Subscribe to Gizbot

ಸಿಮ್ ನಿಮ್ಮ ಹೆಸರಿನಲ್ಲಿ ಇಲ್ಲದಿದ್ದರೆ ಆಧಾರ್ ಲಿಂಕ್ ಸಾಧ್ಯನಾ?.ಇಲ್ಲಿದೆ ಎಲ್ಲಾ ಮಾಹಿತಿ!!

Written By:

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಫೆಬ್ರವರಿ 6, 2018ರ ಒಳಗೆ ಪ್ರತಿ ಸಿಮ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಬೇಕಿದೆ.! ಅದಕ್ಕಾಗಿ ಟೆಲಿಕಾಂ ಕಂಪೆನಿಗಳು ಪ್ರತಿದಿವಸವೂ ನಿಮಗೆ ಈ ಬಗ್ಗೆ ಮೆಸೇಜ್ ಮತ್ತು ಕಾಲ್‌ಗಳ ಮೂಲಕ ಮಾಹಿತಿ ನೀಡುತ್ತಿದ್ದು, ಸಿಮ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡಲೇಬೇಕಿದೆ.!!

ಜೊತೆಗೆ ಕೇಂದ್ರ ಸರ್ಕಾರ ತಂದಿರುವ ನಿಬಂಧನೆಗಳು ಸಹ ದಿನದಿನಕ್ಕೂ ಹೆಚ್ಚು ಕಷ್ಟಕರವಾಗಿ ಪರಿಣಮಿಸುತ್ತಿದ್ದು, ಎಷ್ಟೋ ಜನರು ಬಳಸುತ್ತಿರುವ ಸಿಮ್ ಅವರ ಹೆಸರಿನಲ್ಲಿಯೇ ಇಲ್ಲ.!! ಹಾಗಾಗಿ, ಇಂದಿನ ಲೇಖನದಲ್ಲಿ ಸಿಮ್ ನಿಮ್ಮ ಹೆಸರಿನಲ್ಲಿ ಇಲ್ಲದಿದ್ದರೆ ಏನು ಮಾಡಬೇಕು? ಅದೇ ನಂಬರ್ ಪಡೆಯಲು ಸಾಧ್ಯವೇ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿಮ್ ಕಾರ್ಡ್-ಆಧಾರ್ ಲಿಂಕ್ ಹೇಗೆ?

ಸಿಮ್ ಕಾರ್ಡ್-ಆಧಾರ್ ಲಿಂಕ್ ಹೇಗೆ?

ಸಿಮ್ ಕಾರ್ಡ್-ಆಧಾರ್ ಲಿಂಕ್ ಮಾಡಲು ನೀವು ಬಳಕೆ ಮಾಡುತ್ತಿರುವ ಟೆಲಿಕಾಂ ಕಸ್ಟಮರ್ ಸರ್ವಿಸ್‌ಗೆ ಭೇಟಿ ನೀಡಿ. ನಂತರ ನಿಮ್ಮ ಆಧಾರ್ ನಂಬರ್‌ ಅನ್ನು ಅವರಿಗೆ ಹೇಳಿದರೆ ಅವರು ಅದನ್ನು ಎಂಟರ್ ಮಾಡುತ್ತಾರೆ. ನಂತರ ನಿಮಗೊಂದು ಒಟಿಪಿ ಸಂಖ್ಯೆ ಬರುತ್ತದೆ. ಆ ಸಂಖ್ಯೆಯನ್ನು ಅವರಿಗೆ ನೀಡಿದರೆ ಸಿಮ್ ಕಾರ್ಡ್-ಆಧಾರ್ ಲಿಂಕ್ ಆಗುತ್ತದೆ.!!

ಸಿಮ್ ನಿಮ್ಮ ಹೆಸರಿನಲ್ಲಿ ಇಲ್ಲದಿದ್ದರೆ?

ಸಿಮ್ ನಿಮ್ಮ ಹೆಸರಿನಲ್ಲಿ ಇಲ್ಲದಿದ್ದರೆ?

