ನೋಕಿಯಾ ಲ್ಯಾಬ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹೇಗೆ ಪರೀಕ್ಷಿಸುತ್ತಾರೆ?

By Ashwath
|

ವಿವಿಧ ಕಂಪೆನಿಗಳು ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುತ್ತವೆ.ಇವುಗಳಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಕ್ಲಿಕ್‌ ಆಗುವುದಿಲ್ಲ.ಗ್ರಾಹಕರು ಮೊದಲು ಆ ಸ್ಮಾರ್ಟ್‌ಫೋನಿನ ವಿಶೇಷತೆಯನ್ನು ಮಾಧ್ಯಮಗಳಲ್ಲಿ ಓದಿ ಅಥವಾ ಬೇರೆಯವರ ಜೊತೆ ಆ ಸ್ಮಾರ್ಟ್‌ಫೋನ್‌ ಇದ್ದಲ್ಲಿ ಅವರ ಜೊತೆಗೆ ಅಭಿಪ್ರಾಯವನ್ನು ಕೇಳಿದ ಬಳಿಕ ಸ್ಮಾರ್ಟ್‌ಫೋನನ್ನು ಖರೀದಿಸುತ್ತಾರೆ.

ಖರೀದಿಸುವ ಗ್ರಾಹಕನೇ ಖರೀದಿಸುವ ಮೊದಲೇ ಸ್ಮಾರ್ಟ್‌ಫೋನ್‌ ಈ ರೀತಿ ಪರೀಕ್ಷೆ ಮಾಡಿ ಖರೀದಿಸುತ್ತಾನೆ ಎಂದಾದರೇ ಇನ್ನೂ ಮೊಬೈಲ್‌ ತಯಾರಿಸುವ ಕಂಪೆನಿಗಳು ಸ್ಮಾರ್ಟ್‌ಫೋನಿನ ಪರೀಕ್ಷೆ ನಡೆಸುವುದಿಲ್ಲವೇ? ಎಲ್ಲಾ ಕಂಪೆನಿಯ ಟೆಕ್ನಿಶಿಯನ್‌ ಸಿಬ್ಬಂದಿಗಳು ಸ್ಮಾರ್ಟ್‌‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮೊದಲೇ ಲ್ಯಾಬ್‌ನಲ್ಲಿ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸುತ್ತಾರೆ. ಅಲ್ಲಿ ಸ್ಮಾರ್ಟ್‌‌‌ಫೋನ್‌ಗಳು ಪಾಸ್‌ ಅದಲ್ಲಿ ನಂತರ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ.ಹೀಗಾಗಿ ಇಲ್ಲಿ ಅಮೆರಿಕದ ಸ್ಯಾನ್ ಡಿಯಾಗೋದಲ್ಲಿರುವ ನೋಕಿಯಾ ಕಂಪೆನಿಯ ಲ್ಯಾಬ್‌ನಲ್ಲಿ ಸ್ಮಾರ್ಟ್‌‌ಫೋನ್‌/ಮೊಬೈಲ್‌ಗಳನ್ನು ಯಾವೆಲ್ಲ ಪರೀಕ್ಷೆಗೆ ಒಳಪಡಿಸುತ್ತಾರೆ ಎನ್ನುವ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ನೋಕಿಯಾ ಸ್ಮಾರ್ಟ್‌‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

