Home
ಟೆಕ್ ನೌಕರಿ

ಮೊಬೈಲ್‌ನಿಂದ ಹಣ ಕದಿಯುವ ಆಪ್‌ಗಳು ಪತ್ತೆ ಮಾಡಿದ ಕ್ಯಾಸ್ಪರಸ್ಕಿ!!.ಯಾವುವು ಗೊತ್ತಾ?

ಒಂದು ತಿಂಗಳಲ್ಲಿ 47 ರಾಷ್ಟ್ರಗಳ ಸುಮಾರು 4,800 ಮೊಬೈಲ್‌ಗೆ ‘ಕ್ಸಫೆಕಾಪಿ ಟ್ರೋಜನ್’ ದಾಳಿಮಾಡಿದೆ.!! ಇದರಲ್ಲಿ ಶೇ 40ರಷ್ಟು ದಾಳಿಗಳು ಭಾರತದಲ್ಲಿ ನಡೆದಿವೆ

By Bhaskar N J

ಪೇಮೆಂಟ್ ವ್ಯವಸ್ಥೆಗೆ ಕುತ್ತು ತರುವಂತಹ ಮತ್ತೊಂದು ವೈರೆಸ್ ಪ್ರಪಂಚದಾಧ್ಯಂತ ದಾಳಿಯಿಟ್ಟಿದೆ.!! ವೈರ್‌ಲೆಸ್‌ ಅಪ್ಲಿಕೇಷನ್‌ ಪ್ರೊಟೊಕಾಲ್‌ (ಡಬ್ಲ್ಯುಎಪಿ) ಬಿಲ್ಲಿಂಗ್ ಪಾವತಿ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಈ ಕುತಂತ್ರಾಂಶ ಕಾರ್ಯಾಚರಿಸುತ್ತಿದೆ. ಬಳಕೆದಾರರ ಗಮನಕ್ಕೆ ಬಾರದೆ, ಅವರ ಮೊಬೈಲ್‌ ಖಾತೆಯಿಂದ ಹಣ ಕಳವು ಮಾಡುತ್ತಿದೆ ಎಂದು ಕ್ಯಾಸ್ಪರಸ್ಕಿ ಸಂಸ್ಥೆ ಹೇಳಿದೆ.!!

ದಾಳಿ ಮಾಡಿರುವ ವೈರಸ್‌ ಹೆಸರನ್ನು 'ಕ್ಸಫೆಕಾಪಿ ಟ್ರೋಜನ್' ಎಂದು ಕರೆಯಲಾಗಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ 47 ರಾಷ್ಟ್ರಗಳ 4,800 ಬಳಕೆದಾರರ ಮೊಬೈಲ್‌ಗಳಿಗೆ ದಾಳಿ ಮಾಡಿದೆ. ಶೇ 37.5ರಷ್ಟು ದಾಳಿಗಳು ಭಾರತದಲ್ಲಿ ನಡೆದಿವೆ ಎಂದು ಕ್ಯಾಸ್ಪರಸ್ಕಿ ಹೇಳಿದೆ.!! ಹಾಗಾದರೆ, ಏನಿದು ಕ್ಸಫೆಕಾಪಿ ವೈರೆಸ್? ಹೇಗೆ ದಾಳಿ ಮಾಡಲಿದೆ? ಇದರಿಂದ ನೀವು ತಪ್ಪಿಸಿಕೊಳ್ಳುವುದು ಹೇಗೆ? ಎಂಬೆಲ್ಲಾ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ಕ್ಸಫೆಕಾಪಿ ವೈರೆಸ್?

ಏನಿದು ಕ್ಸಫೆಕಾಪಿ ವೈರೆಸ್?

ಮೊಬೈಲ್‌ ಫೋನ್‌ ಮೂಲಕ ಬಳಕೆದಾರರ ಹಣವನ್ನು ಕಳ್ಳತನ ಮಾಡುವ ‘ಕ್ಸಫೆಕಾಪಿ ಟ್ರೋಜನ್' ಎಂಬ ಹೊಸ ಮಾಲ್‌ವೇರ್‌ ಎಲ್ಲೆಡೆ ಪತ್ತೆಯಾಗಿದೆ ಎಂದು ಕ್ಯಾಸ್ಪರಸ್ಕಿ ಪ್ರಯೋಗಾಲಯದ ತಜ್ಞರು ಹೇಳಿದ್ದಾರೆ. ಬ್ಯಾಟರಿಮಾಸ್ಟರ್, ವಾಲ್‌ಪೇಪರ್‌ ಫೇಕ್ ಆಪ್‌ಗಳ ಮೂಲಕ ಮೊಬೈಲ್‌ಗೆ ಈ ಮಾಲ್‌ವೇರ್‌ಗಳು ದಾಳಿ ಮಾಡುತ್ತಿವೆ ಎಂದು ಅವರು ತಿಳಿಸಿದ್ದಾರೆ.!!

ಕ್ಸಫೆಕಾಪಿ ವೈರೆಸ್ ಕಾರ್ಯನಿರ್ವಹಣೆ ಹೇಗೆ?

ಕ್ಸಫೆಕಾಪಿ ವೈರೆಸ್ ಕಾರ್ಯನಿರ್ವಹಣೆ ಹೇಗೆ?

ಬ್ಯಾಟರಿಮಾಸ್ಟರ್, ವಾಲ್‌ಪೇಪರ್‌ ಫೇಕ್ ಆಪ್‌ಗಳ ಮೂಲಕ ಮೊಬೈಲ್‌ಗೆ ದಾಳಿಯಿಡುವ ಈ ವೈರಸ್ ವೇಷಮರೆಸಿಕೊಳ್ಳುವ ಕುತಂತ್ರಾಂಶ ಆಗಿರುತ್ತದೆ. ನಿಮ್ಮ ಮೊಬೈಲ್‌ಗಳಲ್ಲಿ ಈ ಆಪ್‌ಗಳು ಸರಿಯಾಗಿಯೇ ಕಾರ್ಯನಿರ್ವಹಿಸುತ್ತದೆ. ಆದರೆ, ರಹಸ್ಯವಾಗಿ ಹಾನಿಕಾರಕ ಸಂಕೇತವನ್ನು ಫೋನ್‌ಗಳಿಗೆ ತುಂಬುತ್ತದೆ. ಮತ್ತು ನಿಮ್ಮ ಎಲ್ಲಾ ಮಾಹಿತಿಗಳನ್ನು ಕದ್ದು, ಆಪ್ ನಿರ್ಮತೃಗೆ ಕಳಿಸಿಕೊಡುತ್ತವೆ.!!

ಕ್ಯಾಪ್ಚ ವ್ಯವಸ್ಥೆಯೇ ಬುಡಮೇಲು!!

ಕ್ಯಾಪ್ಚ ವ್ಯವಸ್ಥೆಯೇ ಬುಡಮೇಲು!!

ನಮ್ಮ ಎಲ್ಲಾ ಮಾಹಿತಿಗಳನ್ನು ಕದ್ದು, ಆಪ್ ನಿರ್ಮತೃಗೆ ಕಳಿಸಿಕೊಡುವ ಈ ಆಪ್‌ಗಳು ಗ್ರಾರಾಹಕರನ್ನು ರಕ್ಷಿಸುವ ಉದ್ದೇಶದಿಂದ ರೂಪಿಸಲಾಗಿರುವ ‘ಕ್ಯಾಪ್ಚ' ವ್ಯವಸ್ಥೆಯನ್ನೆ ಬುಮೇಲು ಮಾಡುತ್ತವೆ. ಲಾಗ್‌ಇನ್‌ ಆಗಬೇಕಾದರೆ ನಮೂದಿಸಬೇಕಾದ ‘ಕ್ಯಾಪ್ಚ'ವನ್ನು ತಪ್ಪಿಸಿಕೊಳ್ಳುವ ತಂತ್ರಜ್ಞಾನವನ್ನು ಈ ಕುತಂತ್ರಾಂಶದಲ್ಲಿ ಬಳಸಲಾಗಿದೆ.

ಬಳಕೆದಾರರ ಗಮನಕ್ಕೆ ವಹಿವಾಟು ಕಾಣಿಸುವುದಿಲ್ಲ!!

ಬಳಕೆದಾರರ ಗಮನಕ್ಕೆ ವಹಿವಾಟು ಕಾಣಿಸುವುದಿಲ್ಲ!!

ಈ ವೈರಸ್ ಆಪ್ ಹೆಚ್ಚು ತಂತ್ರಜ್ಞಾನವನ್ನು ಒಳಗೊಂಡಿದ್ದು, ವಿವಿಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಗ್ರಾಹಕರ ಖಾತೆಯಿಂದ ದುಡ್ಡು ಕಡಿತ ಆಗಿರುವ ಬಗ್ಗೆ ಟೆಲಿಕಾಂ ಸಂಸ್ಥೆ ಕಳುಹಿಸುವ ಎಸ್‌ಎಂಎಸ್‌ಗಳನ್ನು ಅಳಿಸಿಹಾಕುವುದು ಸೇರಿದಂತೆ ಹಲವು ಕುತಂತ್ರಗಳಿಂದ ಈ ಆಪ್ ನಿಮ್ಮನ್ನು ಮೂರ್ಖರನ್ನಾಗಿಸುತ್ತವೆ.!!

ಏನಿದು ಡಬ್ಲ್ಯುಎಪಿ ಬಿಲ್ಲಿಂಗ್?

ಏನಿದು ಡಬ್ಲ್ಯುಎಪಿ ಬಿಲ್ಲಿಂಗ್?

ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗೆ ಪರ್ಯಾಯವಾದ ಪಾವತಿ ವ್ಯವಸ್ಥೆ ಈ (WAP) ವೈರ್‌ಲೆಸ್‌ ಅಪ್ಲಿಕೇಷನ್ ಪ್ರೊಟೊಕಾಲ್‌.!! ಬಳಕೆದಾರರ ಹೆಸರು ಅಥವಾ ಪಾಸ್‌ವರ್ಡ್‌ನ ಅಗತ್ಯ ಇಲ್ಲದೇ ಮೊಬೈಲ್‌ ಮೂಲಕ ವಿವಿಧ ಸೇವೆಗಳಿಗೆ ಹಣ ಪಾವತಿಸುವಾಗ ಈ ಮೊತ್ತವು ಮೊಬೈಲ್‌ ಬಳಕೆ ಶುಲ್ಕಕ್ಕೆ ಸೇರ್ಪಡೆಯಾಗುತ್ತದೆ. ಬಳಕೆದಾರರು ಮೊಬೈಲ್‌ ಶುಲ್ಕ ಪಾವತಿಸುವಾಗ ಅದರೊಂದಿಗೆ ಹಣ ಪಾವತಿಸಿದರೆ ಸಾಕಾಗುತ್ತದೆ.!!

ಆಪ್ ಡೌನ್‌ಲೋಡ್‌ ಮಾಡುವಾಗ ಎಚ್ಚರವಿರಲಿ!!

ಆಪ್ ಡೌನ್‌ಲೋಡ್‌ ಮಾಡುವಾಗ ಎಚ್ಚರವಿರಲಿ!!

ಒಂದು ತಿಂಗಳಲ್ಲಿ 47 ರಾಷ್ಟ್ರಗಳ ಸುಮಾರು 4,800 ಮೊಬೈಲ್‌ಗೆ ‘ಕ್ಸಫೆಕಾಪಿ ಟ್ರೋಜನ್' ದಾಳಿಮಾಡಿದೆ.!! ಇದರಲ್ಲಿ ಶೇ 40ರಷ್ಟು ದಾಳಿಗಳು ಭಾರತದಲ್ಲಿ ನಡೆದಿವೆ ಎನ್ನಲಾಗಿದ್ದು, ಬ್ಯಾಟರಿಮಾಸ್ಟರ್, ವಾಲ್‌ಪೇಪರ್‌ ಫೇಕ್ ಆಪ್‌ಗಳಂತಹ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವಾಗ ಎಚ್ಚರವಿರಲಿ.!!

Best Mobiles in India

English summary
Here's how to safeguard your phone.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+