ಐಫೋನ್ ಬ್ಯಾಟರಿ ಸಮಸ್ಯೆಯೇ ಇಲ್ಲಿದೆ ಪರಿಹಾರ
ನಿಮ್ಮ ಐಫೋನ್ ಚಾರ್ಜ್ ಆಗುತ್ತಿಲ್ಲವೇ, ನಿಮ್ಮ ಬ್ಯಾಟರಿಯನ್ನು ಬದಲಾಯಿಸುವ ಸಮಯ ಬಂದೊದಗಿದೆ ಎಂದು ತಿಳಿದುಕೊಳ್ಳದಿರಿ. ಆದರೆ ನಿಮ್ಮ ಐಫೋನ್ ಬ್ಯಾಟರಿಯನ್ನು ಬದಲಾಯಿಸುವ ಮುನ್ನ ಸ್ವಲ್ಪ ಆಲೋಚಿಸಿ. ಬರಿಯ ಬ್ಯಾಟರಿ ಸಮಸ್ಯೆ ಮಾತ್ರವೇ ಇದಕ್ಕೆ ಕಾರಣವಾಗಿರಲಾರದು. ನೀವು ತಿಳಿಯದ ಕೆಲವೊಂದು ಚಾರ್ಜಿಂಗ್ ಸಮಸ್ಯೆಗಳನ್ನು ನಿಮ್ಮ ಫೋನ್ ಹೊಂದಿರಬಹುದು.
ಇದನ್ನೂ ಓದಿ: ಮರಣದ ನಂತರ ನಿಮ್ಮ ಸೋಶಿಯಲ್ ಮೀಡಿಯಾ ಖಾತೆ ಏನಾಗುತ್ತದೆ?
ಆದ್ದರಿಂದ ನಿಮ್ಮ ಫೋನ್ ಬ್ಯಾಟರಿನ್ನು ಬದಲಾಯಿಸುವ ಮುನ್ನ ನಾವು ನೀಡಿರುವ ಸಲಹೆಗಳನ್ನು ಪಾಲಿಸಿ. ನಿಮ್ಮ ಐಫೋನ್ ಚಾರ್ಜಿಂಗ್ ಸಮಸ್ಯೆಗೆ ಈ ಅಂಶಗಳು ಕಾರಣವಾಗಿರಬಹುದು ಎಂಬುದು ನಂತರ ನಿಮಗೆ ತಿಳಿಯುತ್ತದೆ.
ಒಮ್ಮೊಮ್ಮೆ ನಿಮ್ಮ ಐಫೋನ್ ಅನ್ನು ರೀಸ್ಟಾರ್ಟ್ ಮಾಡುವುದೂ ಕೂಡ ಫೋನ್‌ನಲ್ಲಿರುವ ಸಮಸ್ಯೆಗಳನ್ನು ನಿವಾರಿಸುತ್ತದೆ. ನಿಮ್ಮ ಫೋನ್ ಚಾರ್ಜ್ ಆಗುತ್ತಿಲ್ಲ ಎಂದಾದಲ್ಲಿ ಅದನ್ನು ರೀಸ್ಟಾರ್ಟ್ ಮಾಡಿ ಮತ್ತು ಪುನಃ ಪ್ಲಗಿನ್ ಮಾಡಿ ನಿಮ್ಮ ಕಂಪ್ಯೂಟರ್ ಅಥವಾ ಪವರ್ ಅಡಾಪ್ಟರ್‌ಗೆ ನೀವು ಕನೆಕ್ಟ್ ಮಾಡುತ್ತಿರುವ ಯುಎಸ್‌ಬಿ ಕೇಬಲ್‌ನಲ್ಲಿ ಏನಾದರೂ ಸಮಸ್ಯೆ ಇದ್ದಿರಬಹುದು. ಅದಕ್ಕಾಗಿ ಯುಎಸ್‌ಬಿ ಕೇಬಲ್ ಪರಿಶೀಲಿಸಿಕೊಳ್ಳಿ ಮತ್ತು ಇನ್ನೊಂದನ್ನು ಖರೀದಿಸಿ. ವಾಲ್ ಚಾರ್ಜರ್ ಪವರ್ ಅಡಾಪ್ಟರ್ ಅನ್ನು ಬಳಸಿ ನಿಮ್ಮ ಐಫೋನ್ ಅನ್ನು ನೀವು ಚಾರ್ಜ್ ಮಾಡುತ್ತಿದ್ದೀರಿ ಎಂದಾದಲ್ಲಿ ಇದನ್ನು ನೀವು ಪರಿಶೀಲಿಸಲೇಬೇಕು. ಇದು ಸರಿ ಇಲ್ಲ ಎಂದಾದಲ್ಲಿ ಇನ್ನೊಂದು ವಾಲ್ ಚಾರ್ಜರ್ ಖರೀದಿಸಿ. ನೀವು ಸರಿಯಾದ ಯುಎಸ್‌ಬಿ ಪೋರ್ಟ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಯುಎಸ್‌ಬಿ ಪೋರ್ಟ್ ಎಲ್ಲಿಯಾದರೂ ತುಂಡಾಗಿದೆಯೇ ಎಂಬುದನ್ನು ಗಮನಿಸಿ ನಿಮ್ಮ ಐಫೋನ್ ಚಾರ್ಜರ್ ಪರಿಶೀಲಿಸಿದ ನಂತರ ಅದನ್ನು ಸರಿಯಾದ ಸ್ಥಳದಲ್ಲಿ ಇರಿಸಿ ಚಾರ್ಜ್ ಮಾಡುತ್ತಿದ್ದೀರಾ ಎಂಬುದನ್ನು ಗಮನಿಸಿ. ಇದಕ್ಕೆ ಹೆಚ್ಚು ವೇಗದ ಯುಎಸ್‌ಬಿ ಪೋರ್ಟ್‌ಗಳ ಅವಶ್ಯಕತೆ ಇರುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ. ಆದ್ದರಿಂದ ಕೀಬೋರ್ಡ್ ಬಳಸಿ ಫೋನ್ ಚಾರ್ಜ್ ಮಾಡದಿರಿ. ನಿಮ್ಮ ಐಫೋನ್‌ನಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಕೆಲವೊಮ್ಮೆ ವಿಪರೀತ ಖರ್ಚು ಉಂಟಾಗಬಹುದು. ಆ ಸಂದರ್ಭದಲ್ಲಿ ಕೆಲವೊಂದು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಅದರಲ್ಲೊಂದು ರಿಕವರಿ ಮೋಡ್ ಬಳಸುವುದಾಗಿದೆ. ಅಂದರೆ ರೀಸ್ಟಾರ್ಟ್ ಮಾಡುವುದಾಗಿದೆ ಇದು ಕೆಲವೊಂದು ಮುಖ್ಯ ಸಮಸ್ಯೆಗಳನ್ನು ದೂರಮಾಡಬಹುದು ನಿಮ್ಮ ಐಫೋನ್‌ನ ಲೈಟ್ನಿಂಗ್ ಕನೆಕ್ಟರ್ ಅಥವಾ ಯುಎಸ್‌ಬಿ ಕೇಬಲ್ ನಡುವೆ ಏನಾದರೂ ಸಿಲುಕಿರಬಹುದು. ಇದನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ಐಫೋನ್ ಬ್ಯಾಟರಿ ಡೆಡ್ ಆಗಿದ್ದರೆ ಅದನ್ನು ಸ್ಥಳಾಂತರಿಸಬೇಕು. ನಿಮ್ಮ ಬ್ಯಾಟರಿ ಡೆಡ್ ಆಗಿದ್ದಲ್ಲಿ ಅದಕ್ಕೆ ಸೂಕ್ತ ಮುತುವರ್ಜಿಯನ್ನು ವಹಿಸಬೇಕು.
ಐಫೋನ್ ಬ್ಯಾಟರಿ ಸಮಸ್ಯೆಯೇ ಇಲ್ಲಿದೆ ಪರಿಹಾರ

