ಆನ್‌ಲೈನಿನಲ್ಲಿ 'ಲ್ಯಾಪ್‌ಟಾಪ್‌' ಖರೀದಿಸುವಾಗ 5 ಅಂಶಗಳನ್ನು ಮರೆಯಲೇಬೇಡಿ!

|

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಮಾರುಕಟ್ಟೆಗಿಂತ ಆನ್‌ಲೈನ್‌ನಲ್ಲಿ ಲ್ಯಾಪ್‌ಟಾಪ್‌ ಖರೀದಿಸುವವರ ಪ್ರಮಾಣ ಹೆಚ್ಚುತ್ತಿದೆ. ಸಾಮಾನ್ಯ ಅಂಗಡಿಗಳಲ್ಲಿ ಲ್ಯಾಪ್‌ಟಾಪ್‌ ಖರೀದಿಗೆ ಆಯ್ಕೆಗಳು ಕಡಿಮೆ ಇದ್ದರೆ, ಆನ್‌ಲೈನ್‌ನಲ್ಲಿ ವಿವಿಧ ಕಂಪೆನಿಗಳ ಆಯ್ಕೆ ಜೊತೆಗೆ ಬೆಲೆ ಮತ್ತು ಫೀಚರ್ಸ್ ಎಲ್ಲವನ್ನೂ ನೋಡಿ ಲ್ಯಾಪ್‌ಟಾಪ್ ಖರೀದಿ ಮಾಡುವ ಆಯ್ಕೆ ಇರುವುದು ಇದಕ್ಕೆ ಕಾರಣವಾಗಿದೆ.

ಆನ್‌ಲೈನಿನಲ್ಲಿ ಲ್ಯಾಪ್‌ಟಾಪ್‌ ಆಯ್ಕೆ, ಡಿಸೈನಿಂಗ್, ರ್ಯಾಮ್‌, ಸ್ಟೋರೇಜ್‌ ಸಾಮರ್ಥ್ಯ, ವಿಡಿಯೋ ಎಡಿಟಿಂಗ್, ಗೇಮಿಂಗ್‌ ಸೌಲಭ್ಯ, ಬೇಕಾದ ಪ್ರೊಸೆಸರ್, ಜನರೇಷನ್, ಟಚ್ ಸ್ಕ್ರೀನ್, ತೂಕ ಮತ್ತು ಡಿಸ್‌ಪ್ಲೇಯಂತಹ ಮುಂತಾದ ವಿಚಾರ ಬಗ್ಗೆ ತಿಳಿದುಕೊಳ್ಳಬಹುದು. ಇದರಿಂದ ಲ್ಯಾಪ್‌ಟಾಪ್ ಖರೀದಿಗೆ ಮಾಡುವ ವೆಚ್ಚಕ್ಕೆ ಅದರಿಂದ ಸಿಗುವ ಲಾಭವನ್ನು ಲೆಕ್ಕಹಾಕಬಹದು.

ಆನ್‌ಲೈನಿನಲ್ಲಿ 'ಲ್ಯಾಪ್‌ಟಾಪ್‌' ಖರೀದಿಸುವಾಗ 5 ಅಂಶಗಳನ್ನು ಮರೆಯಲೇಬೇಡಿ!

ಕೆಲವೇ ದಿನಗಳಲ್ಲಿ ಕಾಲೇಜುಗಳು ಪ್ರಾರಂಭವಾಗಲಿದ್ದು, ಉನ್ನತ ವಿದ್ಯಾಭ್ಯಾಸಕ್ಕೆ ಉತ್ತಮ ಲ್ಯಾಪ್‌ಟಾಪ್‌ಗಳು ಅತ್ಯಗತ್ಯ ಕೂಡ. ಈ ನಿಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಲ್ಯಾಪ್‌ಟಾಪ್‌ ಖರೀದಿ ಜೋರಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಆನ್‌ಲೈನಿನಲ್ಲಿ ಲ್ಯಾಪ್‌ಟಾಪ್ ಖರೀದಿಗೂ ಮುನ್ನ ಗಮನಿಸಬೇಕಾದ ಅಂಶಗಳನ್ನು ನಾವಿಂದು ತಿಳಿಸಿಕೊಡುತ್ತಿದ್ದೇವೆ.

