ಪಾಸ್‌ಪೋರ್ಟ್‌ ಪಡೆಯಲು ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸುವುದು ಹೇಗೆ?

|

ಈ ಮೊದಲು ಪಾಸ್‌ಪೋರ್ಟ್‌ ಪಡೆಯಲು ಇದ್ದ ಹಲವು ಸಮಸ್ಯೆಗಳನ್ನು ನಿವಾರಿಸಲು ಕೇಂದ್ರಸರ್ಕಾರ ಡಿಜಿಟಲ್ ಪ್ರಪಂಚಕ್ಕೆ ಕಾಲಿಟ್ಟಿದೆ. ಜನರು ಪಾಸ್‌ಪೋರ್ಟ್‌ ಕಚೇರಿಗೆ ಹೋಗದೆಯೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದಕ್ಕಾಗಿ ಕೇಂದ್ರ ಸರ್ಕಾರ ಹೊಸದೊಂದು ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಿದ್ದು, ಇದೇ ಮಂಗಳವಾರ ಹೊಸ ಆಪ್‌ಗೆ ಚಾಲನೆ ಸಿಕ್ಕಿದೆ.!

ದೇಶದಲ್ಲಿ ಎಲ್ಲೇ ನೆಲಸಿದ್ದರೂ ಸಹ ಮೊಬೈಲ್‌ ಆಪ್‌ ಮೂಲಕವೇ ತಮ್ಮ ಮೂಲ ನಿವಾಸದ ಪಾಸ್‌ಪೋರ್ಟ್‌ ಕಚೇರಿಯಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು ಈ ಮೊಬೈಲ್ ಆಪ್ ಸಹಾಯ ಮಾಡಲಿದೆ. ನೀವು ಏನಾದರೂ ಹಾಸನದವರಾಗಿದ್ದು ಮುಂಬೈನಲ್ಲಿ ನೆಲೆಸಿದ್ದರೆ ಈ ಆಪ್ ಮೂಲಕ ಬೆಂಗಳೂರಿನಲ್ಲಿರುವ ಪಾಸ್‌ಪೋರ್ಟ್ ಕಚೇರಿಗೆ ಅರ್ಜಿ ಸಲ್ಲಿಸಬಹುದು.!

ಪಾಸ್‌ಪೋರ್ಟ್‌ ಪಡೆಯಲು ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸುವುದು ಹೇಗೆ?

ಇದಕ್ಕಿಂತಲೂ ಮುಖ್ಯವಾಗಿ ಈ ಆಪ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರೆ, ಪೊಲೀಸ್ ವೆರಿಫಿಕೇಷನ್ ಸಹ ಹಾಸನದಲ್ಲಿಯೇ ನಡೆಯಲಿದೆ ಮತ್ತು ಪಾಸ್‌ಪೋರ್ಟ್ ಅನ್ನು ಸಹ ಅಂಚೆ ಮೂಲಕ ಅರ್ಜಿದಾರರು ನೀಡಿದ ವಿಳಾಸಕ್ಕೆ ಕಳುಹಿಸಲಾಗುವುದು. ಹಾಗಾದರೆ, ಆ ಮೊಬೈಲ್ ಆಪ್ ಯಾವುದು? ಅದರ ವೈಶಿಷ್ಟ್ಯಗಳೇನು ಎಂಬುದನ್ನು ಮುಂದೆ ತಿಳಿಯಿರಿ.

'ಎಂಪಾಸ್‌ಪೋರ್ಟ್ ಸೇವಾ' (Mpassportseva)!!

'ಎಂಪಾಸ್‌ಪೋರ್ಟ್ ಸೇವಾ' (Mpassportseva)!!

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇದೇ ಮಂಗಳವಾರ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದಕ್ಕಾಗಿ 'ಎಂಪಾಸ್‌ಪೋರ್ಟ್ ಸೇವಾ' ಎಂಬ ಮೊಬೈಲ್ ಆಪ್‌ಗೆ ಚಾಲನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಈ 'ಎಂಪಾಸ್‌ಪೋರ್ಟ್ ಸೇವಾ' (Mpassportseva) ಆಪ್‌ ಸಹಾಯದಿಂದ ಮೊಬೈಲ್‌ನಲ್ಲಿಯೇ ಪಾಸ್‌ಪೋರ್ಟ್ ಪಡೆಯಬಹುದಾಗಿದೆ.

