Subscribe to Gizbot

ಪಿಎಫ್ ಖಾತೆಗೆ 'ಆಧಾರ್' ಜೋಡಣೆಗೆ ಚಾಲನೆ!!..ಮೊಬೈಲ್‌ನಲ್ಲಿಯೇ ಲಿಂಕ್ ಮಾಡುವುದು ಹೇಗೆ?

Written By:
How To Link Aadhaar With EPF Account Without Login (KANNADA)

ಕಾರ್ಮಿಕರ ಶಾಶ್ವತ ಖಾತೆ ಸಂಖ್ಯೆಗೆ (ಯುಎಎನ್) ಆಧಾರ್ ಜೋಡಿಸುವ ಸೌಲಭ್ಯಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಚಾಲನೆ ನೀಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆ, ಕಾರ್ಯಕ್ರಮಗಳ ಮಾಹಿತಿ ತಿಳಿಸುವ ತಂತ್ರಾಂಶದ ಮೂಲಕ 'ಯುಎಎನ್ ಮತ್ತು ಆಧಾರ್' ಜೋಡಿಸಲು ಸೌಲಭ್ಯ ಕಲ್ಪಿಸಲಾಗಿದೆ.!!

ಉಮಂಗ್ ಆಪ್‌ನಲ್ಲಿನ ಇಪಿಎಫ್‌ಒ ಲಿಂಕ್ ಮೂಲಕ 'ಯುಎಎನ್ ಮತ್ತು ಆಧಾರ್' ಜೋಡಿಸಲು ಸೌಲಭ್ಯ ಕಲ್ಪಿಸಲಾಗಿದ್ದು, ಜತೆಗೆ 'ಇ-ನಾಮಕರಣ' ಸೇವೆಗೂ ಚಾಲನೆ ನೀಡಲಾಗಿದೆ. ಯುಎಎನ್ ಮತ್ತು ಆಧಾರ್ ಜೋಡಿಸಿದವರು ಈ ನಾಮಕರಣ ಅರ್ಜಿಗೆ 'ಇ ಸಹಿ' ಹಾಕಬಹುದಾಗಿದ್ದು, ಡಿಜಿಟಲ್‌ ಸಹಿಯನ್ನು ಉಚಿತವಾಗಿ ನೀಡಲಿದೆ.!!

ಪಿಎಫ್ ಖಾತೆಗೆ 'ಆಧಾರ್' ಜೋಡಣೆಗೆ ಚಾಲನೆ!!..ಮೊಬೈಲ್‌ನಲ್ಲಿಯೇ ಲಿಂಕ್!!

37 ಇಲಾಖೆಗಳ 185ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುತ್ತಿರುವ ಭಾರತ ಸರ್ಕಾರದ ಉಮಂಗ್ ಆಪ್‌ನಲ್ಲಿ ಮೊದಲ ಬಾರಿಗೆ ಈ ಸೇವೆ ಒದಗಿಸಲಾಗಿದೆ. ಹಾಗಾದರೆ, ಏನಿದು ಉಮಂಗ್ ಆಪ್? ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆ, ಕಾರ್ಯಕ್ರಮಗಳ ಮಾಹಿತಿಯನ್ನು ಆಪ್‌ ಮೂಲಕ ಹೇಗೆ ತಿಳಿಯುವುದು ಎಂದು ಮುಂದೆ ಓದಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಉಮಂಗ್ ಆಪ್!!

ಏನಿದು ಉಮಂಗ್ ಆಪ್!!

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ರಾಷ್ಟ್ರೀಯ ಇ-ಆಡಳಿತ ವಿಭಾಗ 'ಉಮಂಗ್' (UMANG -Unified Mobile Application for New-age Governance) ಆಪ್ ಅನ್ನು ಬಿಡುಗಡೆ ಮಾಡಿವೆ. ಮೊಬೈಲ್‌ ಆಡಳಿತ ಹಾಗೂ ಡಿಜಿಟಲ್‌ ಇಂಡಿಯಾದ ಮುಖ್ಯ ಆಪ್‌ಗಳಲ್ಲಿ ಒಂದಾಗಿದೆ.!!

