ಜಿಯೋ ಫೋನ್‌ನಲ್ಲಿ ಕೊನೆಗೂ ಬಂತು ಯೂಟ್ಯೂಬ್ ಆಪ್..! ಇನ್‌ಸ್ಟಾಲ್ ಹೇಗೆ..?
ಈ ತಿಂಗಳ ಆರಂಭದಲ್ಲಿ ರಿಲಯನ್ಸ್ ಜಿಯೋ ಫೋನ್ ವಾಟ್ಸ್ ಗೆ ತನ್ನ ಎರಡೂ ಫೋನ್ ಗಳಲ್ಲಿ ಬೆಂಬಲ ನೀಡಲು ಆರಂಭಿಸಿತ್ತು. ಅದಕ್ಕೂ ಕೆಲವೇ ದಿನಗಳ ಮುಂಚೆ ಫೇಸ್ ಬುಕ್ ಮತ್ತು ಗೂಗಲ್ ಮ್ಯಾಪ್ ಗಳಿಗೂ ಕೂಡ ಬೆಂಬಲ ಕೊಡುವುದಕ್ಕೆ ಆರಂಭಿಸಲಾಗಿತ್ತು.

ಇದೀಗ ಜಿಯೋಫೋನ್ ಮತ್ತು ಜಿಯೋಫೋನ್ ಒಡೆಯರು ಯುಟ್ಯೂಬ್ ನೋಡುವುದಕ್ಕೆ ಈ ಫೋನ್ ಗಳು ಸದವಕಾಶವನ್ನು ಒದಗಿಸುತ್ತದೆ.

ಯುಟ್ಯೂಬ್ ಆಪ್ ಇನ್ಸ್ಟಾಲ್ ಮಾಡುವುದು ಹೇಗೆ..?
ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಜಿಯೋಫೋನ್ ಮತ್ತು ಜಿಯೋಫೋನ್ 2 ಗೆ ಯುಟ್ಯೂಬ್ ಆಪ್ ನ್ನು ಬಳಸಲು ಅವಕಾಶ ನೀಡುತ್ತಿದೆ. ಒಂದು ವೇಳೆ ನೀವು ಕೂಡ ಜಿಯೋಫೋನ್ ಅಥವಾ ಜಿಯೋಫೋನ್ 2 ಹೊಂದಿದ್ದರೆ, ಇಂದು ಅಥವಾ ನಾಳೆಯೊಳಗೆ ನಿಮ್ಮ ಜಿಯೋ ಆಪ್ ಸ್ಟೋರ್ ನಲ್ಲಿ ಯುಟ್ಯೂಬ್ ಆಪ್ ನ್ನು ಗಮನಿಸಬಹುದು.

ಜಿಮೇಲ್ ಅಕೌಂಟ್ ಬಳಸಿ ಸೈನ್ ಇನ್ ಆಗಿ
ಜಿಯೋ ಆಪ್ ಸ್ಟೋರ್ ನಲ್ಲಿ ಅದು ಲಿಸ್ಟ್ ಆಗಿದ್ದರೆ ಸರಳವಾಗಿ ಅದನ್ನು ಡೌನ್ ಲೋಡ್ ಮಾಡಿ ಮತ್ತು ನಿಮ್ಮ ಫೋನ್ ನಲ್ಲಿ ಇನ್ಸ್ಟಾಲ್ ಮಾಡಿ. ಒಮ್ಮೆ ಆಪ್ ನ್ನು ಇನ್ಸ್ಟಾಲ್ ಮಾಡಿದ ನಂತರ ನಿಮ್ಮ ಜಿಮೇಲ್ ಅಕೌಂಟ್ ಬಳಸಿ ಸೈನ್ ಇನ್ ಆಗಿ ಮತ್ತು ಯುಟ್ಯೂಬ್ ವೀಡಿಯೋಗಳನ್ನು ನಿಮ್ಮ ಜಿಯೋಫೋನ್ ಮತ್ತು ಜಿಯೋಫೋನ್ 2 ಗಳಲ್ಲಿ ವೀಕ್ಷಣೆ ಮಾಡಬಹುದು.

ಜಿಯೋಫೋನ್ 2 ಫೀಚರ್ಸ್
ಜಿಯೋಫೋನ್ 2 ಕ್ಲಾಸಿಕ್ ಬ್ಲಾಕ್ ಬೆರ್ರಿ ಹ್ಯಾಂಡ್ ಸೆಟ್ ನಂತೆ ಕಾಣುತ್ತದೆ ಯಾಕೆಂದರೆ ಇದರಲ್ಲಿ ಫಿಸಿಕಲ್ QWERTY ಕಿಪ್ಯಾಡ್ ಇದೆ ಮತ್ತು 4- ವೇ ನೇವಿಗೇಷನ್ ಕೀ ಡಿಸ್ಪ್ಲೇಯ ಕೆಳಭಾಗದಲ್ಲಿದೆ.ಆದರೆ ಡಿಸ್ಪ್ಲೇ 2.4 ಇಂಚಿನಷ್ಟು ಡಯಾಗನಲ್ ಆಗಿದೆ ಮತ್ತು ಇದು QVGA ರೆಸಲ್ಯೂಷನ್ ಹೊಂದಿದೆ. ಜಿಯೋಫೋನ್ 2 Spreadtrum SP9820A ಅಥವಾ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 205 ಡುಯಲ್ ಕೋರ್ ಚಿಪ್ ಸೆಟ್ ನಿಂದ ಪವರ್ಡ್ ಆಗಿದೆ.

