೆ ಎಂದು ತಿಳಿಸಿತ್ತು ಮತ್ತು ಇದು ಜಾಗತಿಕವಾಗಿ ಬ್ರಾಡ್ ಬ್ಯಾಂಡ್ ಗೆ ಇರುವ ಬೆಲೆಯ ಕೇವಲ 1/10 ರಷ್ಚಾಗಿರುತ್ತದೆ ಎಂದು ಕೂಡ ಹೇಳಿತ್ತು.
ಕನೆಕ್ಷನ್ ಲ್ಯಾಂಡ್ ಫೋನ್ ಕನೆಕ್ಷನ್ನಿನ ಬಂಡಲ್ಡ್ ನಲ್ಲಿ ಮತ್ತು ಟಿವಿ ಸೆಟ್ ಅಪ್ ಬಾಕ್ಸ್ ಬರುತ್ತದೆ. ಕಂಪೆನಿಯ ಕಾರ್ಯಕ್ರಮದಲ್ಲಿ ಜಿಯೋ ವೆಲ್ ಕಂ ಆಫರ್ ನೀಡುವ ಬಗ್ಗೆಯೂ ಕೂಡ ಪ್ರಕಟಿಸಿತ್ತು. ಇದರಡಿಯಲ್ಲಿ ಗ್ರಾಹಕರು ಜೀವಮಾನದ ಪ್ಲಾನ್ (ಅಂದರೆ ವಾರ್ಷಿಕ ಪ್ಲಾನ್ ಗಳು) ನ್ನು ಅಂದರೆ ಕಾಂಪ್ಲಿಮೆಂಟರಿ ಹೆಚ್ ಡಿ ಅಥವಾ 4ಕೆ ಎಲ್ಇಡಿ ಟಿವಿ ಮತ್ತು 4ಕೆ ಸೆಟ್ ಅಪ್ ಬಾಕ್ಸ್ ಪಡೆಯಲಿದ್ದಾರೆ ಎಂದು ಕೂಡ ತಿಳಿಸಿತ್ತು. ಪ್ರಾರಂಭಿಕ ಹಂತದ ಬಿಡುಗಡೆಯ ಪ್ರಯುಕ್ತ ಜಿಯೋ ಫೈಬರ್ ಇನ್ಸ್ಟಾಲೇಷನ್ ಚಾರ್ಜಸ್ ನ್ನು ಪಡೆಯುವುದಿಲ್ಲ. ಇದು ಸಂಪೂರ್ಣ ಉಚಿತವಾಗಿರುತ್ತದೆ. ಸ್ವತಃ ಜಿಯೋ ಸಿಬ್ಬಂದಿ ನಿಮ್ಮ ಮನೆಗೆ ಬಂದು ಕನೆಕ್ಷನ್ ನ್ನು ಉಚಿತವಾಗಿ ಸೆಟ್ ಮಾಡಿ ಕೊಡುತ್ತಾರೆ.
ಇದುವರೆಗೂ ಕೂಡ ಕಂಪೆನಿಯು ಕೇವಲ ಜಿಯೋ ಫೈಬರ್ ಪ್ರಿವ್ಯೂ ಆಫರ್ ನ್ನು ಮಾತ್ರವೇ ನೀಡುತ್ತಿದೆ. ಇದರಡಿಯಲ್ಲಿ 2,500 ರುಪಾಯಿಯ ರೀಫಂಡ್ ಮಾಡುವ ಸೆಕ್ಯುರಿಟಿ ಡೆಪಾಸಿಟ್ ನ್ನು ಮಾತ್ರವೇ ರೂಟರ್ ಗಾಗಿ ಪಡೆಯುತ್ತಿದೆ ಮತ್ತು ಅವರಿಗೆ 100ಎಂಬಿಪಿಎಸ್ ಮತ್ತು 1ಜಿಬಿಪಿಎಸ್ ವೇಗದ ರೇಂಜಿನಲ್ಲಿ ಈ ಬ್ರಾಡ್ ಬ್ಯಾಂಡ್ ಕನೆಕ್ಷನ್ ಲಭ್ಯವಾಗುತ್ತದೆ.
ಜಿಯೋ ಫೈಬರ್ ಗೆ ಹೇಗೆ ಅಪ್ಲೈ ಮಾಡುವುದು?
