ಬ್ರೌಸಿಂಗ್ ಕೆಲಸವನ್ನು ಸುಲಭ ಮಾಡುವ ಶಾರ್ಟ್‌ಕಟ್ ಕೀಗಳು!!
ನಿಮಿಷಗಳಲ್ಲಾಗುವ ಕೆಲಸ ಕೆಲವೇ ಸೆಕೆಂಡ್‍ಗಳಲ್ಲೇ ಆಗಬೇಕು ಅನ್ನೋ ಡಿಜಿಟಲ್ ಕಾಲ ಇದು. ಹಾಗಾಗಿ, ಈ ಬ್ಯೂಸಿ ಲೈಫ್‍ನಲ್ಲಿ ಶಾರ್ಟ್‌ಕಟ್ ಬಳಕೆಯನ್ನು ಎಲ್ಲರೂ ಕಲಿಯಲೇಬೇಕು. ಅದರಲ್ಲಿಯೂ ಈ ಇಂಟರ್ನೆಟ್ ಯುಗದಲ್ಲಿ ಬ್ರೌಸಿಂಗ್ ಮಾಡುವ ವಿಚಾರದಲ್ಲಿ ಶಾರ್ಟ್‌ಕಟ್‌ಗಳ ಬಗ್ಗೆ ಕಲಿಯದಿದ್ದರೆ ಮೌಸ್ ಅನ್ನು ಎಳೆದಾಡುವುದರಲ್ಲೇ ಟೈಮ್ ವೆಸ್ಟ್ ಆಗುತ್ತದೆ.
ಯಾವುದೇ ಒಂದು ವೈಬ್‍ಸೈಟ್ ಓಪನ್ ಮಾಡುವಾಗ ಮೌಸ್ ಅನ್ನು ಅತ್ತಿತ್ತ ಎಳೆದಾಡುವುದರಲ್ಲೇ ಟೈಮ್ ವೆಸ್ಟ್ ಆಗುತ್ತಿದೆ ಎನ್ನುವ ಮಾತನ್ನು ಕೇಳಿಸಿಕೊಂಡರೆ ನಿಮಗೆ ಆಶ್ಚರ್ಯವಾಗದೇ ಇರದು. ಏಕೆಂದರೆ, ಕಡಿಮೆ ಟೈಮಲ್ಲಿ ಫಟಾಫಟ್ ಕೆಲ್ಸ ಆಗಬೇಕು ಅಂದ್ರೆ ಈ ಕೆಳಕಂಡ ಗೂಗಲ್ ಕ್ರೋಮ್ ಶಾರ್ಟ್‌ಕಟ್ ಕೀಗಳು ನಿಮ್ಮ ಬಹುಪಾಲು ಸಮಯವನ್ನು ಉಳಿಸುತ್ತವೆ.

ವೆಬ್ ಶಾರ್ಟ್‌ಕಟ್ ಕೀಗಳನ್ನು ನಿಮ್ಮ ಡೆಸ್ಕ್‌ಟಾಪ್‌ನಲ್ಲಿಯೂ ಕ್ರಿಯೆಟ್ ಮಾಡಬಹುದು. ನಿಮಗೆ ಬೇಕಾದಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳನ್ನು ಡೆಸ್ಕ್‌ಟಾಪ್‌ನಲ್ಲಿಯೂ ಇರಿಸಬಹುದು. ಇಂತಹ ಗೂಗಲ್ ಕ್ರೋಮ್ ಶಾರ್ಟ್‌ಕಟ್ ಕೀಗಳ ಬಗ್ಗೆ ತಿಳಿಯುವ ಕುತೋಹಲ ನಿಮಗೂ ಇದ್ದರೆ, ಇಂದಿನ ಲೇಖನದಲ್ಲಿ ಕ್ರೋಮ್ ಶಾರ್ಟ್‌ಕಟ್ ಕೀಗಳ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

1 ಸ್ಲೈಡ್ ಶೋ
ಯಾವುದಾದರೂ ಲೇಖನವನ್ನು ವಿವಿಧ ಪುಟಗಳಂತೆ ಅಥವಾ ಸ್ಲೈಡ್‌ಶೋನಂತೆ ಓದಲು ಪ್ರಿಂಟ್ ಅಥವಾ ಕಂಟ್ರೋಲ್ ಪಿ ಪ್ರೇಸ್ ಮಾಡಿರಿ.

