Home
ಟೆಕ್ ನೌಕರಿ

ಯೂಟ್ಯೂಬ್ ತೆರೆದಾಗ ಕೆಟ್ಟ ವಿಡಿಯೋಗಳು ಕಾಣಿಸುವ ಭಯವೇ?..ಹೀಗೆ ಮಾಡಿ!

ಇಂಟರ್‌ನೆಟ್ ಎಂಬುದು ಬೇಕುಬೇಡವಾದ ವಿಷಯಗಳೆಲ್ಲವನ್ನು ತುಂಬಿಕೊಂಡಿರುವ ಒಂದು ಕುತೂಹಲಗಳ ಆಗರ. ಇದರ ಒಳಗೆಯೇ ಸೇರಿಕೊಂಡಿರುವ ಮತ್ತೊಂದು ವಿಸ್ಮಯ ಪ್ರಪಂಚವೆಂದರೆ ಅದು ಯೂಟ್ಯೂಬ್. ಈ ಯೂಟ್ಯೂಬ್‌ನಲ್ಲಿ ಸಾವಿರಾರು ವಿಷಯಗಳ ಆಧಾರದ ಮೇಲೆ ವಿಡಿಯೋಗಳು ಕಾಣಿಸಕೊಳ್ಳುತ್ತವೆ. ಇವುಗಳ ಜೊತೆಗೆ ನೀವು ಇಷ್ಟಪಡದಂತಹ ಅಥವಾ ಕೆಲವು ಅಸಹ್ಯಕರವಾದ ವಿಡಿಯೋಗಳು ಸಹ ಕಾಣಿಸಕೊಂಡು ಮುಜುಗರ ಉಂಟುಮಾಡುತ್ತವೆ. ಇದು ಕೆಲವೊಮ್ಮೆ ದೊಡ್ಡ ದೊಡ್ಡ ಸಮಸ್ಯೆಗಳಿಗೂ ಸಹ ಕಾರಣವಾಗಬಹುದು.

ಯೂಟ್ಯೂಬ್

ಉದಾಹಣೆಗೆ, ನೀವು ಏನೋ ನೋಡಲು ಯೂಟ್ಯೂಬ್ ಆಪ್‌ ಅನ್ನು ಒಪನ್ ಮಾಡುತ್ತೀರಿ. ಆಗ, ನೀವು ಯಾವತ್ತೂ ಅಂತಹ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಹುಡುಕಿರಲ್ಲ. ಆದರೂ, ನಿಮಗೆ ಅಂತಹ ವಿಡಿಯೋಗಳು ಕಾಣುತ್ತಿರುತ್ತವೆ. ಇದು ಒಂದು ಕಥೆಯಾದರೆ, ಮನೆಯಲ್ಲಿ ಇತರರು ನೋಡಬಾರದಂತಹ ವಿಡಿಯೋಗಳು ಸಹ ಒಮ್ಮೊಮ್ಮೆ ಕಾಣಿಸುತ್ತವೆ. ಇದಕ್ಕೆ ಕಾರಣ ನೀವು ಅಂತಹ ವಿಡಿಯೋಗಳನ್ನು ಹೆಚ್ಚು ನೋಡಿರುತ್ತೀರಾ. ಹಾಗಾಗಿ, ಇಂತಹ ಕೆಲವು ಅಸಹ್ಯಕರವಾದ ವಿಡಿಯೋಗಳು ಸಹ ಕಾಣಿಸಕೊಂಡು ನಿಮಗೆ ಮುಜುಗರ ಉಂಟುಮಾಡಬಹುದು.

 ಸಮಸ್ಯೆಲ್ಲಿ ಸಿಲುಕಿದ್ದರೆ

ನೀವು ಕೂಡ ಇಂತಹ ಸಮಸ್ಯೆಲ್ಲಿ ಸಿಲುಕಿದ್ದರೆ ಅಥವಾ ಅಂತಹ ಭಯವನ್ನು ಹೊಂದಿದ್ದರೆ ಆ ಚಿಂತೆಯನ್ನು ಇನ್ಮುಂದೆ ಬಿಟ್ಟುಬಿಡಿ. ಇದೀಗ ಬಳಕೆದಾರರು ತಮ್ಮ ಯೂಟ್ಯೂಬ್ ಹೋಮ್‌ ಪೇಜ್‌ ಮತ್ತು ವಿಡಿಯೋಸ್ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಬಹುದಾಗಿದೆ. ಇದಕ್ಕೆಂದೇ ಯೂಟ್ಯೂಬ್ ಆಪ್‌ನ ಸೆಟ್ಟಿಂಗ್ಸ್‌ನಲ್ಲಿ ಫೀಚರ್ ಸೇರಿಸಿದ್ದು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಯೂಟ್ಯೂಬ್ ಅನ್ನು ವೈಯಕ್ತಿಕರಿಸಬಹುದಾಗಿದೆ. ಮುಂದೆ ನಾವು ತಿಳಿಸಿದ ಹಂತಗಳನ್ನು ಅನುಸರಿಸಿದರೆ ಸಾಕು ಅಗತ್ಯವಿಲ್ಲದ ಯೂಟ್ಯೂಬ್ ವಿಡಿಯೋ ಶಿಫಾರಸುಗಳನ್ನು ನಿಲ್ಲಿಸಲು ಸಾಧ್ಯವಾಗುತ್ತದೆ.

