3000ರೂ.ಬೆಲೆಯ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಉಚಿತವಾಗಿ ಲಭ್ಯ!!..ಹೇಗೆ ಗೊತ್ತಾ?

Written By:

ಜಗತ್ತಿನ ಪ್ರಮುಖ ಆಂಟಿವೈರಸ್ ಉತ್ಪಾದಕ ಸಂಸ್ಥೆ ಕ್ಯಾಸ್ಪರ್ಸ್ಕಿ ಲ್ಯಾಬ್ ತನ್ನ 20 ನೇ ವರ್ಷದ ವಾರ್ಷಿಕೋತ್ಸವಕ್ಕೆ ಜಗತ್ತಿದೆ ಭಾರಿ ಸಿಹಿಸುದ್ದಿ ನೀಡಿದೆ.! ಹೌದು, ಸಾವಿರಾರು ರೂಪಾಯಿ ಹಣನೀಡಿ ಖರೀದಿಸಬೇಕಿದ್ದ ಅತ್ಯುತ್ತಮ ಗುಣಮಟ್ಟದ ಆಂಟಿವೈರಸ್ ಅನ್ನು ಕ್ಯಾಸ್ಪರ್ಸ್ಕಿ ಉಚಿತವಾಗಿ ನಿಡಲು ಮುಂದಾಗಿದೆ.!!

ಇದೇ ತಿಂಗಳ 25 ನೇ ತಾರೀಖು ಕ್ಯಾಸ್ಪರ್ಸ್ಕಿ ಲ್ಯಾಬ್‌ ಕಂಪೆನಿಗೆ 20 ವರ್ಷ ತುಂಬಿದ್ದು, ಇದೇ ಮೊದಲ ಭಾರಿಗೆ ಕ್ಯಾಸ್ಪರ್ಸ್ಕಿ ಉಚಿತ ಸೇವೆಯನ್ನು ನೀಡಲು ಮುಂದಾಗಿದೆ.!! 50 ಡಾಲರ್‌(ಅಂದಾಜು 3000ರೂ) ಗಿಂತಲೂ ಹೆಚ್ಚು ಬೆಲೆಯಲ್ಲಿ ಖರೀದಿಸಬೇಕಿದ್ದ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಅನ್ನು ಉಚಿತವಾಗಿ ಬಿಡುಗಡೆ ಮಾಡಿದೆ.!!

ಕ್ಯಾಸ್ಪರ್ಸ್ಕಿ ಉಚಿತ ಆಂಟಿವೈರಸ್ ಕ್ಯಾಸ್ಪರ್ಸ್ಕಿಯ ಪೇಡ್ ಆಂಟಿವೈರಸ್‌ಗಿಂತಲೂ ಸ್ವಲ್ಪ ಭಿನ್ನವಾಗಿದ್ದು, ಹಾಗಾದರೆ, ಯಾವಾಗಿನಿಂದ ಆಂಟಿವೈರಸ್ ಉಚಿತವಾಗಿ ಲಭ್ಯವಿದೆ? ಕ್ಯಾಸ್ಪರ್ಸ್ಕಿಯ ಉಚಿತ ಆಂಟಿವೈರಸ್ ಪಡೆಯವುದು ಹೇಗೆ? ಎಂದು ಕೆಳಗಿನ ಸ್ಲೈಡರ್ಸ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಪ್ಟೆಂಬರ್‌ನಿಂದ ಭಾರತದಲ್ಲಿ ಉಚಿತ ಆಂಟಿವೈರಸ್ ಲಭ್ಯ!!

ಸೆಪ್ಟೆಂಬರ್‌ನಿಂದ ಭಾರತದಲ್ಲಿ ಉಚಿತ ಆಂಟಿವೈರಸ್ ಲಭ್ಯ!!

ಕ್ಯಾಸ್ಪರ್ಸ್ಕಿಯ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಆಂಟಿವೈರಸ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಲು ಭಾರತೀಯರು ಸೆಪ್ಟೆಂಬರ್‌ ತಿಂಗಳಿನವರೆಗೂ ಕಾಯಬೇಕಿದೆ.! ಈಗಾಗಲೇ ಉಚಿತ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಹಲವು ದೇಶಗಳಲ್ಲಿ ಲಭ್ಯವಿದ್ದು, ಭಾರತಕ್ಕೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಈ ಸೇವೆ ನೀಡುವುದಾಗಿ ಕ್ಯಾಸ್ಪರ್ಸ್ಕಿ ಪ್ರಕಟಿಸಿದೆ.!!

