ನಿಮ್ಮ ಹಳೆ ಫೋನ್, ಎಲೆಕ್ಟ್ರಾನಿಕ್ಸ್‌ ವಸ್ತುಗಳಲ್ಲಿ ಚಿನ್ನ!!..ಬಂದಿದೆ ಬಾರಿ ಬೆಲೆ!!

ಪ್ರತಿ ವರ್ಷ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಬಳಕೆ ಮಾಡುವ 300 ಟನ್‌ಗೂ ಹೆಚ್ಚು ಚಿನ್ನವನ್ನು ಪುನರ್ ಬಳಕೆ ಮಾಡಲು ಸಾಧ್ಯವಿದೆ ಎನ್ನಲಾಗಿದೆ.!!

|

ಯಾವುದೇ ವಿಷಕಾರಿ ರಾಸಾಯನಿಕಗಳನ್ನು ಬಳಸದೆಯೇ ತ್ಯಾಜ್ಯ ಎಲೆಕ್ಟ್ರಾನಿಕ್ಸ್‌ಗಳಿಂದ ಅಮೂಲ್ಯವಾದ ಲೋಹಗಳನ್ನು ಹೊರತೆಗೆಯುವ ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.! ಹಾಗಾಗಿ, ಪ್ರತಿ ವರ್ಷ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಬಳಕೆ ಮಾಡುವ 300 ಟನ್‌ಗೂ ಹೆಚ್ಚು ಚಿನ್ನವನ್ನು ಪುನರ್ ಬಳಕೆ ಮಾಡಲು ಸಾಧ್ಯವಿದೆ ಎನ್ನಲಾಗಿದೆ.!!

ತ್ಯಾಜ್ಯ ಎಲೆಕ್ಟ್ರಾನಿಕ್ಸ್‌ ಪ್ರಸ್ತುತ ಅಸ್ತಿತ್ವದಲ್ಲಿರುವ ವಿಧಾನಗಳು ಅಸಮರ್ಥವಾಗಿದ್ದು, ಸೈನೈಡ್‌ನಂತಹ ವಿಷಕಾರಿ ರಾಸಾಯನಿಕಗಳನ್ನು ಹೊರಸೂಸುತ್ತಿದ್ದವು. ಆದರೆ, ಎಡ್ವಿನ್ ಬರ್ಗ್ ಯೂನಿವರ್ಸಿಟಿ ವಿಜ್ಞಾನಿಗಳ ತಂಡ ಪರಿಶೋಧನೆ ನಡೆಸಿ ನೂತನ ವಿಧಾನವನ್ನು ಕಂಡುಹಿಡಿದಿದ್ದು, ಇನ್ಮುಂದೆ ಬಹಳ ಸರಳವಾಗಿ ಎಲೆಕ್ಟ್ರಾನಿಕ್ಸ್‌ ತ್ಯಾಜ್ಯಗಳಿಂದ ಅಮೂಲ್ಯ ಲೋಹಗಳನ್ನು ಹೊರತೆಗೆಯಬಹುದು.!!

ಹಾಗಾದರೆ, ಎಡ್ವಿನ್ ಬರ್ಗ್ ಯೂನಿವರ್ಸಿಟಿ ವಿಜ್ಞಾನಿಗಳ ತಂಡ ಪರಿಶೋಧನೆ ನಡೆಸಿರುವ ವಿಧಾನ ಯಾವುದು? ನಿಮ್ಮ ಹಳೆ ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೆಲೆ ಹೆಚ್ಚಾಗುತ್ತದೆಯೇ? ಭವಿಷ್ಯದಲ್ಲಿ ಎಲೆಕ್ಟ್ರಾನಿಕ್ಸ್‌ ತ್ಯಾಜ್ಯ ನಿರ್ವಹಣೆಗೆ ಏನು ಲಾಭ? ಎಂಬೆಲ್ಲಾ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಬೆಲೆಬಾಳುವ ಚಿನ್ನ ಪಡೆಯಲು ಹರಸಾಹಸ!!

ಬೆಲೆಬಾಳುವ ಚಿನ್ನ ಪಡೆಯಲು ಹರಸಾಹಸ!!

ತ್ಯಾಜ್ಯ ಎಲೆಕ್ಟ್ರಾನಿಕ್ಸ್‌ಗಳಿಂದ ಅಮೂಲ್ಯವಾದ ಲೋಹ(ಚಿನ್ನವೂ ಸೇರಿ)ಗಳನ್ನು ತೆಗೆದು ಮರುಬಳಕೆ ಮಾಡಬೇಕು ಎಂದು ಹಲವು ಕಂಪನಿಗಳು ಪ್ರಯತ್ನ ನಡೆಸಿವೆ. ಆದರೆ, ಇಲ್ಲಿಯವರಗೂ ಆ ಕಂಪೆನಿಗಳು ನಡೆಸುತ್ತಿದ್ದ ಪ್ರಯತ್ನಕ್ಕೆ ಉತ್ತಮ ವಿಧಾನಗಳು ದೊರೆತಿರಲಿಲ್ಲ. ಅವುಗಳ ಕಾರ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿತ್ತು ಮತ್ತು ವಿಷಕಾರಿ ಲೋಹಗಳನ್ನು ಬಳಕೆ ಮಾಡಬೇಕಿತ್ತು.!!

ಪ್ರತ್ಯೇಕವಾದ ಆಸೀಡ್‌ನಲ್ಲಿ ಚಿನ್ನ!!

ಪ್ರತ್ಯೇಕವಾದ ಆಸೀಡ್‌ನಲ್ಲಿ ಚಿನ್ನ!!

ತ್ಯಾಜ್ಯ ಎಲೆಕ್ಟ್ರಾನಿಕ್ಸ್‌ ಬೋರ್ಡ್‌ಗಳನ್ನು ಪರಿಶೋಧನೆ ಒಂದು ಆಸೀಡ್‌ನಲ್ಲಿ ಮುಳುಗಿಲಾಗುತ್ತದೆ. ಇದರಿಂದ ಬೋರ್ಡ್‌ನಲ್ಲಿದ್ದ ಎಲ್ಲಾ ಲೋಹ ಆಸಿಡ್ ನಲ್ಲಿ ಕರಗಿ ಹೋಗುತ್ತದೆ. ನಂತರ ಆ ಆಸಿಡ್‌ನಲ್ಲಿ ಕರಗಿದ್ದ ಲೋಹಗಳನ್ನು ಎಣ್ಣೆಯುಕ್ತ ದ್ರವಗಳ ಮೂಲಕ ಬೇರ್ಪಡಿಸಿ ಚಿನ್ನವನ್ನು ಶೇಖರಣೆ ಮಾಡುತ್ತಾರೆ. ಇದರಿಂದ ಚಿನ್ನ ರೀಸೈಕಲ್ ಮಾಡಿದ ಹಾಗೆ ಆಗುತ್ತದೆ.

ಎಲೆಕ್ಟ್ರಾನಿಕ್ ತ್ಯಾಜ್ಯಕ್ಕೂ ಭಾರಿ ಬೆಲೆ?

ಎಲೆಕ್ಟ್ರಾನಿಕ್ ತ್ಯಾಜ್ಯಕ್ಕೂ ಭಾರಿ ಬೆಲೆ?

ಹೊಸದಾಗಿ ಕಂಡುಹಿಡಿರುವ ಎಲೆಕ್ಟ್ರಾನಿಕ್ ತ್ಯಾಜ್ಯ ಬೇರ್ಪಡಿಕೆ ವಿಧಾನದಿಂದ ಇನ್ನು ಎಲೆಕ್ಟ್ರಾನಿಕ್ ತ್ಯಾಜ್ಯಕ್ಕೂ ಭಾರಿ ಬೆಲೆ ಬರುವ ನಿರೀಕ್ಷೆ ಇದೆ.!! ಪ್ರತಿ ವರ್ಷ ಅಂದಾಜು 300 ಟನ್‌ಗೂ ಹೆಚ್ಚು ಚಿನ್ನ ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಸಿಗುವ ನಿರೀಕ್ಷೆ ಇದ್ದು, ತ್ಯಾಜ್ಯ ವಿಲೆವಾರಿಗೆ ಕಂಪೆನಿಗಳು ಉತ್ಸುಕವಾಗಿವೆ.!!

ಪರಿಸರಕ್ಕೆ ಪೂರಕ ಈ ಆವಿಷ್ಕಾರ

ಪರಿಸರಕ್ಕೆ ಪೂರಕ ಈ ಆವಿಷ್ಕಾರ

ರಾಸಾಯನಿಕಗಳನ್ನು ಬಳಸದೆಯೇ ತ್ಯಾಜ್ಯ ಎಲೆಕ್ಟ್ರಾನಿಕ್ಸ್‌ಗಳಿಂದ ಅಮೂಲ್ಯವಾದ ಲೋಹ ತೆಗೆಯುವುದು ಎರಡು ಕಡೆಯಿಂದ ಪರಿಸರಕ್ಕೆ ಪೂರಕವಾಗಿದೆ. ಒಂದೆಡೆ ಚಿನ್ನ ತೆಗೆಯಲು ವಿಷಕಾರಿಕ ಆಸಿಡ್‌ಗಳು ಪರಿಸರಕ್ಕೆ ಸೇರದಂತೆ ತಡೆದರೆ. ಇನ್ನೊಂದೆಡೆ ಎಲೆಕ್ಟ್ರಾನಿಕ್ಸ್‌ ತ್ಯಾಜ್ಯಗಳನ್ನು ಎಲ್ಲೆಲ್ಲಿಯೋ ಎಸೆಯುವುದನ್ನು ತಡೆಯಬಹುದಾಗಿದೆ.!!

ಆವಿಷ್ಕಾರದ ತಂಡದ ಮುಖ್ಯಸ್ಥ ಹೇಳಿದ್ದೇನು?

ಆವಿಷ್ಕಾರದ ತಂಡದ ಮುಖ್ಯಸ್ಥ ಹೇಳಿದ್ದೇನು?

ಈ ನೂತನ ಆವಿಷ್ಕಾರದ ಬಗ್ಗೆ ನಾವು ಬಹಳ ಉತ್ಸುಕರಾಗಿದ್ದೇವೆ,ವಿಶೇಷವಾಗಿ ವಿದ್ಯುನ್ಮಾನ ತ್ಯಾಜ್ಯದಿಂದ ಮೌಲ್ಯಯುತ ಲೋಹಗಳ ಚೇತರಿಕೆಯ ಬಗ್ಗೆ ನಮ್ಮ ಮೂಲಭೂತ ರಾಸಾಯನಿಕ ಅಧ್ಯಯನಗಳು ಸಂಭಾವ್ಯ ಆರ್ಥಿಕ ಮತ್ತು ಸಾಮಾಜಿಕ ಅನುಕೂಲಗಳನ್ನು ಹೊಂದಿವೆ ಎಂದು ನಾವು ತೋರಿಸಿದ್ದೇವೆ." ಎಂದು ತಂಡಕ್ಕೆ ನಾಯಕತ್ವವನ್ನು ವಹಿಸಿದ ಜಾಸನ್ ಲವ್ ಹೇಳಿದ್ದಾರೆ.

ಭಾರತದಲ್ಲಿ ಬಹುನಿರೀಕ್ಷಿತ 'ನೋಕಿಯಾ 130' ಫೋನ್ ಖರೀದಿಸಲು ಲಭ್ಯ!..ಸಂಗೀತ ಪ್ರಿಯರಿಗೆ ಬೆಸ್ಟ್!!ಭಾರತದಲ್ಲಿ ಬಹುನಿರೀಕ್ಷಿತ 'ನೋಕಿಯಾ 130' ಫೋನ್ ಖರೀದಿಸಲು ಲಭ್ಯ!..ಸಂಗೀತ ಪ್ರಿಯರಿಗೆ ಬೆಸ್ಟ್!!

Best Mobiles in India

English summary
New method extracts gold from mobiles

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X