Home
ಟೆಕ್ ನೌಕರಿ

2nd PUC Results 2025: ನಾಳೆ ದ್ವಿತೀಯ ಪಿಯುಸಿ ಫಲಿತಾಂಶ; ಎಷ್ಟು ಗಂಟೆಗೆ? ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?

ದ್ವಿತೀಯ ಪಿಯು ವಿದ್ಯಾರ್ಥಿಗಳ ಕಾಯುವಿಕೆ ಮುಗಿಯಿತು. ಬಹುನಿರೀಕ್ಷಿತ ದ್ವಿತೀಯ ಪಿಯು ಫಲಿತಾಂಶ (Karnataka 2nd PUC Exam 2025 Result ) ಪ್ರಕಟಕ್ಕೆ ಕ್ಷಣಗಣನೆ ಶುರು. ಹೌದು, ನಾಳೆ 2025ರ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ (2nd PUC Exam Result) ಪ್ರಕಟವಾಗಲಿದೆ. ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳು (PUC Students) ಮತ್ತು ಫೋಷಕರ ಚಿತ್ತ ನಾಳೆ ನಡೆಯುವ ಸುದ್ದಿಗೋಷ್ಠಿಯತ್ತ ನೆಟ್ಟಿದೆ. ನೀವು ಆನ್​​ಲೈನ್​​ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಬನ್ನಿ, ಪಿಯುಸಿ ಫಲಿತಾಂಶ ವೀಕ್ಷಣೆ ಹೇಗೆ? ವೆಬ್ ಸೈಟ್‌ನಲ್ಲಿ ಫಲಿತಾಂಶ ನೋಡಬೇಕು? ಎನ್ನುವುದು ತಿಳಿಯೋಣ.

ಕಳೆದ ಮಾರ್ಚ್ ತಿಂಗಳಲ್ಲಿ ದ್ವಿತೀಯ ಪಿಯುಸಿ-1 ಪರೀಕ್ಷೆ ನಡೆದಿತ್ತು. ಈ ಬಾರಿ ಮಾರ್ಚ್ 1 ರಿಂದ ಮಾರ್ಚ್ 20ರ ವರೆಗೆ ಪರೀಕ್ಷೆ ನಡೆದಿತ್ತು. ರಾಜ್ಯದ 7.13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದೀಗ ನಾಳೆ (ಏಪ್ರಿಲ್‌ 8 ರಂದು) ಈ ಪರೀಕ್ಷೆಯ ಫಲಿತಾಂಶ (2nd PUC Exam Result) ಪ್ರಕಟವಾಗಲಿದೆ. ನಾಳೆ ಮಧ್ಯಾಹ್ನ 12.30ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿಲಿದ್ದು, ಇದೇ ಸಮಯದಲ್ಲಿ ಫಲಿತಾಂಶ ಪ್ರಕಟ ಮಾಡಲಿದ್ದಾರೆ. ಪತ್ರಿಕಾಗೋಷ್ಠಿ ನಂತರ ಮಧ್ಯಾಹ್ನ 1.30ಕ್ಕೆ ಇಲಾಖೆ ವೆಬ್ ಸೈಟ್‌ನಲ್ಲಿ ಅಧಿಕೃತವಾಗಿ ರಿಸಲ್ಟ್ ಲಭ್ಯವಾಗಲಿದೆ.

PUC Results 2025: ನಾಳೆ ಪಿಯುಸಿ ಫಲಿತಾಂಶ; ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?

ವೆಬ್ ಸೈಟ್‌ನಲ್ಲಿ ಫಲಿತಾಂಶ ನೋಡಬೇಕು?

ಸಚಿವ ಮಧುಬಂಗಾರಪ್ಪ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಒಟ್ಟಾರೆ ಫಲಿತಾಂಶ ಪ್ರಕಟಿಸಲಿದ್ದಾರೆ. ಆ ಬಳಿಕ ಅಂದರೆ 1.30ಕ್ಕೆ ಆನ್​ಲೈನ್ ಮೂಲಕವೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಜೊತೆಗೆ ಅಂಕಪಟ್ಟಿ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ. ಇನ್ನು ವೀಕ್ಷಣೆ ಮಾಡುವುದು ಹೇಗೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಫಲಿತಾಂಶ ಲಭ್ಯವಾಗೋ ವೆಬ್ ಸೈಟ್‌ಗಳು ಹೀಗಿವೆ. ರಾಜ್ಯ ಸರ್ಕಾರದ karresults.nic.in ಮತ್ತು kseab.karnataka.gov.in ಈ ಎರಡು ಅಧಿಕೃತ ವೆಬ್ ​ಸೈಟ್​ಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಲಭ್ಯವಿರಲಿದೆ.

ದ್ವಿತೀಯ ಪಿಯುಸಿ ಫಲಿತಾಂಶ ನೋಡುವುದು ಹೇಗೆ?

* ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.

* ಮೈನ್‌ ಪೇಜ್‌ನಲ್ಲಿ 2nd PUC Result 2025 ಎಂಬಲ್ಲಿ ಕ್ಲಿಕ್ ಮಾಡಬೇಕು.

* ಆಗ ಒಂದು ಲಿಂಕ್ ಓಪನ್ ಆಗುತ್ತದೆ.

* ಬಳಿಕ ಲಾಗಿನ್ ವಿವರಗಳನ್ನು ನಮೂದಿಸಿ - ನೋಂದಣಿ ಸಂಖ್ಯೆ (ರಿಜಿಸ್ಟ್ರೇಷನ್ ನಂಬರ್), ಜನ್ಮ ದಿನಾಂಕ ಮತ್ತು ಕ್ಯಾಪ್ಯಾ ಕೋಡ್ (ಪಾಸ್‌ವರ್ಡ್)

* ನಂತರ Second PU Results 2025 ಎಂಬುದು ಸ್ಕ್ರೀನ್​ನಲ್ಲಿ ಕಾಣಿಸುತ್ತದೆ.

* ಆಗ ಸಬ್ಸಿಟ್ ಕೊಟ್ಟು ಫಲಿತಾಂಶ ಪರಿಶೀಲಿಸಿ.

* ಈ ಪುಟದಲ್ಲಿ ನಿಮ್ಮ ಫಲಿತಾಂಶ ಕಾಣುತ್ತದೆ. ಈ ಪುಟವನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ. ಅಂಕಪಟ್ಟಿ ತಡವಾಗಿ ಸಿಗುವುದರಿಂದ ಇದನ್ನು ಪ್ರಿಂಟ್ ಮಾಡಿಟ್ಟುಕೊಳ್ಳಿ. ಇದು ನಿಮಗೆ ಭವಿಷ್ಯದಲ್ಲಿ ಬೇಕಾಗಬಹುದು.

* ಕರ್ನಾಟಕ ದ್ವಿತೀಯ ಪಿಯುಸಿ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ (ವಿದ್ಯಾರ್ಥಿ) ಹೆಸರು, ರೋಲ್ ನಂಬ‌ರ್, ಒಟ್ಟು ಅಂಕಗಳು, ವಿಷಯವಾರು ಅಂಕಗಳು ಹಾಗೂ ಫಲಿತಾಂಶ ಇರುತ್ತದೆ.

ಮಾ.1ರಿಂದ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ

ರಾಜ್ಯದಲ್ಲಿ ಮಾ.1ರಿಂದ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಒಟ್ಟು 1171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 6,61,474 ಹೊಸ ವಿದ್ಯಾರ್ಥಿಗಳು, 34,071 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 18,317 ಖಾಸಗಿ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.

Best Mobiles in India

English summary
Karnataka 2nd PUC Exam 2025 Result to be announced Tomorrow: how to check results online
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+