ಹೇಗಿದೆ ಮೊಬೈಲ್ ಆಪ್?

ಹೇಗಿದೆ ಮೊಬೈಲ್ ಆಪ್?

'ಎಂಪಾಸ್‌ಪೋರ್ಟ್ ಸೇವಾ' (Mpassportseva) ಆಪ್‌ ಅನ್ನು ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಂಡರೆ, ಈ ಆಪ್‌ಗೆ ನೀವು ರಿಜಿಸ್ಟರ್ ಆಗುವುದಕ್ಕೆ ಕೇಳಿಕೊಳ್ಳುತ್ತದೆ. ಒಮ್ಮೆ ನೀವು ಪಾಸ್‌ಪೋರ್ಟ್ ಕಚೇರಿ, ಹೆಸರು, ಹುಟ್ಟಿದ ದಿನ, ಇಮೇಲ್‌ ವಿಳಾಸಗಳನ್ನು ನೀಡಿ ನಿಮ್ಮ ಗುರುತನ್ನು ದಾಖಲಿಸಿ ಯುಸರ್‌ನೇಮ್ ಮತ್ತು ಪಾಸ್‌ವರ್ಡ್ ಅನ್ನು ಪಡೆದುಕೊಳ್ಳಬಹುದು

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ!

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ!

'ಎಂಪಾಸ್‌ಪೋರ್ಟ್ ಸೇವಾ' ಮೊಬೈಲ್ ಆಪ್‌ನಲ್ಲಿ ನೀವು ಲಾಗಿನ್ ಆದ ನಂತರ ನೀವು ನೇರವಾಗಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಯೂಸರ್ ಅಪ್ಲಿಕೇಷನ್ ಆಯ್ಕೆಯನ್ನು ತೆರೆದು, ಹೊಸದಾಗಿ ಪಾರ್ಸ್‌ಪೋರ್ಟ್ ಅರ್ಜಿದಾರನೇ ಅಥವಾ ಮತ್ತೊಮ್ಮೆ ಪಾಸ್‌ಪೋರ್ಟ್‌ಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರ ಎಂಬ ಮಾಹಿತಿಯನ್ನು ತುಂಬಿ ಮುಂದುವರೆಯಬಹುದಾಗಿದೆ.

ಯಾವ ರೀತಿಯ ಪಾಸ್‌ಪೋರ್ಟ್?

ಯಾವ ರೀತಿಯ ಪಾಸ್‌ಪೋರ್ಟ್?

ಹೊಸದಾಗಿ ಪಾರ್ಸ್‌ಪೋರ್ಟ್ ಅರ್ಜಿದಾರನೇ ಅಥವಾ ಮತ್ತೊಮ್ಮೆ ಪಾಸ್‌ಪೋರ್ಟ್‌ಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರ ಎಂಬ ಆಯ್ಕೆಯ ಕೆಳಗೆ ಮತ್ತೆರಡು ಆಯ್ಕೆಗಳನ್ನು ನೀಡಲಾಗಿದೆ. ಸಾಮಾನ್ಯ ಅಥವಾ ತತ್ಕಾಲ್ ಪಾಸ್‌ಪೋರ್ಟ್ ಬೇಕೆ ಮತ್ತು ಎಷ್ಟು ಪೇಜ್ ಹೊಂದಿರುವ ಪಾರ್ಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ ಎಂಬ ಮಾಹಿತಿಯನ್ನು ಕೇಳುತ್ತದೆ.

ಪಾಸ್‌ಪೋರ್ಟ್ ಪಡೆಯುವಿಕೆ!

ಪಾಸ್‌ಪೋರ್ಟ್ ಪಡೆಯುವಿಕೆ!

