Home
ಟೆಕ್ ನೌಕರಿ

ಜಿಯೋ ಗ್ರಾಹಕರು ಉಚಿತವಾಗಿ IPL 2025 ವೀಕ್ಷಿಸುವುದು ಹೇಗೆ?

ನೀವು ಜಿಯೋ ಗ್ರಾಹಕರ ಹಾಗೂ ಕ್ರಿಕೆಟ್ ಪ್ರಿಯರ ಹಾಗಾದರೆ ನಿಮಗಿದು ಒಳ್ಳೆಯ ಸುದ್ದಿ. ಏಕೆಂದರೆ, IPL 2025 ಮಾರ್ಚ್ 22, 2025 ರಂದು ಪ್ರಾರಂಭವಾಗುತ್ತದೆ ಮತ್ತು ಜಿಯೋದ ಉಚಿತ ಹಾಟ್‌ಸ್ಟಾರ್ ಯೋಜನೆಗಳೊಂದಿಗೆ, ಕ್ರಿಕೆಟ್ ಅಭಿಮಾನಿಗಳು ಯಾವುದೇ ಅಡೆತಡೆಗಳಿಲ್ಲದೆ ಪ್ರತಿ ಪಂದ್ಯವನ್ನು ನೇರಪ್ರಸಾರವನ್ನುಆನಂದಿಸಬಹುದು. ಜಿಯೋ ತನ್ನ ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡಿದ್ದು, ₹ 299 ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಯೊಂದಿಗೆ ಹೊಸ ಜಿಯೋ ಸಿಮ್ ಸಂಪರ್ಕವನ್ನು ಪಡೆದರೆ ಅಥವಾ ಪ್ರಸ್ತುತ ಜಿಯೋ ಗ್ರಾಹಕರಾಗಿ ಕನಿಷ್ಠ 299 ರೂ.ಗಳೊಂದಿಗೆ ರೀಚಾರ್ಜ್ ಮಾಡಿದರೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಐಪಿಎಲ್ ಕ್ರಿಕೆಟ್ ಋತುವನ್ನು ಉಚಿತವಾಗಿ ಆನಂದಿಸಬಹುದು. ಈ ಕೊಡುಗೆಯು ಮಾರ್ಚ್ 17 ರಿಂದ ಮಾರ್ಚ್ 31, 2025 ರವರೆಗೆ ಲಭ್ಯವಿದೆ ಎಂದು ಜಿಯೋ ಸಂಸ್ಥೆ ತಿಳಿಸಿದೆ.

ಜಿಯೋವಿನ ಈ ಅನಿಯಮಿತ ಕ್ರಿಕೆಟ್ ಕೊಡುಗೆಯಲ್ಲಿ, ಗ್ರಾಹಕರು ಟಿವಿ / ಮೊಬೈಲ್‌ನಲ್ಲಿ 90 ದಿನಗಳ ಉಚಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯುತ್ತಾರೆ ಮತ್ತು ಅದೂ 4ಕೆ ಗುಣಮಟ್ಟದಲ್ಲಿ ಜಿಯೋ ಹೇಳಿದೆ. ಅಂದರೆ, ಮಾರ್ಚ್ 22 ರಿಂದ ಪ್ರಾರಂಭವಾಗುವ ಐಪಿಎಲ್ ಕ್ರಿಕೆಟ್ ಋತುವನ್ನು ಗ್ರಾಹಕರು ಉಚಿತವಾಗಿ ಆನಂದಿಸಲು ಸಾಧ್ಯವಾಗುತ್ತದೆ. ಕನಿಷ್ಠ 299 ರೂ.ಗಳೊಂದಿಗೆ ರೀಚಾರ್ಜ್ ಮಾಡಿದ ಜಿಯೋ ಹಾಟ್‌ಸ್ಟಾರ್ ಪ್ಯಾಕ್ ಮಾರ್ಚ್ 22, 2025 ರಿಂದ 90 ದಿನಗಳ ಅವಧಿಗೆ ಮಾನ್ಯವಾಗಿರುತ್ತದೆ.ಇದರೊಂದಿಗೆ, ಜಿಯೋ ಮನೆಗಳಿಗೆ ಜಿಯೋ ಫೈಬರ್ ಅಥವಾ ಜಿಯೋ ಏರ್‌ರ್ಫೈಬರ್‌ನ ಉಚಿತ ಪ್ರಾಯೋಗಿಕ ಸಂಪರ್ಕವನ್ನು ಸಹ ಜಿಯೋ ಒದಗಿಸುತ್ತದೆ. ಅಲ್ಟ್ರಾ-ಫಾಸ್ಟ್ ಇಂಟರ್ನೆಟ್‌ನ ಉಚಿತ ಪ್ರಾಯೋಗಿಕ ಸಂಪರ್ಕವು 50 ದಿನಗಳವರೆಗೆ ಉಚಿತವಾಗಿರುತ್ತದೆ. ಗ್ರಾಹಕರು 4 ಕೆ ನಲ್ಲಿ ಕ್ರಿಕೆಟ್ ನೋಡುವ ಅತ್ಯುತ್ತಮ ಅನುಭವದ ಜೊತೆಗೆ ಉತ್ತಮ ಮನೆ ಮನರಂಜನೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಜಿಯೋ ಫೈಬರ್ ಅಥವಾ ಜಿಯೋಏರ್‌ಫೈಬರ್‌ನ ಉಚಿತ ಪ್ರಾಯೋಗಿಕ ಸಂಪರ್ಕದೊಂದಿಗೆ 800+ ಟಿವಿ ಚಾನೆಲ್‌ಗಳು, 11+ ಒಟಿಟಿ ಅಪ್ಲಿಕೇಶನ್‌ಗಳು, ಅನಿಯಮಿತ ವೈಫೈ ಸಹ ಲಭ್ಯವಿದೆ.

