Home
ಟೆಕ್ ನೌಕರಿ

ವಿಂಡೋಸ್ 10 ಒಎಸ್‌ನ ಹೊಸ ಅಪ್‌ಡೇಟ್‌ ಲಭ್ಯ..! ಇನ್‌ಸ್ಟಾಲ್‌ ಮಾಡುವುದು ಹೇಗೆ..?

ಮೈಕ್ರೋಸಾಫ್ಟ್ ತನ್ನ ವಿಂಡೋಸ್ 10 ಅಕ್ಟೋಬರ್ 2018 ಸದ್ಯ ಎಲ್ಲಾ ಬಳಕೆದಾರರಿಗೂ ಲಭ್ಯವಿದೆ ಎಂದು ಪ್ರಕಟಿಸಿದೆ. ವಾಷಿಂಗ್ ಟನ್ ನಲ್ಲಿ ಮುಖ್ಯಕಛೇರಿಯನ್ನು ಹೊಂದಿರುವ ರೆಡ್ ಮಂಡ್ ಕಂಪೆನಿ ನ್ಯೂಯಾರ್ಕ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ನ ನೂತನ ಅಪ್ ಡೇಟ್ ನ್ನು ಬಿಡುಗಡೆಗೊಳಿಸಿದೆ. ಅದರ ಜೊತೆಗೆ ಪ್ಲೆಥೋರಾ ಹಾರ್ಡ್ ವೇರ್ ಪ್ರೊಡಕ್ಟ್ ಗಳನ್ನು ಕೂಡ ಇದೇ ಸಂದರ್ಬದಲ್ಲಿ ಹೊರಬಿಟ್ಟಿದೆ.

ವಿಂಡೋಸ್ 10 ಒಎಸ್‌ನ ಹೊಸ ಅಪ್‌ಡೇಟ್‌ ಲಭ್ಯ..! ಇನ್‌ಸ್ಟಾಲ್‌ ಮಾಡುವುದು ಹೇಗೆ..?

ಈ ಕೆಳಗಿನ 5 ಪ್ರಮುಖ ಅಪ್ ಡೇಟ್ ಗಳು ಅವುಗಳೆಂದರೆ ನವೆಂಬರ್ ಅಪ್ ಡೇಟ್, ಆನಿವರ್ಸರಿ ಅಪ್ ಡೇಟ್, ಕ್ರಿಯೇಟರ್ಸ್ ಅಪ್ ಡೇಟ್, ಫಾಲ್ ಕ್ರಿಯೇಟರ್ ಅಪ್ ಡೇಟ್ ಮತ್ತು ಎಪ್ರಿಲ್ 2018 ಅಪ್ ಡೇಟ್, ಅಕ್ಟೋಬರ್ 2018 ಅಪ್ ಡೇಟ್ ನ್ನು ಮೈಕ್ರೋಸಾಫ್ಟ್ ಅಗಸ್ಟ್ ನಲ್ಲಿ ನಡೆದ ಐಎಫ್ಎ ನಲ್ಲಿ ಪ್ರಕಟಿಸಿತ್ತು. ಈ ಅಪ್ ಡೇಟ್ ನಲ್ಲಿ ಹಲವು ವಿಶಿಷ್ಟ ವೈಶಿಷ್ಟ್ಯತೆಗಳನ್ನು ಪರಿಚಯಿಸಲಾಗಿದೆ.

“ಯುವರ್ ಫೋನ್ ಆಪ್” ಫೀಚರ್ ಪರಿಚಯ

“ಯುವರ್ ಫೋನ್ ಆಪ್” ಫೀಚರ್ ಪರಿಚಯ

ಮೈಕ್ರೋಸಾಫ್ಟ್ 10 ನ ಅಕ್ಟೋಬರ್ 2018 ಅಪ್ ಡೇಟ್ ನಲ್ಲಿ ಪರಿಚಯಿಸಲಾಗಿರುವ ಮಹತ್ವದ ಕುತೂಹಲಕಾರಿ ಅಪ್ ಡೇಟ್ ಎಂದರೆ ಅದು "ಯುವರ್ ಫೋನ್ ಆಪ್". ಇದು ಬಳಕೆದಾರರಿಗೆ ತಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನ ಫೋಟೋ ಮತ್ತು ಟೆಕ್ಸ್ಟ್ ಗಳಿಗೆ ಇನ್ಸ್ ಟೆಂಟ್ ಆಕ್ಸಿಸ್ ನ್ನು ತಮ್ಮ ಕಂಪ್ಯೂಟರ್ ನಲ್ಲಿ ನೀಡುತ್ತದೆ. ಆಂಡ್ರಾಯ್ಡ್ ಮತ್ತು ಐಓಎಸ್ ನ್ನು ವಿಂಡೋಸ್ 10 ಗೆ ಹತ್ತಿರಗೊಳಿಸುವ ಉದ್ದೇಶದೊಂದಿಗೆ ಇದನ್ನು ಡಿಸೈನ್ ಮಾಡಲಾಗಿದೆ.