ಟೆಕ್ಸ್ಟ್ ಮತ್ತು ಇಂಟರ್ನೆಟ್!

ಟೆಕ್ಸ್ಟ್ ಮತ್ತು ಇಂಟರ್ನೆಟ್!

ಕೇವಲ ಟೈಪಿಂಗ್ ಮತ್ತು ಇಂಟರ್‌ನೆಟ್‌ ಬಳಸುವ ಉದ್ದೇಶವಿದ್ದರೆ ನೀವು ಬಳಸುವ ಸಾಫ್ಟ್‌ವೇರ್‌ಗಳಿಗೆ ಸಾಧಾರಣ ಸಾಮರ್ಥ್ಯದ ಹಾರ್ಡ್‌ವೇರ್‌ ಲ್ಯಾಪ್‌ಟಾಪ್ ಸಾಕಾಗುತ್ತದೆ. ಉದಾಹರಣೆಗೆ ಸೆಕೆಂಡಿಗೆ 2.0 ghz ಸ್ಪೀಡ್ ಇರುವ ಐ-3 ಪ್ರೊಸೆಸರ್, 3ಜಿಬಿ ರಾಮ್, ಇನ್‌ಬಿಲ್ಟ್ ಗ್ರಾಫಿಕ್ಸ್, ನಿಮ್ಮ ಅವಶ್ಯಕತೆಗೆ ಬೇಕಾದ ಸಾಮರ್ಥ್ಯದ ಹಾರ್ಡ್ ಡ್ರೈವ್ ಸಾಕು. (ಕಡಿಮೆ ಎಂದರೆ 500 ಜಿಬಿ ಅಥವಾ ಹೆಚ್ಚು ಬೇಕಾದಲ್ಲಿ 1 ಟಿಬಿ). ಇನ್ನು ಟೆಕ್ಸ್ಟ್ ಬಳಕೆದಾರರಿಗೆ 13ಇಂಚಿನ, ರೆಡಿ ಎಚ್‌ಡಿ (730x 1280) ಡಿಸ್‌ಪ್ಲೇ ಸಾಕಾದರೂ, ಹೆಚ್ಚು ಸಿನಿಮಾ ನೋಡುವ ಆಸಕ್ತಿ ಇದ್ದರೆ ಎಚ್‌ಡಿ (1090x1920) ಪರದೆ ಇರುವ ಲ್ಯಾಪ್‌ಟಾಪ್ ಅನ್ನು ಆಯ್ದುಕೊಳ್ಳಿ.

ಫೋಟೊ ವರ್ಕ್ ಮತ್ತು ಡಿಸೈನಿಂಗ್

ಫೋಟೊ ವರ್ಕ್ ಮತ್ತು ಡಿಸೈನಿಂಗ್

ನಿಮಗೆ ಲ್ಯಾಪ್‌ಟಾಪ್ ಫೋಟೊ ಹಾಗೂ ಡಿಸೈನಿಂಗ್ ವಿಚಾರಕ್ಕೆ ಬಳಸುವ ಉದ್ದೇಶವಿದ್ದರೆ, ನೀವು ಬಳಸುವ ಸಾಫ್ಟ್‌ವೇರ್‌ಗಳಿಗೆ ಹೆಚ್ಚು ಸಾಮರ್ಥ್ಯದ ಹಾರ್ಡ್‌ವೇರ್ ಅಗತ್ಯವಿರುತ್ತದೆ. ಅದಕ್ಕಾಗಿ 6 ರಿಂದ 8ನೇ ಜನರೇಷನ್‌ನಿನ ಸೆಕೆಂಡಿಗೆ 2.7 ghz ಅಥವಾ ಅದಕ್ಕಿಂತ ಅಧಿಕ ಕ್ಲಾಕ್ ಸ್ವೀಡಿರುವ ಐ-5 ಅಥವಾ ಐ- 7 ಪ್ರೊಸೆಸರ್ ಲ್ಯಾಪ್‌ಟಾಪ್ ಖರೀದಿಸಿ. 4 ರಿಂದ 8 ಜಿಬಿ RAM, 1 ಟಿಬಿ ಹಾರ್ಡ್ ಡ್ರೈವ್ ಮತ್ತು 1 ಅಥವಾ 2 ಜಿಬಿ ಗ್ರಾಫಿಕ್ಸ್ ಅವಶ್ಯಕತೆ ಇರುತ್ತದೆ .ಫೋಟೊ ಹಾಗೂ ಡಿಸೈನಿಂಗ್ ಬಳಕೆಗೆ 15 ಇಂಚಿನ ಎಚ್‌ಡಿ (1090x1920) ಪರದೆ ಅವಶ್ಯಕ.

ಎಡಿಟಿಂಗ್, ಗ್ರಾಫಿಕ್ಸ್ ಮತ್ತು ಗೇಮಿಂಗ್

ಎಡಿಟಿಂಗ್, ಗ್ರಾಫಿಕ್ಸ್ ಮತ್ತು ಗೇಮಿಂಗ್

ಮೊದಲೆರಡು ಉದ್ದೇಶಗಳಿಗಿಂತ ವಿಡಿಯೊ ಎಡಿಟಿಂಗ್, ಗ್ರಾಫಿಕ್ಸ್ ಮತ್ತು ಗೇಮಿಂಗ್ ಕೆಲಸಕ್ಕೆ ಲ್ಯಾಪ್‌ಟಾಪ್ ಬಳಸುವ ಉದ್ದೇಶವಿದ್ದರೆ ನೀವು ಬಳಸುವ ಸಾಫ್ಟ್‌ವೇರ್‌ಗಳಿಗೆ ಅತಿ ಹೆಚ್ಚು ಸಾಮರ್ಥ್ಯದ ಹಾರ್ಡ್‌ವೇರ್ ಅಗತ್ಯವಿರುತ್ತದೆ. ಸೆಕೆಂಡಿಗೆ 2.8ghz ಸ್ಪೀಡ್ ಇರುವ (ಅಥವಾ ಅದಕ್ಕಿಂತ ಹೆಚ್ಚಿನ) ಐ-7 ಅಥವಾ ಕ್ಸಿಯಾನ್ ಪ್ರೊಸೆಸರ್, 8 ರಿಂದ 16 ಜಿಬಿ ರಾಮ್, 500 ಜಿಬಿ ಎಸ್ಎಸ್‌ಡಿ ಹಾರ್ಡ್ ಡ್ರೈವ್ ಮತ್ತು 2ಜಿಬಿ ಗ್ರಾಫಿಕ್ಸ್ ಇದ್ದರೆ ಉತ್ತಮ ಆಯ್ಕೆ ಎನ್ನಬಹುದು. ಗ್ರಾಫಿಕ್ಸ್ ಮತ್ತು ಗೇಮಿಂಗ್ ಬಳಕೆಗೆ 15 ಇಂಚಿನ ಎಚ್‌ಡಿ (1090x1920) ಪರದೆ ಅವಶ್ಯಕವಾಗಿರುತ್ತದೆ. ವಿಡಿಯೊ ಎಡಿಟಿಂಗ್ ಮತ್ತು ಈ ಗ್ರಾಫಿಕ್ಸ್ ವೇಳೆ ಎಕ್ಸ್‌ಟರ್ನಲ್ ಇ-ಜಿಪಿ ಇದ್ದರೆ ಗ್ರಾಫಿಕ್ಸ್ ವೇಳೆ ಪ್ಲೇಬ್ಯಾಕ್ ಉತ್ತಮವಾಗಿರುತ್ತದೆ.

ಲ್ಯಾಪ್‌ಟಾಪ್ ಬೆಲೆಯನ್ನು ಗಮನಿಸಿ!

ಲ್ಯಾಪ್‌ಟಾಪ್ ಬೆಲೆಯನ್ನು ಗಮನಿಸಿ!