  ನೋಕಿಯಾ ಲ್ಯಾಬ್‌ ಪರೀಕ್ಷೆ

ನೋಕಿಯಾ ಲ್ಯಾಬ್‌ ಪರೀಕ್ಷೆ


ನೋಕಿಯಾ ಮೊಬೈಲ್‌ನ ಯುಎಸ್‌ಬಿ ಪೋರ್ಟ್‌ನ್ನು ಪರೀಕ್ಷಿಸುತ್ತಿರುವ ಯಂತ್ರ

  ನೋಕಿಯಾ ಲ್ಯಾಬ್‌ ಪರೀಕ್ಷೆ

ನೋಕಿಯಾ ಲ್ಯಾಬ್‌ ಪರೀಕ್ಷೆ

ನೋಕಿಯಾ ಲೂಮಿಯಾ 925ನ್ನು ಲ್ಯಾಬ್‌ನಲ್ಲಿ ಪರೀಕ್ಷಿಸುತ್ತಿರುವ ಟೆಕ್ನಿಶಿಯನ್‌ಗಳು

  ನೋಕಿಯಾ ಲ್ಯಾಬ್‌ ಪರೀಕ್ಷೆ

ನೋಕಿಯಾ ಲ್ಯಾಬ್‌ ಪರೀಕ್ಷೆ


ಸ್ಮಾರ್ಟ್‌‌‌ಫೋನಿನ ಪ್ಲಾಸ್ಟಿಕ್‌ ಕವರ್‌‌ ಮೇಲೆ ಮನೆಯಲ್ಲಿ ಬಳಸುವ ರಾಸಾಯನಿಕಗಳನ್ನು ಸಿಂಪಡಿಸಿ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಆ ಬಣ್ಣದ ಕವರ್‌ ಬಣ್ಣ ಕಳೆದುಕೊಳ್ಳದಿದ್ದಲ್ಲಿ ಆ ಬಣ್ಣದ ಕವರ್‌ನ್ನು ಉತ್ಪಾದನೆ ಮಾಡಲಾಗುತ್ತದೆ.

  ನೋಕಿಯಾ ಲ್ಯಾಬ್‌ ಪರೀಕ್ಷೆ

ನೋಕಿಯಾ ಲ್ಯಾಬ್‌ ಪರೀಕ್ಷೆ


ರಾಸಾಯನಿಕ ಪರೀಕ್ಷೆಗೆ ಇರಿಸಲಾಗಿರುವ ನೋಕಿಯಾ ಸ್ಮಾರ್ಟ್‌ಫೋನಿನ ವಿವಿಧ ಕವರ್‌‌ಗಳು

  ನೋಕಿಯಾ ಲ್ಯಾಬ್‌ ಪರೀಕ್ಷೆ

ನೋಕಿಯಾ ಲ್ಯಾಬ್‌ ಪರೀಕ್ಷೆ


ಸ್ಮಾರ್ಟ್‌ಫೋನಿನ ಸ್ಕ್ರೀನ್‌ ಎಷ್ಟು ಶಕ್ತಿಯುತವಾಗಿದೆ ಎಂದು ತಿಳಿದುಕೊಳ್ಳಲು ಈ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಸ್ಮಾರ್ಟ್‌‌ಫೋನಿಗೆ ಎತ್ತರದಿಂದ ಬಾಲ್‌ನ್ನು ಒಂದು ಸಣ್ಣ ಕೊಳವೆಯ ಮೂಲಕ ಬೀಳಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಹಂತ ಹಂತವಾಗಿ ಬಾಲ್‌ ಬೀಳಿಸುವ ಎತ್ತರದ ಪ್ರಮಾಣವನ್ನು ಏರಿಸಲಾಗುತ್ತದೆ.

  ನೋಕಿಯಾ ಲ್ಯಾಬ್‌ ಪರೀಕ್ಷೆ

ನೋಕಿಯಾ ಲ್ಯಾಬ್‌ ಪರೀಕ್ಷೆ

ಬಾಲ್ ಬೇರಿಂಗ್ ಪರೀಕ್ಷೆ ನಡೆಸುತ್ತಿರುವ ನೋಕಿಯಾ ಟೆಕ್ನಿಶಿಯನ್‌ಗಳು

  ನೋಕಿಯಾ ಲ್ಯಾಬ್‌ ಪರೀಕ್ಷೆ

ನೋಕಿಯಾ ಲ್ಯಾಬ್‌ ಪರೀಕ್ಷೆ

ಬಾಲ್ ಬೇರಿಂಗ್ ಪರೀಕ್ಷೆ ನಡೆಸುತ್ತಿರುವ ನೋಕಿಯಾ ಟೆಕ್ನಿಶಿಯನ್‌ಗಳು

  ನೋಕಿಯಾ ಲ್ಯಾಬ್‌ ಪರೀಕ್ಷೆ

ನೋಕಿಯಾ ಲ್ಯಾಬ್‌ ಪರೀಕ್ಷೆ


ಒಂದು ಗಾಜಿನ ಪಾತ್ರೆಯೊಳಗೆ ಸ್ಮಾರ್ಟ್‌ಫೋನ್‌ ಇರಿಸಿ ಮಳೆ ಬರುವಂತೆ ಮಾಡಿ ಕರೆ ಮಾಡುವ ಮೂಲಕ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

  ನೋಕಿಯಾ ಲ್ಯಾಬ್‌ ಪರೀಕ್ಷೆ

ನೋಕಿಯಾ ಲ್ಯಾಬ್‌ ಪರೀಕ್ಷೆ


ಮಳೆ ಪರೀಕ್ಷೆಯ ಜೊತೆಗೆ ಸೂರ್ಯನ ಕಿರಣಗಳನ್ನು ಮೊಬೈಲ್‌ ಕವರ್‌ಗಳ ಮೇಲೆ ಬೀಳುವಂತೆ ಮಾಡಿ ಅದರ ಬಣ್ಣ ಕಡಿಮೆಯಾಗುತ್ತದೋ ಇಲ್ಲವೋ ಎಂಬುದನ್ನು ಪರೀಕ್ಷಿಸಲಾಗುತ್ತದೆ.

  ನೋಕಿಯಾ ಲ್ಯಾಬ್‌ ಪರೀಕ್ಷೆ

ನೋಕಿಯಾ ಲ್ಯಾಬ್‌ ಪರೀಕ್ಷೆ


ಕರೆ ಮಾಡುವ ಸಂದರ್ಭದಲ್ಲಿ ಗದ್ದಲಗಳಾದ್ರೆ, ಈ ಗದ್ದಲಗಳನ್ನು ಕಡಿಮೆ ಮಾಡಲು ಈ ಪರೀಕ್ಷೆಗಳನ್ನು ರೊಬೊಟ್‌ಗಳ ಮೂಲಕ ನಡೆಸಲಾಗುತ್ತದೆ.

  ನೋಕಿಯಾ ಲ್ಯಾಬ್‌ ಪರೀಕ್ಷೆ

ನೋಕಿಯಾ ಲ್ಯಾಬ್‌ ಪರೀಕ್ಷೆ


ನೋಕಿಯಾ ಸಿಬ್ಬಂದಿ ಸ್ಮಾರ್ಟ್‌ಫೋನಿನ ಗದ್ದಲ ಮುಕ್ತ ಪರೀಕ್ಷೆಯನ್ನು ರೊಬೊಟ್‌ ಮೂಲಕ ನಡೆಸುತ್ತಿರುವುದು.

ನೋಕಿಯಾ ಲ್ಯಾಬ್‌ ಪರೀಕ್ಷೆ

ವಿಡಿಯೋ ವೀಕ್ಷಿಸಿ

ನೋಕಿಯಾ ಲ್ಯಾಬ್‌ ಪರೀಕ್ಷೆ

ವಿಡಿಯೋ ವೀಕ್ಷಿಸಿ

  ನೋಕಿಯಾ ಲ್ಯಾಬ್‌ ಪರೀಕ್ಷೆ

ನೋಕಿಯಾ ಲ್ಯಾಬ್‌ ಪರೀಕ್ಷೆ


ಸ್ಮಾರ್ಟ್‌ಫೋನ್‌ ಪರೀಕ್ಷೆಯ ಫಲಿತಾಂಶಗಳನ್ನು ದಾಖಲು ಮಾಡುತ್ತಿರುವ ಕಂಪ್ಯೂಟರ್‌ಗಳು.

ಸುದ್ದಿ ಮತ್ತು ಚಿತ್ರ ಕೃಪೆ:www.facebook.com/NokiaUS

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X