ಕ್ಲಿಪ್ ಬೋರ್ಡ್ ಫೀಚರ್ ನ ಬಳಕೆ:

ಕ್ಲಿಪ್ ಬೋರ್ಡ್ ಫೀಚರ್ ನ ಬಳಕೆ:

ವಿಂಡೋಸ್ 10 ಅಕ್ಟೋಬರ್ 2018 ರ ಅಪ್ ಡೇಟ್ ನಲ್ಲಿ ನ್ಯೂ ಕ್ಲಿಪ್ ಬೋರ್ಡ್ ಫೀಚರ್ ನ್ನು ಸೇರಿಸಲಾಗಿದೆ. ಇದು ಬಳಕೆದಾರರಿಗೆ ಡಿವೈಸ್ ನ ಯಾವುದೇ ಕಟೆಂಟ್ ನ್ನು ಕಾಪಿ ಮಾಡಲು ವಿಂಡೋಸ್ 10 ಅವಕಾಶ ನೀಡುತ್ತದೆ. ಕಾಪಿ ಮಾಡಿದ ಕಟೆಂಟ್ ಗಳ ಹಿಸ್ಟರಿಯನ್ನು ಕೂಡ ಸ್ಟೋರ್ ಮಾಡುವುದಕ್ಕೆ ಈ ಮೂಲಕ ಸಾಧ್ಯವಾಗುತ್ತದೆ.

ಫೋನ್ ಫೀಚರ್ :

ಫೋನ್ ಫೀಚರ್ :

ಮೈಕ್ರೋಸಾಫ್ಟ್ ಫೋನ್ ಫೀಚರ್ ನಲ್ಲಿ ಟೈಮ್ ಲೈನ್ ನ್ನು ಪರಿಚಯಿಸಿದೆ. ಅಂದರೆ ಪಿಸಿ ಟೈಮ್ ಲೈನ್ ಗಳು ನಿಮ್ಮ ಫೋನ್ ನಲ್ಲೂ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಹಾಗಾಗಿ ನೀವು ಸ್ಕ್ರೋಲ್ ಬ್ಯಾಕ್ ಆಗಿ ನೀವು ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ನಲ್ಲಿ ಬಳಸಿದ ಫೈಲ್, ವೆಬ್ ಸೈಟ್ ನ್ನು ತೆರೆದ ಟೈಮ್ ನ್ನು ಪರೀಕ್ಷಿಸಬಹುದು. ಸದ್ಯ ಮೈಕ್ರೋಸಾಫ್ಟ್ ಲಾಂಚರ್ ಆಪ್ ಮೂಲಕ ಆಂಡ್ರಾಯ್ಡ್ ಫೋನ್ ಗಳಲ್ಲಿ ಈ ಸೌಲಭ್ಯವನ್ನು ಪಡೆಯಬಹುದು. ಕೆಲವೇ ದಿನದಲ್ಲಿ ಇದರ ಪ್ರೀವ್ಯೂ ಐಓಎಸ್ ನಲ್ಲಿ ಲಭ್ಯವಾಗಲಿದೆ.

ಪವರ್ ಪಾಯಿಂಟ್ ಮತ್ತು ವರ್ಡ್ ನಲ್ಲಿ 3ಡಿ ವೈಶಿಷ್ಟ್ಯತೆ:

ಪವರ್ ಪಾಯಿಂಟ್ ಮತ್ತು ವರ್ಡ್ ನಲ್ಲಿ 3ಡಿ ವೈಶಿಷ್ಟ್ಯತೆ:

ವಿಂಡೋಸ್ 10 ಅಕ್ಟೋಬರ್ 2018 ಅಪ್ ಡೇಟ್ ನಲ್ಲಿ ಇಂಕಿಂಗ್ ಫೀಚರ್ ಮತ್ತು ಪವರ್ ಪಾಯಿಂಟ್, ವರ್ಡ್ ನಲ್ಲಿ 3ಡಿ ವೈಶಿಷ್ಟ್ಯತೆಯನ್ನು ತರಲಾಗಿದೆ. ಇದರಲ್ಲಿ ಮೈಕ್ರೋಸಾಫ್ಟ್ ಟು-ಡು ಆಪ್ ನ್ನು ಸೇರಿಸಲಾಗಿದ್ದು ಟಾಸ್ಕ್ ನ್ನು ಮ್ಯಾನೇಜ್ ಮಾಡಲು ಇದು ನೆರವಾಗಲಿದೆ. ನಿಮ್ಮ ಡಿಜಿಟಲ್ ಪೆನ್ ಮತ್ತು ಟಚ್ ಅನೇಬಲ್ಡ್ ವಿಂಡೋಸ ಡಿವೈಸ್ ಗಳನ್ನು ಬಳಸಿ ಟಾಸ್ಕ್ ಗಳನ್ನು ಸೇರಿಸಬಹುದು. ಟಾಸ್ಕ್ ಮುಗಿದ ನಂತರ ಅದನ್ನು ಸ್ಟ್ರೈಕ್ ಔಟ್ ಮಾಡಬಹುದು. ಮೈಕ್ರೋಸಾಫ್ಟ್ ಸ್ನೈಪ್ ಮತ್ತು ಸ್ಕೆಚ್ ಆಪ್ ನ್ನು ಕೂಡ ಪರಿಚಯಿಸಿದೆ. ಸ್ಕ್ರೀನ್ ಗ್ರ್ಯಾಬ್ ಫಂಕ್ಷನ್ ನ್ನು ಸೇರಿಸಲಾಗಿದ್ದು ಅದು ನಿಮಗೆ ಟೈಮರ್ ಸೆಟ್ ಮಾಡಲು ಅನುಕೂಲಕಾರಿಯಾಗಿರುತ್ತದೆ.