ಮೂರು ಹಂತದ ಪ್ರೊಸೆಸ್ ನ್ನು ಸಂಪೂರ್ಣ ಗೊಳಿಸುವ ಮೂಲಕ ನೀವು ಜಿಯೋ ಫೈಬರ್ ವೆಬ್ ಸೈಟ್ ನಲ್ಲಿ ನಿಮ್ಮನ್ನ ನೀವು ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಜಿಯೋ ಫೈಬರ್ ಕನೆಕ್ಷನ್ ಗೆ ಅಪ್ಲೈ ಮಾಡಬಹುದು.
* ಜಿಯೋ ಫೈಬರ್ ವೆಬ್ ಸೈಟ್ ನಲ್ಲಿ ನಿಮ್ಮ ವಿಳಾಸ, ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯನ್ನು ಇನ್ ಪುಟ್ ಮಾಡಿ.
*ವಿವರವನ್ನು ಎಂಟರ್ ಮಾಡಿದ ನಂತರ ನಿಮಗೆ ಓಟಿಪಿ ನಿಮ್ಮ ಮೊಬೈಲ್ ನಂಬರ್ರಿಗೆ ಲಭ್ಯವಾಗುತ್ತದೆ.ಇದನ್ನು ನೀವು ನಿಮ್ಮ ವೆರಿಫೈ ಮಾಡುವ ಸಲುವಾಗಿ ವೆಬ್ ಸೈಟ್ ನಲ್ಲಿ ಎಂಟರ್ ಮಾಡಬೇಕು.
* ನಂತರ ಪುನಃ ನಿಮ್ಮ ವಿಳಾಸವನ್ನು ನಮೂದಿಸಬೇಕು ಮತ್ತು ಲೊಕೇಷನ್ ಮ್ಯಾಪ್ ಅನುಸಾರ ನಿಮ್ಮ ನಿಖರವಾದ ಪಿನ್ ನಂಬರ್ ಬರೆಯಬೇಕು. ನೀವು ವಾಸಿಸುತ್ತಿರುವ ಸ್ಥಳದ ವಿವರ ಕೊಡಬೇಕು ಉದಾಹರಣೆಗೆ ನೀವು ಫ್ಲ್ಯಾಟ್ ನಲ್ಲಿದ್ದೀರಾ ಅಥವಾ ಸೊಸೈಟಿಯಲ್ಲಿದ್ದೀರಾ ಅಥವಾ ಇತ್ಯಾದಿ.
* ನೀವು ಆಯ್ಕೆಯಾದಾಗ ರಿಲಯನ್ಸ್ ಜಿಯೋ ಸಿಬ್ಬಂದಿ ನಿಮಗೆ ಕರೆ ಮಾಡುತ್ತಾರೆ ಮತ್ತು ಎಲ್ಲಿ ರಿಜಿಸ್ಟ್ರೇಷನ್ ಆಗಬೇಕೋ ಆ ಜಾಗದಲ್ಲಿ ಮೀಟಿಂಗ್ ನ್ನು ಸೆಟ್ ಮಾಡುತ್ತಾರೆ. ನಿಮ್ಮನ್ನ ಭೇಟಿ ಮಾಡಲು ನೀವು ಯಾವ ದಿನಾಂಕ ನಿಗದಿಗೊಳಿಸಿಕೊಳ್ಳುತ್ತೀರೋ ಅಂದು ಸಿಬ್ಬಂದಿ ಬಂದು ಇನ್ಸ್ಟಾಲೇಷನ್ ಕೆಲಸ ನಿರ್ವಹಿಸುತ್ತಾರೆ. ಜಿಯೋ ಸಿಬ್ಬಂದಿ ಭೇಟಿ ನೀಡುವ ದಿನ ನೀವು ನಿಮ್ಮ ವಿಳಾಸದ ಪ್ರೂಫ್ ಗೆ ಬೇಕಾಗುವ ಒರಿಜಿನಲ್ ಡಾಕ್ಯುಮೆಂಟ್ ಗಳನ್ನು ಅವರಿಗೆ ತೋರಿಸಬೇಕಾಗುತ್ತದೆ.
ಇನ್ಸ್ಟಾಲೇಷನ್ ಮುಗಿದ ಮೇಲೆ ನೀವು ಕಡಿಮೆ ಬೆಲೆಯಲ್ಲಿ ಜಿಯೋ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯಬಹುದು.

ಶುರುವಾಯ್ತು 'ಜಿಯೋ ಗಿಗಾಫೈಬರ್' ಅಬ್ಬರ್!..ಆಫರ್ ಭರಪೂರ!