ಉಚಿತ ಆಂಟಿವೈರಸ್ ಲಾಭವೇನು?

ಉಚಿತ ಆಂಟಿವೈರಸ್ ಲಾಭವೇನು?

ಪ್ರಪಂಚದಲ್ಲಿ ಬಹುತೇಕರು ಆಂಟಿವೈರಸ್‌ ಬಳಕೆ ಮಾಡದಿರಲು ಕಾರಣವೇ ಆಂಟಿವೈರಸ್‌ಗಳ ಬೆಲೆ ಹೆಚ್ಚು ಎಂಬುದು.! ಹಾಗಾಗಿ, ಕ್ಯಾಸ್ಪರ್ಸ್ಕಿ ಲ್ಯಾಬ್ ಉಚಿತವಾಗಿ ಆಮಟಿವೈರಸ್ ಬಿಡುಗಡೆ ಮಾಡುತ್ತಿದೆ.! ಈ ಆಂಟಿವೈರಸ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿ ನಿಮ್ಮ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಅನ್ನು ಹೆಚ್ಚು ಸುರಕ್ಷತೆ ಮಾಡಿಕೊಳ್ಳಬಹುದು.!!

ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಕ್ಯಾಸ್ಪರ್ಸ್ಕಿ ಉಚಿತ ಆಂಟಿವೈರಸ್!!

ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಕ್ಯಾಸ್ಪರ್ಸ್ಕಿ ಉಚಿತ ಆಂಟಿವೈರಸ್!!

ಇಡೀ ಪ್ರಪಂಚದಲ್ಲಿಯೇ ಹೆಚ್ಚು ಹೆಸರಾಗಿರುವ ಕ್ಯಾಸ್ಪರ್ಸ್ಕಿ ಉಚಿತ ಆಂಟಿವೈರಸ್ ಬಿಡುಗಡೆಯಾದ ತಕ್ಷಣವೇ ಈ ಸುದ್ದಿ ವೈರಲ್ ಆಗಿದ್ದು, ಇದೇ ಮೊದಲ ಭಾರಿಗೆ ಅತ್ಯುತ್ತಮ ಕಂಪೆನಿಯೊಂದು ಉಚಿತ ಸೇವೆ ಪ್ರಕಟಿಸಿದೆ.!ಹಾಗಾಗಿ, ಕ್ಯಾಸ್ಪರ್ಸ್ಕಿಯ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಆಂಟಿವೈರಸ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.!!

ಉಚಿತ ಆಂಟಿವೈರಸ್ ಮಿತಿಯನ್ನು ಹೊಂದಿದೆ.!!

ಉಚಿತ ಆಂಟಿವೈರಸ್ ಮಿತಿಯನ್ನು ಹೊಂದಿದೆ.!!

ಕ್ಯಾಸ್ಪರ್ಸ್ಕಿ ಲ್ಯಾಬ್ ನೀಡುತ್ತಿರುವ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಮಿತಿಯನ್ನು ಹೊಂದಿದ್ದು, ಪೇಡ್ ಮತ್ತು ಉಚಿತ ಆಂಟಿವೈರಸ್‌ಗಳು ಸೇವೆಯಲ್ಲಿ ಭಿನ್ನವಾಗಿವೆ.!! ವೆಬ್ ಟ್ರಾಫಿಕ್ ಮತ್ತು ಇಮೇಲ್, ಫಿಲ್ಟರಿಂಗ್ ಫೈರ್ವಾಲ್ ಮತ್ತು ಮೇಲ್ವಿಚಾರಣೆ ಚಟುವಟಿಕೆಗಳನ್ನು ಉಚಿತ ಆಂಟಿವೈರಸ್ ನಿರ್ವಹಣೆ ಮಾಡುವುದಿಲ್ಲ!!

ಓದಿರಿ:ಇನ್ಮುಂದೆ ಮೊಬೈಲ್, ಕಂಪ್ಯೂಟರ್‌ಗೆ ಆಂಟಿವೈಸರ್ ಅವಶ್ಯಕತೆಯೇ ಇಲ್ಲ!!..ಏಕೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
the free antivirus software from Kaspersky Lab is now available worldwide. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot