ಮೊಬೈಲ್‌ನಲ್ಲಿಯೇ ಪಿಯುಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?..ಫುಲ್ ಡೀಟೇಲ್ಸ್!!

|

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಈಗ ಸ್ಮಾರ್ಟ್‌ ಜಗತ್ತಿಗೆ ಕಾಲಿಡುತ್ತಿದ್ದು, ದ್ವಿತೀಯ ಪಿಯು ವಿದ್ಯಾರ್ಥಿಗಳು ಇನ್ಮುಂದೆ ಆನ್‌ಲೈನ್ ಮೂಲಕವೇ ಅಂಕಪಟ್ಟಿಯನ್ನು ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸುತ್ತಿದೆ. ಈ ಶೈಕ್ಷಣಿಕ ವರ್ಷದಿಂದಲೇ ಈ ಯೋಜನೆ ಜಾರಿಯಾಗಲಿದ್ದು, ಕೇಂದ್ರ ಸರ್ಕಾರ ಅಭಿವೃದ್ದಿಪಡಿಸಿರುವ ಡಿಜಿಲಾಕರ್ ಆಪ್‌ನಲ್ಲಿ ಅಂಕಪಪಟ್ಟಿಗಳು ಸಿಗಲಿವೆ.

2018ರ ಮಾರ್ಚ್​ನಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಶಿಕ್ಷಣ ಇಲಾಖೆಯು ಅಪ್‌ಲೋಡ್ ಮಾಡಿದ್ದು, ಪಿಯು ವಿದ್ಯಾರ್ಥಿಗಳು ತಮ್ಮ ಸ್ಮಾರ್ಟ್‌ಫೋನಿನಲ್ಲಿ ಡಿಜಿಲಾಕರ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ಇದರ ಪ್ರಯೋಜನ ಪಡೆಯಬಹುದು ಅಥವಾ ಡಿಜಿಲಾಕರ್ ವೆಬ್ ತಾಣಕ್ಕೆ ಭೇಟಿ ನೀಡಿ ಸಹ ಲಾಗ್‌ಇನ್ ಆಗಬಹುದಾಗಿದೆ.

ಮೊಬೈಲ್‌ನಲ್ಲಿಯೇ ಪಿಯುಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಾಗಾದರೆ, ಆನ್‌ಲೈನ್‌ನಲ್ಲಿಯೇ ವಿದ್ಯಾರ್ಥಿಗಳ ಅಂಕಪಟ್ಟಿ ಶೇಖರಿಸಿ ಯಾರು ಯಾವಾಗ ಬೇಕಾದರೆ ಪಡೆದುಕೊಳ್ಳುವ ಈ ವಿನೂತನ ಯೋಜನೆಯನ್ನು ಬಳಸಿಕೊಳ್ಳುವುದು ಹೇಗೆ? ಏನಿದು ಕೇಂದ್ರ ಸರ್ಕಾರ ಅಭಿವೃದ್ದಿಪಡಿಸಿರುವ ಡಿಜಿ ಲಾಕರ್? ಫೋನಿನಲ್ಲಿಯೇ ಅಂಕಪಟ್ಟಿಯಯನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಏನಿದು ಡಿಜಿ ಲಾಕರ್?

ಏನಿದು ಡಿಜಿ ಲಾಕರ್?

ಇದೊಂದು ‘ಡಿಜಿಟಲ್‌ ಲಾಕರ್‌'. ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ, ಪ್ರದರ್ಶಿಸುವ ಮತ್ತು ದೃಢೀಕರಿಸುವ ದೇಶದ ಮೊದಲ ಸುರಕ್ಷಿತ ವ್ಯವಸ್ಥೆ ಈ ಡಿಜಿ ಲಾಕರ್. ಡಿಜಿಟಲ್ ಇಂಡಿಯಾ' ಯೋಜನೆಯಡಿ ಈ ಡಿಜಿಟಲ್ ಆಪ್ ಅನ್ನು ಕೇಂದ್ರ ಸರ್ಕಾರ ಹೊರತಂದಿತ್ತು.

ಎಂದಿನಿಂದ ಜಾರಿಯಾಗಿದೆ?

ಎಂದಿನಿಂದ ಜಾರಿಯಾಗಿದೆ?

ಸ್ಮಾರ್ಟ್‌ಫೋನ್ ಮೂಲಕ ದಾಖಲೆಗಳನ್ನು ಪ್ರಸ್ತುತಪಡಿಸಬಹುದಾದ ಹಾಗೂ ಕಾಗದರಹಿತ ಆಡಳಿತ ಪರಿಕಲ್ಪನೆ ಹೊಂದಿರುವ ಈ ‘ಡಿಜಿ ಲಾಕರ್' ಆಪ್ 2016ರ ಸೆಪ್ಟೆಂಬರ್‌ 7ರಿಂದ ಜಾರಿಗೆ ಬಂದಿದೆ. ಆದರೆ, 40 ಕೋಟಿ ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿದ್ದರೂ ಈ ಲಾಕರ್ ಬಳಸುವವರ ಸಂಖ್ಯೆ ಮಾತ್ರ ಒಂದು ಕೋಟಿಯಷ್ಟಿದೆ.

ಭೌತಿಕ ದಾಖಲೆಗಳಿಗೆ ಸಮನಾದ ದಾಖಲೆ!

ಭೌತಿಕ ದಾಖಲೆಗಳಿಗೆ ಸಮನಾದ ದಾಖಲೆ!

ಡಿಜಿ ಲಾಕರ್ ದಾಖಲೆಗಳನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ನೋಡಬಹುದು. ಯಾರೇ ಕೇಳಿದರೂ ತೋರಿಸಲೂಬಹುದು. ಸರ್ಕಾರಿ ಕಚೇರಿಯ ಸೌಲಭ್ಯ ಪಡೆಯಲು ಆನ್‌ಲೈನ್‌ ಮೂಲಕ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಹಾಗಾಗಿ, ಇದು ಕೂಡ ಭೌತಿಕ ದಾಖಲೆಗಳಿಗೆ ಸಮನಾದ ದಾಖಲೆ .

ಡಿಜಿ ಲಾಕರ್ ಹೇಗಿದೆ?

ಡಿಜಿ ಲಾಕರ್ ಹೇಗಿದೆ?

https://digilocker.gov.in/' ವೆಬ್‌ಸೈಟ್ ಹಾಗೂ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ DigiLocker ಆಪ್ ಮೂಲಕ ಈ ಆನ್‌ಲೈನ್ ವ್ಯವಸ್ಥೆ ಬಳಸಬಹುದು. 1 ಜಿ.ಬಿಯಷ್ಟು ದಾಖಲೆಗಳನ್ನು ಸಂಗ್ರಹಿಸುವ ಸಾಮರ್ಥ್ಯ ಈ ಆಪ್‌ನಲ್ಲಿದ್ದು, ನಿಮ್ಮೆಲ್ಲಾ ದಾಖಲೆಗಳನ್ನು ಈ ಆಪ್‌ನಲ್ಲಿ ಸೇವೆ ಮಾಡಿಕೊಳ್ಳಬಹುದು.

ಡಿಜಿ ಲಾಕರ್ ಬಳಕೆ?

ಡಿಜಿ ಲಾಕರ್ ಬಳಕೆ?

ಡಿಜಿ ಲಾಕರ್ ಆಪ್ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್‌ ನಂಬರ್‌ ಮೂಲಕ ಲಾಗಿನ್‌ ಆಗಿ ಆಪ್ ತೆರೆಯಬಹುದು. ನಂತರ, ಆಧಾರ್ ಸಂಖ್ಯೆಯನ್ನು ನಮೂದಿಸಿ ಆಪ್‌ನಲ್ಲಿ ಕಾಣಿಸುವ ಸಂಬಂಧಪಟ್ಟ ಇಲಾಖೆಯನ್ನು ಆಯ್ಕೆ ಮಾಡಿಕೊಂಡುನಿರ್ದಿಷ್ಟ ಹೆಸರಿನಲ್ಲಿ ದಾಖಲೆಗಳನ್ನು ಸೇವ್ ಮಾಡಿಕೊಳ್ಳಬಹುದು.

