ಮೊಬೈಲ್ ಫೋನ್ ಕಳೆದರೆ ಆನ್‌ಲೈನಿನಲ್ಲಿಯೇ ದೂರು ಸಲ್ಲಿಸುವುದು ಹೇಗೆ?
ಯಾವುದೇ ದಾಖಲೆಗಳು ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡಿರುವುದರ ಬಗ್ಗೆ ದೂರು ಸಲ್ಲಿಸಲು ಸರ್ಕಾರವು ಪೊಲೀಸ್ ಇಲಾಖೆಯಡಿಯಲ್ಲಿ ' ಇ ಲಾಸ್ಟ್ ಅಂಡ್ ಫೌಂಡ್' ಎಂಬ ಆನ್‌ಲೈನ್ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಿದೆ.
ಬೆಂಗಳೂರು ನಗರದಲ್ಲಿಯೇ ಪ್ರತಿ ದಿನ ಸಾವಿರಾರು ಕಳ್ಳತನವಾಗುತ್ತಿವೆ ಎಂದು ಕೆಲವು ವರದಿಗಳು ಹೇಳುತ್ತವೆ. ಮೊಬೈಲ್ ಫೋನ್ ಜತೆಗೆ, ಲ್ಯಾಪ್‌ಟಾಪ್, ಪಾಸ್‌ಪೋರ್ಟ್ , ವೋಟರ್ ಐಡಿ ಸೇರಿದಂತೆ ಇನ್ನಿತರ ಶೈಕ್ಷಣಿಕ ದಾಖಲೆಗಳು ದಾಖಲೆಗಳನ್ನು ಕಳೆದುಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಿದೆ.!!
ಹಾಗಾಗಿ, ಯಾವುದೇ ದಾಖಲೆಗಳು ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡಿರುವುದರ ಬಗ್ಗೆ ದೂರು ಸಲ್ಲಿಸಲು ಸರ್ಕಾರವು ಪೊಲೀಸ್ ಇಲಾಖೆಯಡಿಯಲ್ಲಿ ' ಇ ಲಾಸ್ಟ್ ಅಂಡ್ ಫೌಂಡ್' ಎಂಬ ಆನ್‌ಲೈನ್ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಿದೆ. ಆಪ್ ಮೂಲಕವೂ ಲಭ್ಯವಿರುವ ಈ ಸೇವೆ ಇದೀಗ ಹೆಚ್ಚು ಜನರನ್ನು ತಲುಪಿದೆ.!!

ಹಾಗಾದರೆ, ಕಳೆದುಹೋದ/ಕಾಣೆಯಾದ ವಸ್ತುಗಳ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗದೆ ನೇರವಾಗಿ ಮೊಬೈಲ್ ಫೋನ್ ಮತ್ತು ವೆಬ್‌ಸೈಟ್ ಮುಖಾಂತರ ವರದಿಯನ್ನು ಸಲ್ಲಿಸಲು ಅವಕಾಶವರುವ ' ಇ ಲಾಸ್ಟ್ ಅಂಡ್ ಫೌಂಡ್' ಸೇವೆಯನ್ನು ಹೇಗೆ ಬಳಕೆ ಮಾಡಿಕೊಳ್ಳುವುದು? ಯೋಜನೆಯ ಕಾರ್ಯನಿರ್ವಹಣೆ ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಇ-ಲಾಸ್ಟ್ ಅಂಡ್ ಫೌಂಡ್ ವೆಬ್‌ಸೈಟ್!!
ಆನ್‌ಲೈನ್ ಮುಖಾಂತರ ಕಳೆದುಕೊಂಡ ವಸ್ತುಗಳ ಬಗ್ಗೆ ಕರ್ನಾಟಕ ಪೊಲೀಸ್ ಇಲಾಖೆ 'ಇ-ಲಾಸ್ಟ್ ಅಂಡ್ ಫೌಂಡ್' (e-Lost & Found Report) ಎಂಬ ವೆಬ್‌ಸೈಟ್ ಮತ್ತು ಆಪ್ ಅನ್ನು ರಚಿಸಿದೆ.! ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ತೆರಳದೆ ಈ ವೆಬ್‌ಸೈಟ್ ಅಥವಾ ಆಪ್ ಮೂಲಕ ಕಳೆದುಹೋದ ವಸ್ತುಗಳ ಬಗ್ಗೆ ದೂರುದಾಖಲಿಸಬಹುದು.!!

ಇ-ಲಾಸ್ಟ್ ಅಂಡ್ ಫೌಂಡ್ ಕಾರ್ಯ ಹೇಗೆ?
ಪೊಲೀಸ್ ಇಲಾಖೆ ಅಳವಡಿಸಿಕೊಂಡಿರುವ ಲಾಸ್ಟ್ ಆಂಡ್ ಫೌಂಡ್' ವ್ಯವಸ್ಥೆಯ (eLost & Found Report) ವೆಬ್‌ಸೈಟ್ ತೆರೆದು ಲ್ಯಾಪ್‌ಟಾಪ್, ಮೊಬೈಲ್ ಫೋನ್, ಪಾಸ್‌ಪೋರ್ಟ್, ಶೈಕ್ಷಣಿಕ ದಾಖಲೆ ದೂರುಗಳನ್ನು ಆನ್‌ಲೈನ್ ಮೂಲಕ ದಾಖಲಿಸಬಹುದು. ದೂರು ಸಲ್ಲಿಸಿರುವ ಬಗ್ಗೆ ಆನ್‌ಲೈನ್‌ನಲ್ಲಿಯೇ ನಿಮಗೆ ಸ್ವೀಕೃತಿ ಪತ್ರ ಕೂಡ ದೊರೆಯುತ್ತದೆ.!!

ದೂರು ನೀಡಿದ ನಂತರ ಏನಾಗುತ್ತದೆ ?
ದೂರು ಸಲ್ಲಿಸಿದ ನಂತರ ಕಳೆದುಹೋದ ವಸ್ತುಗಳ ಬಗ್ಗೆ ವರದಿ ಬಳಕೆದಾರರ ಮೊಬೈಲ್ ಪೋನ್ ಮತ್ತು ಇ-ಮೇಲ್ ಐಡಿಗೆ ರಾವನೆಯಾಗುತ್ತದೆ. ಕಳೆದುಹೋದ ದಾಖಲಾತಿ/ವಸ್ತುಗಳ ಬಗ್ಗೆ ದಾಖಲಾದ ವರದಿಗಳು ಎಸ್.ಸಿ.ಆರ್.ಬಿ ನಲ್ಲಿ ದಾಖಲಾಗುತ್ತವೆ. ಆದರೆ, ದಾಖಲಾದ ವರದಿಯ ಮೇಲೆ ಯಾವುದೇ ವಿಚಾರಣೆ/ ತನಿಖೆ ಕೈಗೊಳ್ಳಲಾಗುವುದಿಲ್ಲ.!!

ಯೋಜನೆಯಿಂದ ಗ್ರಾಹಕರಿಗೆ ಲಾಭವೇನು?
ನೀವು ಕಳೆದುಕೊಂಡಿರುವ ವಸ್ತುಗಳೇನಾದರೂ ಪೊಲೀಸ್ ಇಲಾಖೆಗೆ ದೊರೆತರೆ ಅಂದರೆ, ನೀವು 'ಇ ಲಾಸ್ಟ್ ಅಂಡ್ ಫೌಂಡ್' ನಲ್ಲಿ ಆ ಬಗ್ಗೆ ದೂರು ದಾಖಲಿಸಿದ್ದರೆ ಪೊಲೀಸ್ ಇಲಾಖೆ ನಿಮ್ಮನ್ನು ಸಂಪರ್ಕಿಸುತ್ತದೆ. ನಂತರ ನೀವು ಸೂಕ್ತ ದಾಖಲೆಗಳನ್ನು ನೀಡಿ ನಿಮ್ಮ ವಸ್ತುಗಳನ್ನು ಇಲಾಖೆಯಿಂದ ವಾಪಸ್ ಪಡೆಯಬಹುದಾಗಿದೆ.!!

ವಿದ್ಯುನ್ಮಾನ ದಾಖಲೆಯಷ್ಟೆ!!
'ಇ ಲಾಸ್ಟ್ ಅಂಡ್ ಫೌಂಡ್' ನಲ್ಲಿ ದಾಖಲಿಸಿದ ದೂರು ಪೊಲೀಸರಿಗೆ ಕೇವಲ ಮಾಹಿತಿಯಾಗಿರುತ್ತದೆ. ಈ ಆಧಾರದ ಮೇಲೆ ಯಾವುದೇ ವಿಚಾರಣೆ/ತನಿಖೆಯನ್ನು ಕೈಗೊಳ್ಳುವುದಿಲ್ಲ. ಈ ವರದಿಯು ದೂರುದಾರರಿಗೆ ಮತ್ತು ಪೊಲೀಸ್ ಇಲಾಖೆ ಪರಿಶೀಲನೆಗಾಗಿ ಇರುವ ಕೇವಲ ವಿದ್ಯುನ್ಮಾನ ದಾಖಲೆಯಾಗಿರುತ್ತದೆ.!!


ಕಳೆದುಕೊಂಡರೆ ಮಾತ್ರ!!
ನೀವು ನಿಮ್ಮಲ್ಲಿರುವ ಸಣ್ಣ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡರೆ ಮಾತ್ರ ಈ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸುವುದು ಉತ್ತಮ.! ವಸ್ತುಗಳನ್ನು ಯಾರಾದರೂ ಕದ್ದಿದ್ದರೆ ಅಥವಾ ನಿಮ್ಮನ್ನು ಯಾರಾದರೂ ಬೆದರಿಸಿ ಕಿತ್ತುಕೊಂಡಿದ್ದರೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಎಚ್ಚರದಿಂದ ದೂರು ದಾಖಲಿಸುವುದನ್ನು ಮರೆಯದಿರಿ.!!


Click it and Unblock the Notifications