ಆಪ್‌ನಲ್ಲಿ 185ಕ್ಕೂ ಹೆಚ್ಚು ಸೇವೆ!!

ಆಪ್‌ನಲ್ಲಿ 185ಕ್ಕೂ ಹೆಚ್ಚು ಸೇವೆ!!

ಹೊಸದಾಗಿ ಬಿಡುಗಡೆಯಾಗಿರುವ ಉಮಂಗ್' ಆಪ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 185ಕ್ಕೂ ಹೆಚ್ಚು ಸೇವೆಗಳನ್ನು ಪಡೆಯಬಹುದು ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ. ಆನ್‌ಲೈನ್ ಮಹತ್ತರ ಕಾರ್ಯಗಳಲಿಗೆ ಈ ಆಪ್ ಉಪಯೋಗವಾಗಲಿದೆ.!!

ಪ್ರಮುಖ ಇ-ಸೇವೆಗಳು!!

ಪ್ರಮುಖ ಇ-ಸೇವೆಗಳು!!

ಡಿಜಿ ಲಾಕರ್, ಆದಾಯ ತೆರಿಗೆ ಸಲ್ಲಿಕೆ, ಬಿಲ್‌ ಪಾವತಿ, ‌ಗ್ಯಾಸ್‌ ಸಿಲಿಂಡರ್‌ ಬುಕ್ಕಿಂಗ್, ಪಿಎಫ್‌ ಮಾಹಿತಿ ಹಾಗೂ ಆಧಾರ್ ಸಂಪರ್ಕಿತ ಸೇವೆಗಳು ಸೇರಿ ಸರ್ಕಾರದ ಬಹುತೇಕ ಎಲ್ಲ ಇ-ಸೇವೆಗಳನ್ನು 'ಉಮಂಗ್' ಒಂದೇ ಆಪ್‌ನಲ್ಲಿ ನೀಡಲಾಗಿದೆ. ಹಾಗಾಗಿ, ಸರ್ಕಾರಿ ಕಾರ್ಯಗಳೆಲ್ಲಾ ಇನ್ನು ಒಂದೇ ಆಪ್‌ನಲ್ಲಿ ಎನ್ನಬಹುದು.!!

ಗ್ರಾಹಕ ಸೇವೆ ಸಹ ಸಿಗಲಿದೆ!!

ಗ್ರಾಹಕ ಸೇವೆ ಸಹ ಸಿಗಲಿದೆ!!

'ಉಮಂಗ್' ಒಂದೇ ಆಪ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 100ಕ್ಕೂ ಹೆಚ್ಚು ಸೇವೆಗಳನ್ನು ಪಡೆಯಬಹುದಾಗಿದ್ದು, ಜತೆಗೆ ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೂ ಗ್ರಾಹಕರ ಅನುಮಾನಗಳನ್ನು ಬಗೆಹರಿಸಲು ಸಹ ಸಹಾಯ ಸಿಗಲಿದೆ ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.!!

ಲಾಗಿನ್ ಆಗುವುದು ಹೇಗೆ?

ಲಾಗಿನ್ ಆಗುವುದು ಹೇಗೆ?

ಪ್ಲೇ ಸ್ಟೋರ್ ಮೂಲಕ‌ 'ಉಮಂಗ್' ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದ್ದು, ಆಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ ಮಾದರಿಗೆ ಈ ಆಪ್ ಲಭ್ಯವಿದೆ. ಇನ್‌ಸ್ಟಾಲ್ ಮಾಡಿದ ನಂತರ ಮೊಬೈಲ್‌ ಸಂಖ್ಯೆ ಮತ್ತು ಪಿನ್‌ ನೀಡಿ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಲಾಗಿನ್‌ ಆಗಬಹುದು.!!

ಓದಿರಿ:ನಾನು ಇನ್ನಷ್ಟು ಹೆಚ್ಚು ತೆರಿಗೆ ಕಟ್ಟಬೇಕಿತ್ತು ಎಂದು ಬಿಲ್‌ಗೇಟ್ಸ್ ಹೇಳಿದ್ದೇಕೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Employees’ Provident Fund Organisation has introduced UAN-Aadhaar linking facility for the convenience of members using EPFO link in UMANG app. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot