Subscribe to Gizbot

ಇನ್ಮುಂದೆ ಮೊಬೈಲ್, ಕಂಪ್ಯೂಟರ್‌ಗೆ ಆಂಟಿವೈರಸ್ ಅವಶ್ಯಕತೆಯೇ ಇಲ್ಲ!!..ಏಕೆ ಗೊತ್ತಾ?

Written By:

ಇನ್ಮುಂದೆ ನಿಮ್ಮ ಯಾವುದೇ ಸ್ಮಾರ್ಟ್‌ಫೋನ್, ಕಂಪ್ಯೂಟರ್, ಅಥವಾ ಇನ್ನಾವುದೇ ಇಂಟರ್‌ನೆಟ್ ಆಧಾರಿತ ಡಿವೈಸ್‌ಗಳು ಹ್ಯಾಕ್ ಆಗುವುದು ಇಲ್ಲ ಮತ್ತು ವೈರಸ್ ದಾಳಿಗೂ ಸಿಲುಕುವುದಿಲ್ಲ!..ಹೌದು, ಇಂತಹದೊಂದು ಸುದ್ದಿ ಇದೀಗ ಕಂಪ್ಯೂಟರ್ ಜಗತ್ತಿನಲ್ಲಿ ವೈರಲ್ ಆಗಿದೆ.!!

ಭಾರತದ ಪರಮಸ್ನೇಹಿ ರಾಷ್ಟ್ರ ಇಸ್ರೇಲ್ ದೇಶದ ವಿಜ್ಞಾನಿಗಳು ಸ್ಮಾರ್ಟ್‌ಫೋನ್‌ ಭದ್ರತೆಗಾಗಿ ಅತ್ಯುತ್ತಮ ತಂತ್ರಜ್ಞಾನವನ್ನು ಕಂಡುಹಿಡಿದ್ದು, ಈ ಪ್ರೋಗ್ರಾಂ ಅಳವಡಿಸಿಕೊಂಡ ಯಾವುದೇ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್ ಹಾಗೂ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲಾ ಮತ್ತು ವೈರಸ್‌ಗಳಿಂದ ರಕ್ಷಣೆ ಮಾಡಬಹುದು ಎಂದು ತಿಳಿಸಿದ್ದಾರೆ.

ಈ ತಂತ್ರಜ್ಞಾನದಿಂದ ತಂತ್ರಜ್ಞಾನ ಲೋಕದಲ್ಲಿ ಭಾರಿ ಬದಲಾವಣೆ ಆಗುವ ನಿರೀಕ್ಷೆ ಇದ್ದು, ಹಾಗಾದರೆ, ಆ ಪ್ರೋಗ್ರಾಂ ಯಾವುದು? ಈ ತಂತ್ರಜ್ಞಾನ ಹೇಗೆ ಕೆಲಸ ನಿರ್ವಹಿಸುತ್ತದೆ.? ಏನಿದರ ವಿಶೇಷತೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇದು ಫೈರ್‌ವಾಲ್‌ ಪ್ರೋಗ್ರಾಂ!!

ಇದು ಫೈರ್‌ವಾಲ್‌ ಪ್ರೋಗ್ರಾಂ!!

ಇಸ್ರೇಲ್ ದೇಶದ ವಿಜ್ಞಾನಿಗಳು ಸ್ಮಾರ್ಟ್‌ಫೋನ್‌ ಭದ್ರತೆಗಾಗಿ ಈ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದ್ದು, ಈ ಫೈರ್‌ವಾಲ್‌ ಪ್ರೋಗ್ರಾಂ ಮೂಲಕ ಕಂಪ್ಯೂಟರ್, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್ ಹಾಗೂ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕರ್‌ಗಳು ಮತ್ತು ವೈರಸ್‌ಗಳಿಂದ ರಕ್ಷಣೆ ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದು ಆಂಟಿವೈರಸ್ ಅಲ್ಲ!!

ಇದು ಆಂಟಿವೈರಸ್ ಅಲ್ಲ!!

