ಇನ್ನು ಆಧಾರ್ -ಪ್ಯಾನ್‌ ಕಾರ್ಡ್ ಲೀಂಕ್ ಮಾಡಿಲ್ಲವೇ?..ಹಾಗಾದ್ರೆ ಇಲ್ಲಿ ನೋಡಿ!!

ಪ್ಯಾನ್‌ ಹೊಂದಿದವರು ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ತಿಳಿಸಿದ್ದಾರೆ.!!

|

ನೀವು ಇನ್ನು ಆಧಾರ್ -ಪ್ಯಾನ್‌ ಕಾರ್ಡ್ ಲೀಂಕ್ ಮಾಡಿಲ್ಲವೇ? ಹಾಗಾದರೆ, ಯೋಚನೆ ಬಿಟ್ಟು ನಿಧಾನವಾಗಿಯೇ ಆಧಾರ್ -ಪ್ಯಾನ್‌ ಕಾರ್ಡ್ ಲೀಂಕ್ ಮಾಡಿ.!! ಏಕೆಂದರೆ, ಆಧಾರ್ ಸಂಖ್ಯೆಯನ್ನು ಪ್ಯಾನ್‌ ಕಾರ್ಡ್ ಜೋಡಿಸುವುದಕ್ಕೆ ಯಾವುದೇ ಗಡುವು ನಿಗದಿ ಮಾಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ತಿಳಿಸಿದ್ದಾರೆ.

ಇಲ್ಲಿಯವರಗೂ ಆಧಾರ್ -ಪ್ಯಾನ್‌ ಲಿಂಕ್ ಮಾಡಲು ಗಡುವು ಇದೆ ಎಂದು ಹೇಳಲಾಗುತ್ತಿತ್ತು, ಆದರೆ, ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಜೇಟ್ಲಿ ಆಧಾರ್ ಸಂಖ್ಯೆಯನ್ನು ಪ್ಯಾನ್‌ ಕಾರ್ಡ್ ಜೋಡಿಸುವುದಕ್ಕೆ ಯಾವುದೇ ಗಡುವು ನಿಗದಿ ಮಾಡಿಲ್ಲ ಎಂದಿದ್ದಾರೆ.!

ಪ್ಯಾನ್‌ ಹೊಂದಿದವರು ಆಧಾರ್ ಲಿಂಕ್ ಮಾಡುವುದು ಕಡ್ಡಾಯ!!

ಇನ್ನು ಪ್ಯಾನ್‌ ಹೊಂದಿದವರು ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಸಹ ತಿಳಿಸಿದ್ದಾರೆ.!! ಹಾಗಾದರೆ, ಆಧಾರ್ -ಪ್ಯಾನ್‌ ಕಾರ್ಡ್ ಲಿಂಕ್ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

Aadhaar card Number link to PAN card !! ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲು ಸೆಂಕೆಡ್ ಸಾಕು!!
ಹಂತ 1:

ಹಂತ 1:

ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ತೆರೆಯಿರಿ. incometaxindiaefiling.gov.in ಇದು ತೆರಿಗೆ ಪಾವತಿ ಮಾಡಲು ಇರುವ ವೈಬ್ ತಾಣವಾಗಿದ್ದು, ನೀವು ಇಲ್ಲಯೇ ಆಧಾರ್-PAN ಲಿಂಕ್ ಮಾಡಬಹುದಾಗಿದೆ.

ಹಂತ 2:

ಹಂತ 2:

ನೀವು ಆಧಾರ್-PAN ಲಿಂಕ್ ಮಾಡಲು ನೀವು ರಿಜಿಸ್ಟರ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇದಕ್ಕಾಗಿ ವೆಬ್ ಸೈಟಿನ ಕೆಳಭಾಗದಲ್ಲಿ ಲಿಂಕ್ ಆಧಾರ್ ಎಂಬ ಆಯ್ಕೆಯನ್ನು ನೀಡಲಾಗಿದೆ. ಅದನ್ನು ನೇರಾವಾಗಿ ಕ್ಲಿಕ್ ಮಾಡಿರಿ.

ಹಂತ 3:

ಹಂತ 3:

ಆ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರದಲ್ಲಿ ಪಾನ್ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಮತ್ತು ಹೆಸರನ್ನು ನಮೂದಿಸಬೇಕಾಗಿದೆ. ನಂತರ ಅಲ್ಲಿ ಆಧಾರ್ ಕಾರ್ಡ್‌ನಲ್ಲಿರುವ ಹೆಸರನ್ನೇ ನಮೂದಿಸಬೇಕಾಗಿದೆ.

ಹಂತ 4:

ಹಂತ 4:

ನಿಮ್ಮ ಮಾಹಿತಿಗಳನ್ನು ನೀಡಿದ ನಂತರದಲ್ಲಿ ನಿಮ್ಮ ಮಾಹಿತಿಗಳನ್ನು ಆಧಾರ್ ವೆರಿಫಿಕೇಷನ್ ಮಾಡಲಿದೆ.

ಹಂತ 5:

ಹಂತ 5:

ನಿಮ್ಮ ಆಧಾರ್ ಮತ್ತು ಪ್ಯಾನ್ ನಡುವೆ ಲಿಂಕ್ ಮಾಡಲು ಅತ್ಯವಶ್ಯಕವಾಗಿದೆ. ಎರಡು ಕಾರ್ಡ್‌ಗಳಿಗೆ ನೀಡಿರುವ ಮಾಹಿತಿಯೂ ಒಂದೇ ಆಗಿರಬೇಕಾಗಿದೆ.

ಹಂತ 6:

ಹಂತ 6:

ಇದಾದ ನಂತರ ನಿಮ್ಮ ಎರಡು ಕಾರ್ಡ್ ಗಳ ನಡುವೆ ಲಿಂಕ್ ಆಗಿದ್ದು, ಆಧಾರ್ -ಪ್ಯಾನ್ ಎರಡರಲ್ಲೂ ನೀಡಿರುವ ಮಾಹಿತಿಯೂ ಸರಿಯಿದ್ದ ಪಕ್ಷದಲ್ಲಿ, ಇಲ್ಲವಾದರೆ ಎರಡರಲ್ಲಿ ಯಾವುದರಲ್ಲದರೂ ನಿಮ್ಮ ಮಾಹಿತಿಗಳನನ್ನು ಬದಲಾಯಿಸಬೇಕಾಗಿದೆ.

Best Mobiles in India

Read more about:
English summary
Finance Minister Arun Jaitley today informed the Lok Sabha that the government has not fixed any time frame to complete the linking of Aadhaar .to know more visi to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X