ಯಾವ್ಯಾವ ದಾಖಲೆ ದೊರೆಯುತ್ತವೆ?

ಯಾವ್ಯಾವ ದಾಖಲೆ ದೊರೆಯುತ್ತವೆ?

ವಾಹನ ನೋಂದಣಿ ಪ್ರಮಾಣಪತ್ರ, ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ ಪತ್ರ, ಎಲ್‌ಪಿಜಿ ಠೇವಣಿ ರಸೀದಿ ಹೀಗೆ ಕೇಂದ್ರಸರ್ಕಾರದ ಬಹುತೇಕ ಎಲ್ಲಾ ದಾಖಲೆಗಳು ಡಿಜಿ ಆಪ್‌ನಲ್ಲಿ ಲಭ್ಯವಿವೆ. ಕೆಲವು ರಾಜ್ಯಗಳು( ಕರ್ನಾಟಕ ಬಿಟ್ಟು) ಕಂದಾಯ ದಾಖಲೆಗಳು, ಜನನ ಪ್ರಮಾಣಪತ್ರ, ಪಡಿತರ ಚೀಟಿ ಈಗ ಶೈಕ್ಷಣಿಕ ಅಂಕಪಟ್ಟಿ ಸಹ ಡಿಜಿ ಲಾಕರ್‌ನಲ್ಲಿ ಲಭ್ಯವಿದೆ.

ಪಿಯುಸಿ ಅಂಕಪಟ್ಟಿ ಡೌನ್‌ಲೋಡ್ ಹೇಗೆ?

ಪಿಯುಸಿ ಅಂಕಪಟ್ಟಿ ಡೌನ್‌ಲೋಡ್ ಹೇಗೆ?

ಡಿಜಿ ಲಾಕರ್ ತೆರೆದು ವಿದ್ಯಾರ್ಥಿಗಳು ತಮ್ಮ ಆಧಾರ್ ನಂಬರ್ ನಿಡಿದರೆ, ಆಧಾರ್ ಸಂಖ್ಯೆ ನೊಂದಾವಣೆಗೆ ನೀಡಿದ್ದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಇದರ ಸಹಾಯದಿಂದ ವಿದ್ಯಾರ್ಥಿ ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ರಚಿಸಿಕೊಳ್ಳಬೇಕು. ನಂತರ ಅಪ್ಲಿಕೇಷನ್ ತೆರೆದು ಇಶ್ಯೂಸ್ ವಿಭಾಗಕ್ಕೆ ತೆರಳಿ ಕರ್ನಾಟಕ ಪಿಯು ಬೋರ್ಡ್ ವಿಭಾಗವನ್ನು ಆಯ್ಕೆ ಮಾಡಿ ತಮ್ಮ ನೊಂದಣಿ ಸಂಖ್ಯೆ, ಉತ್ತೀರ್ಣನಾದ ವರ್ಷವನ್ನು ನಮೂದಿಸಿದಾಗ ಅವರ ಡಿಜಿಟಲ್ ಅಂಕಪಟ್ಟಿ ಡೌನ್ ಲೋಡ್ ಆಗಲಿದೆ.

ಟ್ರಾಫಿಕ್ ಪೊಲೀಸರಿಗೂ ತೋರಿಸಿ!

ಟ್ರಾಫಿಕ್ ಪೊಲೀಸರಿಗೂ ತೋರಿಸಿ!

ಡಿಜಿ ಲಾಕರ್‌ನಲ್ಲಿರುವ ವಾಹನ ನೋಂದಣಿ ಪ್ರಮಾಣಪತ್ರ ಮತ್ತು ಚಾಲನಾ ಪರವಾನಗಿ ಪತ್ರಗಳಿಗೆ ಮಾನ್ಯತೆ ಇದೆ ಎಂದು ರಾಜ್ಯ ಸಾರಿಗೆ ಇಲಾಖೆಯ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ. ಈ ಬಗ್ಗೆ ರಾಜ್ಯ ಪೊಲೀಸರಲ್ಲಿ ಗೊಂದಲಗಳಿದ್ದರೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.

Best Mobiles in India

English summary
Students who have cleared the second pre-university examination can access their results any time and anywhere with their Aadhaar number. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X