ನಿಮ್ಮ ಆಧಾರ್ ಕಾರ್ಡ್ ಕಳೆದುಹೋಗಿದೆಯಾ ಕೂಡಲೇ ಈ ಕೆಲಸ ಮಾಡಿ!
ಪ್ರಸ್ತುತ ದಿನಗಳಲ್ಲಿ ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯನು ಹೊಂದಿರಬೇಕಾದ ಅತ್ಯಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಇದೇ ಕಾರಣಕ್ಕೆ ಸರ್ಕಾರದ ಎಲ್ಲಾ ಸೇವೆಗಳಲ್ಲಿಯೂ ಆಧಾರ್ ಕಾರ್ಡ್ ಅನ್ನು ಪ್ರಮುಖ ದಾಖಲೆಯಾಗಿ ಬಳಸಲಾಗುತ್ತೆ. ಇನ್ನು ಒಂದು ವೇಳೆ ತಮ್ಮ ಆಧಾರ್ ಕಾರ್ಡ್ ಕಳೆದುಹೋಗಿದ್ದರೆ ಏನು ಮಾಡಬೇಕು ಅನ್ನೊದು ಕೆಲವರಿಗೆ ತಿಳಿದಿಲ್ಲ.
ಹೌದು, ಆಧಾರ್ ಕಾರ್ಡ್ ಕಳೆದು ಹೋದರೆ ಅದನ್ನು ಮತ್ತೆ ಪಡೆದುಕೊಳ್ಳುವುದಕ್ಕೆ ಕೆಲವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಏಕೆಂದರೆ ಆಧಾರ್ ಕಾರ್ಡ್ ನಿಮ್ಮ ಹೆಸರು, ಜನ್ಮ ದಿನಾಂಕ ಮತ್ತು ಬಯೋಮೇಟ್ರಿಕ್ ಡೇಟಾದಂತಹ ವೈಯುಕ್ತಿಕ ಮಾಹಿತಿಯನ್ನು ಹೊಂದಿರಲಿದೆ. ಆದರಿಂದ ನಿಮ್ಮ ಆಧಾರ್ ಕಳೆದುಹೋದಾಗ ನೀವು ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಂದು ವೇಳೆ ನೀವು ನಿಮ್ಮ ಆಧಾರ್ ಕಾರ್ಡ್ ಕಳೆದುಕೊಂಡಿದ್ದರೆ, UIDAI ವೆಬ್ ಪೋರ್ಟಲ್ ಬಳಸಿಕೊಂಡು ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಯುಐಡಿಎಐ ವೆಬ್ ಪೋರ್ಟಲ್‌ನಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಮುದ್ರಿಸಲಾದ 12-ಅಂಕಿಯ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
UIDAI ಪೋರ್ಟಲ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಹೀಗೆ ಮಾಡಿ!
* ಮೊದಲಿಗೆ https://ssup.uidai.gov.in/web/guest/ssup-home ಮೂಲಕ UIDAI ಸೆಲ್ಫ್ ಸರ್ವಿಸ್ ಪೋರ್ಟಲ್‌ಗೆ ಭೇಟಿ ನೀಡಿ
* ನಂತರ ಪೋರ್ಟಲ್‌ನಲ್ಲಿ "Retrieve Lost or Forgotten UID/EID" ಬಟನ್ ಅನ್ನು ಕ್ಲಿಕ್ ಮಾಡಿ.
* ಇದೀಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಆಯ್ಕೆಮಾಡಿ.
* ನಂತರ ನಿಮ್ಮ ಪೂರ್ಣ ಹೆಸರು, ನೋಂದಾಯಿತ ಇಮೇಲ್ ವಿಳಾಸ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ಸ್ಕ್ರೀನ್ ಮೇಲೆ ಕಾಣುವ ಸೆಕ್ಯುರಿಟಿ ಕೋಡ್ ಅನ್ನು ನಮೂದಿಸಿ
* ಒಟಿಪಿ ಪಡೆಯಲು ಬಟನ್ ಅನ್ನು ಕ್ಲಿಕ್ ಮಾಡಿ.
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ.
* OTP ಪರಿಶೀಲಿಸಿದ ನಂತರ, ನಿಮ್ಮ ಆಧಾರ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸದಲ್ಲಿ ನೀವು ಸ್ವೀಕರಿಸುತ್ತೀರಿ.
* ಇದೀಗ UIDAI ಸ್ವಯಂ ಸೇವಾ ಪೋರ್ಟಲ್‌ಗೆ ಮತ್ತೊಮ್ಮೆ ಭೇಟಿ ನೀಡಿ ಮತ್ತು "ಡೌನ್‌ಲೋಡ್ ಆಧಾರ್" ಬಟನ್ ಕ್ಲಿಕ್ ಮಾಡಿ.
* ನಿಮ್ಮ ಆಧಾರ್ ಸಂಖ್ಯೆ, ಹೆಸರು, ಪಿನ್ ಕೋಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ಎಂಟ್ರಿ ಮಾಡಿ.
* ಒಟಿಪಿ ಪಡೆಯಿರಿ ಬಟನ್ ಕ್ಲಿಕ್ ಮಾಡಿ
* ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಂಬರ್ ಎಂಟ್ರಿ ಮಾಡಿ
* OTP ನಂಬರ್ ಎಂಟ್ರಿ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್‌ನ ನಕಲನ್ನು ನೀವು ಡೌನ್‌ಲೋಡ್ ಮಾಡಬಹುದು.

UIDAI ಸಹಾಯವಾಣಿ ಮೂಲಕ ಆಧಾರ್ ಕಾರ್ಡ್ ಪಡೆಯಲು ಹೀಗೆ ಮಾಡಿ!
* ಮೊದಲಿಗೆ UIDAI ಸಹಾಯವಾಣಿ ಸಂಖ್ಯೆ 1800-180-1947 ಅಥವಾ 011-1947ಗೆ ಡಯಲ್ ಮಾಡಿ
* ನಂತರ IVR ಸೂಚನೆಗಳನ್ನು ಅನುಸರಿಸಿ
* ಅದರಂತೆ ನಿಮ್ಮ ಆಧಾರ್ ಕಾರ್ಡ್ ಅನ್ನು ಹಿಂಪಡೆಯಲು ಸೂಕ್ತವಾದ ಆಯ್ಕೆಯನ್ನು ಆರಿಸಿ
* ನಂತರ ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಅಗತ್ಯವಿರುವ ಇತರ ವಿವರಗಳನ್ನು ಒದಗಿಸಿ.
* ನೀವು ನೀಡಿದ ವಿವರಗಳನ್ನು ಪರಿಶೀಲಿಸಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನಿಮ್ಮ ಆಧಾರ್ ಸಂಖ್ಯೆ ಸಂದೇಶ ಬರಲಿದೆ
* ಇದೀಗ ನೀವು ನಿಮ್ಮ ಆಧಾರ್ ಕಾರ್ಡ್‌ನ ನಕಲನ್ನು ಡೌನ್‌ಲೋಡ್ ಮಾಡಲು UIDAI ಸ್ವಯಂ ಸೇವಾ ಪೋರ್ಟಲ್‌ಗೆ ಬೇಟಿ ನೀಡಬೇಕಾಗುತ್ತದೆ.


Click it and Unblock the Notifications








