ಸಿಂಗಲ್‌ ಕ್ಲಿಕ್‌ನಲ್ಲಿ ಹಲವು ಆಪ್‌ಗಳನ್ನ ಇನ್‌ಸ್ಟಾಲ್‌ ಮಾಡುವುದು ಹೇಗೆ?

|

ಇದು ಆಪ್‌ ಆಧಾರಿತ ಜಮಾನ. ಪ್ರತಿಯೊಂದು ಕಾರ್ಯಕ್ಕೂ ಹೊಸ ಮಾದರಿಯ ಆಪ್‌ಗಳು ಇಂದು ಲಭ್ಯವಿವೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಪರ್ಸನಲ್‌ ಕಂಪ್ಯೂಟರ್‌ನಲ್ಲಿಯೂ ಸಹ ಬಳಸಬಹುದಾಗಿದೆ. ಸದ್ಯ ನೀವು ಉಪಯೋಗಿಸುವ ಲ್ಯಾಪ್‌ಟಾಪ್‌ನಲ್ಲಿಯೂ ಎಲ್ಲಾ ಅಗತ್ಯ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಬೇಕಿರುತ್ತದೆ. ಬದಲಿಗೆ ನೀವು ನಿಮಗೆ ಬೇಕಾದ ಹಲವು ಅಪ್ಲಿಕೇಶನ್‌ಗಳನ್ನ ಒಂದೊಂದಾಗಿ ಡೌನ್‌ಲೋಡ್‌ ,ಮಾಡುತ್ತಾ ಕೂರುವುದು ಬೇಸರವನ್ನುಂಟು ಮಾಡಲಿದೆ. ಆದರೆ ಇದಕ್ಕೆ ಬದಲಾಗಿ ಒಂದೇ ಕ್ಲಿಕ್‌ನಲ್ಲಿ ನಿಮಗೆ ಅಗತ್ಯವಿರುವ ಎಲ್ಲಾ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಲು ಒಂದು ಮಾರ್ಗವಿದೆ ಅದು ಏನು ಅನ್ನೊದನ್ನ ತಿಳಿದುಕೊಳ್ಳೋಣ ಬನ್ನಿರಿ.

ವಿಂಡೋಸ್‌

ಹೌದು, ವಿಂಡೋಸ್‌ ಲ್ಯಾಪ್‌ಟಾಪ್‌ನಲ್ಲಿ ಮೂರು ವಿಭಿನ್ನ ಸೇವೆಗಳನ್ನು ಬಳಸಿಕೊಂಡು ವಿಂಡೋಸ್‌ನಲ್ಲಿ ಅನೇಕ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಬಹುದಾಗಿದೆ. ಇನ್ನು ವಿಂಡೋಸ್ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಲು ಬ್ಯಾಚ್ ಮಾಡಲು ನಿಮಗೆ ಅನುಮತಿಸುವ ಸೇವೆಗಳ ಒಂದು ಗುಂಪಿದೆ ಅನ್ನೊದು ಮೊದಲು ತಿಳಿದಿರಬೇಕು. ಆದಾಗ್ಯೂ, ವಿಂಡೋಸ್‌ನಲ್ಲಿ ಏಕಕಾಲದಲ್ಲಿ ಅನೇಕ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಲು ಕೆಲವು ಹಂತಗಳ ಬಗ್ಗೆ ತಿಳಿಸಿಕೊಡ್ತೀವಿ ಓದಿರಿ.

ನೈನೈಟ್

ನೈನೈಟ್

ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಮಲ್ಟಿ ಆಪ್ಸ್‌ ಇನ್‌ಸ್ಟಾಲ್‌ ಮಾಡಲು ಅವಕಾಶ ನೀಡುವ ಅತ್ಯುತ್ತಮ ಸೇವೆಗಳಲ್ಲಿ ನೈನೈಟ್ ಒಂದು. ಹಾಗಾದ್ರೆ ನೈನೈಟ್‌ ಮೂಲಕ ಹೇಗೆ ಆಪ್ಸ್‌ ಇನ್‌ಸ್ಟಾಲ್‌ ಮಾಡುವುದು ಹೇಗೆ ಅನ್ನೊದಕ್ಕೆ ಈ ಹಂತಗಳನ್ನು ಅನುಸರಿಸಿ.
ಹಂತ:1 ನಿಮ್ಮ ಪರ್ಸ‌ನಲ್‌ ಕಂಪ್ಯೂಟರ್‌ನಲ್ಲಿ ninite.com ಗೆ ಭೇಟಿ ನೀಡಿ.
ಹಂತ:2 ಅಪ್ಲಿಕೇಶನ್ ಕ್ಯಾಟಲಾಗ್ ಅನ್ನು ಪರಿಶೀಲಿಸಲು ಕೆಳಗೆ ಸ್ಕ್ರಾಲ್ ಮಾಡಿ.
ಹಂತ:3 ನೈನೈಟ್‌ನಲ್ಲಿನ ಸಾಫ್ಟ್‌ವೇರ್‌ನ ಪಟ್ಟಿಯಲ್ಲಿ ಅಗತ್ಯವಿರುವ ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಹೊಂದಿದೆ.
ಹಂತ:4 ಇದರಲ್ಲಿ ನೀವು ನಿಮ್ಮ ಆಯ್ಕೆಯ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಟಿಕ್ ಮಾಡಿ.
ಹಂತ:5 ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ನಿಮ್ಮ ನೈನೈಟ್ ಪಡೆಯಲು ಕ್ಲಿಕ್ ಮಾಡಿ.
ಈಗ ನೀವು ಆಯ್ಕೆ ಮಾಡಿದ ಎಲ್ಲಾ ಅಪ್ಲಿಕೇಶನ್‌ಗಳು ಒಂದೇ ಸಮಯದಲ್ಲಿ ಡೌನ್‌ಲೋಡ್ ಆಗಲಿದೆ.

ಪ್ಯಾಚ್ ಮೈ ಪಿಸಿ

ಪ್ಯಾಚ್ ಮೈ ಪಿಸಿ

ಇನ್ನು ವಿಂಡೋಸ್‌ ಲ್ಯಾಪ್‌ಟಾಪ್‌ನಲ್ಲಿ ಮಲ್ಟಿಪಲ್‌ ಆಪ್ಸ್‌ ಅನ್ನು ಸಿಂಗಲ್‌‌ ಕ್ಲಿಕ್‌ನಲ್ಲಿ ಡೌನ್‌ಲೋಡ್‌ ಮಾಡಲು ಪ್ಯಾಚ್ ಮೈ ಪಿಸಿ ಕೂಡ ಉತ್ತಮ ಆಯ್ಕೆಯಾಗಿದೆ. ಇದು ಸಹ ವಿಂಡೋಸ್‌ನಲ್ಲಿ ಏಕಕಾಲದಲ್ಲಿ ಅನೇಕ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ನಿಮಗೆ ಅನುಮತಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ಮಲ್ಟಿ ಆಪ್ಸ್‌ಅನ್ನು ಇನ್‌ಸ್ಟಾಲ್‌ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಪ್ಯಾಚ್ ಮೈ ಪಿಸಿ

ಹಂತ:1 ಪ್ಯಾಚ್ ಮೈ ಪಿಸಿ ಹೋಮ್ ಅಪ್‌ಡೇಟರ್ ಡೌನ್‌ಲೋಡ್ ಮಾಡಿ.
ಹಂತ:2 ನಿಮ್ಮ ಕಂಪ್ಯೂಟರ್‌ನಲ್ಲಿ ಪ್ಯಾಚ್ ಮೈ ಪಿಸಿ ಇನ್‌ಸ್ಟಾಲ್‌ ಮಾಡಿ ನಂತರ ಅದನ್ನು ತೆರೆಯಿರಿ.
ಹಂತ:3 ನಿಮಗೆ ಅಗತ್ಯವಿರುವ ಅಪ್ಲಿಕೇಶನ್‌ಗಳನ್ನು ಆಯ್ಕೆಮಾಡಿ. ನಂತರ, ಮುಂದೆ ಹೋಗಲು ಇನ್‌ಸ್ಟಾಲ್ ಬಟನ್ ಒತ್ತಿರಿ.
ಹಂತ:4 ಇದಲ್ಲದೆ ನೀವು ಆಪ್ಡೇಟ್‌ ಆಪ್ಸ್‌ಗಳನ್ನು ನಿರ್ವಹಿಸಲು ಸಿಂಗಲ್ ಕ್ಲಿಕ್ ಮಾಡುವ ಮೂಲಕ ನೀವು ಬಾಕಿ ಇರುವ ಅಪ್ಲಿಕೇಶನ್ ನವೀಕರಣಗಳನ್ನು ಸಹ ಇನ್‌ಸ್ಟಾಲ್‌ ಮಾಡಬಹುದು.

Best Mobiles in India

Read more about:
English summary
If you’ve a new Windows machine, or just did a fresh install, this guide will help you install essential apps in one click.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X