ಶಿಫಾರಸ್ಸು ವಿಡಿಯೋಗೆ ಸ್ಕ್ರಾಲ್‌ ಮಾಡಿ

ಇದಕ್ಕಾಗಿ ನೀವು ನಿಮ್ಮ 1. ಯೂಟ್ಯೂಬ್ ಆಪ್‌ ತೆರೆಯರಿ. ನಂತರ ನೀವು ವೀಕ್ಷಿಸಲು ಇಚ್ಛೆಪಡದ ಶಿಫಾರಸ್ಸು ವಿಡಿಯೋಗೆ ಸ್ಕ್ರಾಲ್‌ ಮಾಡಿ. 2. ನಂತರ ವಿಡಿಯೋ ಮುಂದೆ ಇರುವ 3 ಡಾಟ್‌ ಮೆನುವನ್ನು ಆಯ್ಕೆ ಮಾಡಿ. 3. ಅಲ್ಲಿ, ಚಾನಲ್‌ ಶಿಫಾರಸು ಮಾಡಬೇಡಿ (Don't recommend channel) ಎಂಬ ಆಯ್ಕೆ ಕ್ಲಿಕ್ ಮಾಡಿ 4. ನಂತರ, ಈ ಚಾನಲ್‌ನಿಂದ ಮತ್ತೆ ಯಾವ ವಿಡಿಯೋಗಳನ್ನು ಶಿಫಾರಸು ಮಾಡಲ್ಲ (We won't recommend videos from this channel to you again) ಎಂಬ ಪಾಪ್‌ಅಪ್‌ ನಿಮಗೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

ಆಸಕ್ತಿಯಿಲ್ಲ ಆಯ್ಕೆ ಕ್ಲಿಕ್ ಮಾಡಿ

ಇಷ್ಟೇ ಅಲ್ಲದೇ, ಅಗತ್ಯವಿಲ್ಲದ ವಿಡಿಯೋ ಶಿಫಾರಸುಗಳನ್ನು ನಿಲ್ಲಿಸಲು ನಿಮಗೆ ಮತ್ತೊಂದು ದಾರಿ ಇದೆ. 1.ಯೂಟ್ಯೂಬ್ ಆಪ್‌ ತೆರೆಯಿರಿ. ನಂತರ, ನೀವು ನೋಡಲು ಇಚ್ಛೆಪಡದ ಶಿಫಾರಸು ವಿಡಿಯೋಗೆ ಸ್ಕ್ರಾಲ್‌ ಮಾಡಿ.2. ನಂತರ, 3 ಡಾಟ್ ಮೆನು ಮುಂದಿರುವ ವಿಡಿಯೋ ಶಿಫಾರಸು ಆಯ್ಕೆಯನ್ನು ಟ್ಯಾಪ್ ಮಾಡಿ.3. ಬಳಿಕ, ಆಸಕ್ತಿಯಿಲ್ಲ ಆಯ್ಕೆ ಕ್ಲಿಕ್ ಮಾಡಿ.4. ವಿಡಿಯೋ ತೆಗೆಯಲಾಗಿದೆ ಎಂಬ ಪಾಪ್‌ಅಪ್‌ ಕಾಣುತ್ತದೆ.ನಂತರ, 'ಏಕೆ ಹೇಳಿ..?' (Tell us why) ಕ್ಲಿಕ್ ಮಾಡಿ. ವಿಡಿಯೋ ನನಗೆ ಇಷ್ಟವಾಗಲಿಲ್ಲ' ಆಯ್ಕೆ ಕ್ಲಿಕ್ ಮಾಡಿ ಸಮಸ್ಯೆಯನ್ನು ತಪ್ಪಿಸಿ.

Best Mobiles in India

English summary
Thankfully, you can disable getting video recommendations from YouTube app, here's how: Step 1: Open the YouTube app and tap on the user silhouette near the top right. Step 2. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+