ಮತ್ತಷ್ಟು ಫೀಚರ್ಸ್
ಮೆಮೊರಿ ವಿಚಾರಕ್ಕೆ ಬಂದರೆ ಇದರಲ್ಲಿ 512MB RAM ಮತ್ತು 4GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ. ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಇನ್ನೂ ಹಿಗ್ಗಿಸಿಕೊಳ್ಳಲು ಅವಕಾಶವಿದೆ. ಜಿಯೋಫೋನ್ 2 ನಲ್ಲಿ 2MP ಹಿಂಭಾಗದ ಕ್ಯಾಮರಾ ಮತ್ತು VGA ಕ್ಯಾಮರಾ ಮುಂಭಾಗದಲ್ಲಿ ಇದೆ. ಕನೆಕ್ಟಿವಿಟಿಯಲ್ಲಿ ರಿಲಯನ್ಸ್ ಜಿಯೋ ಫೋನ್ 2 ವೈ-ಫೈ 802.11 b/g/n ಗೆ ಬೆಂಬಲ ನೀಡುತ್ತದೆ. ಬ್ಲೂಟೂತ್ 4.1 ಲೋ ಎನರ್ಜಿ, GPS ಜೊತೆಗೆ A-GPS, FM ರೇಡಿಯೋ, NFC, 4G VoLTE, ಮತ್ತು VoWiFi ಬೆಂಬಲ ನೀಡುತ್ತದೆ. ಈ ಫೋನ್ ಎರಡು ಸಿಮ್ ಕಾರ್ಡ್ ಗಳನ್ನು ಬಳಸಲು ಅವಕಾಶ ನೀಡುತ್ತದೆ. 2000mAh ನ ರಿಮೂವೇಬಲ್ ಬ್ಯಾಟರಿಯನ್ನು ಇದು ಹೊಂದಿದೆ. ಸಾಫ್ಟವೇರ್ ಬಗ್ಗೆ ಹೇಳುವುದಾದರೆ KaiOS ನಲ್ಲಿ ಇದು ರನ್ ಆಗುತ್ತದೆ. ಸದ್ಯ ಭಾರತದಲ್ಲಿ ಎರಡನೇ ಅತೀ ಹೆಚ್ಚು ಬಳಕೆಯಲ್ಲಿರುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ.

ಜಿಯೋಫೋನ್ ಫೀಚರ್ಸ್
ರಿಲಯನ್ಸ್ ಜಿಯೋಫೋನ್ ಕ್ಯಾಂಡಿಬಾರ್ ಡಿಸೈನ್ ನ್ನು ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಫೀಚರ್ ಫೋನ್ ಗಳಂತೆ ಇದೂ ಕೂಡ ಇದೆ. ಇದು 2.4-ಇಂಚಿನ 320 x 240 QVGA ರೆಸಲ್ಯೂಷನ್ ಡಿಸ್ಪ್ಲೇಯನ್ನು ಹೊಂದಿದೆ. ಫೋನಿನ ಕೆಲವು ಯುಟಿನ್ಸ್ ಗಳು ಡುಯಲ್ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 205 ಮೊಬೈಲ್ ಚಿಪ್ ಸೆಟ್ ನ್ನು 1.1 GHz ನಲ್ಲಿ ಪವರ್ಡ್ ಆಗಿದೆ. ಇನ್ನು ಕೆಲವು Spreadtrum SP9820A ಚಿಪ್ ಸೆಟ್ ನಲ್ಲಿ 1.2 GHz ನಲ್ಲಿ ಪವರ್ಡ್ ಆಗಿದೆ. ಮೆಮೊರಿ ವಿಚಾರಕ್ಕೆ ಬಂದರೆ ಜಿಯೋಫೋನ್ ನಲ್ಲಿ 512MB RAM ಮತ್ತು 4GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ.

ಇತರೆ ಫೀಚರ್ಸ್
ಕನೆಕ್ಟಿವಿಟಿಯಲ್ಲಿ ಜಿಯೋಫೋನ್ ವೈ-ಫೈ 802.11 b/g/n, ಬ್ಲೂಟೂತ್ 4.1 ಲೋ ಎನರ್ಜಿ, NFC, FM ರೇಡಿಯೋ, ಮತ್ತು 4G VoLTE ವ್ಯವಸ್ಥೆಯನ್ನು ಹೊಂದಿದೆ. ಈ ಫೋನ್ 2000mAh ಕೆಪಾಸಿಟಿಯ ಬ್ಯಾಟರಿಯನ್ನು ಹೊಂದಿದೆ. ಇದು 15 ದಿನಗಳ ಸ್ಟ್ಯಾಂಡ್ ಬೈ ಟೈಮ್ ನ್ನು ನೀಡುತ್ತದೆ. ಸಾಫ್ಟ್ ವೇರ್ ಬಗ್ಗೆ ಹೇಳುವುದಾದರೆ KaiOS ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ.


Click it and Unblock the Notifications