ಈ ಕೊಡುಗೆಯನ್ನು ಪಡೆಯಲು, ಅಸ್ತಿತ್ವದಲ್ಲಿರುವ ಜಿಯೋ ಸಿಮ್ ಬಳಕೆದಾರರು ಕನಿಷ್ಠ 299 ರೂ.ಗಳನ್ನು ರೀಚಾರ್ಜ್ ಮಾಡಬೇಕಾಗುತ್ತದೆ. ಹೊಸ ಜಿಯೋ ಸಿಮ್ ಗ್ರಾಹಕರು 299 ರೂ ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಯೊಂದಿಗೆ ಹೊಸ ಜಿಯೋ ಸಿಮ್ ಪಡೆಯಬೇಕಾಗುತ್ತದೆ. ಆದರೆ, ಬೇಸರದ ವಿಷಯವೆಂದರೆ, ಈ ಮಾರ್ಚ್ 17 ರ ಮೊದಲು ರೀಚಾರ್ಜ್ ಮಾಡಿದ ಗ್ರಾಹಕರು ಜಿಯೋವಿನ 100 ರೂ.ಗಳ ಆಡ್-ಆನ್ ಪ್ಯಾಕ್ ತೆಗೆದುಕೊಳ್ಳುವ ಮೂಲಕ ಹೊಸ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಯೋ ಹೇಳಿದೆ.

Take a Poll

ಜಿಯೋವಿನ 100 ರೂ.ಗಳ ಆಡ್-ಆನ್ ಪ್ಯಾಕ್
ನೀವು ಈಗಾಗಲೇ ಜಿಯೋ ಗ್ರಾಹಕರಾಗಿದ್ದರೆ ಮತ್ತು ಸಕ್ರೀಯ ರೀಚಾರ್ಜ್ ಪ್ಲಾನ್ ಜೊತೆಗೆ ಉಚಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆ ಹೊಂದಿಲ್ಲದಿದ್ದರೆ, ನಿಮಗಾಗಿ 100 ರೂಪಾಯಿಯ ಹೊಸ ರೀಚಾರ್ಜ್ ಯೋಜನೆ ಲಭ್ಯವಿದೆ. ಈ ಯೋಜನೆಯು ಜಿಯೋಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಉಚಿತ ಪ್ರವೇಶವನ್ನು ನೀಡುತ್ತದೆ. 100 ರೂಪಾಯಿಯ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 90 ದಿನಗಳ ಅವಧಿಗೆ ಜಾಹೀರಾತು-ಬೆಂಬಲಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಒದಗಿಸುತ್ತದೆ. ಈ ಯೋಜನೆಯನ್ನು ಆಯ್ಕೆ ಮಾಡುವ ಮೂಲಕ, ರಿಲಯನ್ಸ್ ಜಿಯೋ ಬಳಕೆದಾರರು ಸ್ಟ್ರೀಮಿಂಗ್ ಸೇವೆಯ ಮಾಸಿಕ ಅಥವಾ ವಾರ್ಷಿಕ ಚಂದಾದಾರರಾಗದೆ ಜಾಹೀರಾತು-ಬೆಂಬಲಿತ ವಿಷಯವನ್ನು ಉಚಿತವಾಗಿ ವೀಕ್ಷಿಸಬಹುದು.