ಮೇಲೆ ತಿಳಿಸಿದ ಮಾಹಿತಿಗಳನ್ನು ಅರ್ಜಿಯಲ್ಲಿ ತುಂಬಿದ ನಂತರ ಅರ್ಜಿದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ತುಂಬಲು ಅನುಮತಿ ನೀಡಲಾಗುತ್ತದೆ. ನಿಮ್ಮ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಹಾಗೂ ಮೊಬೈಲ್‌ ಆಪ್‌ನಲ್ಲಿ ಕೇಳಿರುವ ನಿಮ್ಮ ಎಲ್ಲಾ ಗುರುತು ವಿಳಾಸಗಳನ್ನು ತುಂಬಿ ಪಾರ್ಸ್‌ಪೋರ್ಟ್‌ಗಾಗಿ ಅರ್ಜಿಯನ್ನು ಪೂರ್ಣಗೊಳಿಸಬಹುದು.

ಅರ್ಜಿ ಟ್ರ್ಯಾಕ್ ಮಾಡಬಹುದು!

ಅರ್ಜಿ ಟ್ರ್ಯಾಕ್ ಮಾಡಬಹುದು!

'ಎಂಪಾಸ್‌ಪೋರ್ಟ್ ಸೇವಾ' ಮೊಬೈಲ್ ಆಪ್‌ ಮೂಲಕ ಪಾರ್ಸ್‌ಪೋರ್ಟ್‌ಗಾಗಿ ಅರ್ಜಿಯನ್ನು ಪೂರ್ಣಗೊಳಿಸಿದ ನಂತರ, ಪಾಸ್‌ಪೋರ್ಟ್ ಕಚೇರಿಯಿಂದ ನಿಮ್ಮ ಅರ್ಜಿ ವಿಲೇವಾರಿ ಬಗ್ಗೆ ನೀವು ಟ್ರ್ಯಾಕ್ ಮಾಡಬಹುದು, ನಿಮ್ಮ ಅರ್ಜಿ ಯಾವ ಹಂತದಲ್ಲಿದೆ? ಯಶಸ್ವಿ ವೆರಿಫಿಕೇಷನ್ ಆಗಿದೆಯಾ? ಡೆಲಿವರಿ ಯಾವಾಗ ಎಂಬ ಮಾಹಿತಿಗಳನ್ನು ನೀವು ಪಡೆಯಬಹುದು.!

1,999 ರೂ.ಗಳ ಈ ಸ್ಪೀಕರ್ ನೀರಿನ ಒಳಗೂ ಹಾಡುತ್ತದೆ! Riversong Fusion Speaker
ಇತರೆ ಏನೆಲ್ಲಾ ಸೇವೆಗಳು ಲಭ್ಯ?

ಇತರೆ ಏನೆಲ್ಲಾ ಸೇವೆಗಳು ಲಭ್ಯ?

'ಎಂಪಾಸ್‌ಪೋರ್ಟ್ ಸೇವಾ' ಮೊಬೈಲ್ ಆಪ್‌ನಲ್ಲಿ ಮೇಲೆ ತಿಳಿಸಿದ ಎಲ್ಲಾ ಸೇವೆಗಳ ಜೊತೆಯಲ್ಲಿ ಡಾಕ್ಯುಮೆಂಟ್ ಅಡ್ವೈಸರ್, ಲೊಕೇಟ್ ಸೆಂಟರ್, ಸಂಪರ್ಕ ಪಡೆಯಬಹುದಾದ ಹಲವು ಸೇವೆಗಳನ್ನು ನೀಡಲಾಗಿದೆ. ಪ್ರಸ್ತುತ ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಮಾದರಿಗಳಲ್ಲಿಯೇ ಈ 'ಎಂಪಾಸ್‌ಪೋರ್ಟ್ ಸೇವಾ' ಆಪ್ ಲಭ್ಯವಿದೆ.

Best Mobiles in India

English summary
The mPassport Seva App, released on the occasion of the Sixth Passport Seva Divas, is available in Android and iOS platforms and will have the facilities to apply, pay and schedule appointments for passport services.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X