Just In
- 1 hr ago
ಒನ್ಪ್ಲಸ್, ಒಪ್ಪೋ ಗ್ರಾಹಕರೇ ನೀವಿನ್ನೂ ಟೆನ್ಷನ್ ಫ್ರೀ!..ನಿಮಗಾಗಿಯೇ ಈ ಹೊಸ ಆಪ್!
- 17 hrs ago
ಟ್ರಾಯ್ನ ಈ ಉಪಯುಕ್ತ ಸೇವೆಗೆ ಜಿಯೋ ಮತ್ತು ಏರ್ಟೆಲ್ನಿಂದ ಭಾರಿ ವಿರೋಧ! ಕಾರಣ ಏನು?
- 18 hrs ago
2023ರಲ್ಲಿ ಈ ಸ್ಮಾರ್ಟ್ಫೋನ್ ಸೌಂಡ್ ಮಾಡೋದು ಪಕ್ಕಾ! ಏನೆಲ್ಲಾ ನಿರೀಕ್ಷೆ?
- 19 hrs ago
ಈ ಡಿವೈಸ್ಗಳನ್ನು ನೋಡಿದ್ರೆ, ನೀವು ಖಂಡಿತಾ ಹುಬ್ಬೇರಿಸ್ತೀರಾ!..ಬೆಲೆಯೂ ಕಡಿಮೆ!
Don't Miss
- Movies
Kranti Bookings: ಯಾವಾಗ ಆರಂಭವಾಗಲಿದೆ ಕ್ರಾಂತಿ ಬುಕಿಂಗ್ಸ್? ಮಲ್ಟಿಪ್ಲೆಕ್ಸ್ ಬುಕಿಂಗ್ ಯಾವಾಗ ಶುರು?
- News
ವಿನಾಕಾರಣ ಕೋರ್ಟ್ ಹಾಲ್ ಪ್ರವೇಶಿಸಿದರೆ ಜೈಲು ಖಚಿತ: ಹೈಕೋರ್ಟ್ ಎಚ್ಚರಿಕೆ
- Finance
Google Layoff: 16 ವಾರದ ವೇತನ ಪರಿಹಾರ, ಟೆಕ್ ದೈತ್ಯ ಗೂಗಲ್ನಲ್ಲಿ 12 ಸಾವಿರ ಮಂದಿ ವಜಾ
- Sports
SA20: 25 ಎಸೆತಗಳಲ್ಲಿ 56 ರನ್: ಆರ್ಸಿಬಿ ಆಟಗಾರನ ಮತ್ತೊಂದು ಸ್ಫೋಟಕ ಇನ್ನಿಂಗ್ಸ್
- Automobiles
ಮುಂಬರಲಿರುವ ಮಾರುತಿ ಸುಜುಕಿ ಎಸ್ಯುವಿಗಳು: ನೋಡಲು ಭರ್ಜರಿಯಾಗಿವೆ..
- Lifestyle
Horoscope Today 21 Jan 2023: ಶನಿವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವಾಟ್ಸ್ಆಪ್ ಸ್ಟೇಟಸ್' ಟು 'ಫೇಸ್‌ಬುಕ್ ಸ್ಟೋರಿ': ನೇರವಾಗಿ ಶೇರ್ ಮಾಡಿ!
ಕಳೆದ ತಿಂಗಳು ವಾಟ್ಸ್ಆಪ್ ಬೀಟಾ ಆವೃತ್ತಿಯಲ್ಲಿ 'ವಾಟ್ಸ್ಆಪ್ ಬೈ ಫೇಸ್‌ಬುಕ್' ಬ್ರ್ಯಾಂಡಿಂಗ್ ಅನ್ನು ಪರಿಚಯಿಸುವ ಮೂಲಕ ಜನಪ್ರಿಯ ಜಾಲತಾಣ ಫೇಸ್‌ಬುಕ್ ಮತ್ತೊಂದು ಸಿಹಿಸುದ್ದಿ ನೀಡಿದೆ. ವಾಟ್ಸ್ಆಪ್ ಸ್ಟೇಟಸ್ ಅಪ್‌ಡೇಟ್‌ಗಳನ್ನು ನೇರವಾಗಿ ಫೇಸ್‌ಬುಕ್ ಸ್ಟೋರಿಯಾಗಿ ಹಂಚಿಕೊಳ್ಳಲು ಬಯಸುವ ಜನರು ಇನ್ಮುಂದೆ ಪ್ರತ್ಯೇಕವಾಗಿ ಫೇಸ್‌ಬುಕ್ ತೆರೆಯಬೇಕಾಗಿಲ್ಲ. ಏಕೆಂದರೆ, ನೀವೀಗ ವಾಟ್ಸ್ಆಪ್ ಸ್ಟೇಟಸ್ ಅನ್ನು ನೇರವಾಗಿ ಫೇಸ್‌ಬುಕ್ ಸ್ಟೋರಿಯಾಗಿ ಶೇರ್ ಮಾಡಬಹುದಾದ ಆಯ್ಕೆ ಲಭ್ಯವಿದೆ.

ಹೌದು, ಫೇಸ್‌ಬುಕ್, ಮೆಸೆಂಜರ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಎಲ್ಲಾ ಸೇವೆಗಳನ್ನು ಸಂಯೋಜಿಸುವ ಯೋಜನೆಯು ಪ್ರಕಟವಾದ ನಂತರ, ಇದೀಗ ವಾಟ್ಸ್ಆಪ್ ಸ್ಟೇಟಸ್ ಅನ್ನು ನೇರವಾಗಿ ಫೇಸ್‌ಬುಕ್ ಸ್ಟೋರಿಯಾಗಿ ಶೇರ್ ಮಾಡಬಹುದಾದ ಆಯ್ಕೆ ಸಿಕ್ಕಿದೆ. ವಾಟ್ಸ್‌ಆಪ್ ಸ್ಟೇಟಸ್ ಅನ್ನು ಫೇಸ್‌ಬುಕ್ ಸ್ಟೋರಿ ಎಂದು ಹಂಚಿಕೊಳ್ಳಲು ಬಯಸುವವರು ಪ್ರತ್ಯೇಕವಾಗಿ ಫೇಸ್‌ಬುಕ್ ತೆರೆಯದೇ ಕೇವಲ ಒಂದು ಗುಂಡಿಯನ್ನು ಒತ್ತುವ ಮೂಲಕ ವಾಟ್ಸ್‌ಆಪ್ ಸ್ಟೇಟಸ್ ಅನ್ನು ಫೇಸ್‌ಬುಕ್ ಸ್ಟೋರಿಯಾಗಿ ಪ್ರಕಟಿಸಬಹುದಾಗಿದೆ.

ವಾಟ್ಸ್ಆಪ್ ಸ್ಟೇಟಸ್ ಅನ್ನು ಫೇಸ್‌ಬುಕ್ ಸ್ಟೋರಿಯಂತೆ ಹಂಚಿಕೊಳ್ಳುವ ಈ ವೈಶಿಷ್ಟ್ಯವು ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಐಒಎಸ್ ಆಧಾರಿತ ಅಪ್ಲಿಕೇಶನ್‌ಗಳ ಸ್ಥಿರ ಆವೃತ್ತಿಯಲ್ಲಿ ಲಭ್ಯವಿದ್ದು, ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟು. ವಾಟ್ಸ್ಆಪ್ ಸ್ಟೇಟಸ್ ಅನ್ನು ಟ್ಯಾಪ್ ಮಾಡಿ. ನಂತರ ಬಲ ತುದಿಯಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ. ಶೇರ್ ಟು ಫೇಸ್‌ಬುಕ್ ಆಯ್ಕೆಯನ್ನು ಟ್ಯಾಪ್ ಮಾಡಿ. ಈಗ, ವಾಟ್ಸ್ಆಪ್ ನಿಮ್ಮನ್ನು ಫೇಸ್‌ಬುಕ್ ಪ್ರವೇಶಿಸಲು ಅನುಮತಿ ಕೇಳುತ್ತದೆ. ಓಪನ್ ಆಯ್ಕೆಯನ್ನು ಟ್ಯಾಪ್ ಮಾಡಿ

ಫೇಸ್‌ಬುಕ್ ಪ್ರವೇಶಿಸಲು ವಾಟ್ಸ್ಆಪ್‌ಗೆ ಅನುಮತಿ ನೀಡಿದ ನಂತರ, ವಾಟ್ಸ್ಆಪ್ ಸ್ಟೇಟಸ್ ಅನ್ನು ಫೇಸ್‌ಬುಕ್ ಸ್ಟೋರಿಯಾಗಿ ಹಂಚಿಕೊಳ್ಳಲು ಶೇರ್ ನೌ ಆಯ್ಕೆ ಕಾಣಿಸುತ್ತದೆ. ನಂತರ ಅದನ್ನು ಟ್ಯಾಪ್ ಮಾಡಿದರೆ ನಿಮ್ಮ ವಾಟ್ಸ್ಆಪ್ ಸ್ಟೇಟಸ್ ಫೇಸ್‌ಬುಕ್ ಸ್ಟೋರಿಯಾಗಿ ಶೇರ್ ಆಗುತ್ತದೆ. ಇನ್ನು ಹೀಗೆ ಶೇರ್ ಆದ ನಿಮ್ಮ ಸ್ಟೇಟಸ್ ಸಮಯ ಕೂಡ ಸಾಮಾನ್ಯವಾಗಿದ್ದು, ವಾಟ್ಸ್ಆಪ್ ಸ್ಟೇಟಸ್ ಅಥವಾ ಫೇಸ್‌ಬುಕ್ ಸ್ಟೋರಿ (ಅಥವಾ ಇನ್‌ಸ್ಟಾಗ್ರಾಮ್ ಸ್ಟೋರಿ) ಎಲ್ಲವೂ ನೀವು ಹಂಚಿಕೊಂಡ 24 ಗಂಟೆಗಳ ಒಳಗೆ ಕಣ್ಮರೆಯಾಗುತ್ತವೆ.

ಈ ವರ್ಷದ ಆರಂಭದಲ್ಲಿ ಫೇಸ್‌ಬುಕ್ ತನ್ನ ಎಲ್ಲ ಸೇವೆಗಳಾದ ಫೇಸ್‌ಬುಕ್, ಮೆಸೆಂಜರ್, ವಾಟ್ಸ್ಆಪ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಸಂಯೋಜಿಸುವ ಯೋಜನೆಗಳನ್ನು ಪ್ರಕಟಿಸಿದೆ. ಫೇಸ್‌ಬುಕ್ ಮತ್ತು ಅದರ ಅಪ್ಲಿಕೇಶನ್‌ಗಳ ಕುಟುಂಬಗಳ ನಡುವೆ ಹೆಚ್ಚು ಸಂಪರ್ಕವನ್ನು ಏರ್ಪಡಿಸಿ ಗ್ರಾಹಕ ಕೇಂದ್ರಿತ ದೊಡ್ಡ ತಂತ್ರಜ್ಞಾನ ಕಂಪನಿಯಾಗಲು ಫೇಸ್‌ಬುಕ್ ಇಚ್ಚಿಸಿದೆ. ಹಾಗಾಗಿಯೇ, ವಾಟ್ಸ್ಆಪ್ ಬಳಕೆದಾರರಿಗೆ ತಮ್ಮ ಸ್ಟೇಟಸ್ ಅಪ್‌ಡೇಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಅಪ್ಲಿಕೇಶನ್‌ನಿಂದ ಹಂಚಿಕೊಳ್ಳಲು ಅನುಮತಿಸುವ ವೈಶಿಷ್ಟ್ಯಗಳನ್ನು ನೀಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470