ಕೇಂದ್ರಸರ್ಕಾರದ ಆದೇಶದಂತೆ ಒಂದು ವೇಳೆ ನೀವು ಬಳಸುತ್ತಿರುವ ಸಿಮ್ ನಿಮ್ಮ ಹೆಸರಿನಲ್ಲಿ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ನೀವು ಆ ಸಿಮ್ ಬಳಕೆ ಮಾಡಲು ಸಾಧ್ಯವಿಲ್ಲ.!! ಆದರೆ, ನೀವು ಬಳಕೆ ಮಾಡುತ್ತಿರುವ ಸಿಮ್ ನಿಮ್ಮ ಪರಿಚಯದವರ ಅಥವಾ ನಿಮ್ಮ ಸಂಭಧಿಕರ ಹೆಸರಿನಲ್ಲಿದ್ದರೆ ಮಾತ್ರ ನೀವು ಆಧಾರ್ ಲಿಂಕ್ ಮಾಡಿಸಲು ಸಾಧ್ಯ.!!

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!
ಸಿಮ್ ಓನರ್‌ಷಿಪ್ ವರ್ಗಾವಣೆ!!

ಸಿಮ್ ಓನರ್‌ಷಿಪ್ ವರ್ಗಾವಣೆ!!

ನೀವು ಬಳಸುತ್ತಿರುವ ಸಿಮ್ ಯಾರ ಹೆಸರಿನಲ್ಲಿ ನೋಂದಣಿ ಆಗಿದೆಯೋ ಅವರ ಫೋಟೋ, ಆಧಾರ್ ಸಂಖ್ಯೆ, ವಿಳಾಸದ ಪ್ರೂಫ್ ನೊಂದಿಗೆ ಅವರ ಸಹಿಯನ್ನು ಹೊಂದಿದ ಅರ್ಜಿಯೊಂದಿಗೆ ಐಡಿ ಪ್ರೂಫ್ ಗಳನ್ನು ನಿಮಗೆ ಸಮೀಪದಲ್ಲಿರುವ ಕಸ್ಟಮರ್ ಕೇರ್ ಸೆಂಟರ್ ನಲ್ಲಿ ನೀಡಿ. ನೀವು ಸಿಮ್ ಓನರ್‌ಷಿಪ್ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ.!!

ಓನರ್‌ಷಿಪ್ ವರ್ಗಾವಣೆಗೆ ಮೂರು ದಿವಸ!!

ಓನರ್‌ಷಿಪ್ ವರ್ಗಾವಣೆಗೆ ಮೂರು ದಿವಸ!!

ನೀವು ಬಳಸುತ್ತಿರುವ ಸಿಮ್ ಯಾರ ಹೆಸರಿನಲ್ಲಿ ನೋಂದಣಿ ಆಗಿದೆಯೂ ಅವರ ದಾಖಲೆಗಳನ್ನು ಕಸ್ಟಮರ್ ಕೇರ್‌ಗೆ ವರ್ಗಾವಣೆ ಮಾಡಿದ ನಂತರ ಸಿಮ್ ಓನರ್‌ಷಿಪ್ ವರ್ಗಾವಣೆಯಾಗಲು ಮೂರು ದಿವಸಗಳ ಕಾಲ ಸಮಯ ಬೇಕಿರುತ್ತದೆ.ತ್ತದೆ.!

ವರ್ಗಾವಣೆ ವಿಫಲವಾಗಬಹುದು

ವರ್ಗಾವಣೆ ವಿಫಲವಾಗಬಹುದು

ಸಿಮ್ ಓನರ್‌ಷಿಪ್ ವರ್ಗಾವಣೆ ಸಮಯದಲ್ಲಿ ಒಂದು ವೇಳೆ ನಿಮ್ಮ ದಾಖಲಾತಿ ತಪ್ಪಿದ್ದಲ್ಲಿ ಸಹ ಸಿಮ್ ವರ್ಗಾವಣೆ ವಿಫಲವಾಗಬಹುದು.!! ನಂತರ ಮತ್ತೊಮ್ಮೆ ಟೆಲಿಕಾಂ ಕಂಪೆನಿಯ ಕಸ್ಟಮರ್ ಕೇರ್ ತಲುಪಿ ಈ ಬಗ್ಗೆ ಪರೀಶೀಲಿಸಿ.!!

ಓದಿರಿ:ಆನ್‌ಲೈನ್ ಬ್ಯಾಂಕಿಂಗ್‌ನಿಂದ 3 ವರ್ಷದಲ್ಲಿ 203 ಕೋಟಿವಂಚನೆ!..ನಿಮ್ಮ ಸುರಕ್ಷತೆ ಹೀಗಿರಲಿ!!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
As per the recent government directive, all the existing customers have to link Aadhaar with their Mobile numbers.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot