Home
ಟೆಕ್ ನೌಕರಿ

ಆನ್‌ಲೈನ್‌ನಲ್ಲಿ ಲಕ್ಷ ಲಕ್ಷ ಹಣಗಳಿಸಲು ಅತ್ಯುತ್ತಮ ಆಪ್ !! ಯಾವುದು? ಹೇಗೆ?

ನೀವು ಹೆಚ್ಚು ಕ್ರಿಯಾಶೀಲ ವ್ಯಕ್ತಿಯೇ? ಅಥವಾ ನಿಮ್ಮ ಪ್ರತಿಬೆ ತೋರಿಸಲು ಹೆಚ್ಚು ಅವಕಾಶ ಸಿಕ್ಕಿಲ್ಲವೆ.? ಹಾಗಾದರೆ ಚಿಂತಿಸಬೇಡಿ.!!

By Bhaskar N J

ನೀವು ಹೆಚ್ಚು ಕ್ರಿಯಾಶೀಲ ವ್ಯಕ್ತಿಯೇ? ಅಥವಾ ನಿಮ್ಮ ಪ್ರತಿಬೆ ತೋರಿಸಲು ಹೆಚ್ಚು ಅವಕಾಶ ಸಿಕ್ಕಿಲ್ಲವೆ.? ಹಾಗಾದರೆ ಚಿಂತಿಸಬೇಡಿ.!! ಏಕೆಂದರೆ ನಿಮಗೆ ಅವಕಾಶವೊಂದು ಹುಡುಕಿಕೊಂಡು ಬಂದಿದೆ.!! ಹೌದು, ಇನ್ನು ನೀವು ಆನ್‌ಲೈನ್‌ನಲ್ಲಿ ಸುಲಭವಾಗಿ ಹಣಗಳಿಸಬಹುದು.!!

ನಾವು ನೋಡುವ ಹಲವು ಜಾಹೀರಾತುಗಳು ನಮಗೆ ಇಷ್ಟವಾಗುವುದಿಲ್ಲ! ಆ ಜಾಹೀರಾತು ಈ ರೀತಿ ಇದ್ದರೆ ಇನ್ನು ಚೆನ್ನಾಗಿರುತ್ತಿತ್ತು ಎಂದು ನಾವು ಎಷ್ಟೋ ಸಲ ಆಲೋಚನೆ ಮಾಡಿರುತ್ತೇವೆ. ನಮ್ಮ ಕಲ್ಪನೆಯಲ್ಲಿ ಅದಕ್ಕೊಂದು ರೂಪ ಕೊಟ್ಟು ಸುಮ್ಮನಾಗಿ ಬಿಡುತ್ತೇವೆ. ಆದರೆ ಇನ್ನು ಹಾಗೆ ಮಾಡಬೇಡಿ.!!

ನೀವು ಏನೆ ಮಾಡಿದರೂ ಅದು ಡಿಫರೆಂಟ್ ಎಂಬ ಕಲ್ಪನೆ ನಿಮಗಿದ್ದರೆ ನೀವು ಇದನ್ನು ಟ್ರೈ ಮಾಡಬಹುದು. ಏಕೆಂದರೆ ನಿಮ್ಮ ಕ್ರಿಯಾಶೀಲತೆಯನ್ನು ಆ ಕಂಪೆನಿಗಳಿಗೆ ತಲುಪಿಸುವ ವೇದಿಕೆಯೊಂದು ಸಿದ್ಧವಾಗಿದೆ.!! ಅದೇ ಕಲ್ಪನೆಯೇ ಜಾಹಿರಾತು ಸೈಟ್.!!

ಏನಿದು ಜಾಹಿರಾತು ಸೈಟ್?

ಏನಿದು ಜಾಹಿರಾತು ಸೈಟ್?

ಬೆಳಗ್ಗೆ ಎದ್ದು ಹಲ್ಲುಜ್ಜುವ ಟೂತ್‌ ಪೇಸ್ಟ್‌ನಿಂದ ಹಿಡಿದು ರಾತ್ರಿ ಮಲಗುವಾಗ ಸೊಳ್ಳೆ ಬತ್ತಿ ಹಚ್ಚುವ ತನಕ ಜಾಹೀರಾತುಗಳು ರಾಜಾಜಿಸುತ್ತಿವೆ. ಅಂತಹ ಜಾಹಿರಾತು ಹೆಚ್ಚು ಜನರನ್ನು ತಲುಪಲು ಗುಣಮಟ್ಟದಲ್ಲಿ ಮತ್ತು ಕ್ರಿಯಾಶೀಲತೆಯಲ್ಲಿ ಉತ್ತಮವಾಗಿರಬೇಕಾಗುತ್ತದೆ. ಹಾಗಗಿ, ಉತ್ತಮ ಜಾಹಿರಾತು ಕಲ್ಪನೆಯನ್ನು ನೀಡಿದವರಿಗೆ ಲಕ್ಷ ಲಕ್ಷ ಹಣಕೊಡಲು ಒಂದು ಸೈಟ್ ಮುಂದಾಗಿದೆ.!!