ಐಫೋನ್ ಬ್ಯಾಟರಿ ಸಮಸ್ಯೆಯೇ ಇಲ್ಲಿದೆ ಪರಿಹಾರ

ಐಫೋನ್ ಬ್ಯಾಟರಿ ಸಮಸ್ಯೆಯೇ ಇಲ್ಲಿದೆ ಪರಿಹಾರ

ಐಫೋನ್ ಬ್ಯಾಟರಿ ಸಮಸ್ಯೆಯೇ ಇಲ್ಲಿದೆ ಪರಿಹಾರ

ಐಫೋನ್ ಬ್ಯಾಟರಿ ಸಮಸ್ಯೆಯೇ ಇಲ್ಲಿದೆ ಪರಿಹಾರ

ಐಫೋನ್ ಬ್ಯಾಟರಿ ಸಮಸ್ಯೆಯೇ ಇಲ್ಲಿದೆ ಪರಿಹಾರ

ಐಫೋನ್ ಬ್ಯಾಟರಿ ಸಮಸ್ಯೆಯೇ ಇಲ್ಲಿದೆ ಪರಿಹಾರ

ಐಫೋನ್ ಬ್ಯಾಟರಿ ಸಮಸ್ಯೆಯೇ ಇಲ್ಲಿದೆ ಪರಿಹಾರ


Click it and Unblock the Notifications