ಜಿಯೋ ಗ್ರಾಹಕರು ಉಚಿತವಾಗಿ IPL 2025 ವೀಕ್ಷಿಸುವುದು ಹೇಗೆ?

ಈ ಯೋಜನೆಯು 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಜಿಯೋ ಗ್ರಾಹಕರು 5 ಜಿಬಿ ಹೈ-ಸ್ಪೀಡ್ ಇಂಟರ್ನೆಟ್ ಅನ್ನು ಪಡೆಯುತ್ತಾರೆ. ಆದರೆ, ಹೈ-ಸ್ಪೀಡ್ ಡೇಟಾ ಮುಗಿದ ನಂತರ, ಡೇಟಾ ಡೌನ್‌ಲೋಡ್ ವೇಗ 64 ಕೆಬಿಪಿಎಸ್‌ಗೆ ಇಳಿಯುತ್ತದೆ. ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆ ಮೊಬೈಲ್ ಅಥವಾ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಜಿಯೋ ತಿಳಿಸಿದೆ. ಜಿಯೋ ಹಾಟ್‌ಸ್ಟಾರ್‌ನ ಜಾಹೀರಾತು ಬೆಂಬಲಿತ ಯೋಜನೆಯು ಪ್ರಸ್ತುತ ತಿಂಗಳಿಗೆ 149 ರೂ. ಬೆಲೆಯಲ್ಲಿ ಲಭ್ಯವಿದೆ, ಇದರಲ್ಲಿ 720p ರೆಸಲ್ಯೂಶನ್‌ನಲ್ಲಿ ಒಂದು ಮೊಬೈಲ್ ಸಾಧನದಲ್ಲಿ ವಿಷಯ ಸ್ಟ್ರೀಮಿಂಗ್ ನೀಡಲಾಗುತ್ತದೆ. ಉನ್ನತ-ಮಟ್ಟದ ಜಿಯೋಹಾಟ್‌ಸ್ಟಾರ್ ಪ್ರೀಮಿಯಂ ಯೋಜನೆಗೆ ತಿಂಗಳಿಗೆ 299 ರೂ. ಮತ್ತು ವರ್ಷಕ್ಕೆ 1,499 ರೂ. ಪಾವತಿ ಮಾಡಬೇಕಾಗುತ್ತದೆ.

ಜಿಯೋ 299 ರೂ. ರೀಚಾರ್ಜ್ ಯೋಜನೆಯ ಮೂಲಕ ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 1.5GB ಡೇಟಾ, 100 SMS ಮತ್ತು ಜಿಯೋಕ್ಲೌಡ್, ಜಿಯೋಟಿವಿ ಮುಂತಾದ ಬಂಡಲ್ ಮಾಡಿದ ಅಪ್ಲಿಕೇಶನ್‌ಗಳಿಗೆ ಪ್ರವೇಶ ನೀಡಲಾಗುತ್ತದೆ. ಈ ಎಲ್ಲಾ ಪ್ರಯೋಜನಗಳನ್ನು ಪಡೆಯಲು, ಬಳಕೆದಾರರು ಈ ರೀಚಾರ್ಜ್ ಯೋಜನೆ ಅಥವಾ ಹೆಚ್ಚಿನ ಬೆಲೆಯ ಯೋಜನೆಯನ್ನು ಆಯ್ಕೆ ಮಾಡಬಹುದು. ನೀವು ಅನಿಯಮಿತ ಇಂಟರ್‌ನೆಟ್ ಸೇವೆ ಬಯಸಿದರೆ, ದಿನಕ್ಕೆ 2GB ಅಥವಾ ಹೆಚ್ಚು ಡೇಟಾ ನೀಡುವ ಯೋಜನೆಗಳಿಗೆ ರೀಚಾರ್ಜ್ ಮಾಡಬಹುದು. "ಒಂದು ಜಿಯೋ ಸಿಮ್ ಮತ್ತು 299 ರೂ. ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಯೊಂದಿಗೆ, ಗ್ರಾಹಕರು ಹಿಂದೆಂದೂ ಅನುಭವಿಸದ ಅತ್ಯುತ್ತಮ ಕ್ರಿಕೆಟ್ ಋತುವನ್ನು ಅನುಭವಿಸಬಹುದು" ಎಂದು ರಿಲಯನ್ಸ್ ಜಿಯೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Best Mobiles in India

English summary
The IPL 2025 kicks off on March 22, 2025, and thanks to Jio's complimentary Hotstar plans, cricket enthusiasts can watch every match live without any interruptions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+