ಕೇವಲ RAM ಮತ್ತು ಹಾರ್ಡ್‌ಡ್ರೈವ್‌ ಸಾಮರ್ಥ್ಯವನ್ನು ಪರಿಗಣಿಸಿ ಲ್ಯಾಪ್‌ಟಾಪ್‌ ಖರೀದಿಸುವುದನ್ನು ಬಿಟ್ಟು ಪ್ರೊಸೆಸರ್ ಮತ್ತು ಅದರ ಜೆನರೇಷನ್ ಹಾಗೂ ಕ್ಲಾಕ್ ಸ್ಪೀಡನ್ನು ಗಮನಿಸಿ ನೋಡಿ. ಇವುಗಳಲ್ಲಿನ ಒಂದೊಂದು ಸಣ್ಣ ಬದಲಾವಣೆಯೂ ಲ್ಯಾಪ್‌ಟಾಪ್‌ನ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. .ಗ್ರಾಫಿಕ್ಸ್ ಮತ್ತು ಡಿಸೈನಿಂಗ್ ಕ್ಷೇತ್ರದವರು ಇದರೊಟ್ಟಿಗೆ ಗ್ರಾಫಿಕ್ಸ್ ಕಾರ್ಡ್ ಮತ್ತು ಪರದೆಯ ಅಳತೆ ಹಾಗೂ ರೆಸಲ್ಯೂಶನನ್ನು ಸಹ ಗಮನಿಸಿಲೇಬೇಕು. ಇನ್ನು , ಎಚ್‌ಡಿಎಂಐ, ಯುಎಸ್‌ಬಿ 3, ಹೆಡ್‌ಫೋನ್‌ ಲಭ್ಯವಿರಲಿದೆಯೇ ಎಂದು ಗಮನಿಸಬೇಕು.

ಜೆನರೇಷನ್ ಮತ್ತು ಕ್ಲಾಕ್ ಸ್ಪೀಡ್ ಚೆಕ್ ಮಾಡಿ!

ಜೆನರೇಷನ್ ಮತ್ತು ಕ್ಲಾಕ್ ಸ್ಪೀಡ್ ಚೆಕ್ ಮಾಡಿ!

ಲ್ಯಾಪ್‌ಟಾಪ್‌ನಲ್ಲಿ RAM ಮತ್ತು ಹಾರ್ಡ್‌ಡ್ರೈವ್‌ ಬಗ್ಗೆ ತಿಳಿಯುವ ನಿಮಗೆ ಅದರಲ್ಲಿನ ಜೆನರೇಷನ್ ಮತ್ತು ಕ್ಲಾಕ್ ಸ್ಪೀಡ್ ಚೆಕ್ ಮಾಡುವುದು ಸುಲಭ ಎನ್ನುವುದು ತಿಳಿಯದೇ ಇರಬಹುದು. ಹಾಗಾಗಿ, ಲ್ಯಾಪ್‌ಟಾಪ್‌ ತೆರೆದ ನಂತರ ಮೈ ಕಂಪ್ಯೂಟರ್ ಐಕಾನ್ ಮೇಲೆ ರೈಟ್ ಕ್ಲಿಕ್ ಮಾಡಿ. ಪ್ರಾಪರ್ಟಿಸ್ ಅನ್ನು ಆಯ್ಕೆ ಮಾಡಿಕೊಳ್ಳಿ. ಅದು ತೆರೆದ ನಂತರ ನೀವು ಸುಲಭವಾಗಿ ಪ್ರೊಸೆಸರ್ ಮತ್ತು ಕ್ಲಾಕ್ ಸ್ಪೀಡ್‌ ಅನ್ನು ಗಮನಿಸಬಹುದು. ಹೀಗೆ ಒಂದು ಅತ್ಯುತ್ತಮ ಲ್ಯಾಪ್‌ಟಾಪ್ ಖರೀದಿಸಲು ನಿಮಗೆ ಸಾಧ್ಯವಾಗಬಹುದು.

Best Mobiles in India

English summary
There are some great budget laptops out there, but just because ... demand, and that problem will plague you until it's time to buy again. ... Going for a step-up model with a bigger drive and more RAM is probably a good idea. . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X