ಭಾರತೀಯ ಟೆಲಿಕಾಂ ವಲಯಕ್ಕೆ ಜಿಯೋ ಎಂಟ್ರಿ ಕೊಟ್ಟು ಹಲವು ಮಹತ್ತರ ಬದಲಾವಣೆಯನ್ನು ಮಾಡಿ, ಹೊಸ ಮೈಲುಗಲ್ಲು ಸ್ಥಾಪಿಸಿತು. ಜಿಯೋ ಸಂಸ್ಥೆಯು ಗ್ರಾಹಕರ ನಿರೀಕ್ಷಿಗಿಂತ ಕಡಿಮೆ ದರದಲ್ಲಿ ಮೊಬೈಲ್ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿತು. ಆ ಬಿರುಗಾಳಿ ಮುಂದುವರೆದು ಈಗ ಬ್ರಾಂಡ್‌ಬ್ಯಾಂಡ್ ಸೇವೆಯತ್ತ ಬಂದಿದೆ. ಕಂಪನಿಯ ಬಹುನಿರೀಕ್ಷಿತ ಜಿಯೋ ಗಿಗಾಫೈಬರ್ ಸೇವೆ ಲಾಂಚ್ ಆಗಿದ್ದು, ಇತರೆ ಕಂಪನಿಗಳಿಗೆ ಚಳಿ ಹೆಚ್ಚಾಗಿದೆ.
ಹೌದು, ರಿಲಾಯನ್ಸ್ ಜಿಯೋ ಸಂಸ್ಥೆಯು ಇಂದು ನಡೆದ 42ನೇ (ಅಗಷ್ಟ 12) 'ಜಿಯೋ ವಾರ್ಷಿಕ ಸಭೆ'ಯಲ್ಲಿ ಮುಂಖೇಶ ಅಂಬಾನಿ ಅವರು 'ಜಿಯೋ ಗಿಗಾಫೈಬರ್' ಸೇವೆಯನ್ನು ಬಿಡುಗಡೆ ಮಾಡಿದರು. ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಜಿಯೋಗಿಗಾ ಫೈಬರ್ ಸೇವೆಯು ಇದೇ 'ಸೆಪ್ಟಂಬರ್ 5' ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಗಿಗಾಫೈಬರ್ ತಿಂಗಳ ಪ್ಯಾಕೆಜ್ ಬೆಲೆಗಳು 700ರೂ.ಗಳಿಂದ 10,000ರೂ.ಗಳ ವರೆಗೂ ಇರಲಿವೆ.
ಜಿಯೋ ಗಿಗಾಫೈಬರ್, ದೇಶಿಯ ಬ್ರಾಂಡ್‌ಬ್ಯಾಂಡ್ ಸೇವೆಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಭರವಸೆಗಳನ್ನು ಮೂಡಿಸಿವ ಯೋಜನೆಗಳನ್ನು ಜಿಯೋ ಹೊರಹಾಕಿದೆ. ಜಿಯೋ ಗಿಗಾಫೈಬರ್‌ನ ಭರ್ಜರಿ ಕೊಡುಗೆಗಳ ಅಬ್ಬರದ ನಡುವೆ ಏರ್‌ಟೆಲ್ ಮತ್ತು ಟಾಟಾಸ್ಕೈ ಬ್ರಾಡ್‌ಬ್ಯಾಂಡ್ ಸೇವೆಗಳು ತತ್ತರವಾಗುವ ಸಾಧ್ಯತೆಗಳೆ ಹೆಚ್ಚಾಗಿವೆ. ಹಾಗಾದರೇ ಜಿಯೋ ಗಿಗಾಫೈಬರ್ ಗ್ರಾಹಕರಿಗೆ ಯಾವೆಲ್ಲಾ ಉಡುಗೊರೆಗಳನ್ನು ನೀಡುತ್ತದೆ ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಜನಪ್ರಿಯ OTT ಸೇವೆಗಳು ಲಭ್ಯ
ಸದ್ಯ ಜನಪ್ರಿಯವಾಗಿರುವ ನೆಟ್‌ಫ್ಲೆಕ್ಸ್, ಹಾಟ್‌ಸ್ಟಾರ್, ಎಎಲ್‌ಟಿ ಬಾಲಾಜಿ, ಅಮೆಜಾನ್ ಪ್ರೈಮ್, ವಿಯು, ಸೋನಿ ಲೈವ್, ಜೀ5, ಸೇರಿದಂತೆ ಇತರೆ ಪ್ರಮುಖ ಆಪ್ಸ್‌ಗಳನ್ನು ಜಿಯೋ ಗಿಗಾಫೈಬರ್ ಒಳಗೊಂಡಿರಲಿದೆ. ಇದರೊಂದಿಗೆ ಜಿಯೋ ಸಂಸ್ಥೆಯ 'ಬಿಗ್‌ಫ್ಲೆಕ್ಸ್' ವಿಡಿಯೊ ಸ್ಟ್ರಿಮಿಂಗ್ ಸೇವೆಯು ಸಹ ಸೇರಿಕೊಳ್ಳಲಿದೆ ಎಂದು ಮುಖೇಶ ಅಂಬಾನಿ ತಿಳಿಸಿದರು.