ಇಸ್ರೇಲ್ ದೇಶದ ವಿಜ್ಞಾನಿಗಳು ಕಂಡುಹಿಡಿದಿರುವ ಈ ಫೈರ್‌ವಾಲ್‌ ಪ್ರೋಗ್ರಾಂ ಆಂಟಿವೈರಸ್ ಅಲ್ಲ! ಬದಲಿಗೆ ಇದೊಂದು ಪ್ರೋಗ್ರಾಂ ಆಗಿದ್ದು, ಲ್ಲಿ ಈ ಫೈರ್‌ವಾಲ್‌ ಪ್ರೋಗ್ರಾಂ ಅನ್ನು ಡಿವೈಸ್‌ಗಳಿಗೆ ಸೇವ್ ಮಾಡಿಕೊಂಡರೇ ಸಾಕು. ಯಾವುದೇ ವೈರಸ್ ಅಥವಾ ಹ್ಯಾಕಿಂಗ್ ದಾಳಿ ನಡೆಯುವುದಿಲ್ಲ.!!

ಇದು ರಕ್ಷಣೆ ಹೇಗೆ ಒದಗಿಸುತ್ತದೆ.!!

ಇದು ರಕ್ಷಣೆ ಹೇಗೆ ಒದಗಿಸುತ್ತದೆ.!!

ಮೊಬೈಲ್ ಅಥವಾ ಸ್ಮಾರ್ಟ್‌ಫೋನ್‌ ಬಳಕೆದಾರರು ಈ ಫೈರ್‌ವಾಲ್‌ ಪ್ರೋಗ್ರಾಂ ಅನ್ನು ಮೈಕ್ರೊ ಚಿಪ್‌ನಲ್ಲಿ ಸೇವ್ ಮಾಡಿಕೊಂಡು ಅದನ್ನು ಫೋನ್‌ನಲ್ಲಿ ಅಳವಡಿಸಿಕೊಂಡರೇ ಅದು ಸ್ವಯಂ ಚಾಲಿತವಾಗಿ ರಕ್ಷಣೆ ಒದಗಿಸುತ್ತದೆ.

ಪದೇ ಪದೇ ಅಪ್‌ಡೇಟ್‌ ಮಾಡುವಹಾಗಿಲ್ಲ!!

ಪದೇ ಪದೇ ಅಪ್‌ಡೇಟ್‌ ಮಾಡುವಹಾಗಿಲ್ಲ!!

ನಮ್ಮ ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಆಂಟಿವೈರಸ್ ಹಾಕಿಕೊಂಡು ಅದನ್ನು ಪದೇ ಪದೇ ಅಪ್‌ಡೇಟ್‌ ಮಾಡಬೇಕು. ಆದರೆ, ಫೈರ್‌ವಾಲ್‌ ಪ್ರೋಗ್ರಾಂ ಅನ್ನು ಒಮ್ಮೆ ಇನ್‌ಸ್ಟಾಲ್ ಮಾಡಿದರೆ ಸಾಕು. ಮತ್ತೆ ಮತ್ತೆ ಅಪ್‌ಡೇಟ್ ಮಾಡುವ ಪ್ರಮೆಯವೇ ಇರುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ಶೀಘ್ರವೇ ಬಿಡುಗಡೆ!!

ಶೀಘ್ರವೇ ಬಿಡುಗಡೆ!!

ಇಸ್ರೇಲ್ ದೇಶದ ವಿಜ್ಞಾನಿಗಳು ಈಗಾಗಲೇ ಈ ತಂತ್ರಜ್ಞಾನವನ್ನು ಅಭಿವೃಧ್ದಿಪಡಿಸಿದ್ದು, ಈ ಫೈರ್‌ವಾಲ್‌ ಪ್ರೋಗ್ರಾಂ ಇನ್ನು ಕೆಲವೇ ದಿವಸಗಳಲ್ಲಿ ಬಳಕೆಗೆ ಬರುತ್ತದೆ ಎಂದು ಇಂಗ್ಲೀಷ್ ಟೆಕ್ ಮಾಧ್ಯಮಗಳು ವರದಿ ಮಾಡಿವೆ.!! ಹಾಗಾಗಿ, ಇನ್ನು ಹ್ಯಾಕರ್‌ಗಳ ಭಯದಿಂದ ಎಲ್ಲರೂ ಪಾರಾಗಬಹುದು.!!

ಓದಿರಿ:ಭಾರಿ ಕುತೋಹಲ ಹುಟ್ಟಿಸಿದ ಐಫೋನ್ 8 ಫೀಚರ್ಸ್!..ಹೇಗಿದೆ ಗೊತ್ತಾ ಫೋನ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Scientists have developed an innovative firewall programme that can protect smartphones from malicious codes and security threats.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot