ಫೋನ್ ಕಳೆದು ಹೋದರೆ ಪುನಃ ವಾಟ್ಸ್ ಆಪ್ ಮೆಸೇಜ್ ಗಳನ್ನು ಪಡೆಯಬಹುದೇ?

By Gizbot Bureau
|

ವಾಟ್ಸ್ ಆಪ್ ನ ಪ್ರಸಿದ್ಧತೆ ಹೇಗಿದೆ ಎಂದರೆ ಒಂದು ವೇಳೆ ಕೆಲವು ನಿಮಿಷಗಳ ಕಾಲ ವಾಟ್ಸ್ ಆಪ್ ಕೆಲಸ ಮಾಡದೇ ಇದ್ದರೆ ಕೆಲವರಿಗೆ ತಲೆಯೇ ಕೆಟ್ಟು ಹೋದಂತೆ ಅನ್ನಿಸುತ್ತದೆ. ಇನ್ಸೆಂಟ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ನ್ನು ಇಂದಿನ ಜನಸಾಮಾನ್ಯರು ಬಹಳ ಅವಲಂಬಿತರಾಗಿದ್ದಾರೆ. ಒಬ್ಬ ವ್ಯಕ್ತಿಯ ಮನಸ್ಥಿತಿ ಯಾವ ಸಮಯದಲ್ಲಿ ಹೇಗಿತ್ತು ಎಂದು ತಿಳಿಯಲು ವಾಟ್ಸ್ ಆಪ್ ತೆರೆದರೆ ಸಾಕಾಗುತ್ತದೆ. ಅಷ್ಟರ ಮಟ್ಟಿಗೆ ಅದರಲ್ಲಿ ಸಂವಹನ ನಡೆಯುತ್ತದೆ. ಇಂತಹ ಸನ್ನಿವೇಶದಲ್ಲಿ ಒಂದು ವೇಳೆ ಫೋನ್ ಕಳೆದು ಹೋದರೆ ಏನು ಗತಿ?

ಫೋನ್ ಕಳೆದು ಹೋದರೆ ಪುನಃ ವಾಟ್ಸ್ ಆಪ್ ಮೆಸೇಜ್ ಗಳನ್ನು ಪಡೆಯಬಹುದೇ?

ವಾಟ್ಸ್ ಆಪ್ ನಲ್ಲಿರುವ ನಿಮ್ಮ ಮೆಸೇಜ್ ಗಳು ಮತ್ತು ಚಾಟ್ ಗಳನ್ನು ಸುರಕ್ಷಿತವಾಗಿ ಯಾರೂ ಕದಿಯದಂತೆ ಮತ್ತು ಯಾರಿಗೂ ತಿಳಿಯದಂತೆ ಹೇಗೆ ನೋಡಿಕೊಳ್ಳುವುದು? ಅದಕ್ಕೆ ಉತ್ತರವನ್ನು ಈ ಲೇಖನ ನೀಡುತ್ತಿದೆ.

1.ನಿಮ್ಮ ಸಿಮ್ ಕಾರ್ಡ್ ನ್ನು ಲಾಕ್ ಮಾಡಿ.

ಮೊದಲ ಕೆಲಸ ನೀವು ಮಾಡಬೇಕಾಗಿರುವುದು ನಿಮ್ಮ ಮೊಬೈಲ್ ಸರ್ವೀಸ್ ಪ್ರೊವೈಡರ್ ಗೆ ಕರೆ ಮಾಡಿ ಮತ್ತು ನಿಮ್ಮ ಸಿಮ್ ಕಾರ್ಡ್ ನ್ನು ಲಾಕ್ ಮಾಡಿಸಿ. ಇದಾದ ನಂತರ ಯಾರೂ ಕೂಡ ನಿಮ್ಮ ವಾಟ್ಸ್ ಆಪ್ ಅಕೌಂಟ್ ನ್ನು ವೆರಿಫೈ ಮಾಡಲು ಸಾಧ್ಯವಾಗುವುದಿಲ್ಲ. ಎಸ್ಎಂಎಸ್ ಮತ್ತು ಕರೆ ಇಲ್ಲದೆ ವಾಟ್ಸ್ ಆಪ್ ಆಕ್ಟಿವೇಟ್ ಆಗುವುದೇ ಇಲ್ಲ.

2.ಸೇಮ್ ನಂಬರಿನ ಹೊಸ ಸಿಮ್ ಕಾರ್ಡ್ ನ್ನು ಬಳಸಿ ನಿಮ್ಮ ಹೊಸ ಫೋನಿನಲ್ಲಿ ವಾಟ್ಸ್ ಆಪ್ ನ್ನು ಆಕ್ಟಿವೇಟ್ ಮಾಡಿಕೊಳ್ಳಿ.

3.ಒಂದು ಡಿವೈಸ್ ನಲ್ಲಿ ಒಂದು ಫೋನ್ ನಂಬರ್ ನಿಂದ ಮಾತ್ರವೇ ವಾಟ್ಸ್ ಆಪ್ ಆಕ್ಟಿವೇಟ್ ಆಗಲು ಸಾಧ್ಯ ಎಂಬುದನ್ನು ಮರೆಯಬೇಡಿ.

4.ಹೊಸ ಸಿಮ್ ಕಾರ್ಡ್ ಬಳಸುವುದುಕ್ಕೆ ನಿಮಗೆ ಇಷ್ಟವಿಲ್ಲದೇ ಇದ್ದಲ್ಲಿ ವಾಟ್ಸ್ ಆಪ್ ನ [email protected] ಈ ಇಮೇಲ್ ಐಡಿಗೆ ಒಂದು ಮೆಸೇಜ್ ಕಳುಹಿಸಿ.

5.ಇಮೇಲ್ ನಲ್ಲಿ "ಕಳೆದಿದೆ/ ಕದಿಯಲಾಗಿದೆ: ನನ್ನ ಅಕೌಂಟ್ ನ್ನು ಡಿಆಕ್ಟಿವೇಟ್ ಮಾಡಿ ಎಂದು ಇಮೇಲ್ ನಲ್ಲಿ ಬರೆದು ಅದರಲ್ಲಿ ಅಂತರಾಷ್ಟ್ರೀಯ ಫಾರ್ಮೇಟ್ ನಲ್ಲಿ ನಿಮ್ಮ ಫೋನ್ ನಂಬರ್ ನ್ನು ನಮೂದಿಸಿ”

6.ಚಾಟ್ ಗಳನ್ನು ಪುನಃ ಪಡೆಯುವುದಕ್ಕೆ ಮತ್ತು ಮೇಸೇಜ್ ಗಳನ್ನು ಬ್ಯಾಕ್ ಅಪ್ ಪಡೆಯುವುದಕ್ಕಾಗಿ ನೀವು ನಿಮ್ಮ ಫೋನ್ ಕಳೆದುಹೋಗುವುದಕ್ಕಿಂತ ಮುನ್ನ ಗೂಗಲ್ ಡ್ರೈವ್, ಐಕ್ಲೌಡ್ ಅಥವಾ ಒನ್ ಡ್ರೈವ್ ನ್ನು ಬಳಸಿರಬೇಕಾಗುತ್ತದೆ.

ನೆನಪಿಡಬೇಕಾಗಿರುವ ಅಂಶಗಳು

1.ನಿಮ್ಮ ಕಾಂಟ್ಯಾಕ್ಟ್ ನಿಮಗೆ ಕಳುಹಿಸಿರುವ ಮೆಸೇಜ್ ಗಳು 30 ದಿನಗಳ ಅವಧಿಯವರೆಗೆ ಪೆಂಡಿಂಗ್ ಸ್ಟೇಟಸ್ ನಲ್ಲಿ ಇರುತ್ತದೆ.

2.ಮೆಸೇಜ್ ಗಳು ಡಿಲೀಟ್ ಆಗುವ ಮುನ್ನ ಒಂದು ವೇಳೆ ನಿಮ್ಮ ಅಕೌಂಟ್ ನ್ನು ರಿಆಕ್ಟಿವೇಟ್ ಮಾಡಿಕೊಂಡರೆ, ನೀವು ನಿಮ್ಮ ಕಾಂಟ್ಯಾಕ್ಟ್ ಗೆ ಕಳುಹಿಸಲಾಗಿರುವ ಎಲ್ಲಾ ಪೆಂಡಿಂಗ್ ಮೆಸೇಜ್ ಗಳನ್ನು ರಿಸೀವ್ ಮಾಡುತ್ತೀರಿ ಮತ್ತು ನಿಮ್ಮ ಎಲ್ಲಾ ಗ್ರೂಪ್ ಚಾಟ್ ಗಳು ನಿಮಗೆ ಲಭ್ಯವಾಗುತ್ತದೆ.

3.30 ದಿನಗಳ ಒಳಗೆ ನಿಮ್ಮ ಅಕೌಂಟ್ ರೀಆಕ್ಟಿವೇಟ್ ಆಗದೇ ಇದ್ದಲ್ಲಿ ನಿಮ್ಮ ಕಾಂಟ್ಯಾಕ್ಟ್ ಕಳುಹಿಸಿರುವ ಮೆಸೇಜ್ ಗಳೆಲ್ಲವೂ ಡಿಲೀಟ್ ಆಗಿರುತ್ತದೆ.

4.ನೀವು ಅಕೌಂಟ್ ಡಿಆಕ್ಟಿವೇಷನ್ ರಿಕ್ವೆಸ್ ಮಾಡದೇ ಸಿಮ್ ಕಾರ್ಡ್ ಲಾಕ್ ಆಗಿದ್ದಾಗ ಮತ್ತು ಫೋನ್ ಸರ್ವೀಸ್ ಡಿಸೇಬಲ್ ಆಗಿದ್ದಾಗಲೂ ಕೂಡ ವಾಟ್ಸ್ ಆಪ್ ನ್ನು ವೈ-ಫೈ ಬಳಸಿ ಬಳಸಬಹುದು.

5.ಕಳೆದು ಹೋಗಿರುವ ಫೋನ್ ಹುಡುಕುವುದಕ್ಕೆ ವಾಟ್ಸ್ ಆಪ್ ಸಹಾಯ ಮಾಡುವುದಿಲ್ಲ.

Best Mobiles in India

Read more about:
English summary
Lost your phone? Here's how to keep your WhatsApp chats safe and secure

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X