ಆಫ್ ಲೈನ್ ಡಿಕ್ಷನರಿ, ಗ್ರಾಮರ್ ಟೂಲ್ಸ್, ಲರ್ನಿಂಗ್ ಟೂಲ್ಸ್ ಗಳನ್ನು ರೀಡಿಂಗ್ ವ್ಯೂನಲ್ಲಿ ಮತ್ತು ಲೈನ್ ಫೋಕಸ್ ನಲ್ಲಿ ಸೇರಿಸಲಾಗಿದೆ. ವಿಂಡೋಸ್ ಮಿಕ್ಸ್ಡ್ ರಿಯಾಲಿಟಿ ಫ್ಲ್ಯಾಶ್ ಲೈಟ್ ಫೀಚರ್ ನ್ನು ಕೂಡ ಸೇರಿಸಲಾಗಿದೆ. ಶಿಫ್ಟ್ ಕೀ ಟಚ್ ಕೀಪ್ಯಾಡ್ ನಲ್ಲೂ ಲಭ್ಯವಾಗಲಿದೆ. ಫಂಕ್ಷನಾಲಿಟಿ ಮತ್ತು ಡಿಸೈನಿಗೆ ಸಂಬಂಧಿಸಿದಂತೆ ಇನ್ನೂ ಹಲವು ಅಪ್ ಡೇಟ್ ಗಳನ್ನು ಇದರಲ್ಲಿ ಸೇರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಲೇಟೆಸ್ಟ್ ಬ್ಲಾಗ್ ಪೋಸ್ಟ್ ನ್ನು ಪರೀಕ್ಷಿಸಬಹುದು.

ಬ್ಲಾಗ್‌ಫೋಸ್ಟ್‌ನಲ್ಲಿ ಪ್ರಕಟ

ಬ್ಲಾಗ್‌ಫೋಸ್ಟ್‌ನಲ್ಲಿ ಪ್ರಕಟ

ವಿಂಡೋಸ್ 10 ಅಕ್ಟೋಬರ್ 2018 ನ್ನು ಅಪ್ ಡೇಟ್ ನ್ನು ಪಡೆಯುವುದು ಹೇಗೆ ಎಂಬ ಬಗ್ಗೆಯೂ ಕೂಡ ಕಂಪೆನಿ ಇನ್ನೊಂದು ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ. ಹಂತಹಂತವಾಗಿ ಈ ಅಪ್ ಡೇಟ್ ನ್ನು ಬಿಡುಗಡೆಗೊಳಿಸಲಾಗುವುದು. ಮುಂದಿನ ಕೆಲವು ವಾರಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ.

ನೀವು ವಿಂಡೋಸ್ 10 ನ ಆಕ್ಟೀವ್ ಬಳಕೆದಾರರಾಗಿದ್ದಲ್ಲಿ ಮಾನ್ಯುವಲಿ ಈ ಅಪ್ ಡೇಟ ಬಗ್ಗೆ ಪರೀಕ್ಷಿಸಬೇಕಾಗುತ್ತದೆ. ಟಾಸ್ಕ್ ಬಾರ್ ನಲ್ಲಿರುವ ಸರ್ಚ್ ಬಾಕ್ಸ್ ಗೆ ತೆರಳಿ ಚೆಕ್ ಫಾರ್ ದಿ ಅಪ್ ಡೇಟ್ ಎಂದು ಟೈಪ್ ಮಾಡಿ ಪರೀಕ್ಷಿಸಬಹುದು. ಡೌನ್ ಲೋಡ್ ಮತ್ತು ಇನ್ಸ್ಟಾಲೇಷನ್ ಗಾಗಿ ಇಲ್ಲಿ ನೀವು ಚೆಕ್ ಫಾರ್ ದಿ ಅಪ್ ಡೇಟ್ ನ್ನು ಕ್ಲಿಕ್ಕಿಸಬೇಕು.

Best Mobiles in India

English summary
Microsoft Windows 10 October 2018 Update Now Available: How to Download and Install. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+