ಅವಧಿಗೂ ಮುನ್ನವೇ ಆಧಾರ್ ಪ್ಯಾನ್ ಲಿಂಕ್ ಮಾಡುವುದು ಹೇಗೆ..?
ಭಾರತ ಸರಕಾರವು ತನ್ನ ದೇಶದ ನಾಗರೀಕರಿಗೆ ಆಧಾರ್ ಕಾರ್ಡ್ ಮಾಡಿಸುವುದನ್ನು ಕಡ್ಡಾಯ ಮಾಡಿದೆ. ಇದಲ್ಲದೇ ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ನಕಲಿ ಪ್ಯಾನ್ ಕಾರ್ಡ್ ಗಳನ್ನು ನಿರ್ಮೂಲನೆ ಮಾಡುವ ಸಲುವಾಗಿ ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿದೆ. ಇದಲ್ಲದೇ ಇದೇ ಜೂನ್ 30 ಅನ್ನು ಆಧಾರ್ –ಪ್ಯಾನ್ ಲಿಂಕ್ ಮಾಡಿಸಲು ಕೊನೆಯ ದಿನಾಂಕ ಎಂದು ಘೋಷಣೆ ಮಾಡಿದೆ.

ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲಿಲ್ಲವಾದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಲಿದೆ. ಇದಕ್ಕಾಗಿ ನೀವು ಮತ್ತೆ ಹೊದಾಗಿ ಅರ್ಜಿ ಸಲ್ಲಿಸಿ ಪ್ಯಾನ್ ಕಾರ್ಡ್ ಅನ್ನು ಪಡೆದುಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಕೊನೆಯ ದಿನಾಂಕಕ್ಕೂ ಮುನ್ನವೇ ನಿಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಆನ್ಲೈನ್
ಆನ್ ಲೈನಿನಲ್ಲಿಯೂ ಲಿಂಕ್ ಮಾಡಬಹುದಾಗಿದೆ. ಅಲ್ಲದೇ SMS ಮೂಲಕವು ಸಹ ನೀವು ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಬಹುದಾಗಿದೆ. ಇದಕ್ಕಾಗಿ ಇನ್ ಕಮ್ ಟ್ಯಾಕ್ ವೆಬ್ ಸೈಟಿನಲ್ಲಿ ಅವಕಾಶವನ್ನು ಮಾಡಿಕೊಟ್ಟಿದೆ. ಇದಲ್ಲದೇ ಆಧಾರ್ ಕಾರ್ಡ್ ಮಾಡಿಸದೆ ಇರುವವರು ಶೀಘ್ರವೇ ಆಧಾರ್ ಮಾಡಿಸಿಕೊಳ್ಳ ಬೇಕಾಗಿದೆ.


SMS ಮೂಲಕ ಮಾಡುವುದು ಹೇಗೆ?
ನಿಮ್ಮ ಮೊಬೈಲ್ ನಲ್ಲಿ SMS ಕಳುಹಿಸುವ ಮೂಲಕವೂ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಮಾಡಬಹುದಾಗಿದೆ. ಇದಕ್ಕಾಗಿ UIDPAN<12 ಅಂಕಿಗಳ ಆಧಾರ್ ಸಂಖ್ಯೆ ><10 ಅಂಕಿಗಳ ಪ್ಯಾನ್ ಸಂಖ್ಯೆ> ಯನ್ನು ಟೈಪ್ ಮಾಡಿ 567678 ಅಥವಾ 56161.ಕ್ಕೆ ಕಳುಹಿಸಿರಿ.

ಇನ್ ಕಮ್ ಟ್ಯಾಕ್ಸ್ ವೆಬ್ ಸೈಟ್:
• ಇದಲ್ಲದೇ www.incometaxindiaefiling.gov.in ನಲ್ಲಿಯೂ ನೀವು ಆಧಾರ್- ಪ್ಯಾನ್ ಲಿಂಕ್ ಮಾಡಬಹುದಾಗಿದೆ.
• ಅಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆ,
• ನಿಮ್ಮ ಹೆಸರು ಮತ್ತು ಕೋಡ್ ಗಳನ್ನು ಎಂಟರ್ ಮಾಡುವ ಮೂಲಕ ಲಿಂಕ್ ಮಾಡಬಹುದಾಗಿದೆ.


Click it and Unblock the Notifications