2 ಬ್ಲಾಕ್ ಆಗಿರುವ ವೆಬ್‌ಪುಟ
ಯಾವುದಾದರೂ ಬ್ಲಾಕ್ ಆಗಿರುವ ವೆಬ್‌ಪುಟವನ್ನು ತೆರೆಯಲು ಗೂಗಲ್ ಟ್ರಾನ್ಸ್‌ಲೇಟ್‌ಗೆ ಹೋಗಿ ಯುಆರ್‌ಎಲ್ ಪೇಸ್ಟ್ ಮಾಡಿ. ಅಲ್ಲಿ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಂಡು ಟ್ರಾನ್ಸ್‌ಲೆಟ್ ಕೊಡಿ. ಬ್ಲಾಕ್ ಆಗಿರುವ ವೆಬ್‌ನಲ್ಲಿರುವ ಮಾಹಿತಿಗಳು ಕಾಣಿಸಿಕೊಳ್ಳುತ್ತವೆ.

3 ಟಾಸ್ಕ್ ಮ್ಯಾನೇಜರ್
ಕ್ರೋಮ್ ಬ್ರೌಸರ್‌ನಲ್ಲಿ ಬಿಲ್ಟ್ ಇನ್ ಟಾಸ್ಕ್ ಮ್ಯಾನೇಜರ್ ತೆರೆಯಲು Shift + Esc ಕ್ಲಿಕ್ ಮಾಡಿ.

4 ಸಜೆಷನ್ ರಿಮೂವ್
ಕ್ರೋಮ್‌ನಲ್ಲಿ ಸಜೆಷನ್ ಆಗಾಗ ತೆರೆದುಕೊಳ್ಳುತ್ತದೆ. ಇದರಲ್ಲಿ ಕೆಲವು ಸಜೆಷನ್‌ಗಳನ್ನು ರಿಮೂವ್ ಮಾಡಲು ಶಿಫ್ಟ್ ಮತ್ತು ಡಿಲಿಟ್ ಪ್ರೆಸ್ ಮಾಡಿ.

5 ಹೊಸ ವಿಂಡೋಕ್ಕೆ ಹಲವು ಟ್ಯಾಬ್‌ಗಳು
ಕ್ರೋಮ್ ಬ್ರೌಸರ್‌ನಲ್ಲಿ ಹೊಸ ವಿಂಡೋಕ್ಕೆ ಹಲವು ಟ್ಯಾಬ್‌ಗಳನ್ನು ದೂಡಲು ಕಂಟ್ರೋಲ್ ಹಿಡಿದುಕೊಂಡು ಟ್ಯಾಬ್‌ನಲ್ಲಿ ಕ್ಲಿಕ್ ಮಾಡಿ. ಈ ರೀತಿ ಹಲವು ಟ್ಯಾಬ್‌ಗಳಲ್ಲಿ ಕ್ಲಿಕ್ ಮಾಡಿದರೆ ಹೊಸ ವಿಂಡೊಕ್ಕೆ ಟ್ಯಾಬ್‌ಗಳನ್ನು ಡ್ರ್ಯಾಗ್ ಮಾಡಬಹುದು.

6 ಅಡ್ರೆಸ್ ಬಾರ್ ಪ್ರವೇಶ
ಯಾವುದೇ ಬ್ರೌಸರ್‌ನಲ್ಲಿ ನೇರವಾಗಿ ಅಡ್ರೆಸ್ ಬಾರ್‌ಗೆ ಪ್ರವೇಶಿಸಲು ಎಫ್6 ಅಥವಾ ಕಂಟ್ರೋಲ್ ಮತ್ತು ಎಲ್ ಕ್ಲಿಕ್ ಮಾಡಬಹುದು.

7 ಟ್ಯಾಬ್ ಕ್ಲೋಸ್
ಟ್ಯಾಬೊಂದನ್ನು ಕ್ಲೋಸ್ ಮಾಡಲು ಟ್ಯಾಬ್‌ನ ಮಧ್ಯಭಾಗವನ್ನು ಕ್ಲಿಕ್ ಮಾಡಿರಿ.

8 ಡಿಫಾಲ್ಟ್ ಗಾತ್ರ
ವೆಬ್‌ಪುಟವನ್ನು ಕಂಪ್ಯೂಟರ್‌ನ ಡಿಫಾಲ್ಟ್ ಗಾತ್ರಕ್ಕೆ ಹಿಗ್ಗಿಸಲು Ctrl + 0 ಕ್ಲಿಕ್ ಮಾಡಿ.


Click it and Unblock the Notifications








