SSLC Result 2025: ನಾಳೆ SSLC ಪರೀಕ್ಷೆ ಫಲಿತಾಂಶ; ಎಷ್ಟು ಗಂಟೆಗೆ? ರಿಸಲ್ಟ್ ನೋಡುವುದು ಹೇಗೆ? ಇಲ್ಲಿದೆ ವಿವರ
Karnataka SSLC Results 2025: ಈ ಸುದ್ದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ! ಬಹುನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಫಲಿತಾಂಶ 2025 (Karnataka SSLC Results 2025) ಘೋಷಣೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. 2025ರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ (SSLC Exam Result) ಪ್ರಕಟವಾಗಲಿದೆ. ಹೌದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಾಳೆಯೇ (ಮೇ 2 ರಂದು) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಿದೆ. ಬನ್ನಿ, ಎಸ್ಸೆಸ್ಸೆಲ್ಸಿ ಫಲಿತಾಂಶ ವೀಕ್ಷಣೆ ಹೇಗೆ? ಯಾವ ವೆಬ್ ಸೈಟ್‌ನಲ್ಲಿ ಫಲಿತಾಂಶ ನೋಡಬೇಕು? ಎನ್ನುವುದು ವಿವರವಾಗಿ ತಿಳಿಯೋಣ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯನ್ನು ನಡೆಸಿತ್ತು. ಈ ಪರೀಕ್ಷೆಯ ಫಲಿತಾಂಶವನ್ನು ಮೇ 2ರಂದು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆ ಫಲಿತಾಂಶ ಪ್ರಕಟಿಸಲಿದ್ದಾರೆ. ಬಳಿಕ ಫಲಿತಾಂಶವನ್ನು ಇಲಾಖೆಯ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುತ್ತದೆ. ಪ್ರಸ್ತುತ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ ರಾಜ್ಯದ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಆನ್ಲೈನ್ಲ್ಲಿ ಫಲಿತಾಂಶವನ್ನು ಹೇಗೆ ನೋಡಬೇಕು ಎನ್ನುವುದನ್ನು ತಿಳಿಯಲು ಮುಂದೆ ಓದಿ.

8 ಲಕ್ಷದ 96 ಸಾವಿರ ವಿದ್ಯಾರ್ಥಿಗಳು
ಕಳೆದ ತಿಂಗಳು ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಗಳು ನಡೆದಿದ್ದವು. ಈಗಾಗಲೇ ಮೌಲ್ಯಮಾಪನ ಕಾರ್ಯ ಮುಕ್ತಾಯವಾಗಿದೆ. ಕೆಲ ಸಣಪುಟ್ಟ ಕಾರ್ಯಗಳಿದ್ದು, ಅದು ಕೂಡಲೇ ಮುಕ್ತಾಯವಾಗಿದೆ. ನಾಳೆಯೇ (ಮೇ 2 ರಂ)ದು ಫಲಿತಾಂಶ ಪ್ರಕಟವಾಗಲಿದೆ. ಸಾಧ್ಯತೆಯಿದೆ. ರಾಜ್ಯದ 2,818 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಗೆ 8 ಲಕ್ಷದ 96 ಸಾವಿರ ವಿದ್ಯಾರ್ಥಿಗಳು ನೊಂದಯಿಸಿಕೊಂಡಿದ್ದರು. ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಜೊತೆಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?
ಹಂತ 1: ಮೊದಲು ಇಲಾಖೆಯ ಅಧಿಕೃತ ವೆಬ್ಸೈಟ್ಗಳಾದ https://karresults.nic.in/ ಮತ್ತು kseab.karnataka.gov.in ಭೇಟಿ ನೀಡಿ.
ಹಂತ 2: ಮುಖಪುಟದಲ್ಲಿರುವ SSLC ಫಲಿತಾಂಶ 2025 (SSLC Results 2025) ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: SSLC ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಇದಾದ ಬಳಿಕ ವಿಷಯವಾರು ಅಂಕಗಳೊಂದಿಗೆ ಫಲಿತಾಂಶ ಗೋಚರಿಸುತ್ತದೆ.
ಹಂತ 5: ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆಫ್ ಲೈನ್‌ನಲ್ಲಿಯೂ ಫಲಿತಾಂಶ ಲಭ್ಯ
ಆಫ್ ಲೈನ್‌ನಲ್ಲಿ ಫಲಿತಾಂಶವನ್ನು ನೋಡಲು ಬಯಸುವವರು ತಮ್ಮ ನೋಂದಣಿ ಸಂಖ್ಯೆಯೊಂದಿಗೆ 56263 ಸಂಖ್ಯೆಗೆ ಸಂದೇಶ (ಎಸ್ಎಂಎಸ್) ಕಳುಹಿಸಬಹುದು. ಈ ಮೂಲಕ ಫಲಿತಾಂಶವನ್ನು ಪಡೆಯಬಹುದಾಗಿದೆ.
ಐಸಿಎಸ್ಇ 10ನೇ, ಐಎಸ್ಸಿ 12ನೇ ತರಗತಿ ಫಲಿತಾಂಶ ಪ್ರಕಟ
ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ ಇತ್ತೀಚೆಗೆ ಐಸಿಎಸ್ಇ 10ನೇ ಮತ್ತು ಐಎಸ್ಸಿ 12ನೇ ತರಗತಿಯ ಪರೀಕ್ಷಾ ಫಲಿತಾಂಶಗಳನ್ನು (CISCE Results 2025) ಪ್ರಕಟಿಸಿದೆ. ವಿದ್ಯಾರ್ಥಿಗಳು cisce.org ಮತ್ತು results.cisce.org ವೆಬ್‌ಸೈಟ್‌ಗಳಲ್ಲಿ ತಮ್ಮ ಫಲಿತಾಂಶವನ್ನು ನೋಡಬಹುದು. ಆನ್ಲೈನ್ಲ್ಲಿ ಫಲಿತಾಂಶ ನೋಡುವುದು ಹೇಗೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಫಲಿತಾಂಶ ನೋಡಲು ಹೀಗೆ ಮಾಡಿ!
* ಮೊದಲು ಅಧಿಕೃತ ವೆಬ್ಸೈಟ್ಗಳಾದ cisce.org ಅಥವಾ results.cisce.orgಗೆ ಭೇಟಿ ನೀಡಿ.
* ಐಸಿಎಸ್ಇ 10ನೇ ಫಲಿತಾಂಶ 2025 ಅಥವಾ ಐಎಸ್ಸಿ 12ನೇ ಫಲಿತಾಂಶ 2025 ಮೇಲೆ ಕ್ಲಿಕ್ ಮಾಡಿ.
* ಶಾಲೆ ವತಿಯಿಂದ ನೀಡಿರುವ ವಿಶಿಷ್ಟ ಐ.ಡಿ, ನೋಂದಣಿ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿ.
ಇದಾದ ಬಳಿಕ ನಿಮ್ಮ ಫಲಿತಾಂಶ ಕಾಣಿಸುತ್ತದೆ.
* ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.


Click it and Unblock the Notifications