ಯಾವುದು ಅದು ಆನ್‌ಲೈನ್ ಆಪ್?

ಯಾವುದು ಅದು ಆನ್‌ಲೈನ್ ಆಪ್?

ಸಾಮಾನ್ಯ ಜನರಲ್ಲಿರುವ ಸೃಜನಶೀಲತೆ ಗುರುತಿಸುವ ಸಲುವಾಗಿ ಗೊಕ್ರಾಜೀ ಐ.ಟಿ (GoKrazee) ಎಮಬ ಸ್ಟಾರ್ಟ್‌ಅಪ್‌ ಕಂಪೆನಿಯು ‘ಮ್ಯಾಡ್‌' ಆಪ್‌ ಅನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬಳಕೆದಾರರು ಈ ಆಪ್ ಮೂಲಕ ಯಾವುದಾದರು ಕಂಪೆನಿಯೊಂದರ ಉತ್ಪನ್ನದ ಜಾಹೀರಾತನ್ನು ನಿರ್ಮಾಣ ಮಾಡಿ ಮ್ಯಾಡ್‌ ಆಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.!!

ಇಷ್ಟವಾದರೆ ಅದಕ್ಕೆ ಸೂಕ್ತ ಸಂಭಾವನೆ!!

ಇಷ್ಟವಾದರೆ ಅದಕ್ಕೆ ಸೂಕ್ತ ಸಂಭಾವನೆ!!

ನೀವು ಯಾವುದೇ ವಸ್ತುವಿನ ಮೇಲೆ ಜಾಹಿರಾತು ತಯಾರಿಸಿ. ನಿಮ್ಮ ಜಾಹಿರಾತು ಉತ್ಪನ್ನ ಕಂಪೆನಿಗೆ ಇಷ್ಟವಾದರೆ ಅದಕ್ಕೆ ಸೂಕ್ತ ಸಂಭಾವನೆಯನ್ನು ನೀಡುತ್ತಾರೆ ಎಂದು ಗೊಕ್ರಾಜೀ ಕಂಪೆನಿಯ ಮುಖ್ಯಸ್ಥರಾದ ಸುಂದರ್‌ ರಾಮನ್ ಹೇಳಿದ್ದಾರೆ. ಇದು ಕೆಲವೊಮ್ಮೆ ಲಕ್ಷಗಳಿಗೂ ಹೆಚ್ಚು.!!

ಆಂಡ್ರಾಯ್ಡ್ ಮತ್ತು ಐಒಎಸ್

ಆಂಡ್ರಾಯ್ಡ್ ಮತ್ತು ಐಒಎಸ್

ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಮಾದರಿಯಲ್ಲಿ ಮ್ಯಾಡ್ ಆಪ್ ಲಭ್ಯವಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ 5 ಸಾವಿರ ಜನರು ಡೌನ್‌ಲೋಡ್‌ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸುಮಾರು 250ಕ್ಕೂ ಹೆಚ್ಚು ಜಾಹಿರಾತುಗಳನ್ನು ನಿರ್ಮಾಣ ಮಾಡಿ ಅಪ್‌ಲೋಡ್‌ ಮಾಡಿದ್ದಾರೆ.!!

ಪ್ರತಿಭೆ ಪ್ರದರ್ಶಸಿ!!

ಪ್ರತಿಭೆ ಪ್ರದರ್ಶಸಿ!!

ಕೆಲವರಿಗೆ ಕ್ರಿಯಾಶೀಲತೆ ಇದ್ದರು ಪ್ರತಿಭೆ ಪ್ರದರ್ಶಿಸಲು ಸಾಧ್ಯವಾಗ ಪರಿಸ್ಥಿತಿ ಎದುರಾಗಿರುತ್ತದೆ. ಅಂತವರಿಗೆ ಈ ಆಪ್ ಬಹಳ ಪ್ರಯೋಕನಕಾರಿ.!! ಇನ್ನು ಜಾಹಿರಾತು ಕ್ಷೇತ್ರಕ್ಕೆ ಹೋಗಬೇಕು ಎಂದು ಬಯಸುವವರಿಗೆ ಹೇಳಿ ಮಾಡಿಸಿದಂತಿದೆ.!! ಮ್ಯಾಡ್ ಆಪ್ ಡೌನ್‌ಲೋಡ್ ಮಾಡಲು ನೀಲಿ ಲಿಂಕ್ ಕ್ಲಿಕ್ ಮಾಡಿ.!!

Best Mobiles in India

English summary
Advertisements have always been a platform for companies to weave a fantasy/story around their products. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+