ಮೇ 30ಕ್ಕೆ ಎಂಟ್ರಿ ಕೊಡಲಿದೆ Motorola G04s : 50MP ಕ್ಯಾಮೆರಾ, ಅಧ್ಬುತ ಬ್ಯಾಟರಿ ಬ್ಯಾಕಪ್!
Motorola G04s ಸ್ಮಾರ್ಟ್‌ಫೋನ್ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. Motorola G04s ಸ್ಮಾರ್ಟ್‌ಫೋನ್ ಮಾರುಕಟ್ಟೆ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಮೇ 30 (2024) ರಂದು ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಗ್ರ್ಯಾಂಡ್ ಆಗಿ ಲಾಂಚ್ ಆಗಲಿದೆ.
ಕಳೆದ ಏಪ್ರಿಲ್ (2024) ತಿಂಗಳಿನಲ್ಲಿ ಮೊಟೊರೊಲಾ ಯುರೋಪಿಯನ್ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ Moto G04s ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿತ್ತು. ಇದು ಮೊಟೊರೊಲಾದ ವಿನೂತನ ಸ್ಮಾರ್ಟ್‌ಫೋನ್ ಆಗಿತ್ತು. ಇದೀಗ, ತನ್ನ ಸರಣಿಯ Motorola G04s ಸ್ಮಾರ್ಟ್‌ಫೋನ್ ಭಾರತಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡುತ್ತಿದೆ.

Motorola G04s ಸ್ಮಾರ್ಟ್‌ಫೋನ್ ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದು ಯುನಿಸೊಕ್ T606 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಹಾಗಾದ್ರೆ, ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎನ್ನುವುದನ್ನು ಈ ನಾವು ತಿಳಿಸಿಕೊಡ್ತೀವಿ. ಮುಂದೆ ಓದಿ.
5,000mAh ಅಧ್ಬುತ ಬ್ಯಾಟರಿ ಬ್ಯಾಕಪ್
Motorola G04s ಸ್ಮಾರ್ಟ್‌ಫೋನ್ ಇದು ಯುನಿಸೊಕ್ T606 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 8GB RAM ವರೆಗೆ ವರ್ಚುಮ್ RAM ವಿಸ್ತರಣೆಯನ್ನು ನೀಡುತ್ತದೆ. Motorola G04s ಮೊಬೈಲ್ 50MP ಕ್ಯಾಮೆರಾ, 5,000mAh ಅಧ್ಬುತ ಬ್ಯಾಟರಿ ಬ್ಯಾಕಪ್ ಒಳಗೊಂಡಿದೆ.
ಫ್ಲಿಪ್‌ಕಾರ್ಟ್ ಮೂಲಕ ಮಾರಾಟ
ಅಧಿಕೃತ ಮಾಹಿತಿಯ ಪ್ರಕಾರ, Moto G04s ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿನ ಜನಪ್ರಿಯ ಇ-ರೀಟೇಲರ್ ಫ್ಲಿಪ್‌ಕಾರ್ಟ್ ಮೂಲಕ (ಆನ್‌ಲೈನ್) ಮಾರಾಟ ಮಾಡಲಾಗುತ್ತದೆ. ಯುರೋಪ್‌ನಲ್ಲಿ G04s ಅನ್ನು 6.56-ಇಂಚಿನ IPS LCD ಪ್ಯಾನೆಲ್‌ನೊಂದಿಗೆ ಘೋಷಿಸಲಾಯಿತು. ಅದು HD+ ರೆಸಲ್ಯೂಶನ್, 90Hz ರಿಫ್ರೆಶ್ ದರ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಮತ್ತು ಸೆಂಟರ್ ಅಲೈನ್ ಪಂಚ್ ಹೋಲ್ ಕಟೌಟ್ ಅನ್ನು ಹೊಂದಿದೆ.
Moto G04s ಪ್ರೊಸೆಸರ್ ಯಾವುದು?
Motorola G04s ಸ್ಮಾರ್ಟ್‌ಫೋನ್ UNISOC T606 ಪ್ರೊಸೆಸರ್ ಅನ್ನು ಹೊಂದಿದೆ. ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ಬಳಕೆದಾರರು ಸ್ಟೋರೇಜ್ ವಿಸ್ತರಣೆ ಮಾಡಬಹುದು. Motorola G04s ಸ್ಮಾರ್ಟ್‌ಫೋನ್ 8GB RAMವರೆಗೆ ವರ್ಚುಮ್ RAM ವಿಸ್ತರಣೆ ಸೌಲಭ್ಯ ಒಳಗೊಂಡಿದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ (ಸೆಲ್ಫಿ ಶೂಟರ್) ಕ್ಯಾಮೆರಾ ಒಳಗೊಂಡಿದೆ. 4GB RAM ಮತ್ತು 64GB ಇಂಟರ್ ಸ್ಟೋರೇಜ್ ಒಳಗೊಂಡಿದೆ.
ನಾಲ್ಕು ಬಣ್ಣಗಳಲ್ಲಿ ಬಿಡುಗಡೆ
ಇನ್ನೂ Motorola G04s ಸ್ಮಾರ್ಟ್‌ಫೋನ್‌ನ ಮತ್ತೊಂದು ವಿಶೇಷತೆ ಎಂದರೆ 5,000mAh ಬ್ಯಾಟರಿ ಬ್ಯಾಕಪ್. ಇದು 15W ವೈರ್ಡ್ ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ. Moto G04s ನಾಲ್ಕು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಕಾನ್ಕಾರ್ಡ್ ಬ್ಲಾಕ್ (Concord Black), ಸೀ ಗ್ರೀನ್ (Sea Green), ಸ್ಯಾಟಿನ್ ಬ್ಲೂ (Satin Blue) ಮತ್ತು ಸನ್ರೈಸ್ ಆರೆಂಜ್ (Sunrise Orange) ಬಣ್ಣದ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯವಿರುತ್ತದೆ. Motorola ಭಾರತದಲ್ಲಿ 10,000 ರೂಪಾಯಿಗಿಂತ ಕಡಿಮೆ ದರದಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
ಒಟ್ನಲ್ಲಿ, ಈ ಹಿಂದೆ ಮೊಟೊರೊಲಾ ಪರಿಚಯಿಸಿದ್ದ ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಳಿಕ, ಮೊಟೊರೊಲಾ ತನ್ನ ಬಳಕೆದಾರರಿಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ Moto G04s ಸ್ಮಾರ್ಟ್‌ಫೋನ್ ಮಾದರಿಯನ್ನು ಘೋಷಿಸಿತು. ಅಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ದೇಶದಲ್ಲಿನ ಗ್ರಾಹಕರಿಗೆ ಹೊಸ ಉಡುಗೊರೆ ನೀಡುತ್ತಿದೆ. ಇದು ಬಿಡುಗಡೆಯಾದ ಬಳಿಕ Motorola G04s ಸ್ಮಾರ್ಟ್‌ಫೋನ್‌ನ ಮತ್ತಷ್ಟು ವಿಶೇಷತೆಗಳು ತಿಳಿಯಲಿದೆ.


Click it and Unblock the Notifications