ವಾರ್ಷಿಕ ಪ್ಲ್ಯಾನ್ ಬೇನಿಫೀಟ್ಸ್
ಜಿಯೋ ಗಿಗಾಫೈಬರ್‌ನ ವಾರ್ಷಿಕ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ HD 4k LED ಟೆಲಿವಿಷನ್ ನೀಡಲಿದ್ದು, ಇದರೊಂದಿಗೆ ಉಚಿತ ಸೆಟ್‌ಅಪ್ ಬಾಕ್ಸ್ ಸಹ ಲಭ್ಯವಾಗಲಿದೆ. ಮೆನಯಿಂದ ದೇಶದ ಯಾವುದೇ ಮೊಬೈಲ್ ನೆಟವರ್ಕ್ ಮತ್ತು ಲ್ಯಾಂಡ್‌ಲೈನ್‌ಗಳಿಗೆ ಲೈಫ್‌ಟೈಮ್ ಉಚಿತ ಕರೆಗಳ ಸೌಲಭ್ಯವು ಲಭ್ಯವಾಗಲಿದೆ.

ಫಸ್ಟ್ ಡೇ ಫಸ್ಟ್ ಶೋ
ಸಿನಿಮಾ ರಿಲೀಸ್ ಆದ ಮೊದಲ ದಿನ ಮೊದಲ ಪ್ರದರ್ಶನವನ್ನು ನೋಡುವ ಅವಕಾಶವು ಸಹ ಜಿಯೋ ಗಿಗಾಫೈಬರ್‌ನಲ್ಲಿ ಗ್ರಾಹಕರಿಗೆ ದೊರೆಯಲಿದೆ. ಆದರೆ ಈ ಸೇವೆಯು 2020ರಲ್ಲಿ ಜಿಯೋ ಗಿಗಾಫೈಬರ್ ಸೇರಿಕೊಳ್ಳಲಿದೆ. ಹೀಗಾಗಿ ರಿಲಾಯನ್ಸ್ ಜಿಯೋ ತನ್ನ ಟ್ಯಾಗ್‌ಲೈನ್ ಡಿಜಟಲ್ ಲೈಫ್ ಪರಿಕಲ್ಪನೆಯನ್ನು ಸಾಕಾರವಾಗಿಸುವ ಪ್ರಯತ್ನಗಳನ್ನು ನಡೆಸಿದೆ ಎನ್ನಬಹುದು.

ಸಣ್ಣ ಉದ್ಯಮಗಳಿಗೆ ಆದ್ಯತೆ
ಜಿಯೋ ಸಂಪರ್ಕ ಪಡೆಯುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಲಿದ್ದು, ಹಾಗೆಯೇ ನೂತನ ಸ್ಟಾರ್ಟ್‌ಅಪ್ ಉದ್ಯಮಗಳಿಗೂ ನೆರವಾಗಲಿದೆ. ಸ್ಟಾರ್ಟ್‌ಅಪ್ ಮುಂಬರುವ ಜನವರಿ 1, 2021ರ ವೇಳೆಗೆ ವಿಶೇಷ ಜಿಯೋ ಗಿಗಾಫೈಬರ್ ಕನೆಕ್ಟಿವಿಟಿ ಆಫರ್‌ಗಳನ್ನು ಪರಿಚಯಿಸುವ ತಿಂಗಳಿಗೆ 1,500ರೂ.ಗಳ ದರ ನಿಗದಿಪಡಿಸುವ ಯೋಜನೆ ಇದೆ.
ಓದಿರಿ : ಶಿಯೋಮಿ ಇಂಥ ಅಚ್ಚರಿ ನೀಡಲಿದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ!
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470