ಕರ್ನಾಟಕ ಸರ್ಕಾರದ ವೆಬ್‌ಸೈಟ್‌ನಲ್ಲಿ ವೂಟರ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಹೇಗೆ?
ಕರ್ನಾಟಕದಲ್ಲಿ ಆನ್‌ಲೈನ್ ಮೂಲಕ ಹೇಗೆ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿ, ಮನೆಗೆ ಗುರುತಿನ ಚೀಟಿ ಹೇಗೆ ತರಿಸಿಕೊಳ್ಳಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಭಾರತ ದೇಶದ ಪೌರತ್ವವನ್ನು ಪ್ರತಿನಿಧಿಸುವ ಗುರುತಿನ ಚೀಟಿ ಹೊಂದಿರಬೇಕಾಗಿರುವುದು ಪ್ರತಿಯೋಬ್ಬರ ಮೂಲ ಕರ್ತವ್ಯ. ಆದರೆ, ಅಡ್ರೆಸ್ ಪ್ರೂಫ್, ವಯಸ್ಸಿನ ಗುರುತು, ಪಾಸ್‌ಪೋರ್ಟ್ ಮಾಡಿಸಲು ದಾಖಲೆಯಾಗಿರುವ ಈ ಗುರುತಿನ ಚೀಟಿಯಯನ್ನು ಮಾಡಿಸುವುದು ಹರಸಾಹಸ ಎನ್ನಬಹುದು .!
ಆನ್‌ಲೈನ್‌ನಲ್ಲಿ 30 ರೂ.ಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಹೇಗೆ? ಫುಲ್ ಡೀಟೆಲ್ಸ್!!
ತಾಲ್ಲೂಕ್ ಪಂಚಾಯತ್‌ಗಳಿಗೆ 10 ರಿಂದ 15 ದಿನಗಳು ಅಲೆದರೂ ಗುರುತಿನ ಚೀಟಿ ಮಾಡಿಸುವುದು ಕಷ್ಟವೇ. ಕೆಲಸ ಕಾರ್ಯಗಳನ್ನೆಲ್ಲಾ ಬಿಟ್ಟು ಈ ಕೆಲಸ ನಿರ್ವಹಿಸಬೇಕಿರುವುದು ಇನ್ನು ಕಷ್ಟ. ? ಹಾಗಾಗಿ, ಕರ್ನಾಟಕದಲ್ಲಿ ಆನ್‌ಲೈನ್ ಮೂಲಕ ಹೇಗೆ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿ, ಮನೆಗೆ ಗುರುತಿನ ಚೀಟಿ ಹೇಗೆ ತರಿಸಿಕೊಳ್ಳಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

#1 ಕರ್ನಾಟಕದ ಸಿಇಒ (CEO) ವೆಬ್‌ಸೈಟ್‌ಗೆ ಭೇಟಿ ನೀಡಿ.
ಕರ್ನಾಟಕ ಚೀಫ್ ಎಲೆಕ್ಟರೋಲ್ ಆಫಿಸರ್ ವೆಬ್‌ಸೈಟ್‌ಗೆ ಭೇಟಿ ನೀಡಿ.(www.ceokarnataka.kar.nic.in) ತೆರದ ನಂತರ ರಿಜಿಸ್ಟರ್ ಎಂಬ ಆನ್‌ಲೈನ್ ಐಕಾನ್‌ಗೆ ಕ್ಲಿಕ್ ಮಾಡಿ. ನಂತರ www.voterreg.kar.nic.in ವೆಬ್‌ಸೈಟ್ ತೆರೆದುಕೊಳ್ಳುತ್ತದೆ.

#2 www.voterreg.kar.nic.inಗೆ ಸೈನ್‌ಅಪ್ ಆಗಿ.
www.voterreg.kar.nic.in ವೆಬ್‌ಸೈಟ್ ತೆರದನಂತರ ನಿಮ್ಮ ಹೆಸರು, ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ನಮೂದಿಸಿ ಸೈನ್ ಅಪ್ ಆಗಿರಿ. ನಂತರ ನಿಮಗೆ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಜನರೇಟ್ ಆಗುತ್ತದೆ.

#3 ಅರ್ಜಿ ಸಂಖ್ಯೆ 6 ನ್ನು ತುಂಬಿ.
www.voterreg.kar.nic.in ಗೆ ಮತ್ತೆ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ನೀಡಿ ತೆರೆಯಿರಿ. ನಂತರ ಅರ್ಜಿ ಸಂಖ್ಯೆ 6 ಎಂದು ಇರುತ್ತದೆ ಅದನ್ನು ಸೆಲೆಕ್ಟ್ ಮಾಡಿ. ನಂತರ ನಿಮ್ಮೆಲ್ಲಾ ಮಾಹಿತಿಗಳನ್ನು ನಮೂದಿಸಿ. ಮಾಹಿತಿ ತುಂಬುವಾಗ ಜಾಗೃತವಾಗಿರಿ.

#4 ಇಮೇಜ್ ಮತ್ತು ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
ಅರ್ಜಿ ಸಂಖ್ಯೆ 6 ನ್ನು ತುಂಬಿದ ನಂತರ ನಿಮ್ಮ ಭಾವಚಿತ್ರ ಮತ್ತು ಗುರುತಿನ ಚೀಟಿಗೆ ಸಲ್ಲಿಸಬೇಕಿರುವ ಡಾಕ್ಯುಮೆಂಟ್ ಚಿತ್ರಗಳನ್ನು ಅಪ್‌ಲೋಡ್ ಮಾಡಿ. ನಂತರ "Submit" ಬಟನ್ ಕ್ಲಿಕ್ ಮಾಡಿ.

#5 ಗುರುತಿನ ಚೀಟಿ ಪಡೆಯಿರಿ
ಅರ್ಜಿ ಸಂಖ್ಯೆ 6 ಸಬ್‌ಮಿಟ್ ಮಾಡಿದ ನಂತರ ಎಲೆಕ್ಷನ್ ಕಮಿಟಿ ನೀವು ಸಲ್ಲಿಸಿರುವ ಡಾಕ್ಯುಮೆಂಟ್ಸ್‌ಗಳನ್ನು ಪರಿಶೀಲಿಸುತ್ತದೆ. ಚುನಾವಣಾ ಆಯೋಗದ ಒಬ್ಬರು ನಿಮ್ಮ ದಾಖಲೆಗಳನ್ನು ಪರೀಶೀಸಲು ನೀವಿದ್ದಲಿಗೆ ಬರುತ್ತಾರೆ. ಅವರು ವೆರಿಫಿಕೇಶನ್ ಮಾಡಿದ ಕೆಲವು ದಿನಗಳಲ್ಲಿ ನಿಮ್ಮ ಮನೆಗೆ ಪೋಸ್ಟ್ ಮೂಲಕ ಗುರುತಿನ ಚೀಟಿ ತಲುಪುತ್ತದೆ.


Click it and Unblock the Notifications








